ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಂಪಿಳ್ಳೈ ಶಿಷ್ಯರು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ನಂಪಿಳ್ಳೈ

ವೇದವಲ್ಲಿ ಮತ್ತು ಅತ್ತುಳಾಯ ಜೊತೆ ಪರಾಶರ ಮತ್ತು ವ್ಯಾಸ ಆಂಡಾಳ್ ಅಜ್ಜಿಯ ಮನೆಗೆ ಬಂದಾಗ ಅವರು ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಮಕ್ಕಳು ಮಾತನಾಡುವುದನ್ನು ಕೇಳಿ ಅಜ್ಜಿಯು ಅವರನ್ನು ಸ್ವಾಗತಿಸಲು ನಡುಮನೆಗೆ ಬರುತ್ತಾರೆ.

ಅಜ್ಜಿ : ಬನ್ನಿ ಮಕ್ಕಳೇ. ನಿಮ್ಮ ಕೈ ಕಾಲು ತೊಳೆದುಕೊಳ್ಳಿ. ದೇವಾಲಯದ ಈ ಪ್ರಸಾದವನ್ನೂ ತೆಗೆದುಕೊಳ್ಳಿರಿ. ಹಿಂದಿನ ಬಾರಿ, ನಾವು ನಮ್ಮ ಆಚಾರ್ಯನ್ ನಂಪಿಳ್ಳೈ ಬಗ್ಗೆ ತಿಳಿದುಕೊಂಡೆವು. ನಾನು ಮುಂಚೆಯೇ ಹೇಳಿದಂತೆ , ಇಂದು ನಾವು ಅವರ ಪ್ರಮುಖ ಶಿಷ್ಯರಾದ ವಡಕ್ಕು ತಿರುವೀಧಿಪಿಳ್ಳೈ , ಪೆರಿಯವಾಚ್ಚಾನ್ ಪಿಳ್ಳೈ, ಪಿನ್ಬಳಗಿಯ ಪೆರುಮಾಳ್ ಜೀಯರ್, ಈಯುಣ್ಣಿ ಮಾಧವ ಪೆರುಮಾಳ್, ನಡುವಿಲ್ ತಿರುವೀಧಿ ಪಿಳ್ಳೈ ಭಟ್ಟರ್ ಮುಂತಾದವರ ಬಗ್ಗೆ ತಿಳಿಯೋಣ.

ವ್ಯಾಸ :  ಅಜ್ಜಿ , ನಂಪಿಳ್ಳೈ ಅವರಿಗೆ ಹಲವಾರು ಶಿಷ್ಯರಿದ್ದರೆ ? ನಮಗೆ ಅವರ ಬಗ್ಗೆ ಹೇಳುತ್ತೀರಾ ?

ಅಜ್ಜಿ : ಹೌದು, ಒಬೊಬ್ಬರ ಬಗ್ಗೆ ತಿಳಿಯೋಣ. ನಂಪಿಳ್ಳೈ ಅವರ ಶಿಷ್ಯ , ವ್ಯಾಖ್ಯಾನ ಚಕ್ರವರ್ತಿಯಾದ ಪೆರಿಯವಾಚ್ಚಾನ್ ಪಿಳ್ಳೈಯಿಂದ ಆರಂಭಿಸೋಣ. ಕೃಷ್ಣನ್ ಎಂಬ ಹೆಸರಿನಿಂದ ಸೇಂಗನೂರ್ (ತಿರುಚ್ಚಂಗನಲ್ಲೂರ್ ) ನಲ್ಲಿ ಯಾಮುನರ್ ಅವರಿಗೆ ಜನಿಸಿದರು ,ನಂತರ ಪೆರಿಯವಾಚ್ಚಾನ್ ಪಿಳ್ಳೈ ಎಂದು ಹೆಸರಾಂತರಾದರು . ಅವರು ನಂಪಿಳ್ಳೈಯ ಪ್ರಮುಖ ಶಿಷ್ಯರು ಮತ್ತು ಎಲ್ಲ ಶಾಸ್ತ್ರ ಅರ್ಥಗಳನ್ನು ಸ್ವತಃ ನಂಪಿಳ್ಳೈ ಯಿಂದ ಕಲಿತರು. ಅವರು ನಾಯನಾರ್ಆಚ್ಛಾನ್  ಪಿಳ್ಳೈ ಯನ್ನು ಅವರ ಮಗನಂತೆ ದತ್ತು ತೆಗೆದುಕೊಂಡರು.  ತಿರುಕ್ಕಣ್ಣಮಂಗೈ ಎಂಪೆರುಮಾನ್  ತಿರುಮಂಗೈ ಆಳ್ವಾರ್ ಅವರ ಪಾಶುರಗಳ ಅರ್ಥಗಳನ್ನು ತಿರುಮಂಗೈ ಆಳ್ವಾರ್ ಅವರಿಂದಲೇ ಕಲಿಯಲು ಬಯಸಿದ್ದರು ಎಂದು ಹೇಳಲಾಗುತ್ತದೆ – ಆದ್ದರಿಂದ ತಿರುಮಂಗೈ ಆಳ್ವಾರ್ ನಂಪಿಳ್ಳೈ  ಆಗಿ ಅವತರಿಸಿ ಮತ್ತು ಎಂಪೆರುಮಾನ್  ಪೆರಿಯವಾಚ್ಚಾನ್ ಪಿಳ್ಳೈ ಯಾಗಿ ಅವರಿಂದ ಅರುಳಿಚೇಯಲ್ಗಳ ಎಲ್ಲಾ ಅರ್ಥಗಳನ್ನು ಕಲಿಯಲು ಅವತಾರಿಸಿದ್ದಾರೆ.

ಪೆರಿಯವಾಚ್ಚಾನ್ ಪಿಳ್ಳೈ – ಸೇಂಗನೂರ್

ವ್ಯಾಸ : ಅಜ್ಜಿ, ಏಕೆ ಪೆರಿಯವಾಚ್ಚಾನ್ ಪಿಳ್ಳೈ ಅವರನ್ನು  ವ್ಯಾಖ್ಯಾನ ಚಕ್ರವರ್ತಿಯೆಂದು ಕರೆಯುತ್ತಾರೆ ?

ಅಜ್ಜಿ : ಎಲ್ಲ  ಅರುಳಿಚೇಯಲ್ಗಳಿಗೆ ವ್ಯಾಖ್ಯಾನ ಬರೆದ ಒಂದೇ ಆಚಾರ್ಯರು ಪೆರಿಯವಾಚ್ಚಾನ್ ಪಿಳ್ಳೈ. ಅರುಳಿಚೇಯಲ್ಗಳ ಮತ್ತು ರಾಮಾಯಣಂ ಬಗ್ಗೆ ಅವರ ಪಾಂಡಿತ್ಯ ಸಾಟಿಯಿಲ್ಲದ್ದು. ಅವರು ಆಳ್ವಾರುಗಳ ಪಾಸುರಗಳಿಂದ ಮಾತ್ರ ಪದಗಳನ್ನು ಉಪಯೋಗಿಸಿ ಸಂಪೂರ್ಣ ರಾಮಾಯಾಣವನ್ನು ಸಂಕ್ಷಿಪ್ತವಾಗಿ ವಿವರಿಸಿ  ಪಾಸುರಪಡಿ ರಾಮಾಯಣಂ ಎಂಬ ಗ್ರಂಥವನ್ನು ರಚಿಸದರು . ಅವರ ರಚನೆಯಿಲ್ಲದೆ ಅರುಳಿಚೇಯಲ್ಗಳ ಆಂತರಿಕ ಅರ್ಥಗಳನ್ನು ಯಾರಿಂದಲೂ ಗ್ರಹಿಸಲಾಗುವುದಿಲ್ಲ. ಅವರ ರಚನೆಯಲ್ಲಿ  ನಮ್ಮ ಪೂರ್ವಾಚಾರ್ಯರ ಗ್ರಂಥಗಳಿಗೆ ವಿಸ್ತಾರವಾಗಿ  ವ್ಯಾಖ್ಯಾನಿಸಲಾಗಿದೆ.

ನಂಪಿಳ್ಳೈಯವರ ಪ್ರಮುಖ ಶಿಷ್ಯರಲ್ಲಿ ಇನ್ನೊಂದು ಶಿಷ್ಯ  ವಡಕ್ಕು ತಿರುವೀಧಿಪಿಳ್ಳೈ. ಶ್ರೀರಂಗದಲ್ಲಿ  ಶ್ರೀ ಕೃಷ್ಣ ಪಾದರ್ ಎಂದು ಜನಿಸಿದ ಅವರು ಆಚಾರ್ಯ ನಿಷ್ಟೆಯಲ್ಲಿ ಸಂಪೂರ್ಣವಾಗಿ ನಿರತರಾಗಿದ್ದರು.  ಅವರ ಆಚಾರ್ಯ ನಪಿಳ್ಳೈ ಆಶೀರ್ವಾದದಿಂದ ವಡಕ್ಕು ತಿರುವೀಧಿ ಪಿಳ್ಳೈಗೆ ಒಬ್ಬ ಮಗ ಜನಿಸಿದನು, ಅವನಿಗೆ ಪಿಳ್ಳೈ ಲೋಕಾಚಾರ್ಯ ಎಂದು ಹೆಸರಿಟ್ಟರು. (ಲೋಕಾಚಾರ್ಯರ್ ಎಂದು ಪ್ರಸಿದ್ದರಾದರು ). ನಿಮಗೆಲ್ಲ ನಂಪಿಳ್ಳೈಯವರಿಗೆ ಲೋಕಾಚಾರಿಯರ್ ಎಂಬ ಹೆಸರು ಬಂದ ಕತೆ ನೆನಪಿದೆ ಎಂದು ನಾನು ಭಾವಿಸುತ್ತೇನೆ.

ವ್ಯಾಸ : ಹೌದು ಅಜ್ಜಿ , ಕಂದಾಡೈ ತೋಳಪ್ಪರ್  ನಂಪಿಳ್ಳೈಯವರಿಗೆ ಲೋಕಾಚಾರ್ಯರ್ ಎಂದು ಹೆಸರಿಟ್ಟರು. ಾಯ ಕಥೆಯು ನೆನಪಿದೆ .

ವಡಕ್ಕು ತಿರುವೀಧಿಪಿಳ್ಳೈ – ಕಾಂಚೀಪುರಂ

ಅಜ್ಜಿ : ವಡಕ್ಕು ತಿರುವೀಧಿಪಿಳ್ಳೈಯವರು ಅವರ ಮಗನಿಗೆ ಪಿಳ್ಳೈ ಲೋಕಾಚಾರ್ಯ ಎಂಬ ಹೆಸರಿಟ್ಟಾಗ, ಮಗುವಿಗೆ ಅಳಗಿಯ ಮಣವಾಳನ್ ಎಂದು ಹೆಸರಿಸುವ ಉದ್ದೇಶವನ್ನು ನಂಪಿಳ್ಳೆ ತಿಳಿಸುತ್ತಾರೆ.ಶೀಘ್ರದಲ್ಲೇ ನಂಪೆರುಮಾಳ್ ವಡಕ್ಕು ತಿರುವೀಧಿಪಿಳ್ಳೈಗೆ ಇನ್ನೊಬ್ಬ ಮಗನನ್ನು ಆಶೀರ್ವದಿಸುತ್ತಾರೆ ಮತ್ತು ಎರಡೆನೇ ಮಗನಿಗೆ  ಅಳಗಿಯ ಮಣವಾಳನ್ (ನಂಪೇರುಮಾಲ) ಕೃಪೆಯಿಂದ ಹುಟ್ಟಿದರಿಂದ ಅಳಗಿಯ ಮಣವಾಳನ ಪೆರುಮಾಳ್ ನಾಯನಾರ್  ಎಂಬ ಹೆಸರಿಸಿ ನಂಪಿಳ್ಳೈ ಅವರ ಆಸೆಯನ್ನು ಈಡೇರಿಸಲಾಯಿತು.ಆ ಇಬ್ಬರೂ ಮಕ್ಕಳು ರಾಮ ಲಕ್ಷ್ಮಣರಂತೆ ನಿಪುಣರಾಗಿ  ಒಟ್ಟಿಗೆ ಬೆಳೆದು ನಮ್ಮ ಸಂಪ್ರದಾಯಕ್ಕೆ ಮಹತ್ತಾದ ಕೈಂಕರ್ಯಗಳನ್ನು ಮಾಡಿದರು . ಅವರಿಬ್ಬರೂ  ನಮ್ಮ ಸಂಪ್ರದಾಯದ ಮಹಾನ್ ಆಚಾರ್ಯರಾದ  ನಂಪಿಳ್ಳೈ, ಪೆರಿಯ ವಾಚ್ಚಾನ್ ಪಿಳ್ಳೈ, ವಡಕ್ಕು ತಿರುವೀಧಿಪಿಳ್ಳೈ ಮುಂತಾದವರ ಮಾರ್ಗದರ್ಷಣೆ ಮತ್ತು ಕಟಾಕ್ಷ ಪಡೆದರು .

ಒಮ್ಮೆ ವಡಕ್ಕು ತಿರುವೀಧಿಪಿಳ್ಳೈ ನಂಪಿಳ್ಳೈಯವರನ್ನು ಅವರ ತಿರುಮಾಳಿಗೈಗೆ ( ಶ್ರೀವೈಷ್ಣವರ ಮನೆಯನ್ನು ತಿರುಮಾಳಿಗೈ ಎಂದು ಕರೆಯಬೇಕು ) ತದಿಯಾರಾಧನೆಗಾಗಿ  ಆಹ್ವಾನಿಸಿದರು ಮತ್ತು ನಂಪಿಳ್ಳೈ ಅದನ್ನು ಸ್ವೀಕರಿಸಿ ಅವರ ತಿರುಮಾಳಿಗೈಗೆ ಭೇಟಿ ನೀಡಿದರು . ನಂಪಿಳ್ಳೈ ಸ್ವತಃ ತಿರುವಾರಧನೆ ಆರಂಭಿಸಿ ಮತ್ತು ಕೋಯಿಲ್ ಆಳ್ವಾರ್( ಪೆರುಮಾಳ್ ಸನ್ನಿಧಿ ) ಬಳಿ ನಮ್ಮಾಳ್ವಾರರ ಪಾಸುರಗಳಿಗೆ  ಅವರ ಎಲ್ಲ ಉಪನ್ಯಾಸಗಳ ಸಂಕ್ಷಿಪ್ತ ವಿವರಣೆಗಳನ್ನು ಬರೆದ ತಾಳೆ ಎಲೆಗಳ ಕಟ್ಟು ಗಮನಿಸುತ್ತಾರೆ. ಆಸಕ್ತಿ ಹೊಂದಿದ್ದ ಅವರು, ಅವುಗಳಲ್ಲಿ ಕೆಲವನ್ನು ಓದಲು ಪ್ರಾರಂಭಿಸುತ್ತಾರೆ ಮತ್ತು ಅದು ಏನು ಎಂದು ವಡಕ್ಕು ತಿರುವೀಧಿಪಿಳ್ಳೈಯನ್ನು ಕೇಳುತ್ತಾರೆ. ಪ್ರತಿ ರಾತ್ರಿ ಅವರು ನಂಪಿಳ್ಳೈ  ಅವರ ಉಪನ್ಯಾಸಗಳನ್ನು ಕೇಳಿದ ನಂತರ ಧಾಖಲೆ ಮಾಡಿದ್ದಾರೆ ಎಂದು ವಡಕ್ಕು ತಿರುವೀಧಿಪಿಳ್ಳೈ ವಿವರಿಸುತ್ತಾರೆ. ನಂಪಿಳ್ಳೈ  ಅವರು ವಡಕ್ಕು ತಿರುವೀಧಿಪಿಳ್ಳೈ ಅವರನ್ನು ತಮ್ಮ ಅನುಮತಿಯಿಲ್ಲದೆ ಏಕೆ ಮಾಡಿದರು ಎಂದು ಕೇಳುತ್ತಾರೆ ಮತ್ತು ಪೆರಿಯ ವಾಚ್ಚಾನ್ ಪಿಳ್ಳೈ ಅವರ ವ್ಯಾಖ್ಯಾನಂ (ಆಳ್ವಾರ್ ಅವರ ಪಾಸುರಮ್‌ಗಳ ಅರ್ಥಗಳ ವಿವರವಾದ ಅರ್ಥ ) ಗೆ ಸ್ಪರ್ಧೆಯಾಗಿ ಇದನ್ನು ಮಾಡಿದ್ದೀರಾ ಎಂದು ಕೇಳುತ್ತಾರೆ. ವಡಕ್ಕು ತಿರುವೀಧಿಪಿಳ್ಳೈ ತಪ್ಪಿತಸ್ಥರೆಂದು ಭಾವಿಸುತ್ತಾ ತಕ್ಷಣ ನಂಪಿಳ್ಳೈಯವರ ಪಾದಕಮಲಗಳಲ್ಲಿ ಬೀಳುತ್ತಾರೆ  ಮತ್ತು ಭವಿಷ್ಯದಲ್ಲಿ ಅದನ್ನು ಉಲ್ಲೇಖಿಸಲು ಮಾತ್ರ ಅವರು ಇದನ್ನು ಬರೆದಿದ್ದಾರೆಂದು ವಿವರಿಸುತ್ತಾರೆ . ಅವರ ವಿವರಣೆಗಳೊಂದಿಗೆ ಮನವರಿಕೆಯಾದ ನಂಪಿಳ್ಳೈ  ಅವರು ವ್ಯಾಖ್ಯಾನಂ ಅನ್ನು ವೈಭವೀಕರಿಸುತ್ತಾ ವಡಕ್ಕು ತಿರುವೀಧಿಪಿಳ್ಳೈ ಅವರ ಕಾರ್ಯವನ್ನು  ಹೊಗಳುತ್ತಾರೆ. ವಡಕ್ಕು ತಿರುವೀಧಿಪಿಳ್ಳೈ ಹೊಂದಿದ್ದ ಅಪಾರ ಜ್ಞಾನ ಮತ್ತು ಆಚಾರ್ಯ ಅಭಿಮಾನಂ ಅಂತಹದ್ದಾಗಿತ್ತು.

ಪರಾಶರ : ನಂತರ ಆ ವ್ಯಾಖ್ಯಾನ ಏನಾಯಿತು ?  ವಡಕ್ಕು ತಿರುವೀಧಿಪಿಳ್ಳೈ ಅದನ್ನು ಮುಗಿಸಿದರೆ ?

ಅಜ್ಜಿ : ಹೌದು, ವಡಕ್ಕು ತಿರುವೀಧಿಪಿಳ್ಳೈ ವ್ಯಾಖ್ಯಾನಂ ಮುಗಿಸಿದರು ಮತ್ತು ಅವರು  ತಿರುವಾಯ್ಮೊಳಿಗೆ ಬರೆದ ಈ ವ್ಯಾಖ್ಯಾನವು ಈಡು 36000 ಪಡಿ ಎಂದು ಪ್ರಸಿದ್ದವಾಯಿತು.ಆ ವ್ಯಾಖ್ಯಾನವನ್ನು ವಂಶಸ್ತರಿಗೆ ಕಲಿಸಲು ಈಯುಣ್ಣಿ ಮಾಧವ ಪೆರುಮಾಳ್ ಅವರಿಗೆ ಕೊಡಲು ನಂಪಿಳ್ಳೆ  ವಡಕ್ಕು ತಿರುವೀಧಿಪಿಳ್ಳೈಗೆ ಆದೇಶಿಸಿದರು.

ನಂಪಿಳ್ಳೈ ಕಾಲಕ್ಷೇಪ ಗೋಷ್ಟಿ – ಈಯುಣ್ಣಿ ಮಾಧವ ಪೆರುಮಾಳ್ ಬಲಗಡೆಯಲ್ಲಿ ಎರಡನೇಯವರಾಗಿ ಕುಳಿತಿರುವರು

ವೇದವಲ್ಲಿ : ಅಜ್ಜಿ, ನಂಪಿಳ್ಳೈ ಕೊಟ್ಟ ವ್ಯಾಖ್ಯಾನವನ್ನು ಈಯುಣ್ಣಿ ಮಾಧವ ಪೆರುಮಾಳ್ ಏನು  ಮಾಡಿದರು ?

ಅಜ್ಜಿ : ಈಯುಣ್ಣಿ ಮಾಧವ ಪೆರುಮಾಳ್ ಅವರ ಮಗ ಈಯುಣ್ಣಿ ಪದ್ಮನಾಭ ಪೆರುಮಾಳ್ಗೆ ಕಳಿಸಿದರು. ಯುಣ್ಣಿ ಪದ್ಮನಾಭ ಪೆರುಮಾಳ್ ಅವರ ಪ್ರಿಯ ಶಿಷ್ಯರಾದ ನಾಲೂರ್ ಪಿಳ್ಳೈ ಗೆ  ಕಳಿಸಿದರು. ಹೀಗೆ ಒಂದೊಂದು ಆಚಾರ್ಯರಿಂದ ಅವರ ಶಿಷ್ಯರಿಗೆ ಸರಿಯಾದ ರೀತಿಯಲ್ಲಿ ಮುಂದುವರೆಯಿತು. ನಾಲೂರ್ ಪಿಳ್ಳೈ ಗೆ  ಮಗನಾಗಿ ಮತ್ತು ಪ್ರಿಯ ಶಿಷ್ಯರಾದವರು ನಾಲೂರಾಚ್ಛಾನ್ ಪಿಳ್ಳೈ . ಅವರ ತಂದೆಯ ಪಾದಕಮಲದಲ್ಲಿ  ನಾಲೂರಾಚ್ಛಾನ್ ಪಿಳ್ಳೈ ಈಡು 36000 ಪಡಿ ಅಧ್ಯಯನ ಮಾಡಿದರು. ನಾಲೂರಾಚ್ಛಾನ್ ಪಿಳ್ಳೈಗೆ ಹಲವಾರು ಶಿಷ್ಯರಿದ್ದರು  ಮತ್ತು ಅವರಲ್ಲಿ ಒಬ್ಬರು ತಿರುವಾಯ್ಮೊಳಿ ಪಿಳ್ಳೈ . ನಾಲೂರ್ ಪಿಳ್ಳೈ ಮತ್ತು  ನಾಲೂರಾಚ್ಛಾನ್ ಪಿಳ್ಳೈ ಕಾಂಚೀಪುರದಲ್ಲಿ ದೇವಪೇರುಮಾಳಿಗೆ ಮಂಗಳಶಾಸನ ಮಾಡಲು ಹೋದಾಗ , ಈಡು ವ್ಯಾಖ್ಯಾನವನ್ನು ತಿರುವಾಯ್ಮೊಳಿ ಪಿಳ್ಳೈಗೆ ಕಲಿಸಲು ನಾಲೂರಾಚ್ಛಾನ್ ಪಿಳ್ಳೈ ಗೆ ಸ್ವತಃ ಎಂಪೆರುಮಾನ್ ಆದೇಶ ನೀಡಿದರು. ನಾಲೂರಾಚ್ಛಾನ್ ಪಿಳ್ಳೈ ಬಳಿ ಇತರರೊಡನೆ ತಿರುವಾಯ್ಮೊಳಿ ಪಿಳ್ಳೈಈಡು ವ್ಯಾಖ್ಯಾನವನ್ನು ಕಲಿತು ಅದನ್ನು ಈಟ್ಟು ಪೆರುಕ್ಕರ್( ಈಡು ವ್ಯಾಖ್ಯಾನವನ್ನು ಪೋಷಿಸುವವನು )  ಎಂದು ಪ್ರಸಿದ್ದಗೊಂಡ  ಮನವಾಳ ಮಾಮುನಿಗಳಿಗೆ ಕಳಿಸಿದರು . ಹೀಗೆ ಅಂತಿಮವಾಗಿ ಮನವಾಳ ಮಾಮುನಿಗಳಿಗೆ ಈಡು ತಲುಪುವುದು ಎಂದು ತಿಳಿದ ನಂಪಿಳ್ಳೈ ಅದನ್ನು ಈಯುಣ್ಣಿ ಮಾಧವ ಪೆರುಮಾಳ್ಗೆ ಕೊಟ್ಟರು.

ಅತ್ತುಳಾಯ್ : ಅಜ್ಜಿ, ಈಯುಣ್ಣಿ ಮಾಧವ ಪೆರುಮಾಳ್ ಮತ್ತು ಈಯುಣ್ಣಿ ಪದ್ಮನಾಭ ಪೆರುಮಾಳ್ , ಅದರಲ್ಲಿ ಈಯುಣ್ಣಿ ಪದಕ್ಕೆ ಅರ್ಥವೇನು ?

ಅಜ್ಜಿ : “ಈತಲ್ “ ಎಂದರೆ ತಮಿಳಿನಲ್ಲಿ ಡಾನ್ ಎಂದು ಅರ್ಥ . “ ಉಣ್ಣುತಲ್ “ ಎಂದರೆ ತಿನ್ನುವುದು. ಈಯುಣ್ಣಿ ಎಂದರೆ ಭಲೇ ದಾನ ಮಾಡುವವನು ಮತ್ತು ಶ್ರೀವೈಷ್ಣವರಿಗೆ ಆಹಾರವನ್ನು ನೀಡಿದ ನಂತರ ಮಾತ್ರ ಅವರು ತಿನ್ನುವರು.

ನಂಪಿಳ್ಳೈಯವರ ಮತ್ತೊಂದು ಪ್ರಮುಖ ಶಿಷ್ಯ ಪಿನ್ಬಳಗಿಯ  ಪೆರುಮಾಳ್ ಜೀಯರ್ . ಅವರು ನಂಪಿಳ್ಳೈ (ಗೃಹಸ್ತರಾದವರು ) ಗೆ ಸೇವೆ ಮಾಡಿದ ಸನ್ಯಾಸಿ , ಭಟ್ಟರ್ ಗೆ ಸೇವೆ ಮಾಡಿದ ನಂಜೀಯರಂತೆ (ಸನ್ಯಾಸಿ) . ಅವರು ನಂಪಿಳ್ಳೈಯ ಪ್ರಿಯ ಶಿಷ್ಯ ಮತ್ತು ಪಿನ್ಬಳಗರಾಮ್ ಪೆರುಮಾಳ್ ಜೀಯರ್ ಎಂದು ಹೆಸರಂತರಾದವರು. ಅವರ ಆಚಾರ್ಯನಿಗೆ ಅತ್ಯಂತ ಗೌರವ, ಮಮತೆ ವಾತ್ಸಲ್ಯ ತೋರುವಂತಹ ನಿಷ್ಠಾವಂತ ಶ್ರೀವೈಷ್ಣವರಂತೆ ಬಾಳಿದರು. ಅವರ ಆಚಾರ್ಯ ಅಭಿಮಾನವು  ಬಹಳ ಪ್ರಸಿದ್ಧವಾದದ್ದು .

ನಂಪಿಳ್ಳೈ ಪಾದಗಳಲ್ಲಿ ಪಿನ್ಬಳಗಿಯ ಪೆರುಮಾಳ್ ಜೀಯರ್ , ಶ್ರೀರಂಗಂ

ಪರಾಶರ : ಅಜ್ಜಿ, ಇಂದು ನೀವು ನಂಪಿಳ್ಳೈ ಮತ್ತು ಅವರ ಶಿಷ್ಯರ ಸಂಭಾಷಣೆಗಳ ಬಗ್ಗೆ ಹೇಳಲೇ ಇಲ್ಲ . ಅವರ ಆಸಕ್ತಿದಾಯಕ ಸಂಭಾಷಣೆ ಬಗ್ಗೆ ಹೇಳಿರಿ

ಅಜ್ಜಿ: ನಮ್ಮ ಪೂರ್ವಾಚಾರ್ಯರೆಲ್ಲ ಭಗವತ್ ವಿಷಯಮ್ ಮತ್ತು ಭಾಗವತ ಕೈಂಕರ್ಯ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಒಮ್ಮೆ ಪಿನ್ಬಳಗಿಯ  ಪೆರುಮಾಳ್ ಜೀಯರ್ ಅವರಿಗೆ ದೇಹಾರೋಗ್ಯ ಕ್ಷೀಣಿಸಿದಾಗ, ಆರೋಗ್ಯ ಚೇತರಿಸಲು ಅವರು ಇತರ ಶ್ರೀವೈಷ್ಣವರನ್ನು ಎಂಪೆರುಮಾನ್ ಗೆ ಪ್ರಾರ್ಥನೆ ಮಾಡಲು ಹೇಳುತ್ತಾರೆ . ಸಾಮಾನ್ಯವಾಗಿ , ನಮ್ಮ ಸಂಪ್ರದಾಯದಲ್ಲಿ , ಶ್ರೀವೈಷ್ಣವರು ಯಾವುದನ್ನು ಬಯಸಿ ಎಂಪೆರುಮಾನನ್ನು ಪ್ರಾರ್ಥಿಸುವುದಿಲ್ಲ – ಆರೋಗ್ಯಕ್ಕೂ ಸಹ. ಇದನ್ನು ಕಂಡ ನಂಪಿಳ್ಳೈ ಶಿಷ್ಯರು ನಂಪಿಳ್ಳೈ ಬಳಿ ವಿಚಾರಿಸಿದರು . ಅದಕ್ಕೆ ನಂಪಿಳ್ಳೈ “ ಎಲ್ಲ ಶಾಸ್ತ್ರಗಳಲ್ಲಿ ನಿಪುಣರಾದ ಎಂಗಳ್  ಆಳ್ವಾನ್ ಬಳಿ ಹೋಗಿ ವಿಚಾರಿಸಿ “ ಎಂದರು. “ಅವರು ಶ್ರೀರಂಗಂಗೆ ಲಗತ್ತಾಗಿರಬಹುದು ಮತ್ತು ಅವರು ಇನ್ನೂ ಸ್ವಲ್ಪ ಸಮಯ ಇಲ್ಲಿಯೇ ಇರಲು ಬಯಸುತ್ತಾರೆ ” ಎಂದು ಎಂಗಳ್  ಆಳ್ವಾನ್ ಹೇಳುತ್ತಾರೆ. ನಂತರ ನಂಪಿಳ್ಳೈ ಆದೇಶದಂತೆ ಅವರ ಶಿಷ್ಯರು ಅಮ್ಮಂಗಿ ಅಮ್ಮಾಳ್ ಅವರನ್ನು ಕೇಳುತ್ತಾರೆ , ಅದಕ್ಕೆ ಅವರು “ ನಂಪಿಳ್ಳೈ ಕಾಲಕ್ಷೇಪ ಗೋಷ್ಠಿಯನ್ನು ಬಿಡಲು ಯಾರುತಾನೇ ಬಯಸುವರು,ಅವರು ಇನ್ನೂ ನಂಪಿಳ್ಳೈ ಕಾಲಕ್ಷೇಪ ಕೆಳಬಕೇಣದು ಬಯಸಿ ಪ್ರಾರ್ಥಿಸಿರಬಹುದು”   ಎಂದು  ಹೇಳುತ್ತಾರೆ  .ಅಂತಿಮವಾಗಿ ನಂಪಿಳ್ಳೈ ಜೀಯರ್ ಅವರನ್ನೇ ಕೇಳುತ್ತಾರೆ . ಅದಕ್ಕೆ ಜೀಯರ್ “ ನಿಮಗೆ ನಿಜವಾದ ಕಾರಣ ತಿಳಿದಿದ್ದರು ನನ್ನ ಮೂಲಕ ಬರಬೇಕೆಂದು ಬಿಸುತ್ತೀಯ . ಏಕೆ ನಾನು ಇನ್ನೂ ಇಲ್ಲಿಯೇ ಬಾಳಬೇಕು ಎಂದು ಬಯಸುವ ಕಾರಣ ಹೇಳುತ್ತೇನೆ . ಪ್ರತಿದಿನ , ನೀವು ಸ್ನಾನ ಮಾಡಿ ಬಂದಾಗ ನಿಮ್ಮ ದಿವ್ಯ ತಿರುಮೇನಿ ದರ್ಶನ ಮಾಡಬೇಕು ಮತ್ತು ಆಲವಟ್ಟ ಕೈಂಕರ್ಯ ಇತ್ಯಾದಿ  ಮಾಡಬೇಕು. ಈಗಾಗಲೇ ಆ ಕೈಂಕರಿಗಳನ್ನು ಬಿಟ್ಟು ಹೇಗೆ ಪರಮಪದಕ್ಕೆ ಹೋಗಬಹುದು ? “ ಎಂದು ಉತ್ತರಿಸಿದರು. ಹೀಗೆ,  ಪಿನ್ಬಳಗರಾಮ್ ಪೆರುಮಾಳ್ ಜೀಯರ್ ಒಬ್ಬ ಉತ್ತಮ ಶಿಷ್ಯನ ಗುಣಗಳನ್ನು- ತಮ್ಮ ಆಚಾರ್ಯ ದಿವ್ಯ ಸ್ವರೂಪಕ್ಕೆ ಸಂಪೂರ್ಣವಾಗಿ ಲಗತ್ತಿಸಬೇಕು ಎಂದು ನಮಗೆ ತೋರಿಸಿದ್ದಾರೆ . ನಂಪಿಳ್ಳೈ ಗೆ ಜೀಯರ್ ಅವರ ನಿಷ್ಠೆ ಬಗ್ಗೆ ಇದನ್ನು ಕೇಳಿದವರು ಆಶ್ಚರ್ಯಗೊಂಡರು . ಪಿನ್ಬಳಗಿಯ  ಪೆರುಮಾಳ್ ಜೀಯರ್ ನಂಪಿಳ್ಳೈ ಗೆ ಎಷ್ಟರ ಮಟ್ಟಿಗೆ ಲಗತ್ತಿಸಿದರು ಎಂದರೆ ಅವರು ಪರಮಪದಕ್ಕೆ ಹೋಗುವ ಯೋಚನೆಯನ್ನು  ಕೂಡ ತ್ಯಜಿಸುವಂತವರು . ಅವರ ಆಚಾರ್ಯ ನಿಷ್ಠೆ ಅಂತಹದಾಗಿತ್ತು.

ಅಂತಿಮವಾಗಿ , ನಂಪಿಳ್ಳೈ – ನಡುವಿಲ್ ತಿರುವೀಧಿಪಿಳ್ಳೈ ಭಟ್ಟರ್ ಅವರ ಇನ್ನೂ ಒಂದು ಶಿಷ್ಯರ  ಬಗ್ಗೆ ನೋಡೋಣ. ಆರಂಭದಲ್ಲಿ, ನಡುವಿಲ್ ತಿರುವೀಧಿಪಿಳ್ಳೈ  ಭಟ್ಟರ್ ಅವರು ನಂಪಿಳ್ಳೈ  ಬಗ್ಗೆ ಅನುಕೂಲಕರ ಮನೋಭಾವವನ್ನು ಹೊಂದಿರಲಿಲ್ಲ. ಅವರ ಶ್ರೀಮಂತ ಕುಟುಂಬ ಪರಂಪರೆಯಿಂದಾಗಿ (ಕೂರಥ್ ಆಳ್ವಾನ್ ಮತ್ತು ಪರಾಶರ  ಭಟ್ಟರ್ ಅವರ  ವಂಶಸ್ತರು ) ಅವರು ಹೆಮ್ಮೆಯನ್ನು ಬೆಳೆಸಿಕೊಂಡರು ಮತ್ತು ನಂಪಿಳ್ಳೈ ಅವರನ್ನು ಗೌರವಿಸಲಿಲ್ಲ. ಅವರು ನಂಪಿಳ್ಳೈನ ಪಾದಕಮಲಗಳಿಗೆ ಹೇಗೆ ಶರಣಾದರು ಎಂಬ ಕುತೂಹಲಕಾರಿ ಕಥೆ ಇದೆ.

ನಂಪಿಳ್ಳೈ ಕಾಲಕ್ಷೇಪ ಗೋಷ್ಠಿ -ಎಡಗಡೆಯಲ್ಲಿ ಮೂರನೇಯವರಾಗಿ ಕುಳಿತ ನಡುವಿಲ್ ತಿರುವೀಧಿಪಿಳ್ಳೈ ಭಟ್ಟರ್

ವ್ಯಾಸ : ಕೂರತ್‌ಆಳ್ವಾನ್‌ನ ವಂಶಸ್ಥರು ಹೆಮ್ಮೆ ಮತ್ತು ದುರಹಂಕಾರದ ಗುಣಗಳನ್ನು ಹೊಂದಿದ್ದರು ಎಂಬುದು ಎಷ್ಟು ವಿಪರ್ಯಾಸ. ಕಥೆ ಹೇಳಿ ಅಜ್ಜಿ !

ಅಜ್ಜಿ : ಹೌದು, ಆದರೆ ಅನಗತ್ಯ ಹೆಮ್ಮೆ ಹೆಚ್ಚು ಕಾಲ ಉಳಿಯಲಿಲ್ಲ! ಎಷ್ಟಾದರೂ , ಅವರು ಸ್ವತಃ ಕೂರತ್ ಆಳ್ವಾನ್ ಅವರ ಮೊಮ್ಮಗ! ಒಮ್ಮೆ, ನಡುವಿಲ್ ತಿರುವೀಧಿಪಿಳ್ಳೈ  ಭಟ್ಟರ್ ರಾಜನ ಆಸ್ಥಾನಕ್ಕೆ ಹೋಗುತ್ತಿದ್ದರು . ಅವರು  ದಾರಿಯಲ್ಲಿ ಪಿನ್ಬಳಗಿಯ  ಪೆರುಮಾಳ್ ಜೀಯರ್  ಅವರನ್ನು ಭೇಟಿಯಾಗುತ್ತಾರೆ  ಮತ್ತು ರಾಜನ ಆಸ್ಥಾನಕ್ಕೆ ಹಾಜರಾಗಲು ಅವರನ್ನು ಆಹ್ವಾನಿಸುತ್ತಾನೆ. ರಾಜನು ಅವರನ್ನು ಸ್ವಾಗತಿಸಿ , ಗೌರವಿಸುತ್ತಾನೆ ಮತ್ತು ಅವರಿಗೆ ಸುಂದರವಾದ ಆಸನವನ್ನು ನೀಡುತ್ತಾನೆ. ರಾಜನು ಪಾಂಡಿತ್ಯವುಳ್ಳವನಾಗಿದ್ದು, ಭಟ್ಟರ್‌ನ ಬುದ್ಧಿಮತ್ತೆಯನ್ನು ಪರೀಕ್ಷಿಸಲು ಬಯಸುತ್ತಾ, ಶ್ರೀ ರಾಮಾಯಣದಿಂದ  ಒಂದು ಪ್ರಶ್ನೆಯನ್ನು ಕೇಳುತ್ತಾನೆ. ಅವರು ಹೇಳುತ್ತಾರೆ, “ಶ್ರೀ ರಾಮನ್ ಅವರು ಕೇವಲ ಮನುಷ್ಯ ಮತ್ತು ಧಶಥನ  ಆತ್ಮೀಯ ಮಗ ಎಂದು ಹೇಳಿಕೊಳ್ಳುತ್ತಾರೆ. ಆದರೆ ಜಟಾಯುವಿನ  ಕೊನೆಯ ಕ್ಷಣಗಳಲ್ಲಿ, ಶ್ರೀವೈಕುಂಠವನ್ನು ತಲುಪಲು ಆಶೀರ್ವದಿಸುತ್ತಾರೆ. ಅವರು  ಸಾಮಾನ್ಯ ಮನುಷ್ಯನಾಗಿದ್ದರೆ, ವೈಕುಂಠಮ್ ತಲುಪಲು ಅವರು  ಯಾರನ್ನಾದರೂ ಹೇಗೆ ಆಶೀರ್ವದಿಸಬಹುದು? ”. ಭಟ್ಟರ್ ಮಾತುಗಳಿಲ್ಲದೆ ಯಾವುದೇ ಅರ್ಥಪೂರ್ಣ ವಿವರಣೆಯೊಂದಿಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ಪ್ರಾಸಂಗಿಕವಾಗಿ, ರಾಜನು ಬೇರೆ ಯಾವುದೋ  ಕಾರ್ಯದಿಂದ ವಿಚಲಿತನಾಗುತ್ತಾನೆ. ಆ ಸಮಯದಲ್ಲಿ, ಭಟ್ಟರ್ ಜೀಯರ್ ಕಡೆಗೆ ತಿರುಗಿ  “ನಂಪಿಳ್ಳೈ  ಇದನ್ನು ಹೇಗೆ ವಿವರಿಸುತ್ತಿದ್ದರು ?” ಎಂದು ಕೇಳುತ್ತಾರೆ . ಜೀಯರ್  “ಸಂಪೂರ್ಣ ಸತ್ಯವಂತ ವ್ಯಕ್ತಿಯು ಎಲ್ಲಾ ಲೋಕಗಳನ್ನು ನಿಯಂತ್ರಿಸಬಲ್ಲನೆಂದು ನಂಪಿಳ್ಳೈ  ವಿವರಿಸುವರು ” ಎಂದು ಉತ್ತರಿಸುತ್ತಾರೆ . ಭಟ್ಟರ್,  ರಾಜನು ಅವರ ಮೇಲೆ ಕೇಂದ್ರೀಕರಿಸಿದಾಗ ರಾಜನಿಗೆ ವಿವರಿಸುತ್ತಾನೆ. ರಾಜ, ಒಮ್ಮೆಗೇ ಉತ್ತರವನ್ನು ಒಪ್ಪುತ್ತಾನೆ ಮತ್ತು ಭಟ್ಟರನ್ನು ದೊಡ್ಡ ಸಂಪತ್ತಿನಿಂದ ಗೌರವಿಸುತ್ತಾನೆ. ಭಟ್ಟರ್, ನಂಪಿಳ್ಳೈ  ಬಗ್ಗೆ ಅಪಾರ ಕೃತಜ್ಞತೆಯೊಂದಿಗೆ, ಜೀಯರ್ ಅವರನ್ನು ನಂಪಿಳ್ಳೈಯೊಂದಿಗೆ ಸಂಯೋಜಿಸಲು ಕೇಳುತ್ತಾನೆ, ಒಮ್ಮೆ ನಂಪಿಳ್ಳೈ ಅವರ ನಿವಾಸಕ್ಕೆ ಹೋಗಿ ಎಲ್ಲಾ ಸಂಪತ್ತನ್ನು ನಂಪಿಳ್ಳೈನ ಕಮಲದ ಪಾದದಲ್ಲಿ ಒಪ್ಪಿಸುತ್ತಾನೆ. ಭಟ್ಟರ್ ನಂಪಿಳ್ಳೈ ಗೆ ಹೇಳುತ್ತಾರೆ, “ನಾನು ಈ ಎಲ್ಲ ಸಂಪತ್ತನ್ನು ನಿಮ್ಮ ಬೋಧನೆಗಳಿಂದ ಕೇವಲ ಒಂದು ಸಣ್ಣ ವಿವರಣೆಯೊಂದಿಗೆ ಸ್ವೀಕರಿಸಿದ್ದೇನೆ. ಇಂದುವರೆಗು , ನಾನು ನಿಮ್ಮ ಅಮೂಲ್ಯವಾದ ಸಂಘ / ಮಾರ್ಗದರ್ಶನವನ್ನು ಕಳೆದುಕೊಂಡಿದ್ದೇನೆ. ಇಂದಿನಿಂದ, ನಾನು ನಿಮಗೆ ಉತ್ತಮವಾಗಿ ಸೇವೆ ಸಲ್ಲಿಸುತ್ತೇನೆ ಮತ್ತು ನಿಮ್ಮಿಂದ ಸಂಪ್ರದಾಯಂ  ತತ್ವಗಳನ್ನು ಕಲಿಯುತ್ತೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ ”. ನಂಪಿಳ್ಳೈ  ಭಟ್ಟರನ್ನು ಅಪ್ಪಿಕೊಂಡು ನಮ್ಮ ಸಂಪ್ರದಾಯಂ‌ನ ಎಲ್ಲಾ ಸಾರವನ್ನು ಅವನಿಗೆ ಕಲಿಸುತ್ತಾರೆ . ಆದ್ದರಿಂದ ಮಕ್ಕಳೇ, ಈ ಕಥೆಯಿಂದ ನೀವು ಏನು ಕಲಿಯುತ್ತೀರಿ?

ವೇದವಲ್ಲಿ : ಅವರ ಪೂರ್ವಜರ ಆಶೀರ್ವಾದದೊಂದಿಗೆ ಭಟ್ಟರ್ ಸರಿಯಾದ ಗಮ್ಯಸ್ಥಾನವನ್ನು ತಲುಪಿದ್ದಾರೆ ಎಂದು ನಾನು ಕಲಿತಿದ್ದೇನೆ.

ಅತ್ತುಳಾಯ್ : ನಂಪಿಳ್ಳೈನ ಹಿರಿಮೆ ಮತ್ತು ಜ್ಞಾನದ ಬಗ್ಗೆ ನಾನು ಕಲಿತಿದ್ದೇನೆ.

ಅತ್ತುಳಾಯ್ : ನಂಪಿಳ್ಳೈನ ಹಿರಿಮೆ ಮತ್ತು ಜ್ಞಾನದ ಬಗ್ಗೆ ನಾನು ಕಲಿತಿದ್ದೇನೆ.

ಅಜ್ಜಿ : ನೀವಿಬ್ಬರೂ ಸರಿ. ಆದರೆ ಈ ಕಥೆಯಿಂದ ನಾವು ಇನ್ನೂ ಒಂದು ಪಾಠ ಕಲಿಯುತ್ತೇವೆ. ನಮ್ಮ ಆಚಾರ್ಯರ ಮೂಲಕ ನಾವು ಎಂಪೆರುಮಾನನ್ನು   ಸಂಪರ್ಕಿಸಿದಾಗ ಎಂಪೆರುಮಾನ್  ನಮ್ಮನ್ನು ಹೇಗೆ ಸ್ವೀಕರಿಸುತ್ತಾರೋ ಹಾಗೆಯೇ, ಆಚಾರ್ಯರನ್ನು ತಲುಪುವುದು ಶ್ರೀವೈಷ್ಣವರೊಂದಿಗಿನ ದೈವಿಕ ಒಡನಾಟದಿಂದ ಮಾತ್ರ ಸಾಧ್ಯ. ಇದನ್ನೇ ನಾವು ಶ್ರೀವೈಷ್ಣವ ಸಂಭಂದಮ್ ಅಥವಾ ಅಡಿಯಾರ್ಗಳ್  ಸಂಬಂದಮ್ ಎಂದು ಕರೆಯುತ್ತೇವೆ. ಇಲ್ಲಿ, ಭಟ್ಟರನ್ನು ನಂಪಿಳ್ಳೈಗೆ ಸಂಯೋಜಿಸಿದ ದೈವಿಕ ಶ್ರೀವೈಷ್ಣವ ಯಾರು?

ಪರಾಶರ : ಪಿನ್ಬಳಗಿಯ ಪೆರುಮಾಳ್ ಜೀಯರ್ !

ಅಜ್ಜಿ :  ಹೌದು, ಈಡು ಭಾಗವತ ಸಂಬಂದದ ಮಹತ್ವ ತಿಳಿಸುತ್ತದೆ. ಜೀಯರ್ ,ನಂಪಿಳ್ಳೈಯವರ ಪ್ರಿಯ ಶಿಷ್ಯರಾಗಿ , ಭಟ್ಟರನ್ನು ಆಚಾರ್ಯ ಜ್ಞಾನ ಮತ್ತು ಸಂಬದದಿಂದ ಆಶೀರ್ವದಿಸಿದರು. ನಂಪಿಳ್ಳೈ ಮತ್ತು ಅವರ ಶಿಷ್ಯರ ಪಾದಕಮಲಗಳಿಗೆ ಧ್ಯಾನಯಿಸೋಣ . ಮುಂದಿನ ಬಾರಿ ನಾವು ಭೇಟಿಯಾದಾಗ, ವಡಕ್ಕು  ತಿರುವೀಧಿ ಪಿಳ್ಳೈ  ಅವರ ಇಬ್ಬರು ಶ್ರೇಷ್ಠ ಪುತ್ರರು ಮತ್ತು ನಮ್ಮ ಸಂಪ್ರದಾಯಂ ಗೆ ಅವರ ಸಾಟಿಯಿಲ್ಲದ ಕೈಂಕರ್ಯಂ ಬಗ್ಗೆ ಹೇಳುತ್ತೇನೆ.

ಮಕ್ಕಳು ವಿವಿಧ ಆಚಾರ್ಯರ ಶ್ರೇಷ್ಠತೆ ಮತ್ತು ಅವರ ದೈವಿಕ ಸೇವೆಗಳ ಬಗ್ಗೆ ಯೋಚಿಸುತ್ತಾ ಅವರವರ  ಮನೆಗಳಿಗೆ ತೆರಳುತ್ತಾರೆ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://pillai.koyil.org/index.php/2016/09/beginners-guide-nampillais-sishyas/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment