ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
![](https://pillai.koyil.org/wp-content/uploads/2020/05/periazhvar.jpg)
ಸುಂದರವಾದ ಭಾನುವಾರದ ಬೆಳಿಗ್ಗೆ, ಆಂಡಾಳಜ್ಜಿ ತನ್ನ ಮನೆಯ ಹೊರಗಿನ ದಿಣ್ಣೆ ಮೇಲೆ ಕುಳಿತು ಪೆರುಮಾಳಿಗೆ ಹಾರವನ್ನು ತಯಾರಿಸುತ್ತಾಳೆ. ವ್ಯಾಸ ಮತ್ತು ಪರಾಶರ ಬಂದು ಆಂಡಾಳಜ್ಜಿ ಪಕ್ಕದಲ್ಲಿರುವ ದಿಣ್ಣೆ ಮೇಲೆ ಕುಳಿತುಕೊಳ್ಳುತ್ತಾರೆ. ಅವರಿಬ್ಬರೂ ಆಂಡಾಳಜ್ಜಿಯನ್ನು ಕುತೂಹಲದಿಂದ ನೋಡುತ್ತಾರೆ.
ವ್ಯಾಸ : ಅಜ್ಜಿ ಏನು ಮಾಡುತ್ತೀಯ ?
ಆಂಡಾಳಜ್ಜಿ : ಪೆರುಮಾಳಿಗೆ ಹಾರವನ್ನು ತಯಾರಿಸುತ್ತಿದ್ದೇನೆ , ಅದು ನನಗೆ ಒಂದೆರಡು ಆಳ್ವಾರುಗಳನ್ನು ನೆನಪಿಸುತ್ತದೆ . ಅವುಗಳಲ್ಲಿ ಒಂದನ್ನು ನೀವು ಈಗ ಕೇಳಲು ಬಯಸುವಿರಾ ?
ಪರಾಶರ : ಸರಿ ಅಜ್ಜಿ . ನಾವು ಕಾತುರದಿಂದ ಇದ್ದೇವೆ.
ಆಂಡಾಳಜ್ಜಿ : ಸರಿ ಹಾಗಾದರೆ ಪೆರಿಯಾಳ್ವಾರ್ ಬಗ್ಗೆ ಹೇಳುತ್ತೇನೆ. ಅವರು ಜ್ಯೇಷ್ಟಾ ಮಾಸದ ಸ್ವಾತಿ ನಕ್ಷತ್ರದಂದು ಶ್ರೀವಿಲ್ಲಿಪುತ್ತೂರ್ ನಲ್ಲಿ ಜನಿಸಿದರು. ಅವರನ್ನು ಪಟ್ಟರ್ಪಿರಾನ್ ಎಂದು ಕರೆಯುತ್ತಾರೆ. ಅವರು ವಟಪತ್ರಸಾಯಿ ಪೆರುಮಾಳಿಗೆ ಹಾರಗಳನ್ನು ಮಾಡುತ್ತಿದ್ದರು. ಒಂದು ದಿನ , ಪಾಂಡಿಯ ದೇಶದ ಅರಸ ವಿದ್ವಾಂಸರಿಗೆ ಒಂದು ಸವಾಲು ಹಾಕಿದರು . ಸರ್ವೋಚ್ಚ ದೇವರ ತತ್ವವನ್ನು ಸ್ಥಾಪಿಸಿದವರಿಗೆ ಅವರು ಚಿನ್ನದ ನಾಣ್ಯ ಭರಿತ ಒಂದು ಚೀಲವನ್ನು ಪ್ರಶಸ್ತಿಯಾಗಿ ಕೊಡುವುದಾಗಿ ಘೋಷಿಸಿದರು.
ವ್ಯಾಸ : ಅದು ಬಹಳ ಕಷ್ಟವಾಗಿರಬಹುದು ಅಲ್ಲವೇ , ಅಜ್ಜಿ ?
ಆಂಡಾಳಜ್ಜಿ :ಆದರೆ ಪೆರಿಯಾಳ್ವಾರಿಗೆ ಅಲ್ಲ . ಅವರ ಭಕ್ತಿ ಮತ್ತು ಪೆರುಮಾಳಿನ ಕೃಪೆಯಿಂದ , ವೇದಗಳ ಮೂಲಕ ಅವರು ರಾಜನ ಆಸ್ಥಾನದಲ್ಲಿ ಪರತತ್ವವನ್ನು ಸಾಬೀತುಪಡಿಸಿದರು . ರಾಜನಿಗೆ ಅತ್ಯಂತ ಸಂತೋಷವಾಗಿ ಪ್ರಶಸ್ತಿ ಕೊಟ್ಟು , ಮಧುರೈಯ ಬೀದಿಗಳಲ್ಲಿ ರಾಜ ಆನೆಯ ಮೇಲೆ ಸವಾರಿಗೆ ಕಳುಹಿಸಿದರು.
ಪರಾಶರ: ಅದು ಕಾಣಲು ಎಷ್ಟು ಚೆನ್ನಾಗಿರುವುದು ಅಜ್ಜಿ .
ಆಂಡಾಳಜ್ಜಿ : ಹೌದು ಪರಾಶರ, ಆದ್ದರಿಂದಲೇ ಸ್ವತಃ ಪೆರುಮಾಳ್ ಪರಮಪದದಿಂದ ಗರುಡನ ಮೇಲೆ ಇಳಿದು ಬಂದರು. ಪೆರಿಯಾಳ್ವಾರರು ಆನೆಯ ಮೇಲೆ ಸವಾರಿ ಇದ್ದರೂ ಪೆರುಮಾಳಿನ ಸುರಕ್ಷತೆ ಬಗ್ಗೆ ಚಿಂತಿತರಾಗಿದ್ದರು. ಹಾಗಾಗಿ ಅವರು ತಿರುಪಲ್ಲಾಂಡು ಪೆರುಮಾಳಿನ ಸುರಕ್ಷತೆಗಾಗಿ ಹಾಡಿದರು. ಅದರಿಂದಲೇ ಅವರು ಪೆರಿಯಾಳ್ವಾರ್ ಎಂದು ಪ್ರಸಿದ್ಧರಾದರು. ಅವರು ಪೆರಿಯಾಳ್ವಾರ್ ತಿರುಮೊಳಿ ಹಾಡಿದರು.
ವ್ಯಾಸ : ಓಹ್ ಹೌದು ಅಜ್ಜಿ, ಪಲ್ಲಾಣ್ಡು ಪಲ್ಲಾಣ್ಡು ಬಹಳ ಪರಿಚಿತವಾಗಿದೆ. ಅದು ನಾವು ಪ್ರತಿದಿನ ಬೆಳಿಗ್ಗೆ ಮೊದಲು ಅದನ್ನು ಹಾಡುತ್ತೇವೆ. ನಾವು ದೇವಾಲಯದಲ್ಲಿ ಕೇಳಿದ್ದೇವೆ.
ಆಂಡಾಳಜ್ಜಿ : ಹೌದು ವ್ಯಾಸ , ಪೆರಿಯಾಳ್ವಾರ್ ರ ತಿರುಪಲ್ಲಾಂಡು ಮೊದಲು ಮತ್ತು ಅಂತ್ಯದಲ್ಲಿ ಸದಾ ಹಾಡಲಾಗಿದೆ.
ಪರಾಶರ : ಸರಿ ಅಜ್ಜಿ, ನಾವು ಅದನ್ನು ಕಲಿತುಕೊಂಡು ಪೆರುಮಾಳಿಗೆ ಹಾಡುತ್ತೇವೆ.
ಅಂಡಾಳಜ್ಜಿ : ನೀನು ಅದು ಬಹಳ ಶೀಘ್ರದಲ್ಲೇ ಮಾಡುವೆ ಎಂದು ನನಗೆ ನಂಬಿಕೆ ಇದೆ. ಅಂದಹಾಗೆ, ಅವರು ಪ್ರಸಿದ್ಧವಾದ ತಿರುಪ್ಪಾವೈ ಹಾಡಿದ ಆಂಡಾಳ ತಂದೆಯಾಗಿದ್ದರು. ಆಂಡಾಳ್ ಬಗ್ಗೆ ಇನ್ನೂ ಹೆಚ್ಚಿಗೆ ನಂತರ ಹೇಳುತ್ತೇನೆ . ಈಗ ಬನ್ನಿ, ಈ ಹಾರವನ್ನು ಪೆರುಮಾಳಿಗೆ ಅರ್ಪಿಸೋಣ.
ಆಂಡಾಳಜ್ಜಿ ಹಾರವನ್ನು ಮಾಡಿ ಮುಗಿಸಿ ರಂಗನಾಥ ದೇವಾಲಯಕ್ಕೆ ವ್ಯಾಸ ಮತ್ತು ಪರಾಶರರನ್ನು ಪೇರುಮಾಳಿಗೆ ಅರ್ಪಿಸಲು ಕರೆದುಕೊಂಡು ಹೋಗುತ್ತಾರೆ.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : http://pillai.koyil.org/index.php/2014/11/beginners-guide-periyazhwar/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org