ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ
ಪರಾಶರ ಮತ್ತು ವ್ಯಾಸ ವೇದವಲ್ಲಿ ಮತ್ತು ಅತ್ತುಳಾಯ್ ಜೊತೆ ಆಂಡಾಲ್ ಅಜ್ಜಿ ಮನೆಗೆ ಬರುತ್ತಾರೆ. ಅಜ್ಜಿ ತಿರುಪ್ಪಾವೈ ಪಠಿಸುವುದು ಗಮನಿಸಿ ಮಕ್ಕಳು ಅವರು ಮುಗಿಸುವ ತನಕ ಕಾಯುತ್ತಾರೆ. ಅಜ್ಜಿಯು ಪಾಠಿಸುವುದು ಮುಗಿಸಿ ಮಕ್ಕಳನ್ನು ಸ್ವಾಗತಿಸುತ್ತಾರೆ.
ಅಜ್ಜಿ : ಬನ್ನಿ ಮಕ್ಕಳೇ. ಸ್ವಾಗತ
ವ್ಯಾಸ: ಅಜ್ಜಿ, ಹಿಂದಿನ ಬಾರಿ ವಡಕ್ಕು ತಿರುವೀಧಿ ಪಿಳ್ಳೈಯವರ ಪುತ್ರರ ಬಗ್ಗೆ ಹೇಳುತ್ತೇನೆ ಎಂದಿರಿ.ಈಗ ನಮಗೆ ಹೇಳುತ್ತೀರಾ.
ಅಜ್ಜಿ: ಹೌದು ವ್ಯಾಸ . ಇಂದು ನಾವು ವಡಕ್ಕು ತರುವೀಧಿ ಪಿಳ್ಳೈ ಅವರ ಪ್ರಸಿದ್ಧ ಪುತ್ರರ ಬಗ್ಗೆ ಮಾತನಾಡೋಣ. ಮುಂಚೆಯೇ ನಾನು ಹೇಳಿದಂತೆ , ಅವರ ಆಚಾರ್ಯ ಆಶೀರ್ವಾದ ಮತ್ತು ನಂಪೆರುಮಾಳ್ ಕೃಪೆಯಿಂದ , ವಡಕ್ಕು ತಿರುವೀಧಿ ಪಿಳ್ಳೈಗೆ ಇಬ್ಬರು ಪುತ್ರರು ಪಿಳ್ಳೈ ಲೋಕಾಚಾರಿಯರ್ ಮತ್ತು ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ . ಇಬ್ಬರು ಹುಡುಗರು ರಾಮ ಲಕ್ಷ್ಮಣರಂತೆ ನಿಪುಣರಾಗಿ ಬೆಳೆದು ನಮ್ಮ ಸಂಪ್ರದಾಯಕ್ಕೆ ಅಪಾರ ಕೈಂಕರ್ಯಗಳನ್ನು ಮಾಡಿದರು.
ನಂಪಿಳ್ಳೈ ಪರಮಪದ ತಲುಪಿದ ನಂತರ, ವಡಕ್ಕು ತಿರುವೀಧಿ ಪಿಳ್ಳೈ ನಮ್ಮ ಸಂಪ್ರದಾಯದ ಮುಂದಿನ ಆಚಾರ್ಯರಾಗಿ , ಅವರು ತಮ್ಮ ಆಚಾರ್ಯ ನಂಪಿಳ್ಳೈ ಇಂದ ಕಲಿತ ಎಲ್ಲ ಅರ್ಥಗಳನ್ನು ಅವರ ಮಕ್ಕಳಿಗೆ ಕಲಿಸಿದರು.ಸ್ವಲ್ಪ ಕಾಲ ನಂತರ ವಡಕ್ಕು ತಿರುವೀಧಿ ಪಿಳ್ಳೈ ತಮ್ಮ ಆಚಾರ್ಯರನ್ನು ನೆನೆಯುತ್ತಾ ತಮ್ಮ ಚರಮ ತಿರುಮೇನಿಯನ್ನು ತ್ಯಜಿಸಿ ಪರಮಪದ ಪಡೆಯುತ್ತಾರೆ, ತದನಂತರ ಅವರ ಮಗ ಪಿಳ್ಳೈ ಲೋಕಾಚಾರ್ಯರು ನಮ್ಮ ಸಂಪ್ರದಾಯದ ಮುಂದಿನ ಆಚಾರ್ಯರಾದರು.
ಅತ್ತುಳಾಯ್: ಅಜ್ಜಿ, ಪಿಳ್ಳೈ ಲೋಕಾಚಾರ್ಯರು ಸ್ವತಃ ದೇವ ಪೆರುಮಾಳ್ ಎಂದು ನಾನು ಕೇಳಿದ್ದೇನೆ.
ಅಜ್ಜಿ : ಹೌದು ಅತ್ತುಳಾಯ್. ಪಿಳ್ಳೈ ಲೋಕಾಚಾರ್ಯರು ಸ್ವತಃ ದೇವ ಪೆರುಮಾಳ್. ಪಿಳ್ಳೈ ಲೋಕಾಚಾರ್ಯರು ಅವರ ಅಂತಿಮ ಕಾಲದಲ್ಲಿ ಜ್ಯೋತಿಶ್ಕುಡಿಯಲ್ಲಿ ,ವ್ಯಾಖ್ಯಾನಗಳನ್ನು ತಿರುಮಲೈ ಆಳ್ವಾರ್ (ತಿರುವಾಯ್ಮೊಳಿ ಪಿಳ್ಳೈ) , ನಮ್ಮ ಸಂಪ್ರದಾಯದ ಮುಂದಿನ ಆಚಾರ್ಯ,ಆವರಿಗೆ ಕಲಿಸಲು ನಾಲೂರ್ ಪಿಳ್ಳೈಗೆ ಆದೇಶ ನೀಡುತ್ತಾರೆ. ತಿರುಮಲೈ ಆಳ್ವಾರ್ ಅವರು ಕಾಂಚೀಪುರಂನಲ್ಲಿ ಮಂಗಳಾಶಾಸನಂಗೆ ಧೇವ ಪೆರುಮಾಳನ್ನು ಭೇಟಿ ನೀಡಿದಾಗ, ಧೇವ ಪೆರುಮಾಲ್ ಹತ್ತಿರದಲ್ಲಿ ನಿಂತಿದ್ದ ನಾಲೂರ್ ಪಿಳ್ಳೈ ಅವರೊಂದಿಗೆ ನೇರವಾಗಿ ಮಾತನಾಡುತ್ತಾರೆ ಮತ್ತು “ನಾನು ಜ್ಯೋತಿಷ್ಕುಡಿಯಲ್ಲಿ ಹೇಳಿದಂತೆ ನೀವು ತಿರುಮಲೈ ಆಳ್ವಾರ್ಗೆ ಎಲ್ಲಾ ಅರ್ಥಗಳನ್ನು ಕಲಿಸಬೇಕು” ಎಂದು ಹೇಳುತ್ತಾರೆ.
ವೇದವಲ್ಲಿ : ಅಜ್ಜಿ, ಪಿಳ್ಳೈ ಲೋಕಾಚಾರ್ಯರು ಅವರ ಅಂತಿಮ ದಿನಗಳನ್ನು ಜ್ಯೋತಿಷ್ಕುಡಿಯಲ್ಲಿ ಏಕೆ ಕಳೆದರು ? ಅವರು ಶ್ರೀರಂಗದಲ್ಲಿ ಹುಟ್ಟಿದರಲ್ಲವೇ?
ಅಜ್ಜಿ : ಪಿಳ್ಳೈ ಲೋಕಾಚಾರ್ಯರು ಒಬ್ಬ ಮಹಾನ್ ಆಚಾರ್ಯನ್, ನಮ್ಮ ಎಲ್ಲರ ಅನುಕೂಲಕ್ಕಾಗಿ ಆಳ್ವಾರುಗಳ ಪಾಸುರಂ ಬಗ್ಗೆ ಸುಲಭವಾದ ತಮಿಳು ಭಾಷೆಯಲ್ಲಿ ಸುಂದರವಾದ ಗ್ರಂಥಗಳನ್ನು ಬರೆದಿದ್ದಾರೆ. ಎಲ್ಲರೂ ಸಂಸ್ಕೃತ ಅಥವಾ ತಮಿಳು ಭಾಷೆಯಲ್ಲಿ ನಿಪುಣರಲ್ಲ . ಭಾಷೆಗಳ ಬಗ್ಗೆ ಹೆಚ್ಚು ಪಾರಂಗತರಲ್ಲದಿದ್ದರೂ, ನಮ್ಮ ಪೂರ್ವಾಚಾರ್ಯರ ಕೃತಿಗಳನ್ನು ಕಲಿಯಲು ಮತ್ತು ಅದರ ಲಾಭ ಪಡೆಯುವ ಬಯಕೆಯನ್ನು ಹೊಂದಿರುವವರಿಗೆ, ಪಿಳ್ಳೈ ಲೋಕಾಚಾರ್ಯರು , ಬಹಳ ಕರುಣೆಯಿಂದ, ಅವರು ತಮ್ಮ ಆಚಾರ್ಯರಿಂದ ಕೇಳಿದ್ದನ್ನು ಸರಳ / ಸಂಕ್ಷಿಪ್ತವಾದ ಭಾಷೆಯಲ್ಲಿ ದಾಖಲಿಸಿದ್ದಾರೆ. ನಮ್ಮ ಸಂಪ್ರದಾಯದ ಅರ್ಥಗಳನ್ನು ವಿವರಿಸುವ ಶ್ರೀವಚನ ಭೂಷಣಂ ಧಿವ್ಯ ಶಾಸ್ತ್ರವು ಪ್ರಮುಖ ಕಾರ್ಯವಾಗಿತ್ತು. ಹೀಗೆ ಅವರು ಪ್ರಮಾಣ ರಕ್ಷಣಂ (ನಮ್ಮ ಸಂಪ್ರದಾಯದ ಜ್ಞಾನದ ಮೂಲವನ್ನು ರಕ್ಷಿಸುವುದು / ಪೋಷಿಸುವುದು) ಮಾಡಿದ ಮುಖ್ಯ ಆಚಾರ್ಯರು.
ಪಿಳ್ಳೈ ಲೋಕಾಚಾರ್ಯರು ನಮ್ಮ ಸಂಪ್ರದಾಯದ ಜ್ಞಾನದ ಮೂಲವನ್ನು ಮಾತ್ರವಲ್ಲದೆ ನಮ್ಮ ಸಂಪ್ರದಾಯದ ಮೂಲ – ಶ್ರೀರಂಗಂನ ನಂಪೆರುಮಾಳ್ ಅನ್ನು ರಕ್ಷಿಸಿದ್ದಾರೆ . ಶ್ರೀರಂಗಂನಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿರುವಾಗ, ಇದ್ದಕ್ಕಿದ್ದಂತೆ ಮುಸ್ಲಿಂ ಆಕ್ರಮಣದ ಸುದ್ದಿ ಕಾಡಿನ ಬೆಂಕಿಯಂತೆ ಹರಡಿತು. ಈ ಮುಸ್ಲಿಂ ರಾಜರು ದೇವಾಲಯಗಳ ಸಮೃದ್ಧ ಸಂಪತ್ತಿಗೆ ದೇವಾಲಯಗಳನ್ನು ಗುರಿಯಾಗಿಸಿಕೊಳ್ಳುವುದರಿಂದ ಎಲ್ಲರಿಗೂ ಆತಂಕವಾಯಿತು. ತಕ್ಷಣವೇ ಪಿಳ್ಳೈ ಲೋಕಾಚಾರ್ಯರು (ಹಿರಿಯ ಶ್ರೀವೈಷ್ಣವ ಆಚಾರ್ಯರು) ಪರಿಸ್ಥಿತಿಯನ್ನು ನಿಯಂತ್ರಿಸಿದರು. ಅವರು ಪೆರಿಯ ಪೆರುಮಾಳ್ ಮುಂದೆ ಗೋಡೆ ಎತ್ತುವಂತೆ ಶ್ರೀವೈಷ್ಣವರಿಗೆ ಸೂಚನೆ ನೀಡಿದರು ಮತ್ತು ಭಾರತದ ದಕ್ಷಿಣಕ್ಕೆ ನಂಪೆರುಮಾಳ್ ಮತ್ತು ಉಭಯ ನಾಚ್ಚಿಯಾರೊಂದಿಗೆ ಹೊರಟರು. ಆ ಸಮಯದಲ್ಲಿ ಅವರು ಹೆಚ್ಚು ವಯಸ್ಸಾಗಿದ್ದರು ತಮ್ಮ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಮತ್ತು ನಂಪೆರುಮಾಳ್ ಜೊತೆಗೆ ಪ್ರಯಾಣಿಸಿದರು. ಅವರು ಕಾಡುಗಳ ಮೂಲಕ ಹೋಗುತ್ತಿರುವಾಗ, ಕೆಲವು ಕಳ್ಳರು ಬಂದು ನಂಪೆರುಮಾಳಿನ ಎಲ್ಲಾ ಆಭರಣಗಳನ್ನು ದೋಚಿದರು. ಪಿಳ್ಳೈ ಲೋಕಾಚಾರ್ಯರು ಕಳ್ಳರ ಮನಸ್ಸನ್ನು ಬದಲಾಯಿಸಿ , ನಂತರ ಕಳ್ಳನು ಅವರಿಗೆ ಶರಣಾಗಿ ಆಭರಣಗಳನ್ನು ಹಿಂತಿರುಗಿಸುತ್ತಾನೆ.
ಇದರ ನಂತರ, ಅವರು ಜ್ಯೋತಿಷ್ಕುಡಿ (ಮಧುರೈ ಬಳಿ) ಎಂಬ ಸ್ಥಳವನ್ನು ತಲುಪುತ್ತಾರೆ. ಪಿಳ್ಳೈ ಲೋಕಾಚಾರ್ಯರು ಅವರ ವೃದ್ಧಾಪ್ಯದಿಂದಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಮತ್ತು ಪರಮಪದಂಗೆ ತೆರಳಲು ನಿರ್ಧರಿಸುತ್ತಾರೆ. ಅವರು ತಮ್ಮ ಶಿಷ್ಯರಲ್ಲಿ ಒಬ್ಬರಾದ ತಿರುಮಲೈ ಆಳ್ವಾರ್ (ತಿರುವಾಯ್ಮೊಳಿ ಪಿಳ್ಳೈ ) ಅವರನ್ನು ಸಂಪ್ರದಾಯದ ಮುಂದಿನ ಆಚಾರ್ಯರನ್ನಾಗಿ ಸಿದ್ದಗೊಳಿಸಲು ಯೋಚಿಸುತ್ತಾರೆ. ತಿರುಮಲೈ ಆಳ್ವಾರ್ ಅವರಿಗೆ ವ್ಯಾಖ್ಯಾನಗಳನ್ನು ಕಲಿಸಲು ಅವರು ನಾಲೂರ್ ಪಿಳ್ಳೈಗೆ ಸೂಚಿಸುತ್ತಾರೆ .ಶ್ರೀಶೈಲೇಶ (ತಿರುವಾಯ್ಮೊಳಿ ಪಿಳ್ಳೈ) ಮಧುರೈನಲ್ಲಿ ರಾಜನಿಗಾಗಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವರು ಅವನನ್ನು ಮತ್ತೆ ಶ್ರೀವೈಷ್ಣವ ಸಂಪ್ರದಾಯಕ್ಕೆ ಕರೆತರಬೇಕು ಮತ್ತು ಅವರು ಮುಂದಿನ ಆಚಾರ್ಯರಾಗಿ ದಾರಿ ತೋರಬೇಕೆಂದು ಅವರು ಕೂರ ಕುಲೋತ್ತಮ ಧಾಸರ್ ಮತ್ತು ವಿಲಾಂಚೋಲೈ ಪಿಳ್ಳೈಗೆ ಸೂಚಿಸುತ್ತಾರೆ. . ಕೊನೆಗೆ ಅವರು ತನ್ನ ಚರಮ ತಿರುಮೇನಿಯನ್ನು ತ್ಯಜಿಸಿ ಜ್ಯೋತಿಷ್ಕುಡಿಯಲ್ಲಿ ಪರಮಪದವನ್ನು ತಲುಪುತ್ತಾರೆ . ಹೀಗೆ ಪಿಳ್ಳೈ ಲೋಕಾಚಾರ್ಯರು ನಂಪೆರುಮಾಳ್ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ನಂಪೆರುಮಾಳ್ಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅವರು ಮತ್ತು ಸಾವಿರಾರು ಇತರ ಶ್ರೀವೈಷ್ಣವರು ಇಲ್ಲದಿದ್ದರೆ, ನಾವು ಇಂದು ಶ್ರೀರಂಗಂನಲ್ಲಿ ನಂಪೆರುಮಾಳ್ ಅನ್ನು ನೋಡಲು ಅಥವ ಪೂಜಿಸಲು ಸಾಧ್ಯವಾಗುತ್ತಿರಲಿಲ್ಲ.
ಪರಾಶರ: ಅವರು ಸ್ವತಃ ದೇವ ಪೇರುಮಾಳ್ ಅವತಾರ ಎಂದರೆ ಆಶ್ಚರ್ಯವಿಲ್ಲ , ಅತ್ಯಂತ ಸೂಕ್ತ ತ್ಯಾಗದ ಉದಾಹರಣೆ !
ಅಜ್ಜಿ : ಹೌದು ಪರಾಶರ, ಅದಕ್ಕೆ ದೇವ ಪೆರುಮಾಳನ್ನು ನಮ್ಮ ಸಂಪ್ರದಾಯ ಪೆರುಮಾಳ್ ಎಂದು ಕರೆಯುತ್ತಾರೆ. ಪಿಳ್ಳೈ ಲೋಕಾಚಾರ್ಯರು ಪ್ರಮಾಣ ರಕ್ಷಣಂ (ನಮ್ಮ ಸಂಪ್ರದಾಯದ ಜ್ಞಾನದ ಮೂಲವನ್ನು ಗ್ರಂಥಗಳ ರೂಪದಲ್ಲಿ ರಕ್ಷಿಸುವುದು) ಮಾತ್ರವಲ್ಲದೆ , ಅವರು ಪ್ರಮೇಯ ರಕ್ಷಣಂ (ನಂಪೆರುಮಾಳ್ ರಕ್ಷಣೆ) ದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ನಂಪೆರುಮಾಳಿನ ಸುರಕ್ಷತೆಯ ಬಗ್ಗೆ ಯೋಚಿಸುವ ಮೂಲಕ ಶ್ರೀವೈಷ್ಣವರ ನಿಜವಾದ ಗುಣವನ್ನು ಅವರು ನಮಗೆ ತೋರಿಸಿದರು. ಎಂಪೆರುಮಾನಿನ ತಿರುಮೇನಿ ಬಗ್ಗೆ ಚಿಂತೆ ಮಾಡುತ್ತಿದ್ದ ಪೆರಿಯಾಳ್ವಾರ್ ಪಲ್ಲಾಂಡು ಹಾಡಿದ್ದಂತೆ, ಪಿಳ್ಳೈ ಲೋಕಾಚಾರ್ಯರು ಅವರು ಬಾಲ್ಯದಲ್ಲಿಯೇ ನಂಪೆರುಮಾಳಿನ ಆರ್ಚಾ ಮೂರ್ತಿಯನ್ನು ನೋಡಿ ತಂದೆಯ ಪ್ರೀತಿ ಮತ್ತು ಕಾಳಜಿ ಅನುಭವಿಸಿ ,ಮುಸ್ಲಿಂ ಆಕ್ರಮಣಕಾರರಿಂದ ನಂಪೆರುಮಾಳನ್ನು ರಕ್ಷಿಸಿ ಅವರ ಜೀವ ತ್ಯಾಗ ಮಾಡಿದರು. ಆದ್ದರಿಂದ, ಮುಂದಿನ ಬಾರಿ ನೀವು ಪೆರುಮಾಳ್ ದೇವಸ್ಥಾನಕ್ಕೆ ಹೋದಾಗ, ನಮ್ಮ ಮುಂದೆ ಇರುವ ಸಾವಿರಾರು ಶ್ರೀವೈಷ್ಣವರು ಮಾಡಿದ ನಿಸ್ವಾರ್ಥ ತ್ಯಾಗದಿಂದ ಇಂದು ನಮ್ಮಲ್ಲಿರುವ ಸಂಪ್ರದಾಯವನ್ನು ನಿರ್ಮಿಸಲಾಗಿದೆ ಎಂಬುದನ್ನು ನೆನಪಿಡಿ. ಭವಿಷ್ಯದ ಪೀಳಿಗೆಯ ನಾವು ಅವರ ಶ್ರಮದ ಫಲವನ್ನು ಆನಂದಿಸಲು ಅವರು ಸಂಪ್ರದಾಯ ಮತ್ತು ನಂಪೆರುಮಾಳನ್ನು ರಕ್ಷಿಸಿದ್ದಾರೆ. ಅಂತಹ ಶ್ರೀವೈಷ್ಣವರು ಅವರ ತ್ಯಾಗಗಳನ್ನು ಸ್ಮರಿಸುವುದರ ಮೂಲಕ, ನಮ್ಮ ಸಂಪ್ರದಾಯವನ್ನು ಗೌರವಿಸಿ ಮತ್ತು ಅದನ್ನು ಲಘುವಾಗಿ ಪರಿಗಣಿಸದೆ ಅವರು ನಮಗೆ ಕೊಟ್ಟಿರುವ ಮೌಲ್ಯಗಳು ಮತ್ತು ಜ್ಞಾನವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದನ್ನು ಹೊರತುಪಡಿಸಿ ನಾವು ಅವರಿಗೆ ಮರುಪಾವತಿ ಮಾಡಲು ಏನೂ ಮಾಡಲಾಗುವುದಿಲ್ಲ.
ಅತ್ತುಳಾಯ್: ಅಜ್ಜಿ, ಪಿಳ್ಳೈ ಲೋಕಾಚಾರ್ಯರ ತಮ್ಮ ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಬಗ್ಗೆ ಹೇಳಿ.
ಅಜ್ಜಿ : ನಾಯನಾರ್ ನಮ್ಮ ಸಂಪ್ರದಾಯದ ಅಗತ್ಯ ತತ್ವಗಳ ಬಗ್ಗೆ ಅದ್ಭುತವಾದ ಅನುಗ್ರಹಗಳನ್ನು ಬರೆದಿದ್ದಾರೆ, ಇದರ ಮುಖ್ಯ ತುಣುಕು ಆಚಾರ್ಯ ಹೃದಯಂ. ನಮ್ಮ ಸಂಪ್ರದಾಯದ ಮತ್ತು ದಿವ್ಯ ಪ್ರಭಂಧಮ್ಗಳ ಜ್ಞಾನದಲ್ಲಿ ಅವರನ್ನು ಪೆರಿಯ ವಾಚ್ಛಾನ್ ಪಿಳ್ಳೈ ಅವರಂತಹ ಶ್ರೇಷ್ಠ ಆಚಾರ್ಯರಿಗೆ ಸಮಾನರೆಂದು ಪರಿಗಣಿಸಲಾಗಿತ್ತು. ನಾಯನಾರ್ ಅವರನ್ನು ದೊಡ್ಡ ಆಚಾರ್ಯ ಎಂದು ಪ್ರಶಂಸಿಸಲಾಯಿತು. ಅವರನ್ನು “ಜಗತ್ ಗುರುವರ್ಅನುಜಾ – ಲೋಕಾಚಾರ್ಯಾರ್ ಅವರ ಕಿರಿಯ ಸಹೋದರ” ಎಂದು ಜನಪ್ರಿಯಗೊಳಿಸಿದ್ದಾರೆ. ಅವರ ಕೃತಿಗಳು ಬುದ್ಧಿವಂತಿಕೆಯ ರತ್ನಗಳಲ್ಲದೆ ಮತ್ತೇನಲ್ಲ, ನಮ್ಮ ಸಂಪ್ರದಾಯದ ಸಂಕೀರ್ಣವಾದ ಅರ್ಥಗಳು ಮತ್ತು ವಿವರಗಳು ಸಾಮಾನ್ಯ ಜನರಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಮಾಮುನಿಗಳ್ , ನಾಯನಾರ್ ಮತ್ತು ಅವರ ಕೊಡುಗೆಗಳನ್ನು ವೈಭವೀಕರಿಸಿ ಪೆರಿಯ ವಾಚ್ಚಾನ್ ಪಿಳ್ಳೈ ನಂತರ ನಾಯನಾರ್ ತಮ್ಮ ಕೃತಿಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳುತ್ತಾರೆ. ನಾಯನಾರ್ ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಿರುಮೇನಿಯನ್ನು ತ್ಯಜಿಸಲು ನಿರ್ಧರಿಸಿದರು ಮತ್ತು ಪಿಳ್ಳೈ ಲೋಕಾಚಾರ್ಯರನ್ನು ಬಿಟ್ಟು ಪರಮಪಧಂಗೆ ಏರಿದರು . ನಾಯನಾರ್ ಪರಮಪದಂ ತಲುಪಿದಾಗ,ಪಿಳ್ಳೈ ಲೋಕಾಚಾರ್ಯರು ದುಃಖದ ಸಾಗರದಲ್ಲಿ ಬಿದ್ದು ನಾಯನಾರ್ ನ ತಿರುಮುಡಿ (ತಲೆ) ಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಅತ್ತು ಕೂಗುತ್ತಾರೆ . ಅವರು ಅಲ್ಪಾವಧಿಯಲ್ಲಿಯೇ ಜಗತ್ತು ಕಳೆದುಕೊಂಡಿರುವ ಅಸಾಧಾರಣ ಶ್ರೀವೈಷ್ಣವ ಎಂದು ಅವರು ನಾಯನಾರ್ ಅವರನ್ನು ಹೆಚ್ಚಾಗಿ ನೋಡುತ್ತಾರೆ.
ವ್ಯಾಸ : ಅಜ್ಜಿ, ಪಿಳ್ಳೈ ಲೋಕಾಚಾರ್ಯರ ಮತ್ತು ನಾಯನಾರ್ ಅವರ ಜೀವನ ಕಥೆ ಕೇಳಲು ಬಹಳ ಆಸಕ್ತಿದಾಯಕ ಮತ್ತು ಭಾವನಾತ್ಮಕವಾಗಿದೆ.
ಅಜ್ಜಿ : ಹೌದು ವ್ಯಾಸ. ನಮ್ಮ ಆಚಾರ್ಯರ ಬಗ್ಗೆ ಮಾತನಾಡುತ್ತಿದ್ದರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಹೊರಗೆ ಕತ್ತಲಾಗುತ್ತಿದೆ . ನೀವು ನಿಮ್ಮ ಮನೆಗಳಿಗೆ ಹಿಂತಿರುಗಬೇಕು. ಮುಂದಿನ ಬಾರಿ ಪಿಳ್ಳೈ ಲೋಕಾಚಾರ್ಯರ ಶಿಷ್ಯರ ಬಗ್ಗೆ ಹೇಳುತ್ತೇನೆ.
ಮಕ್ಕಳು ವಡಕ್ಕು ತಿರುವೀಧಿ ಪಿಳ್ಳೈ, ಪಿಳ್ಳೈ ಲೋಕಾಚಾರ್ಯ,ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಮತ್ತು ಅವರ ವೈಭವಾನ್ವಿತ ಜೀವನದ ಬಗ್ಗೆ ಯೋಚಿಸುತ್ತ ಅವರವರ ಮನೆಗೆ ಹಿಂತಿರುಗುತ್ತಾರೆ.
ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ: http://pillai.koyil.org/index.php/2016/09/beginners-guide-pillai-lokacharyar-and-nayanar/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org