ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಚಾರ್ಯರ ಪರಿಚಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ

ಆಚಾರ್ಯ ರತ್ನ ಹಾರಂ

ಪರಾಶರ ಮತ್ತು ವ್ಯಾಸ ಆಂಡಾಲಜ್ಜಿಯನ್ನು ಕಾಣಲು ಸ್ವಲ್ಪ ದಿನಗಳ ನಂತರ ಬರುತ್ತಾರೆ . ಅವರು ರಜೆ ದಿನಗಳಿಗೆ ಅವರ ಅಜ್ಜಿ ಅಜ್ಜ ಬಳಿ  ತಿರುವಲ್ಲಿಕೇಣಿ ಗೆ ಹೋಗಿದ್ದರು. 

 ಆಂಡಾಳಜ್ಜಿ : ಪರಾಶರ , ವ್ಯಾಸ ! ಬನ್ನಿ, ತಿರುವಲ್ಲಿಕೇಣಿಯಲ್ಲಿ ಚೆನ್ನಾಗಿತ್ತು ಎಂದು ಭಾವಿಸುತ್ತೇನೆ. 

ಪರಾಶರ : ಹೌದು ಅಜ್ಜಿ, ಬಹಳ ಚೆನ್ನಾಗಿತ್ತು . ನಾವು ಪ್ರತಿದಿನ ಪಾರ್ಥಸಾರಥಿ ಗುಡಿಗೆ ಹೋದೆವು. ಅಷ್ಟೇ ಅಲ್ಲ, ನಾವು ಹತ್ತಿರದಲ್ಲಿರುವ ದಿವ್ಯ ದೇಶಗಳನ್ನು -ಕಾಂಚೀಪುರಂ ಇತ್ಯಾದಿ , ಕೂಡ ನೋಡಿದೆವು  . ನಾವು ಶ್ರೀಪೆರುಂಬುದೂರ್ಗೆ ಹೋಗಿ ಎಂಪೆರುಮಾನಾರ್ ಅನ್ನು ಪ್ರಾರ್ಥಿಸಿದೆವು. 

ಆಂಡಾಳಜ್ಜಿ :ಕೇಳಲು ಬಹಳ ಚೆನ್ನಾಗಿದೆ . ಶ್ರೀಪೆರುಂಬುದೂರ್ ರಾಮಾನುಜಾರ ಜನ್ಮಸ್ಥಳ. ಅವರು ನಮ್ಮ ಆಚಾರ್ಯರಲ್ಲಿ ಮುಖ್ಯವಾದವರು. ಅವರ ಬಗ್ಗೆ ಶೀಘ್ರದಲ್ಲೇ ನಿಮಗೆ ಹೇಳುತ್ತೇನೆ . ಹಿಂದಿನ ಬಾರಿ ಆಚಾರ್ಯರ ಬಗ್ಗೆ ಹೇಳುತ್ತೇನೆ ಎಂದು ನಿಮಗೆ  ಹೇಳಿದೆ. ಈಗ ಒಂದು ಸಣ್ಣ ಪರಿಚಯ ಕೊಡುತ್ತೇನೆ. ನಿಮಗೆ “ಆಚಾರ್ಯ” ಎಂಬ ಪದಕ್ಕೆ ಅರ್ಥ ಗೊತ್ತೇ ? 

ವ್ಯಾಸ : ಅಜ್ಜಿ, ಆಚಾರ್ಯ ಅಂದರೆ ಗುರುವೆ ? 

ಆಂಡಾಳಜ್ಜಿ : ಹೌದು ಆಚಾರ್ಯ ಮತ್ತು ಗುರು ಎರಡು ಒಂದೇ ರೀತಿಯ ಪದಗಳು . ಆಚಾರ್ಯ ಎಂದರೆ ನಿಜವಾದ ಜ್ಞಾನವನ್ನು ಕಲಿತು , ಅದನ್ನು ಸ್ವತಃ ಅಭ್ಯಾಸ ಮಾಡುತ್ತ  ಮತ್ತು ಅದೇ ರೀತಿ ಅನುಸರಿಸಲು ಇತರರಿಗೆ ಕಲಿಸುತ್ತಾರೆ  / ಪ್ರೇರೇಪಿಸುತ್ತಾರೆ . ಗುರು ಎಂದರೆ ನಮ್ಮ ಅಜ್ಞಾನವನ್ನು ತೆಗೆದುಹಾಕುವವನು. 

ಪರಾಶರ : ನಿಜವಾದ ಜ್ಞಾನ ಅಂದರೇನು ಅಜ್ಜಿ ?

ಆಂಡಾಳಜ್ಜಿ : ಬಹಳ ಬುದ್ಧಿವಂತ ಪ್ರಶ್ನೆ ಪರಾಶರ . ನಿಜವಾದ ಜ್ಞಾನವೆಂದರೆ ನಾವು ಯಾರೆಂದು ಮತ್ತು ಜವಾಬ್ದಾರಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳುವುದು. ಉದಾಹರಣೆಗೆ, ನಾನು ನಿಮ್ಮ ಅಜ್ಜಿ ಮತ್ತು ಉತ್ತಮ ಮೌಲ್ಯಗಳು ಇತ್ಯಾದಿಗಳೊಂದಿಗೆ ನಿಮಗೆ ಶಿಕ್ಷಣ ನೀಡುವುದು ನನ್ನ ಜವಾಬ್ದಾರಿಯಾಗಿದೆ. ಈ ಬಗ್ಗೆ ನನಗೆ ಉತ್ತಮ ತಿಳುವಳಿಕೆ ಇದ್ದರೆ – ಅದು ನಿಜವಾದ ಜ್ಞಾನ. ಅದೇ ರೀತಿ, ನಾವೆಲ್ಲರೂ ಭಗವಾನ್‌ಗೆ ಉಪ ಸೇವಕರಾಗಿದ್ದೇವೆ ಮತ್ತು ಅವರು ನಮ್ಮ ಯಜಮಾನರು. ಯಜಮಾನನಾಗಿ, ಅವನು ನಮ್ಮಿಂದ ಸೇವೆ ಸಲ್ಲಿಸಲು ಅರ್ಹನಾಗಿರುತ್ತಾನೆ ಮತ್ತು ಅವಲಂಬಿತನಾಗಿ, ಆತನ ಸೇವೆ ಮಾಡುವುದು ನಮ್ಮ ಕರ್ತವ್ಯ. ಪ್ರತಿಯೊಬ್ಬರಿಗೂ ಅರ್ಥವಾಗುವ ಸಾಮಾನ್ಯ “ನಿಜವಾದ ಜ್ಞಾನ” ಇದು. ಇದನ್ನು ತಿಳಿದಿರುವ ಮತ್ತು ಪ್ರಾಯೋಗಿಕ ಮಾರ್ಗಗಳ ಮೂಲಕ ಇತರರಿಗೆ ಕಲಿಸುವವರನ್ನು ಅಚಾರ್ಯರು ಎಂದು ಕರೆಯಲಾಗುತ್ತದೆ. ಈ “ನಿಜವಾದ ಜ್ಞಾನ” ವೇದ , ವೇದಾಂತ , ದಿವ್ಯ ಪ್ರಬಂಧ ಇತ್ಯಾದಿಗಳಲ್ಲಿ ಲಭ್ಯವಿದೆ.

ವ್ಯಾಸ :  ಓಹ್! ಹಾಗಾದರೆ ನಮ್ಮ ಮೊದಲ ಆಚಾರ್ಯ ಯಾರು ? ಇತರರಿಗೆ ಕಲಿಸುವ  ಮೊದಲು ಈ “ನಿಜವಾದ ಜ್ಞಾನ” ದ ಬಗ್ಗೆ ಯಾರಾದರೂ ತಿಳಿದುಕೊಳ್ಳಬೇಕು.

ಆಂಡಾಳಜ್ಜಿ : ಅದ್ಭುತ ಪ್ರಶ್ನೆ ವ್ಯಾಸ . ನಮ್ಮ ಪೆರಿಯ ಪೆರುಮಾಳ್  ಮೊದಲ ಅಚಾರ್ಯ. ನಾವು ಈಗಾಗಲೇ ಆಳ್ವಾರುಗಳ ಬಗ್ಗೆ ನೋಡಿದ್ದೇವೆ. ಪೆರುಮಾಳ್  ಅವರಿಗೆ ನಿಜವಾದ ಜ್ಞಾನವನ್ನು ನೀಡಿದ್ದಾರೆ . ಆಳ್ವಾರುಗಳು , ನಾವು ಅವರ ಜೀವನದಲ್ಲಿ ಈಗಾಗಲೇ ನೋಡಿದಂತೆ ಪೆರುಮಾಳ್  ಬಗ್ಗೆ ಹೆಚ್ಚಿನ ಬಾಂಧವ್ಯವನ್ನು ತೋರಿಸಿದ್ದಾರೆ  ಮತ್ತು ಅವರ ದಿವ್ಯ ಪ್ರಬಂಧಗಳ ಮೂಲಕ ನಿಜವಾದ ಜ್ಞಾನವನ್ನು ಬಹಿರಂಗಪಡಿಸಿದ್ದಾರೆ .

ಪರಾಶರ : ಅಜ್ಜಿ ! ಆಳ್ವಾರುಗಳ ಕಾಲಘಟ್ಟದ ನಂತರ ಏನು  ಆಯಿತು ? 

ಆಂಡಾಳಜ್ಜಿ : ಆಳ್ವಾರುಗಳು ಈ ಜಗತ್ತಿನಲ್ಲಿ ಸ್ವಲ್ಪ ಕಾಲ ಇದ್ದರು ಮತ್ತು ಅವರು ಶಾಶ್ವತವಾಗಿ ಪೆರುಮಾಳ್  ಜೊತೆ ಇರಲು ಪರಮಪದಂಗೆ ತೆರಳಿದರು. ಜ್ಞಾನವು ನಿಧಾನವಾಗಿ ಹದಗೆಟ್ಟಾಗ ಮತ್ತು ಧಿವ್ಯ ಪ್ರಬಂಧಗಳು ಸಹ ಬಹುತೇಕ ಕಳೆದುಹೋದ ಒಂದು ಕರಾಳ ಅವಧಿ ಇತ್ತು. ಆದರೆ ಇದು ನಮ್ಮಾಳ್ವಾರ್  ಅವರ ದೈವಿಕ ಅನುಗ್ರಹದಿಂದ, ನಾವು ದಿವ್ಯ ಪ್ರಬಂಧಮ್‌ಗಳನ್ನು ಮರಳಿ ಪಡೆದುಕೊಂಡಿದ್ದೇವೆ ಮತ್ತು ತರುವಾಯ ಅನೇಕ ಆಚಾರ್ಯರು ಪ್ರಚಾರ ಮಾಡಿದರು. ಆ ಆಚಾರ್ಯರ ಬಗ್ಗೆ ನಾವು ತರುವಾಯ ನೋಡುತ್ತೇವೆ.

ಪರಾಶರ ಮತ್ತು ವ್ಯಾಸ : ನಾವು ಕಾತುರದಿಂದ ಇದ್ದೀವಿ ಅಜ್ಜಿ . 

ಆಂಡಾಳಜ್ಜಿ : ಸರಿ, ಈಗ ನಿಮ್ಮ ಹೆತ್ತವರು ಕರೆಯುತ್ತಿದ್ದಾರೆ . ಮುಂದಿನ ಬಾರಿ ಕಂಡಾಗ ನಾನು ನಿಮಗೆ ಆಚಾರ್ಯರ ಬಗ್ಗೆ ಇನ್ನೂ ಹೆಚ್ಚಾಗಿ ಹೇಳುತ್ತೇನೆ . 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ : http://pillai.koyil.org/index.php/2015/06/beginners-guide-introduction-to-acharyas/ 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org


Leave a Comment