ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
ಪಿಳ್ಳೈ ಲೋಕಾಚಾರ್ಯರು ಮತ್ತು ನಾಯನಾರ್
ಪರಾಶರ,ವ್ಯಾಸ,ವೇದವಲ್ಲಿ ಮತ್ತು ಅತ್ತುಳಾಯ್ ಆಂಡಾಳ ಅಜ್ಜಿ ಮನೆಗೆ ಪಿಳ್ಳೈ ಲೋಕಾಚಾರ್ಯರ ಶಿಷ್ಯರ ಬಗ್ಗೆ ತಿಳಿದುಕೊಳ್ಳಲು ಬಹಳ ಕಾತುರದಿಂದ ಬರುತ್ತಾರೆ.
ಅಜ್ಜಿ: ಸ್ವಾಗತ ಮಕ್ಕಳೇ , ಹೇಗಿದ್ದೀರಾ? ನನಗೆ ನಿಮ್ಮ ಮುಖದಲ್ಲಿ ಸಡಗರ ಕಾಣುತ್ತಿದೆ.
ವ್ಯಾಸ : ಅಜ್ಜಿ ನಾವೆಲ್ಲರೂ ಚೆನ್ನಾಗಿದ್ದೇವೆ. ನೀವು ಹೇಗಿದ್ದೀರ ಅಜ್ಜಿ? ಹೌದು ಅಜ್ಜಿ ನೀವು ಹೇಳಿದ್ದು ಸರಿ. ಪಿಳ್ಳೈ ಲೋಕಾಚಾರ್ಯರ ಶಿಷ್ಯರ ಬಗ್ಗೆ ತಿಳಿದುಕೊಳ್ಳಲು ಬಹಳ ಕಾತುರದಿಂದ ಇದ್ದೇವೆ.
ಅಜ್ಜಿ:ಹೌದು ಮಕ್ಕಳೇ, ನಿಮ್ಮೆಲ್ಲರ ಜೊತೆ ಆ ವಿಷಯ ಹಂಚಿಕೊಳ್ಳಲು ನಾನು ಕಾಯುತ್ತಿದ್ದೆ . ನಮ್ಮ ಹಿಂದಿ ಚರ್ಚೆ ನಿಮಗೆಲ್ಲ ನೆನಪಿದೆ ಎಂದು ಭಾವಿಸುತ್ತೇನೆ. ಅವರ ಶಿಷ್ಯರ ಹೆಸರು ಹೇಳಬಲ್ಲಿರಾ?
ಅತ್ತುಳಾಯ್: ಅಜ್ಜಿ, ನನಗೆ ನೆನಪಿದೆ .ಕೂರ ಕುಲೋತ್ತಮ ದಾಸರ್, ವಿಲಾಂಚೋಲೈ ಪಿಳ್ಳೈ ,ತಿರುಮಲೈ ಆಳ್ವಾರ್ (ತಿರುವಾಯ್ಮೊಳಿ ಪಿಳ್ಳೈ ),ಮಣಪಾಕ್ಕತ್ತು ನಂಬಿ , ಕೋಟ್ಟೂರ್ ಅಣ್ಣರ್,ತಿರುಪುಟ್ಕುಳಿ ಜೀಯರ್,ತಿರುಕ್ಕಣ್ಣಂಗುಡಿ ಪಿಳ್ಳೈ, ಕೊಲ್ಲಿ ಕಾವಲ ದಾಸರ್.
ಅಜ್ಜಿ: ತುಂಬಾ ಜಾಣೆ ಅತ್ತುಳಾಯ್. ಈಗ ಇನ್ನೂ ವಿವರವಾಗಿ ತಿಳಿದಿಕೊಳ್ಳೋಣ . ಮೊದಲು ನಿಮಗೆ ಕೂರ ಕುಲೋತ್ತಮ ದಾಸರ್ ಬಗ್ಗೆ ಹೇಳುತ್ತೇನೆ.
ಮಕ್ಕಳು: ಖಂಡಿತ ಅಜ್ಜಿ
ಅಜ್ಜಿ: ಕುಲೋತ್ತಮ ದಾಸರ್ ಶ್ರೀರಂಗಂ ನಲ್ಲಿ ಹುಟ್ಟಿದರು. ತಿರುಮಲೈ ಆಳ್ವಾರ್ (ತಿರುವಾಯ್ಮೊಳಿ ಪಿಳ್ಳೈ ) ಯನ್ನು ನಮ್ಮ ಸಂಪ್ರಧಾಯಕ್ಕೆ ಮರಳಿ ತರುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿತ್ತು. ಅವರು ಪಿಳ್ಳೈ ಲೋಕಾಚಾರ್ಯಾರ್ ಅವರ ನಿಕಟವರ್ತಿಯಾಗಿದ್ದರು ಮತ್ತು ಅವರು ತಿರುವರಂಗನ್ ಉಲಾ ಅದರ ಸಮಯದಲ್ಲಿ ಪಿಳ್ಳೈ ಲೋಕಾಚಾರ್ಯಾರ್ ಅವರೊಂದಿಗೆ ಪ್ರಯಾಣಿಸಿದರು (ಮುಸ್ಲಿಂ ಆಕ್ರಮಣದ ಸಮಯದಲ್ಲಿ ನಂಪೆರುಮಾಲ್ ವಿವಿಧ ಸ್ಥಳಗಳಿಗೆ ಪ್ರಯಾಣಿಸಿದಾಗ). ತಿರುಮಲೈ ಆಳ್ವಾರ್ ಅನ್ನು ಸುಧಾರಿಸಲು ಅನೇಕ ಪ್ರಯತ್ನಗಳನ್ನು ತೆಗೆದುಕೊಳ್ಳುವ ಅಪರಿಮಿತ ಕೃಪೈ ಅವರ ಕಾರಣದಿಂದಾಗಿ ಮಾಮುನಿಗಳ್ ಕೂರ ಕುಲೋತ್ತಮ ದಾಸರ್ ಅನ್ನು “ಕೂರ ಕುಲೋತ್ತಮ ದಾಸಂ ಉದಾರಂ” (ಬಹಳ ಕರುಣಾಮಯಿ ಮತ್ತು ಉದಾರ ವ್ಯಕ್ತಿ) ಎಂದು ವೈಭವೀಕರಿಸುತ್ತಾರೆ . ಅಂತಿಮವಾಗಿ, ತಿರುಮಲೈ ಆಳ್ವಾರ್ ಅವರು ತುಂಬಾ ಕೃತಜ್ಞರಾದರು ಮತ್ತು ಕೂರ ಕುಲೋತ್ತಮ ದಾಸರ್ಗೆ ಶರಣಾದರು, ಅವರು ಯಾವಾಗಲೂ ಧಾಸರ್ ಅವರೊಂದಿಗೆ ಸೇವೆ ಸಲ್ಲಿಸುತ್ತಿದ್ದರು ಮತ್ತು ಧಾಸರ್ ಅವರು ಪರಮಪಧಂಗೆ ಏರಿದ ನಂತರವೇ ಆಳ್ವಾರ್ತಿರುನಗರಿಗೆ ತೆರಳಿದರು. ಶ್ರೀ ವಚನ ಭೂಷಣಂನಲ್ಲಿ, ಒಬ್ಬ ಶಿಷ್ಯನಿಗೆ “ಆಚಾರ್ಯ ಅಭಿಮಾನಮೆ ಉತ್ತಾರಗಂ” ಎಂದು ಹೇಳಲಾಗಿದೆ. ಇದು ಸಂಪೂರ್ಣವಾಗಿ ಕೂರ ಕುಲೋತ್ತಮ ದಾಸರ್ ಮತ್ತು ತಿರುಮಲೈ ಆಳ್ವಾರ್ಗೆ ಹೊಂದುತ್ತದೆ . ಆದ್ದರಿಂದ ನಾವೆಲ್ಲರೂ ಪಿಳ್ಳೈ ಲೋಕಾಚಾರ್ಯಾರ್ ಪಾದಗಳನ್ನು ಯಾವಾಗಲೂ ನೆನಪಿಸಿಕೊಳ್ಳುವ ಕೂರ ಕುಲೋತ್ತಮ ದಾಸರ್ ಅವರನ್ನು ನೆನಪಿಸಿಕೊಳ್ಳೋಣ.
ವೇದವಲ್ಲಿ : ಅಜ್ಜಿ, ಕೂರ ಕುಲೋತ್ತಮ ದಾಸರ್ ಬಗ್ಗೆ ಕೇಳಲು ಬಹಳ ಸಂತೋಷವಾಗಿದೆ. ಒಬ್ಬ ಶಿಷ್ಯ ತನ್ನ ಆಚಾರ್ಯನನ್ನು ಹೇಗೆ ಅಭಿಮಾನಿಸಬೇಕು ಎಂದು ಕಲಿತೆವು.
ಅಜ್ಜಿ:ಹೌದು ವೇದವಲ್ಲಿ ಆಚಾರ್ಯ ಅಭಿಮಾನಮೆ ಉತ್ತಾರಗಂ ಎಂದು ಎಲ್ಲರೂ ನೆನಪಿನಲ್ಲಿ ಇಡಬೇಕು . ಈಗ ಇನ್ನೊಬ್ಬ ಶಿಷ್ಯರಾದ ವಿಲಾಂಚೋಲೈ ಪಿಳ್ಳೈ ಬಗ್ಗೆ ತಿಳಿದುಕೊಳ್ಳೋಣ.
ವ್ಯಾಸ:ಅಜ್ಜಿ, ಅವರನ್ನು ಏಕೆ ವಿಲಾಂಚೋಲೈ ಪಿಳ್ಳೈ ಎಂದು ಕರೆಯುತ್ತಾರೆ ಎಂದು ನನಗೆ ಗೊತ್ತು . ಅವರು ‘ವಿಲಾಮ್’ ಮರಗಳನ್ನು ಹತ್ತಿ ತಿರುವನಂತಪುರಂ ಪದ್ಮನಾಭ ಸ್ವಾಮಿ ದೇವಾಲಯದ ಗೋಪುರ ನೋಡುತ್ತಿದ್ದರು.
ತುಂಬಾ ಒಳ್ಳೆಯದು ವ್ಯಾಸ , ನೀನು ಹೇಳಿದ್ದು ಸರಿ. ಈಳವ ಕುಲಂನಲ್ಲಿ ಜನಿಸಿದ ಕಾರಣ ಅವರಿಗೆ ದೇವಾಲಯದ ಒಳಗೆ ಅವಕಾಶವಿರಲಿಲ್ಲ. ಆದ್ದರಿಂದ ಪೆರುಮಾಳಿನ ದರ್ಶನ ಹೊಂದಲು, ಅವರು “ವಿಲಾಮ್” ಮರವನ್ನು ಹತ್ತಿ ಮಂಗಲಾಶಾಸನಂ ಮಾಡುತ್ತಾರೆ. ಪಿಳ್ಳೈ ಲೋಕಾಚಾರ್ಯಾರ್ ಅವರ ಅನುಗ್ರಹದಿಂದಾಗಿ, ಅವರು ಈಡು , ಶ್ರೀ ಭಾಷ್ಯಂ, ತತ್ವ ತ್ರಯಂ ಮತ್ತು ಇತರ ರಹಸ್ಯ ಗ್ರಂಥಗಳನ್ನು ಪಿಳ್ಳೈ ಲೋಕಾಚಾರ್ಯಾರ್ ಅವರ ಕಿರಿಯ ಸಹೋದರ ಅಳಗಿಯ ಮನವಾಳ ಪೆರುಮಾಳ್ ನಾಯನಾರ್ ಅವರಿಂದ ಕಲಿತರು. ವಿಲಾಂಚೋಲೈ ಪಿಳ್ಳೈ ಅವರು ತಮ್ಮ ಆಚಾರ್ಯನ್ ಪಿಳ್ಳೈ ಲೋಕಾಚಾರ್ಯಾರ್ ಅವರಿಂದ ಶ್ರೀ ವಚನ ಭೂಷನಮ್ ಕಲಿತರು. ಅವರು ಶ್ರೀ ವಚನ ಭೂಷನಮ್ ಅರ್ಥದಲ್ಲಿ ಪರಿಣಿತರಾಗುತ್ತಾರೆ. ಅವರು “ಸಪ್ತ ಗಾಥೈ” ಅನ್ನು ಬರೆದಿದ್ದಾರೆ, ಇದು ಅವರ ಆಚಾರ್ಯರ ಶ್ರೀ ವಚನ ಭೂಷಣದ ಸಾರವಾಗಿದೆ.
ಪರಾಶರ : ವಿಲಾಂಚೋಲೈ ಪಿಳ್ಳೈ ಅವರ ಆಚಾರ್ಯ ಅಭಿಮಾನ ನೋಡಿ ನಾವು ಬಹಳ ಆಶ್ಚರ್ಯಗೊಂಡಿದ್ದೇವೆ.
ಅಜ್ಜಿ : ಹೌದು, ಪರಾಶರ ! ತಿರುಮಲೈ ಆಳ್ವಾರ್ ಅನ್ನು ಸುಧಾರಿಸುವಲ್ಲಿ ಅವರ ಆಚಾರ್ಯನ್ ಅವರ ಸೂಚನೆಗಳನ್ನು ಪಾಲಿಸುವುದು ಅವರು ಮಾಡಿದ ಅತಿದೊಡ್ಡ ಕೈಂಕರ್ಯಗಳಲ್ಲಿ ಒಂದಾಗಿದೆ. ಪಿಳ್ಳೈ ಲೋಕಾಚಾರ್ಯಾರ್ ಅವರು ಶ್ರೀ ವಚನ ಭೂಷನಮ್ ಅವರ ಅರ್ಥಗಳನ್ನು ತಿರುಮಲೈ ಆಳ್ವಾರ್ ಅವರಿಗೆ ಕಲಿಸಲು ವಿಲಾಂಚೋಲೈ ಪಿಳ್ಳೈ ಅವರು ಬಯಸಿದ್ದರು. ಮಕ್ಕಳೇ! ಈಗ, ವಿಲಾಂಚೋಲೈ ಪಿಳ್ಳೈ ಅವರ ಜೀವನದಲ್ಲಿ ನಡೆದ ಒಂದು ಪ್ರಮುಖ ಘಟನೆಯನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ.
ಅತ್ತುಳಾಯ್: ಅಜ್ಜಿ,ಆ ಘಟನೆ ಬಗ್ಗೆ ಹೇಳಿ
ಅಜ್ಜಿ : ನೀವೆಲ್ಲ ಕಾತುರವಾಗಿದ್ದೀರಿ ಎಂದು ನನಗೆ ಗೊತ್ತು ಆದರೆ ನಿಮ್ಮೆಲ್ಲರಿಗೂ ಶತ್ವಿಷಯಂ ಹೇಳುವುದು ನನ್ನ ಕರ್ತವ್ಯ. ಹಾಗಾಗಿ ಗಮನದಿಂದ ಕೇಳಿರಿ .
ಒಂದು ದಿನ ನಂಬೂದರಿಗಳು ಪದ್ಮನಾಭ ಸ್ವಾಮಿಗೆ ತಿರುವಾರಾಧನವನ್ನು ಮಾಡುತ್ತಿದ್ದರು. ವಿಲಾಂಚೋಲೈ ಪಿಳ್ಳೈ ದೇವಸ್ಥಾನಕ್ಕೆ ಪ್ರವೇಶಿಸಿದರು. ನಮಗೆಲ್ಲರಿಗೂ ತಿಳಿದಿರುವಂತೆ, ನಮ್ಮ ಪೆರುಮಾಳ್ ದರ್ಶನವನ್ನು ಸುಗಮಗೊಳಿಸಲು ಗರ್ಭಗುಡಿಗೆ ಮೂರು ಬಾಗಿಲುಗಳಿವೆ. ಪೆರುಮಾಳಿನ ಪಾದಕಮಲಗಳ ದರ್ಶನ ಕೊಡುವ ಬಾಗಿಲಿನ ಬಳಿ ವಿಲಾಂಚೋಲೈ ಪಿಳ್ಳೈ ನಿಂತಿದ್ದರು . ಇದನ್ನೆಲ್ಲ ನೋಡಿದ ನಂಬೂದರಿಗಳು ಆ ದಿನಗಳಲ್ಲಿ ದೇವಾಲಯದ ಆವರಣದೊಳಗೆ ಅನುಮತಿಸದ ಕಾರಣ ಆಘಾತಕ್ಕೊಳಗಾದರು. ನಂಬೂದರಿಗಳು ಸನ್ನಿಧಿಯ ಬಾಗಿಲು ಮುಚ್ಚಿ, ದೇವಾಲಯದಿಂದ ಹೊರಗೆ ಹೋಗಲು ಪ್ರಾರಂಭಿಸಿದರು.
ಅದೇ ಸಮಯದಲ್ಲಿ, ವಿಲಾಂಚೋಲೈ ಪಿಳ್ಳೈ ನ ಕೆಲವು ಸ್ಥಳೀಯ ಶಿಷ್ಯರು ದೇವಾಲಯದ ಬಳಿಗೆ ಬಂದು ತಮ್ಮ ಆಚಾರ್ಯನ್ ವಿಲಾಂಚೋಲೈ ಪಿಳ್ಳೈ ಅವರ ದೇಹವನ್ನು ತೊರೆದು ತಮ್ಮ ಆಚಾರ್ಯನ್ ಪಿಳ್ಳೈ ಲೋಕಾಚಾರ್ಯಾರ್ ಅವರ ಕಮಲದ ಪಾದಗಳನ್ನು ತಲುಪಿದ್ದಾರೆ ಎಂದು ಘೋಷಿಸಿದರು. ಅವರು ವಿಲಾಂಚೋಲೈ ಪಿಳ್ಳೈನ ಚರಮ ತಿರುಮೇನಿ (ಅಂತಿಮ ಪವಿತ್ರ ದೇಹ) ಗಾಗಿ “ತಿರುಪರಿಯಟ್ಟಂ” (ಎಂಪೆರುಮಾನಿನ ವಸ್ತ್ರಮ್ ಪ್ರಸಾದಮ್) ಮತ್ತು ಎಂಪೆರುಮಾನಿನ ಹೂಮಾಲೆಗಳನ್ನು ಬಯಸಿದ್ದರು.
ಈ ವಿಷಯವನ್ನು ಕೇಳಿದ ನಂಬೂದರಿಗಳು ಆಘಾತಕ್ಕೊಳಗಾದರು ಮತ್ತು ವಿಲಾಂಚೋಲೈ ಪಿಳ್ಳೈ ಅವರ ಹಿರಿಮೆಯನ್ನು ಅರ್ಥಮಾಡಿಕೊಂಡರು. ನಂತರ ಅವರು ಪೆರುಮಾಳ್ ಅವರ ತಿರುಪ್ಪರಿಯಟ್ಟಂ ಮತ್ತು ಹೂಮಾಲೆಗಳನ್ನು ಅರ್ಪಿಸಿದರು.
ವೇದವಲ್ಲಿ:ಅಜ್ಜಿ, ವಿಲಾಂಚೋಲೈ ಪಿಳ್ಳೈನ ಅಂತಿಮ ಕಾಲ ವಿಷಯವನ್ನು ಕೇಳಲು ರೋಮಾಂಚನವಾಗಿದೆ.
ವ್ಯಾಸ: ಹೌದು ಅಜ್ಜಿ, ನನಗೂ ಆನಂದ ಬಾಷ್ಪ ಬರುತ್ತಿದೆ. “ಈಳವ ಕುಲ” ದಿಂದ ಬಂದ ಒಬ್ಬರನ್ನು ಹೇಗೆ ನಮ್ಮ ಸಂಪ್ರದಾಯ ವೈಭವೀಕರಿಸಿದೆ ಎಂದು ಈಡು ಚೆನ್ನಗಿ ತೋರಿಸುತ್ತದೆ.
ಅಜ್ಜಿ : ಸರಿ ಮಕ್ಕಳೇ, ನಿಮ್ಮೆಲ್ಲರ ಜೊತೆ ಒಳ್ಳೆಯ ಸಮಯ ಕಳಿಯಲು ಸಾದ್ಯವಾಯಿತು. ಇಂದು ಚರ್ಚೆ ಮಾಡಿದ ವಿಷಯಗಳನ್ನು ನೀವು ನೆನಪಿನಲ್ಲಿ ಇಟ್ಟುಕೊಂಡಿರಿ ಎಂದು ಭಾವಿಸುತ್ತೇನೆ. ಮುಂದಿನ ಬಾರಿ , ನಾನು ನಿಮಗೆ ತಿರುವಾಯ್ಮೊಳಿ ಪಿಳ್ಳೈ ಬಗ್ಗೆ ವಿವರವಾಗಿ ಹೇಳುತ್ತೇನೆ.
ಮಕ್ಕಳು ಸಂತೋಷದಿಂದ ಚರ್ಚೆಗಳ ಬಗ್ಗೆ ಯೋಚಿಸುತ್ತಾ ಆಂಡಾಳ್ ಅಜ್ಜಿ ಮನೆಯಿಂದ ಹಿಂತಿರುಗುತ್ತಾರೆ.
ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ: http://pillai.koyil.org/index.php/2018/05/beginners-guide-pillai-lokacharyars-sishyas/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org