ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ದಿವ್ಯ ಪ್ರಬಂಧ – ಆಳ್ವಾರುಗಳ ಅತ್ಯಮೂಲ್ಯ ಕೊಡುಗೆ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ತಿರುಮಂಗೈ ಆಳ್ವಾರ್

ಆಂಡಾಳಜ್ಜಿ ಕಣ್ಣಿನುನ್ ಚಿರುತ್ತಾಂಬು ಪ್ರಬಂಧವನ್ನು ಪಠಿಸುತಿದ್ದಾರೆ. ಪರಾಶರ ಮತ್ತು ವ್ಯಾಸ ಅಲ್ಲಿಗೆ ಬರುತ್ತಾರೆ. 

ವ್ಯಾಸ : ಅಜ್ಜಿ ಈಗ ನೀವು ಏನು ಪಠಿಸುತಿದ್ದೀರ ? 

ಆಂಡಾಳಜ್ಜಿ : ವ್ಯಾಸ! ನಾನು ದಿವ್ಯ ಪ್ರಬಂಧದ ಭಾಗವಾದ ಕಣ್ಣಿನುನ್ ಚಿರುತ್ತಾಂಬು ಪಠಿಸುತ್ತಿದ್ದೇನೆ . 

ಪರಾಶರ: ಅಜ್ಜಿ ! ಇದು ಮಧುರಕವಿ ಆಳ್ವಾರ್ ರಚಿಸಿರುವುದು ಅಲ್ಲವೇ ? 

ಆಂಡಾಳಜ್ಜಿ : ಹೌದು , ಒಳ್ಳೆಯ ನೆನಪು ನಿನಗೆ. 

ವ್ಯಾಸ : ಅಜ್ಜಿ , ಆಳ್ವಾರುಗಳ ಚರಿತ್ರೆ ಹೇಳುವಾಗ ಪ್ರತಿಯೊಂದು ಆಳ್ವಾರ್ ಕೆಲವು ದಿವ್ಯಪ್ರಬಂಧವನ್ನು ರಚಿಸಿದ್ದಾರೆ ಎಂದು ಹೇಳಿದ್ದೀರ. ದಿವ್ಯ ಪ್ರಬಂಧಗಳನ್ನು ದಯವಿಟ್ಟು ವಿಸ್ತಾರವಾಗಿ ವಿವರಿಸಿ. 

ಆಂಡಾಳಜ್ಜಿ :ಸರಿ ವ್ಯಾಸ. ನೀನು ವಿವರವಾಗಿ ತಿಳಿಯಲು ಇಚ್ಛಿಸುವುದು ತುಂಬಾ ಒಳ್ಳೆಯದು. ನಮ್ಮ ಶ್ರೀರಂಗನಾಥನ್  ಮತ್ತು ಶ್ರೀರಂಗನಾಚ್ಚಿಯಾರ್ ಅನ್ನು ದಿವ್ಯದಂಪತಿ( ದೈವೀಕ ದಂಪತಿ ) ಎಂದು ಕರೆಯುತ್ತಾರೆ. ಭಗವಾನಿಂದ ಆಶೀರ್ವದಿಸಲ್ಪಟ್ಟಿರುವ  ಆಳ್ವಾರುಗಳನ್ನು ದಿವ್ಯ ಸೂರಿಗಳು (ದೈವೀಕ ಮತ್ತು ಶುಭವಾದ ವ್ಯಕ್ತಿತ್ವಗಳು) ಎಂದು ಕರೆಯುತ್ತಾರೆ . ಆಳ್ವಾರುಗಳು ರಚಿಸಿದ  ಪಾಸುರಗಳನ್ನು (ಶ್ಲೋಕಗಳು) ದಿವ್ಯ ಪ್ರಬಂಧಮ್ (ದೈವಿಕ ಸಾಹಿತ್ಯ) ಎಂದು ಕರೆಯುತ್ತಾರೆ  . ಆಳ್ವಾರುಗಳಿಂದ ದಿವ್ಯ ಪ್ರಬಂಧದಲ್ಲಿ ವೈಭವೀಕರಿಸಲ್ಪಟ್ಟ ಕ್ಷೇತ್ರಗಳನ್ನು  ದಿವ್ಯ ದೇಶಂ (ದೈವೀಕ ನಗರ ) ಎಂದು ಕರಾಯುತ್ತಾರೆ. 

ಪರಾಶರ: ಓಹ್! ಇದು ಚೆನ್ನಾಗಿದೆ ಅಜ್ಜಿ . ದಿವ್ಯ ಪ್ರಬಂಧಗಳು ಬೇರೆ ಏನನ್ನು ಹೇಳುತ್ತವೆ. 

ಆಂಡಾಳಜ್ಜಿ : ಎಂಪೆರುಮಾನರ ದಿವ್ಯ ಗುಣಗಳನ್ನು ಸಂಪೂರ್ಣವಾಗಿ ವಿಸ್ತರಿಸುವುದೆ ದಿವ್ಯ ಪ್ರಬಂಧಗಳ ಪ್ರಮುಖ ಉದ್ದೇಶ .ಅದು ಸಹ, ನಿರ್ಧಿಷ್ಟವಾಗಿ  , ನಮ್ಮ ಪೆರಿಯ ಪೆರುಮಾಳ್ , ತಿರುವೆಂಗಡಮುಡಯಾನ್ ಇತ್ಯಾದಿ ಅರ್ಚಾವತಾರ ಎಂಪೆರುಮಾನ್ಗಳನ್ನು ವಿಸ್ತರಿಸುವುದು. 

ವ್ಯಾಸ :  ಆದರೆ ವೇದಗಳು ನಮಗೆ ಪ್ರಮುಖವಾದದು ಎಂದು ನಾವು ಕೇಳಿದ್ದೇವೆ. ವೇದಗಳಿಗೆ ಮತ್ತು ದಿವ್ಯ ಪ್ರಬಂಧಕ್ಕೆ  ಏನು ಸಂಬಂಧ ? 

ಆಂಡಾಳಜ್ಜಿ : ಇದು ಉತ್ತಮವಾದ ಪ್ರಶ್ನೆ. ಪೆರುಮಾಳ್ ಬಗ್ಗೆ ತಿಳಿಯುವುದಕ್ಕೆ ವೇದಗಳೆ ಮೂಲ. ವೇದಗಳ ಮೇಲ್ಭಾಗವಾದ ವೇದಾಂತಮ್ ,  ಪೆರುಮಾಳ್, ಅವರ ದಿವ್ಯ ಗುಣಗಳು, ತತ್ವಗಳು ಇತ್ಯಾದಿಯನ್ನು ವಿಸ್ತಾರಿಸಿ  ವಿವರಿಸುವುದು. ಆದರೆ ಇವೆಲ್ಲವೂ ಸಂಸ್ಕೃತ ಭಾಷೆಯಲ್ಲಿ ಇದೆ . ಆಳ್ವಾರುಗಳು ವೇದ ವೇದಾಂತಗಳ ಸಾರಾಂಶವನ್ನು ಸುಂದರ ತಮಿಳು ಭಾಷೆಯಲ್ಲಿ ತಂದಿದ್ದಾರೆ . 

ಪರಾಶರ: ಓಹ್! ಆದರೆ ವೇದ ಮತ್ತು ದಿವ್ಯ ಪ್ರಬಂಧಕ್ಕೆ ಏನು ವ್ಯತ್ಯಾಸ ಅಜ್ಜಿ ? 

ಆಂಡಾಳಜ್ಜಿ : ಶ್ರೀವೈಕುಂಠದಿಂದ ಭಗವಾನ್ ಅಯೋಧ್ಯೆಯಲ್ಲಿ ಶ್ರೀರಾಮನಂತೆ ಬಂದಾಗ , ವೇದ ಶ್ರೀರಾಮಯಣದಂತೆ  ಬಂದಿತು ಎಂದು ಹೇಳುವುದುಂಟು . ಹಾಗೆಯೇ,ಪೆರುಮಾಳ್ ಅರ್ಚಾವತಾರ ಎಂಪೆರುಮಾನಾಗಿ ಬಂದಾಗ , ವೇದ ಆಳ್ವಾರಗಳ ಮೂಲಕ ದಿವ್ಯ ಪ್ರಬಂಧಗಳಾಗಿ ಬಂದವು .  ನಾವು ಈಗ ಇರುವ ಸ್ಥಿತಿಯಿಂದ ಪರಮಪದನಾಥನನ್ನು ಅರ್ಥ ಮಾಡಿಕೊಳ್ಳಲು ಬಹಳ ಕಷ್ಟ. ಆದ್ದರಿಂದ , ನಾವು ನಮ್ಮ ಸ್ಥಳದಲ್ಲೇ ಅರ್ಚಾವತಾರ ಪೆರುಮಾಳನ್ನು ಸಮೀಪಿಸುತ್ತೇವೆ. ಅದೇರೀತಿ, ವೇದ ವೇದಾಂತಗಳು ಅರ್ಥವಾಗುವುದು ಕಷ್ಟ. ಆದರೆ  ಅದೇ ಸಿದ್ಧಾಂತಗಳನ್ನು ಆಳ್ವಾರುಗಳು ದಿವ್ಯ ಪ್ರಬಂಧದಲ್ಲಿ ಸುಲಭ ವಾಗಿ ಸರಳವಾಗಿ ವಿವರಿಸಿದ್ದಾರೆ. 

ವ್ಯಾಸ : ಅಂದರೆ ವೇದ ನಮಗೆ ಮುಖ್ಯ ಇಲ್ಲವೇ ? 

ಆಂಡಾಳಜ್ಜಿ : ಹಾಗಲ್ಲ, ವೇದ ಮಾತು ದಿವ್ಯ ಪ್ರಬಂಧ ಎರಡು ಅಷ್ಟೇ ಪ್ರಮುಖವಾದದ್ದು . ಪೆರುಮಾಳನ್ನು ತಿಳಿಯಲು ವೇದಗಳು ಮೂಲಭೂತ ಆಧಾರವಾಗಿರುವುದರಿಂದ ಅವು ಮುಖ್ಯ . ಆದರೆ ಪೆರುಮಾಳಿನ ಕಲ್ಯಾಣ ಗುಣಗಳನ್ನು ಆಚರಿಸಲು ದಿವ್ಯ ಪ್ರಬಂಧವು ಅತಿಮುಖ್ಯವಾದದ್ದು. ಅದಲ್ಲದೆ, ವೇದಗಳಲ್ಲಿ ವಿಸ್ತರಿಸಲಾಗಿರುವ ಅತ್ಯಂತ  ಸಂಕೀರ್ಣವಾದ ಸಿದ್ಧಾಂತಗಳನ್ನು,ನಮ್ಮ ಪೂರ್ವಾಚಾರ್ಯರ ವಿವರಣೆಗಳಿಂದ , ದಿವ್ಯ ಪ್ರಬಂಧಗಳ ಅರ್ಥಗಳನ್ನು ಕಲಿಯಬಹುದು. ಆದ್ದರಿಂದ , ಒಬ್ಬರ ಪರಿಸ್ಥಿತಿಯಂತೆ  ವೇದ, ವೇದಾಂತ ಮತ್ತು ದಿವ್ಯ ಪ್ರಬಂಧ ಕಲಿಯಬೇಕು . 

ಪರಾಶರ : ದಿವ್ಯ ಪ್ರಬಂಧದ ಪ್ರಮುಖ ಗಮನವೇನು ಅಜ್ಜಿ ? 

ಆಂಡಾಳಜ್ಜಿ : ಈ ಭೌತಿಕ ಜಗತ್ತಿನಲ್ಲಿ ತಾತ್ಕಾಲಿಕ ಆನಂದ / ನೋವಿನಲ್ಲಿ ನಮ್ಮ ಲಗತ್ತನ್ನು ತೊಡೆದುಹಾಕುವುದು ಮತ್ತು ಸದಾ ಕಾಲ ಶ್ರೀಮಹಾಲಕ್ಷ್ಮಿ ಮತ್ತು ಶ್ರೀಮನ್ನಾರಾಯಣನ ಸೇವೆ ಮಾಡುವ ಮೂಲಕ ಪರಮಪದದಲ್ಲಿ ಶಾಶ್ವತ ಮತ್ತು ನೈಸರ್ಗಿಕ ಆನಂದಕ್ಕೆ ನಮ್ಮನ್ನು ಎತ್ತರಿಸುವುದು ದಿವ್ಯ ಪ್ರಬಂಧಂನ ಮುಖ್ಯ ಗಮನ. ಶ್ರೀಮನ್ನಾರಾಯಣನಿಗೆ ಸೇವೆ ಮಾಡುವುದು ನಮ್ಮ ಸ್ವಭಾವ, ಆದರೆ ನಾವು ಈ ಜಗತ್ತಿನಲ್ಲಿ ಲೌಕಿಕ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣ, ನಾವು ಆ ಅಮೂಲ್ಯವಾದ ಸಂತೋಷವನ್ನು ಕಳೆದುಕೊಳ್ಳುತ್ತಿದ್ದೇವೆ. ಪರವಪದಂನಲ್ಲಿ ಶಾಶ್ವತವಾಗಿ ಸೇವೆ ಸಲ್ಲಿಸುವ ಮಹತ್ವವನ್ನು ಧಿವ್ಯ ಪ್ರಬಂಧಂ ತೋರಿಸುತ್ತದೆ. 

ವ್ಯಾಸ : ಹೌದು ಅಜ್ಜಿ , ನೀವು ಈಗಾಗಲೇ ಈ ವಿಷಯವನ್ನು ವಿವರಿಸಿದರಿಂದ ಸ್ವಲ್ಪ ಅರ್ಥವಾಗುತ್ತದೆ . 

ಪರಾಶರ : ಪೂರ್ವಾಚಾರ್ಯರು ಎಂದರೆ ಯಾರು ಅಜ್ಜಿ? 

ಆಂಡಾಳಜ್ಜಿ : ಉತ್ತಮವಾದ ಪ್ರಶ್ನೆ ಪರಾಶರ. ಇಂದಿನಿಂದ ನಮ್ಮ ಸಂಪ್ರದಾಯದ  ಅನೇಕ ಆಚಾರ್ಯರ ಬಗ್ಗೆ ನಾನು ನಿಮಗೆ ವಿವರಿಸುತ್ತೇನೆ. ನಮ್ಮ ಅಚಾರ್ಯರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವುದು ನಮಗೆ ಬಹಳ ಮಹತ್ವದ್ದಾಗಿದೆ, ಇದರಿಂದಾಗಿ ಅವರು ಆಳ್ವಾರುಗಳ ಮಾತುಗಳಿಂದ ಅವರು ಹೇಗೆ ವಾಸಿಸುತ್ತಿದ್ದರು ಮತ್ತು ಅವರು  ತೋರಿದ ಮಾರ್ಗವನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ನಾವು ಸಂಪೂರ್ಣವಾಗಿ ಅರಿತುಕೊಳ್ಳಬಹುದು.

ಪರಾಶರ ಮತ್ತು ವ್ಯಾಸ: ಧನ್ಯವಾದಗಳು ಅಜ್ಜಿ, ನಮ್ಮ ಆಚಾರ್ಯರ ಬಗ್ಗೆ ಕೇಳಲು ಉತ್ಸಾಹದಿಂದ ಇದ್ದೇವೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ :  http://pillai.koyil.org/index.php/2015/02/beginners-guide-dhivya-prabandham-the-most-valuable-gift-from-azhwars/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment