ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಳಿಶೈ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಮುದಲಾಳ್ವಾರುಗಳು ಭಾಗ – 2

ಆಂಡಾಳಜ್ಜಿ ಪರಾಶರ ಮತ್ತು ವ್ಯಾಸರನ್ನು ಕರೆದುಕೊಂಡು ತಿರುವೆಳ್ಳರೈ ದೇವಾಲಯಕ್ಕೆ ಹೋಗುತ್ತಾರೆ. ಅವರು ಶ್ರೀರಂಗಂ ರಾಜ ಗೋಪುರದ ಬಳಿ ಬಸ್ ಹತ್ತುತ್ತಾರೆ.

ಪರಾಶರ : ಅಜ್ಜಿ , ನಾವು ಈ ಬಸ್‍ನಲ್ಲಿ ಇರುವಾಗ ನಾಲ್ಕನೆಯ ಆಳ್ವಾರ್ ಬಗ್ಗೆ ಹೇಳುತ್ತೀರಾ?

ಆಂಡಾಳಜ್ಜಿ : ಸರಿ ಪರಾಶರ .ಪ್ರಯಾಣಿಸುವಾಗ ಆಳ್ವಾರ್ಗಳ ಬಗ್ಗೆ ತಿಳಿಯಲು ಇಚ್ಛಿಸುವೆ ಎಂದು ಸಂತೋಷವಾಗಿದೆ.

ಪರಾಶರ ಮತ್ತು ವ್ಯಾಸ ಅಜ್ಜಿಯನ್ನು ನೋಡಿ ಕಿರುನಗೆ ನೀಡುತ್ತಾರೆ. ಶ್ರೀರಂಗದಿಂದ ಬಸ್ಸು ಹೊರಡುತ್ತದೆ.

ಆಂಡಾಳಜ್ಜಿ : ನಾಲ್ಕನೆಯ ಆಳ್ವಾರ್ ತಿರುಮಳಿಶೈ ಆಳ್ವಾರ್, ಅವರನ್ನು ಪ್ರೀತಿಯಿಂದ ಭಕ್ತಿಸಾರ ಎಂದು ಕರೆಯುತ್ತಾರೆ. ಅವರು ಪುಷ್ಯ ಮಾಸದ ಮಖಾ ನಕ್ಷತ್ರದಂದು ಚೆನ್ನೈ ಹತ್ತಿರದ ತಿರುಮಳಿಶೈಯಲ್ಲಿ ಭಾರ್ಗವ ಮುನಿ ಮತ್ತು ಕನಕಾಂಗಿ  ಅವರಿಗೆ ಜನಿಸಿದರು. ಅತ್ಯಂತ ದೀರ್ಘಕಾಲ ಬಾಳಿದ ಆಳ್ವಾರ್ ಅವರು. ಅವರು ಬಹುತೇಕ 4700 ವರ್ಷ ಬಾಳಿದರು.

ಪರಾಶರ ಮತ್ತು ವ್ಯಾಸ ಆಶ್ಚರ್ಯದಿಂದ ಕೇಳಿದರು “ 4700 ವರ್ಷಗಳೇ “

ಆಂಡಾಳಜ್ಜಿ : ಹೌದು, ಅವರು ಪೇಯ್ ಆಳ್ವಾರನ್ನು ಭೇಟಿಯಾಗುವ ಮುಂಚೆ ಹಲವಾರು ಸಿದ್ಧಾಂತಗಳ ಹಾದಿಯಲ್ಲಿದ್ದರು.

ವ್ಯಾಸ : ಓಹ್ ! ಅವರು ಭೇಟಿಯಾದ ನಂತರ ಏನಾಯಿತು ?

ಆಂಡಾಳಜ್ಜಿ : ಪೇಯ್ ಆಳ್ವಾರ್ ತಿರುಮಳಿಶೈ ಆಳ್ವಾರನ್ನು ಶ್ರೀ ವೈಷ್ಣವಕ್ಕೆ ಹಾದಿ  ತೋರಿಸಿ ಅವರಿಗೆ ವಿಸ್ತಾರವಾಗಿ ಪೆರುಮಾಳ್ ಬಗ್ಗೆ ತಿಳಿಸಿದರು.

ಚತ್ರಂ ಬಸ್ ಠಾಣೆಗೆ ತಲುಪಿದರು.

ಆಂಡಾಳಜ್ಜಿ : ನಮ್ಮೊಳಗಿರುವ ಪೆರುಮಾಳಾದ ಆಂತರ್ಯಾಮಿಯ ಬಗ್ಗೆ ತಿಳಿದುಕೊಳ್ಳಲು ಅವರಿಗೆ ವಿಶೇಷ ಆಸಕ್ತಿ ಇತ್ತು ಮತ್ತು ಅವರು ಕುಂಬಕೋಣಂ ಅರಾವಮುದನ್ ಗೆ  ತೀವ್ರ ಭಕ್ತಿ ಹೊಂದಿದ್ದರು, ಎಷ್ಟರಮಟ್ಟಿಗೆ ಪೆರುಮಾಳ್  ಅವರು ತಮ್ಮ ಹೆಸರನ್ನು ಅಳ್ವಾರ್ ಅವರೊಂದಿಗೆ ವಿನಿಮಯ ಮಾಡಿಕೊಂಡರು ಮತ್ತು ಅವರು ಆರಾವಮುದ ಅಳ್ವಾರ್ ಮತ್ತು ತಿರುಮಳಿಶೈ ಪಿರಾನ್ ಎಂದು ಪ್ರಸಿದ್ಧರಾದರು.

ಪರಾಶರ :  ವಾಹ್ ! ಅಜ್ಜಿ, ಅವರು ಪೆರುಮಾಳಿಗೆ ಬಹಳ  ಆತ್ಮೀಯರಾಗಿದ್ದರೇ.

ಆಂಡಾಳಜ್ಜಿ : ಹೌದು, ಅದು ನಿಜ. ಒಂದು ಬಾರಿ ಅವರು ಒಂದು ಗ್ರಾಮದಲ್ಲಿ ದೇವಾಲಯಕ್ಕೆ ಹೋದಾಗ, ಅಲ್ಲಿನ ಪೆರುಮಾಳಿಗೆ ತುಂಬಾ ಇಷ್ಟವಾಗಿ, ಅವರು ಆಳ್ವಾರ್ ಹೋಗುವ ದಿಕ್ಕಿನಲ್ಲೇ ತಿರುಗುತ್ತಿದ್ದರು. ಅದೇರೀತಿ, ಆರಾವಮುದನ್ ಎಂಪೆರುಮಾನ್ ಎಷ್ಟರ ಮಟ್ಟಿಗೆ ಇಷ್ಟಪಟ್ಟರೆಂದರೆ  ಅವರು ಆಳ್ವಾರ್ ಮಾತಿಗೆ ನಯವಾಗಿ ಕೇಳಿಕೊಂಡು ಅವರು ಒರಗಿದ ಭಂಗಿಯಿಂದ ಎದ್ದೇಳಲು  ಪ್ರಾರಂಭಿಸಿದರು .

ಪರಾಶರ ಮತ್ತು ವ್ಯಾಸ ಆಶ್ಚರ್ಯದಿಂದ ಕೇಳುತ್ತಾರೆ “ ಆಮೇಲೆ ಇನ್ನೂ ಏನು  ಆಯಿತು ಅಜ್ಜಿ ?”

ಆಂಡಾಳಜ್ಜಿ : ಅಳ್ವಾರ್ ಆಘಾತಕ್ಕೊಳಗಾದರು ಮತ್ತು ಪೆರುಮಾಳ್ ಅವರನ್ನು ತಮ್ಮ ಒರಗಿರುವ ಸ್ಥಾನಕ್ಕೆ ಮರಳಲು ವಿನಂತಿಸಿದರು. ಪೆರುಮಾಳ್ ನಿರ್ಧರಿಸಲಾಗದೆ ಅವರು  ಇನ್ನೂ ಅರ್ಧದಷ್ಟು ಒರಗಿರುವ ಸ್ಥಾನದಲ್ಲಿದ್ದಾರೆ .

ವ್ಯಾಸ : ಓಹ್ ! ಇದು ಚೆನ್ನಾಗಿದೆ ಅಜ್ಜಿ. ಒಂದು ದಿನ ನಾವು ಈ ಪೆರುಮಾಳನ್ನು ನೋಡಲು ಹೋಗೋಣ.

ಆಂಡಾಳಜ್ಜಿ : ಖಂಡಿತವಾಗಿ, ನಾವು ಅಲ್ಲಿ ಒಮ್ಮೆ ಹೋಗೋಣ. ಅವರು ಅಲ್ಲಿ ಬಹಳ ಕಾಲ ಇರುತ್ತಾರೆ . ಅವರು ತಮ್ಮ ಎಲ್ಲ ಕೃತಿಗಳನ್ನು ಕಾವೇರಿ ನದಿಗೆ ಎಸೆದು  ಮತ್ತು ಕೇವಲ 2 ಪ್ರಬಂಧಗಳನ್ನು ಉಳಿಸಿಕೊಂಡಿದ್ದಾರೆ – ತಿರುಚ್ಚಂದ  ವೃತ್ತಮ್ ಮತ್ತು ನಾನ್ಮುಗನ್ ತಿರುವಂದಾಧಿ. ಅದರ ನಂತರ ಅವರು ಅಂತಿಮವಾಗಿ ಪರಮಪಧಂಗೆ ಏರುತ್ತಾರೆ ಮತ್ತು ಪರಮಪಧಂನಲ್ಲಿ ಶಾಶ್ವತವಾಗಿ ಎಂಪೆರುಮಾನರ ಸೇವೆ ಸಲ್ಲಿಸುತ್ತಿದ್ದಾರೆ.

ಬಸ್ ತಿರುವೆಳ್ಳರೈ ತಲುಪುತ್ತದೆ. ಅವರು ದೇವಸ್ಥಾನವನ್ನು ಪ್ರವೇಶಿಸುತ್ತಾರೆ ಮತ್ತು ತಾಯಾರ್ ಮತ್ತು ಪೆರುಮಾಳಿನ  ದರ್ಶನ ಮಾಡುತ್ತಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/11/beginners-guide-thirumazhisai-azhwar/

 ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment