ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಪರಾಶರ ಭಟ್ಟರ್

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ‌ ‌ಸರಣಿ‌

ಎಂಬಾರ್

ಪರಾಶರ , ವ್ಯಾಸ  ವೇದವಲ್ಲಿ ಮತ್ತು ಅತ್ತುೞಾಯ್ ಜೊತೆಗೆ ಆಂಡಾಲ್  ಅಜ್ಜಿ ಮನೆಗೆ ಬರುತ್ತಾರೆ. ಅಜ್ಜಿ: ಸ್ವಾಗತ ಮಕ್ಕಳೇ.  ಇಂದು ನಾವು ಮುಂದಿನ ಆಚಾರ್ಯರ ಬಗ್ಗೆ ಮಾತನಾಡೋಣ, ಪರಾಶರ ಭಟ್ಟರ್ , ಅವರು ಎಂಬಾರ್ನ ಶಿಷ್ಯರಾಗಿದ್ದರು ಮತ್ತು ಎಂಬಾರ್ ಮತ್ತು ಎಂಪೆರುಮಾನಾರ್  ಬಗ್ಗೆ ಅಪಾರ ಭಕ್ತಿ ಹೊಂದಿದ್ದರು. ನಾನು ಈಗಾಗಲೇ ಮಕ್ಕಳಿಗೆ ಹೇಳಿದಂತೆ, ಎಂಪೆರುಮಾನಾರ್ , ಪರಾಶರ ಮತ್ತು ವ್ಯಾಸ ಮಹರ್ಷಿಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಒಂದು ಮಾರ್ಗವನ್ನು ಹೊಂದಿದ್ದರು  , ಕೂರಥ್ ಆೞ್ವಾನ್‌ಗೆ ಜನಿಸಿದ ಇಬ್ಬರು ಗಂಡುಮಕ್ಕಳನ್ನು ಪರಾಶರ ಭಟ್ಟರ್ ಮತ್ತು ವೇಧ ವ್ಯಾಸ ಭಟ್ಟರ್ ಎಂದು ಹೆಸರಿಸಿದ್ದಾರೆ. ಆಳವಂಧಾರ್ಗೆ  ಅವರು ನೀಡಿದ ಮೂರು ಭರವಸೆಗಳಲ್ಲಿ ಇದು ಒಂದು. ಪರಾಶರ  ಭಟ್ಟರ್  ಮತ್ತು ವೇದ  ವ್ಯಾಸ  ಭಟ್ಟರ್ ಅವರು ಶ್ರೀರಂಗಂನ ಪೆರಿಯ ಪೆರುಮಾಳಿಂದ ಪಡೆದ ಪ್ರಸಾದಂನಿಂದ ಕೂರಥ್ ಆೞ್ವಾನ್ ಮತ್ತು ಅವರ ಪತ್ನಿ ಆಂಡಾಳ್ ಗೆ ಜನಿಸಿದರು

ಕೂರತ್ ಆಳ್ವಾನ್ ಅವರ ಮಕ್ಕಳು ಪರಾಶರ ಭಟ್ಟರ್ ಮತ್ತು ವೇದ ವ್ಯಾಸ ಭಟ್ಟರ್

ಪರಾಶರ : ಅಜ್ಜಿ , ಇ ಆಚಾರ್ಯರ ಮೇರೆಗೆ ನನಗೂ ವ್ಯಾಸನಿಗು , ಪರಾಶ , ವ್ಯಾಸ ಎಂದು ಹೆಸರಿಟ್ಟರೆ ?

ಅಜ್ಜಿ : ಹೌದು ಪರಾಶರ . ಮಕ್ಕಳಿಗೆ ಹೆಚ್ಚಾಗಿ ಆಚಾರ್ಯ ಅಥವಾ ಪೆರುಮಾಳ್ ಹೆಸರು ಇಡಲಾಗುತ್ತದೆ , ಕನಿಷ್ಟ ಪಕ್ಷ ಹಾಗಾದರೂ ಮಕ್ಕಳನ್ನು ಕರೆಯುವ ಸಲುವಾಗಿ , ನಮ್ಮ ಆಚಾರ್ಯ ಮತ್ತು ಪೆರುಮಾಳ್ ದಿವ್ಯ ಹೆಸರನ್ನು ಕರೆಯುವ ಅವಕಾಶ ದೊರಕುವುದು. ಅದಕ್ಕಾಗಿ ಮಕ್ಕಳನ್ನು ಪೆರುಮಾಳ್, ತಾಯಾರ್ ಅಥವಾ ಆಚಾರ್ಯರ ಹೆಸರು ಇಡಬೇಕು, ಹಾಗಾಗಿ ನಾವು ಅವರ ದಿವ್ಯ ಹೆಸರು ಹೇಳುತ್ತಾ ಅವರ ಕಲ್ಯಾಣ ಗುಣಗಳ ಬಗ್ಗೆ ಯೋಚಿಸಬಹುದು. ಇಲ್ಲದಿದ್ದರೆ , ಈ ಕಾರ್ಯನಿರತ ಜಗತ್ತಿನಲ್ಲಿ , ಪೆರುಮಾಳಿನ ದಿವ್ಯ ನಾಮಗಳನ್ನು ಜಪಿಸಲು ಸಮಯವನ್ನು ನಿಗದಿಪಡಿಸಲು ಯಾರಿಂದ ಸಾಧ್ಯ ? ಆದರೆ ಇತ್ತೀಚಿನ ದಿನಗಳಲ್ಲಿ ವಿಷಯಗಳು ಬದಲಾಗಿವೆ. ಜನರು ಅರ್ಥವಿಲ್ಲದ , ಪೆರುಮಾಳ್ ತಾಯಾರ್ ಅಥವಾ ಆಚಾರ್ಯನ್ ಬಗ್ಗೆ ನೆನೆಪಿಸಲಾಗದ  ಫ್ಯಾಷನ್ ಹೆಸರುಗಳ ಹಿಂದೆ ಹೋಗುತ್ತಾರೆ.

ಶ್ರೀರಂಗಂಗೆ ಬಂದ ನಂತರ, ಆೞ್ವಾನ್ ದೈನಂದಿನ ಆಹಾರಕ್ಕಾಗಿ ಉಂಜ ವ್ರುತ್ತಿ  (ಭಿಕ್ಷೆ) ಮಾಡಿದರು ಮತ್ತು ಒಂದು ದಿನ ಭಾರೀ ಮಳೆಯಿಂದಾಗಿ, ಆೞ್ವಾನ್ ಉಂಜ ವ್ರುತ್ತಿ ಮಾಡಲು ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ಆೞ್ವಾನ್  ಮತ್ತು ಅವರ ಪತ್ನಿ ಆಂಡಾಳ್  ಖಾಲಿ ಹೊಟ್ಟೆಯಲ್ಲಿ ಮಲಗಬೇಕಾಯಿತು. ರಾತ್ರಿಯ ಸಮಯದಲ್ಲಿ, ದೇವಾಲಯದಿಂದ ಅಂತಿಮ ನೈವೇದ್ಯಂ  ಗಂಟೆ ಬಾರಿಸುವುದನ್ನು ಆಂಡಾಳ್  ಕೇಳುತ್ತಾಳೆ . “ಇಲ್ಲಿ, ನಿಮ್ಮ ಶುದ್ಧ ಭಕ್ತ, ಯಾವುದೇ ಪ್ರಸಾದವಿಲ್ಲದೆ  ಆೞ್ವಾನ್   ಇದ್ದಾರೆ  ಆದರೆ ನೀವು ಅಲ್ಲಿ ಉತ್ತಮವಾದ ಭೋಗಮ್ ಅನ್ನು ಆನಂದಿಸುತ್ತಿದ್ದೀರಿ” ಎಂದು ಆಂಡಾಳ್  ಎಂಪೆರುಮಾನ್ ಗೆ  ಹೇಳುತ್ತಾರೆ. ಇದನ್ನು ಅರ್ಥಮಾಡಿಕೊಂಡ ಪೆರಿಯ ಪೆರುಮಾಳ್  ತನ್ನ ಪ್ರಸಾದಮ್ ಅನ್ನು ಆೞ್ವಾನ್ ಮತ್ತು ಅಂಡಾಲ್ಗೆ ತನ್ನ ಎಲ್ಲಾ ಸಾಮಗ್ರಿಗಳೊಂದಿಗೆ (ದೇವಾಲಯದಿಂದ ಸರಿಯಾದ ಗೌರವಗಳು) ಉತ್ತಮ ನಂಬಿ ಮೂಲಕ ಕಳುಹಿಸುತ್ತಾನೆ. ಪ್ರಸಾದಂ ಬರುತ್ತಿರುವುದನ್ನು ನೋಡಿ ಆೞ್ವಾನ್  ವಿಸ್ಮಯಗೊಳ್ಳುತ್ತಾರೆ . ತಕ್ಷಣ, ಅವರು  ಆಂಡಾಲ್ ಕಡೆಗೆ ತಿರುಗಿ, “ನೀನು  ಎಂಪೆರುಮಾನ್ ಗೆ ದೂರು ನೀಡಿದ್ದೀಯಾ?” ಎಂದು ಕೇಳುತ್ತಾರೆ ಮತ್ತು ಆಂಡಾಲ್ ತನ್ನ ವಿನಂತಿಯನ್ನು ಒಪ್ಪಿಕೊಳ್ಳುತ್ತಾಳೆ . ಆೞ್ವಾನ್  ತಮ್ಮ ಪ್ರಸಾದವನ್ನು ಒದಗಿಸಲು ಎಂಪೆರುಮಾನ್  ಅನ್ನು ಒತ್ತಾಯಿಸಿದ್ದಕ್ಕಾಗಿ ಅಸಮಾಧಾನಗೊಳ್ಳುತ್ತಾರೆ. ಅವರು ಕೇವಲ 2 ಹಿಡಿ ಗಳಷ್ಟು  ಪ್ರಸಾದಮ್ ಅನ್ನು ಸ್ವೀಕರಿಸುತ್ತಾರೆ, ಸ್ವಲ್ಪವನ್ನು  ಅವರು ಸೇವಿಸುತ್ತಾರೆ ಮತ್ತು ಅವಶೇಷಗಳನ್ನು ಆಂಡಾಲ್ಗೆ ನೀಡುತ್ತಾರೆ. ಅಂತಿಮವಾಗಿ ಆ 2 ಹಿಡಿ  ಪ್ರಸಾದದಿಂದ  ಇಬ್ಬರು ಸುಂದರ ಮಕ್ಕಳಂತೆ  ಆಶೀರ್ವದಿಸಲ್ಪಡುತ್ತಾರೆ.

ವ್ಯಾಸ : ಅಜ್ಜಿ, ಎಂಬಾರ್ ಹೇಗೆ ಭಟ್ಟರ್ ಅವರ ಆಚಾರ್ಯಾರಾದರು  ?

ಅಜ್ಜಿ : ಇಬ್ಬರು ಮಕ್ಕಳ ಜನನದ ನಂತರ, ಮಕ್ಕಳನ್ನು ನೋಡುವಂತೆ ಮಕ್ಕಳನ್ನು ತನ್ನ ಬಳಿಗೆ ಕರೆತರಲು ಎಂಪೆರುಮಾನ್  ಎಂಬಾರ್ ಅನ್ನು ಕಳುಹಿಸುತ್ತಾರೆ. ಎಂಬಾರ್ ಇಬ್ಬರು ಮಕ್ಕಳನ್ನು ನೋಡಿದ ತಕ್ಷಣ ಈ  ಇಬ್ಬರು ಹುಡುಗರು ಸಂಪ್ರದಾಯಂ ಗಾಗಿ ಜನಿಸಿದ್ದಾರೆ ಎಂದು  ಗುರುತಿಸುತ್ತಾರೆ . ಅವರು  ಇಬ್ಬರು ಮಕ್ಕಳ ಮುಖದಲ್ಲಿ   ದೊಡ್ಡ ತೇಜಸ್ (ದೈವಿಕ ಹೊಳಪು) ಅನ್ನು ಕಂಡು ಮತ್ತು ಯಾವುದೇ ಕೆಟ್ಟ ಪರಿಣಾಮಗಳು ಎರಡು ಮಕ್ಕಳಿಗೆ ಹಾನಿ ಮಾಡದಿರಲಿ ಎಂದು ತಕ್ಷಣವೇ ಧ್ವಯ  ಮಹಾ ಮಂತ್ರವನ್ನು ರಕ್ಷೈ (ರಕ್ಷಣೆ) ಎಂದು ಪಠಿಸುತ್ತಾರೆ  . ವಿಚಾರಿಸಿದಾಗ, ಎಂಬಾರ್ ಅವರು ಇಬ್ಬರು ಮಕ್ಕಳಿಗೆ ರಕ್ಷೆ  ಎಂದು ಧ್ವಯಂ ಪಠಿಸಿದಂತೆ  ಹೇಳುತ್ತಾರೆ.ಎಂಬಾರ್ ಇಬ್ಬರು ಮಕ್ಕಳಿಗೆ ಧ್ವಯಂ ಅನ್ನು ಪಠಿಸಿ ಪ್ರಾರಂಭಿಸಿದ ಕಾರಣ ಅವರನ್ನು ಆ ಮಕ್ಕಳಿಗೆ ಆಚಾರ್ಯನಾಗಿ ನೇಮಿಸಲಾಯಿತು. ಆ ಇಬ್ಬರು ಮಕ್ಕಳು ಎಂಬಾರ್ ಮತ್ತು ಅವರ ತಂದೆ ಆಳ್ವಾನ್ ನಿಂದ ಅಧ್ಯಯನ ಮಾಡುತ್ತ ಬೆಳೆದರು. ಇಬ್ಬರು ಮಕ್ಕಳು  ಪೆರಿಯ ಪೆರುಮಾಳ್ ಕೃಪೆಯಿಂದ ಹುಟ್ಟಿದರಿಂದ ಅವರಿಬ್ಬರಿಗೂ ಪೆರಿಯ ಪೆರುಮಾಳ್ ಮತ್ತು ಪೆರಿಯ ಪಿರಾಟ್ಟಿ (ಶ್ರೀ ರಂಗ ನಾಚ್ಚಿಯಾರ್ ) ಕಡೆಗೆ ಅಪಾರ  ಪ್ರೀತಿ ಹೊಂದಿದ್ದರು. ಪರಾಶರ ಭಟ್ಟರನ್ನು ಪೆರಿಯ ಪೆರುಮಾಳಿಗೆ ದತ್ತು ಕೊಡಬೇಕೆಂದು ಎಂಪೆರುಮಾನಾರ್  ಆಳ್ವಾನ್ ಗೆ ಹೇಳಿದಾಗ ಆಳ್ವಾನ್ ಅದರಂತೆಯೇ ಮಾಡಿದರು. ಭಟ್ಟರ್ ಅವರು ಚಿಕ್ಕವರಿದ್ದಾಗ ಶ್ರೀ ರಂಗ ನಾಚ್ಚಿಯಾರ್ ಅವರ ಸನ್ನಿಧಿಯಲ್ಲಿಯೇ ಆಕೆಯ ಆರಕ್ಷೆಯಲ್ಲಿ   ಬೆಳೆದರು ಎಂದು ಹೇಳಲಾಗುತ್ತದೆ . ಪೆರಿಯ ಪೆರುಮಾಳ್, ಪಿರಾಟ್ಟಿ ಮತ್ತು ಭಟ್ಟರ್ ನಡುವೆ ಅಂತಹ ಬಂಧ ಮತ್ತು ಪ್ರೀತಿ ಇತ್ತು. ಒಮ್ಮೆ, ಭಟ್ಟರ್ ಅವರು ಪೆರುಮಾಳ್ ಸನ್ನಿಧಿಯಲ್ಲಿ ಪಾಸುರಂಗಳನ್ನು ಪಠಿಸಿ ಹೊರಗೆ ಬರುತ್ತಾರೆ . ಆಗ ರಾಮಾನುಜರು ಅವರನ್ನು ನೋಡಿ , ಭಟ್ಟರನ್ನು ತನ್ನಂತೆಯೇ ಪರಿಗಣಿಸಬೇಕು ಎಂದು ಆನಂತಾಳ್ವಾನ್  ಮತ್ತು ಇತರ ಶಿಷ್ಯರಿಗೆ ಸೂಚಿಸಿದರು. ರಾಮಾನುಜರು ಭಟ್ಟರಲ್ಲಿ ಸ್ವತಃ ತಮ್ಮನ್ನು ತಾವೇ ನೋಡಿದರು.  ಭಟ್ಟರ್ ಮುಂದಿನ ಧರ್ಶಣ  ಪ್ರವರ್ತಕರ್ (ಸಂಪ್ರದಾಯದ ನಾಯಕ) ಎಂದು ರಾಮಾನುಜರ್ ಗೆ ತಿಳಿದಿತ್ತು. ಭಟ್ಟರ್ ಚಿಕ್ಕ ವ್ಯಯಸ್ಸಿನಿಂದಲೇ ಬಹಳ ಚತುರರು. ಅವರ ಚಾಣಕ್ಯತೆಯ ಕಥೆಗಳು ಬಹಳ ಇವೆ

ಅತ್ತುೞಾಯ್:ಅಜ್ಜಿ ಅವರ ಬುದ್ಧಿವಂತಿಕೆಯ ಕಥೆಗಳು ಹೇಳಿ.

ಅಜ್ಜಿ ;  ಒಮ್ಮೆ , ಭಟ್ಟರ್ ಬೀದಿಯಲ್ಲಿ ಆಟವಾಡುತ್ತಿದ್ದರು , ಆಗ ಒಂದು ಪಲ್ಲಕ್ಕಿಯಲ್ಲಿ ಸರ್ವಜ್ಞ ಭಟ್ಟನ್ ಎಂಬ ವಿದ್ವಾಂಸರು ಬಂದರು . ರಾಮಾನುಜರಂತಹ ಮಹಾನ್ ವಿದ್ವಾಂಸರು ಇರುವ ಶ್ರೀರಂಗದಲ್ಲಿ ಒಬ್ಬರು ಪಲ್ಲಕ್ಕಿಯಲ್ಲಿ ಬರುವುದನ್ನು ಕಂಡು ಭಟ್ಟರು ಆಘಾತಕ್ಕೊಳಗಾದರು , ಭಟ್ಟರ್ ಅವರ ಬಳಿ ಹೋಗಿ ಚರ್ಚೆಗೆ ಸವಾಲು ಕೊಡುತ್ತಾರೆ. ಸರ್ವಜ್ಞ ಭಟ್ಟನ್ , ಭಟ್ಟರನ್ನು ಸಾಮಾನ್ಯ ಬಲಕನೆಂದು ಭಾವಿಸಿ ಯಾವುದೇ ಪ್ರಶ್ನೆಗೆ ಉತ್ತರ ಕೊಡುವುದಾಗಿ  ಭಟ್ಟರನ್ನು ಪ್ರಶ್ನೆ ಕೇಳಲು ಹೇಳುತ್ತಾರೆ.  ಭಟ್ಟರು ಒಂದು ಹಿಡಿ ಮರಳು ಹಿಡಿದುಕೊಂಡು ಅವರ ಕೈ ಯಲ್ಲಿ ಎಷ್ಟು ಮರಳು ಇದೆ ಎಂದು ಕೇಳಿದರು. ಸರ್ವಜ್ಞ ಭಟ್ಟನ್ ಭಾವೋದ್ವೇಗದಿಂದ ಮಾತು ಹೊರಡದ ಕಾರಣ ತನಗೆ ಗೊತ್ತಿಲ್ಲವೆಂದು ಹೇಳಿದರು .  “ಒಂದು ಹಿಡಿಯಷ್ಟು” ಎಂದು ಉತ್ತರ ಹೇಳಿರಬಹುದು ಎಂದು ಭಟ್ಟರ್ ಹೇಳಿದರು. ಭಟ್ಟರ್ ಚತುರತೆಯಿಂದ ಆಶ್ಚರ್ಯಗೊಂಡ ಸರ್ವಜ್ಞ ಭಟ್ಟನ್ ತಕ್ಷಣ ಪಲ್ಲಕ್ಕಿಯಿಂದ ಇಳಿದು ಬಂದು ಭಟ್ಟರನ್ನು ಒಯ್ದು ಅವರ ಹೆತ್ತವರ ಬಳಿ ಅಪಾರವಾಗಿ ಪ್ರಶಂಶಿಸಿದರು.

ವೇದವಲ್ಲಿ : ಎಂತಹ ಜಾಣ ಉತ್ತರ.

ಅಜ್ಜಿ : ಭಟ್ಟರ್ ಬಾಲ್ಯದಿಂದಲೇ ಚಾತುರ್ಯ ಮತ್ತು ಅಪಾರ ಗ್ರಹಣೆ ಹೊಂದಿದ್ದರು. ತನ್ನ ಗುರುಕುಲಂ ಸಮಯದಲ್ಲಿ ಅವನು ತುಂಬಾ ಚಿಕ್ಕವನಾಗಿದ್ದಾಗ, ಭಟ್ಟರ್ ಬೀದಿಗಳಲ್ಲಿ ಆಡುತ್ತಿದ್ದನು. ಆ ಸಮಯದಲ್ಲಿ, ಅಳ್ವಾನ್ ಬಂದು ತರಗತಿಗೆ ಹಾಜರಾಗುವ ಬದಲು ಭಟ್ಟರ್ ಏಕೆ ಆಡುತ್ತಿದ್ದಾನೆ ಎಂದು ಕೇಳುತ್ತಾನೆ . ಭಟ್ಟರ್ ಹೇಳುತ್ತಾರೆ “ಪ್ರತಿದಿನ ಅವರು ಒಂದೇ ಸಂದೈ ಯನ್ನು ಮತ್ತೆ ಮತ್ತೆ ಕಲಿಸುತ್ತಿದ್ದಾರೆ” – ಸಾಮಾನ್ಯವಾಗಿ ಅದೇ ಸಂದೈ ಅನ್ನು 15 ದಿನಗಳವರೆಗೆ ಪುನರಾವರ್ತಿಸಲಾಗುತ್ತದೆ. ಆದರೆ ಭಟ್ಟರ್ ಮೊದಲ ದಿನದಲ್ಲಿಯೇ ಸರಿಯಾಗಿ ಗ್ರಹಿಸಬಲ್ಲ. ಆಳ್ವಾನ್ ಅವನನ್ನು ಪಾಸುರಂನಿಂದ ಪರೀಕ್ಷಿಸುತ್ತಾನೆ ಮತ್ತು ಭಟ್ಟರ್ ಅದನ್ನು ಸುಲಭವಾಗಿ ಪಠಿಸುತ್ತಾನೆ.

ವ್ಯಾಸ : ತಂದೆಯಂತೆ ಮಗ !

ಅಜ್ಜಿ : ಅದೇ! ಭಟ್ಟರ್ ಅವರ ತಂದೆ ಆಳ್ವಾನ್  ಅವರಂತೆಯೇ ಇದ್ದರು, ಅವರು ಉತ್ತಮ ಜ್ಞಾನ ಮತ್ತು  ಜ್ಞಾಪಕ  ಶಕ್ತಿಯನ್ನು ಹೊಂದಿದ್ದರು. ಆಳ್ವಾನ್ ‌ನ ಇನ್ನೂ ಕೆಲವು ಗುಣಗಳು ಭಟ್ಟರ್‌ಗೆ ಬಂದವು, ಉದಾಹರಣೆಗೆ ನಮ್ರತೆ ಮತ್ತು ವೈಭವ. ಒಮ್ಮೆ ಹೇಗೋ ಒಂದು ನಾಯಿ ಶ್ರೀರಂಗಂ ದೇವಾಲಯದ ಒಳಗೆ ಬಂದಿತು. ಸಾಮಾನ್ಯವಾಗಿ ಅಂತಹ ಸಮಯದಲ್ಲಿ, ದೇವಾಲಯದ ಅರ್ಚಕರು ಶುದ್ಧೀಕರಣದ ಸಲುವಾಗಿ ಸಂಪ್ರೋಕ್ಷಣೆ ಮಾಡುವರು. ಅಂದು ಅರ್ಚಕರು ಲಘು ಸಂಪ್ರೋಕ್ಷಣೆ ಮಾಡುವುದಾಗಿ ನಿರ್ಧರಿಸಿದರು. ಇದನ್ನು ಕೇಳಿದ ಭಟ್ಟರ್, ಅವರು ದಿನವೂ ದೇವಾಲಯದ ಒಳಗೆ ಬರುತ್ತಾರೆ ಆದರೆ ಯಾವ ಸಂಪ್ರೋಕ್ಷಣೆ ಮಾಡಿರಲಿಲ್ಲ, ಆದರೆ ಏಕೆ ನಾಯಿ ಬಂದಾಗ ಸಂಪ್ರೋಕ್ಷಣೆ ಮಾಡುವರು ಎಂದು ಪೆರಿಯ ಪೆರುಮಾಳ್ ಹತಿರ ಓಡಿ ಅವರ ಬಳಿ ಹೇಳುತ್ತಾರೆ. ಅಂತಹ ನಮ್ರತೆಯು ಅಂತಹ ಮಹಾನ್ ವಿದ್ವಾಂಸನಾದ ನಂತರವೂ ಅವರು ತನ್ನನ್ನು ನಾಯಿಗಿಂತ ಕೆಳಮಟ್ಟದಲ್ಲಿ ಪರಿಗಣಿಸುತ್ತಾರೆ . ದೇವಲೋಕದಲ್ಲಿ   ದೇವನಾಗಿ   ಜನಿಸುವುದಕ್ಕಿಂತ ಶ್ರೀರಂಗಂನಲ್ಲಿ ನಾಯಿಯಾಗಿ ಜನಿಸಲು ಅವರು ಬಯಸುತ್ತಾರೆ ಎಂದು ಅವರು ಹೇಳುತ್ತಾರೆ.

ವೇದವಲ್ಲಿ :  ಅಜ್ಜಿ , ರಂಗ ನಾಚ್ಚಿಯಾರ್ ಭಟ್ಟರನ್ನು ಬೆಳೆಸಿದರೆ ತಿರುಕ್ಕಚ್ಚಿ ನಂಬಿ ದೇವ ಪೆರುಮಾಳ ಜೊತೆ ಮತನಾಡಿದಂತೆ  ಭಟ್ಟರ್ ಕೂಡ  ಪೆರುಮಾಳ್ ಪಿರಾಟ್ಟಿ ಜೊತೆ ಮಾತನಾಡಿದರೆ?   

ಅಜ್ಜಿ :  ಹೌದು ವೇದವಲ್ಲಿ , ನೀನು ಹೇಳುವುದು ಸರಿ. ಭಟ್ಟರ್ ಕೂಡ ಶ್ರೀರಂಗದಲ್ಲಿ ಪೆರುಮಾಳ್ ಪಿರಾಟ್ಟಿ ಜೊತೆ ಮಾತನಾಡುತ್ತಾರೆ . ನಿಮಗೆ ಗೊತ್ತೇ, ವರ್ಷಕ್ಕೊಮ್ಮೆ , ವೈಕುಂಠ ಏಕಾದಶಿ ದಿನದ ಹಿಂದಿನ ದಿನ , ಪಗಲ್ ಪತ್ತು ಉತ್ಸವದ 10 ನೇ ದಿನ , ನಂಪೆರುಮಾಳ್ ನಾಚ್ಚಿಯಾರ್ ತಿರುಕ್ಕೋಲಂ ನಲ್ಲಿ ಅಲಂಕಾರ ಮಾಡಿಕೊಳ್ಳುತ್ತಾರೆ . ಅವರು ರಂಗ ನಾಚ್ಚಿಯಾರ್ ಅವರ ಎಲ್ಲ ಒಡವೆಗಳನ್ನು ಧರಿಸಿ ನಾಚ್ಚಿಯಾರಂತೆ ಸುಂದರವಾಗಿ ಕೂರುತ್ತಾರೆ. ಹೀಗೆ   ಒಂದು ದಿನ ನಂಪೆರುಮಾಳ್ ಭಟ್ಟರನ್ನು ಕರೆದು ಅವರು ತಾಯಾರಂತೆ ಕಾಣುವರೆ ಎಂದು ಕೇಳುತ್ತಾರೆ.  ಭಟ್ಟರ್ ಯಾವಾಗಲೂ ತಾಯಾರ್ ಕಡೆಗೆ ಭಾಗಶಃರಾಗಿ ನಂಪೆರುಮಾಳ್ ಕಡೆ ಪ್ರೀತಿ ವತ್ಸಲ್ಯದಿಂದ ನೋಡುತ್ತ ಎಲ್ಲಾ ಅಲಂಕಾರಗಳು ಪರಿಪೂರ್ಣವಾಗಿದರೂ ಆಕೆಯ ಕಣ್ಣಲ್ಲಿರುವ ಕರುಣೆ ಎಂಪೆರುಮಾನ್ ಕಣ್ಣಲ್ಲಿ ಕಾಣಲಿಲ್ಲ ಎನ್ನುತ್ತಾರೆ. ಭಟ್ಟರ್ ಅವರ ತಾಯಿ ರಂಗ ನಾಚ್ಚಿಯಾರ್  ಅವರ ಮೇಲೆ ಇದ್ದ ಪ್ರೀತಿ ಅಂತಹದ್ದಾಗಿತ್ತು. ಭಟ್ಟರ್‌ಗೆ ನೂರಾರು ಅನುಯಾಯಿಗಳು  ಅವರ ಕಾಲಕ್ಷೇಪಮ್‌ಗಳನ್ನು ನಿಯಮಿತವಾಗಿ ಆಲಿಸುತ್ತಿದ್ದರು , ಅವರು ತಮ್ಮ  ಮತ್ತು ಅವರ ಬೋಧನೆಗಳಿಂದ ಪ್ರಭಾವಿತರಾಗಿದ್ದರೂ ,  ಭಟ್ಟರ್ ಅವರನ್ನು ಇಷ್ಟಪಡದವರು ಕೂಡ ಕೆಲವರು  ಇದ್ದರು. ಮಹಾನ್ ವ್ಯಕ್ತಿಗಳಿಗೆ ಇದು ತುಂಬಾ ಸಾಮಾನ್ಯವಾಗಿದೆ. ರಾಮಾನುಜರ್  ಅವರಿಗೂ ಇದು ಸಂಭವಿಸಿದೆ. ಒಮ್ಮೆ, ಭಟ್ಟರ್ ಅವರನ್ನು ಇಷ್ಟಪಡದ ಕೆಲವರು ಅಸೂಯೆ ಮತ್ತು ದ್ವೇಷದಿಂದ ಅವನನ್ನು ಗದರಿಸಲು ಪ್ರಾರಂಭಿಸಿದರು. ಯಾರಾದರೂ ನಿಮ್ಮನ್ನು ಗದರಿಸಿದರೆ  ನೀವು ಏನು ಮಾಡುತ್ತೀರಿ, ವ್ಯಾಸ ?

ವ್ಯಾಸ :  ನಾನು ಅವರನ್ನು ಗದರಿಸುವೆ. ನಾನೇಕೆ ಸುಮ್ಮನಿರಬೇಕು ?

ಅಜ್ಜಿ :  ನಮ್ಮಲ್ಲಿ ಹೆಚ್ಚಿನವರು, ವಯಸ್ಕರು ಸಹ ಮಾಡುತ್ತಾರೆ. ಆದರೆ ಭಟ್ಟರ್ ಏನು ಮಾಡಿದ್ದಾರೆಂದು ನಿಮಗೆ ತಿಳಿದಿದೆಯೇ? ತನ್ನನ್ನು ಗದರಿಸಿದ  ವ್ಯಕ್ತಿಗೆ ಅವರು ತನ್ನ ಆಭರಣಗಳು ಮತ್ತು ದುಬಾರಿ ಶಾಲುಗಳನ್ನು ಪ್ರಸ್ತುತಪಡಿಸಿದರು. ಭಟ್ಟರ್ ಅವರಿಗೆ ಕೃತಜ್ಞತೆ ಹೇಳುತ್ತಾರೆ  “ಪ್ರತಿಯೊಬ್ಬ ಶ್ರೀವೈಷ್ಣವನು ಎರಡು ಕೆಲಸಗಳನ್ನು ಮಾಡಬೇಕು – ಎಂಪೆರುಮಾನ್  ವೈಭವವನ್ನು ಹಾಡಿ ಮತ್ತು ತನ್ನದೇ ಆದ ದೋಷಗಳ ಬಗ್ಗೆ ಪ್ರಲಾಪಿಸುವುದು. ಎಂಪೆರುಮಾನ್  ವೈಭವವನ್ನು ಹಾಡುವಲ್ಲಿ ನಾನು ತುಂಬಾ ಆಳವಾಗಿ ಮುಳುಗಿದ್ದೇನೆ ಮತ್ತು ನನ್ನ ದೋಷಗಳ ಬಗ್ಗೆ  ಪ್ರಲಾಪಿಸುವ  ಕರ್ತವ್ಯವನ್ನು ನಾನು ಮರೆತಿದ್ದೇನೆ. ಈಗ ನೀವು ನನ್ನ ಕರ್ತವ್ಯವನ್ನು ಪೂರೈಸುವ ಮೂಲಕ ನನಗೆ ದೊಡ್ಡ ಉಪಕಾರ ಮಾಡಿದ್ದೀರಿ, ಆದ್ದರಿಂದ ನಾನು ನಿಮಗೆ ಮಾತ್ರ ಪ್ರತಿಫಲ ನೀಡಬೇಕು ”. ಅವರ ವೈಭವವು ಅಂತಹದ್ದಾಗಿತ್ತು. ಪರಾಶರ : ಅಜ್ಜಿ, ರಾಮಾನುಜರು ನಂಜೀಯರ್ ಅನ್ನು ಸಂಪ್ರದಾಯಕ್ಕೆ ತರುವುದಾಗಿ ಭಟ್ಟರಿಗೆ ಸೂಚಿಸಿದರು ಎಂದು ನೀವಿ ಹೇಳಿದ್ದು ನನಗೆ ನೆನೆಪಿದೆ . ಭಟ್ಟರ್ ಅದನ್ನು ಹೇಗೆ ಮಾಡಿದರು ?

ಪರಾಶರ ಭಟ್ಟರ್ ( ಅವರ ತಿರುವಡಿಯಲ್ಲಿ ನಂಜೀಯರ್ )- ಶ್ರೀರಂಗಂ

ಅಜ್ಜಿ : ನೀವು ಅದನ್ನು  ನೆನಪಿಸಿಕೊಂಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಪರಾಶರ. ಹೌದು, ರಾಮಾನುಜರ್  ಅವರ ದೈವಿಕ ಸೂಚನೆಗಳ ಪ್ರಕಾರ, ಭಟ್ಟರು ತಿರುನಾರಾಯಣಪುರಂ ಗೆ  ಹೋಗಿ ನಮ್ಮ ಸಂಪ್ರದಾಯಕ್ಕೆ  ನಂಜೀಯರ್ ಅನ್ನು ಕರೆತರುತ್ತಾನೆ. ಈ ಸ್ಥಳದ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ? ಯಾವಾಗ ಎಂದು ಯಾರಿಗಾದರೂ ನೆನಪಿದೆಯೇ?

ವೇದವಲ್ಲಿ : ನನಗೆ ನೆನಪಿದೆ . ತಿರುನಾರಾಯಣಪುರಂ ದೇವಾಲಯವು  ರಾಮಾನುಜರು ಸುಧಾರಿಸಿದ ದೇವಾಲಯಗಳಲ್ಲಿ  ಒಂದು. ರಾಮಾನುಜರ್  ದೇವಾಲಯದ ಆಡಳಿತವನ್ನು ಮೇಲಕೋಟೆ  ನಲ್ಲಿ ಪುನಃ ಜಾರಿಗೊಳಿಸಿದರು.

ಅಜ್ಜಿ :  ತುಂಬಾ ಜಾಣೆ ವೇದವಲ್ಲಿ . ರಾಮಾನುಜರ್  ಮುಸ್ಲಿಂ ಆಕ್ರಮಣಕಾರರಿಂದ ತಿರುನಾರಾಯಣಪುರಂ  ದೇವಾಲಯದ ಸೆಲ್ವಪ್ಪಿಲ್ಲೈ ಉತ್ಸವ ಮೂರ್ತಿಯನ್ನು ಮರಳಿ ತಂದು ದೇವಾಲಯದ ಆಡಳಿತವನ್ನು ಪುನಃಸ್ಥಾಪಿಸಿದರು. ಭಟ್ಟರ್ ಮಾಧವಾಚಾರ್ಯಯರ್  (ನಂಜೀಯರ್  ಅವರ ಸ್ವಂತ ಹೆಸರು  ) ನ ತದೀಯಾರಾಧಾನ  ಕೂಟಮ್  (ಭಾಗವತರಿಗೆ ಆಹಾರವನ್ನು ನೀಡುವ ಸಭಾಂಗಣ) ಗೆ ಹೋಗುತ್ತಾರೆ . ಅವನು ಊಟ ಮಾಡದೆ ಅಲ್ಲಿ ಕಾಯುತ್ತಾನೆ ಮತ್ತು ಮಾಧವಾಚಾರ್ಯಯರ್   ಅವನನ್ನು   ಗಮನಿಸಿ  , ಅವನ ಬಳಿಗೆ ಬಂದು ಅವನು ಯಾಕೆ ಊಟ ಮಾಡುವುದಿಲ್ಲ ಮತ್ತು ಅವನಿಗೆ ಏನು ಬೇಕು ಎಂದು ಕೇಳುತ್ತಾನೆ. ಭಟ್ಟರ್ ಅವರೊಂದಿಗೆ ಚರ್ಚಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ. ಮಾಧವಾಚಾರ್ಯಯರ್  , ಭಟ್ಟರ್ ಬಗ್ಗೆ ಕೇಳಿದ ನಂತರ ಇದನ್ನು ಶೀಘ್ರವಾಗಿ ಅರಿತುಕೊಳ್ಳುತ್ತಾನೆ ಮತ್ತು (ಅವನಿಗೆ ಸವಾಲು ಹಾಕುವ ಧೈರ್ಯ ಯಾರಿಗೂ ಇರುವುದಿಲ್ಲವಾದ್ದರಿಂದ) ಚರ್ಚೆಗೆ ಒಪ್ಪುತ್ತಾನೆ.ಭಟ್ಟರ್ ಮೊದಲಿಗೆ ತಿರುನೆಡುಂದಾಂಡಗಂ ಉಪಯೋಗಿಸಿ ನಂತರ ಶಾಸ್ತ್ರಗಳಿಂದ ಸೂಕ್ತ ಅರ್ಥಗಳನ್ನು ವಿವರಿಸುತ್ತ ಎಂಪೆರುಮಾನ್ ನ ವೈಭವಗಳನ್ನು ಸ್ವಾಮಿತ್ವವನ್ನು ದೃಡೀಕರಿಸಿದರು . ಮಾಧವಾಚಾರ್ಯಯರ್ ಅವರ ಸೋಲು ಒಪ್ಪಿಕೊಂಡು ಭಟ್ಟರ್ ಪಾದ ಕಮಲಗಳಲ್ಲಿ ಬಿದ್ದು ಅವರನ್ನು ತನ್ನ ಆಚಾರ್ಯನಾಗಿ ಒಪ್ಪಿಕ್ಕೊಳ್ಳುತ್ತಾರೆ. ಭಟ್ಟರ್ ಅವರಿಗೆ ಅರುಳಿಚೆಯಲ್ ಕಲಿಯಲು ನಿಶ್ಚಿತ ಆದೇಶ ನೀಡಿ ಸಂಪ್ರದಾಯ ಅರ್ಥಗಳನ್ನು ಬೋಧಿಸಿದರು .ಭಟ್ಟರ್ ಅವರಿಂದ ಹೊರಡಲು  ನಿಯಮನ ಪಡೆದು ಶ್ರೀರಂಗಕ್ಕೆ ಹೊರಟರು. ಅವರು ಶ್ರೀರಂಗಕ್ಕೆ ಸೇರಿದ ತಕ್ಷಣ ಅವರಿಗೆ ಅದ್ಭುತವಾದ ಸ್ವಾಗತ ನೀಡಲಾಯಿತು. ಕಾತುರದಿಂದ ಭಟ್ಟರಿಗಾಗಿ ಕಾಯುತ್ತಿದ್ದ ಪೆರಿಯ ಪೆರುಮಾಳ್, ಅತ್ಯಂತ ಆಸಕ್ತಿಯಿಂದ ನಡೆದ ವೃತ್ತಾಂತವನ್ನು ಭಟ್ಟರಿಂದ ಕೇಳಿದರು. ಭಟ್ಟರ ದಿಗ್ವಿಜಯದಿಂದ ಸಂತೋಷಗೊಂಡ ಪೆರಿಯ ಪೆರುಮಾಳ್ ಭಟ್ಟರ್ ಅವರಿಗೆ ಮತ್ತೊಮ್ಮೆ ತಿರುನೆಡುಂಧಾಂಡಕಂ ಪಠಿಸಲು ಕೇಳುತ್ತಾರೆ . ಭಟ್ಟರ್‌ಗೆ ನಂಪೆರುಮಾಳ್  ಮತ್ತು ರಂಗ ನಾಚ್ಚಿಯಾರ್‌ನ ತಿರುಮೇನಿ   (ದೈವಿಕ ರೂಪ) ಬಗ್ಗೆ ಅಪಾರ ಪ್ರೀತಿ ಇತ್ತು. ಒಮ್ಮೆ ಭಟ್ಟರ್ ಕೆಲವು ಪಾಸುರಮ್‌ಗಳನ್ನು ಮತ್ತು ಅದರ ಅರ್ಥಗಳನ್ನು ಪೆರಿಯ ಪೆರುಮಾಳ್ ಎದುರು ಪಠಿಸಿದಾಗ ಪೆರಿಯ ಪೆರುಮಾಳ್  ಬಹಳ ಸಂತೋಷಗೊಂಡು “ನಿಮಗೆ ಈಗ ಮೋಕ್ಷಮ್ ನೀಡಲಾಗಿದೆ” ಎಂದು ಹೇಳುತ್ತಾರೆ. ಭಟ್ಟರ್ ತುಂಬಾ ಸಂತೋಷವಾಗುತ್ತಾನೆ ಆದರೆ , ಅವರು  ಪರಮಪಧಂನಲ್ಲಿ ನಂಪೆರುಮಾಳ್  ಆಗಿ ಕಾಣಿಸದಿದ್ದರೆ, ಭಟ್ಟರ್ ಒಂದು  ರಂಧ್ರವನ್ನು ಮಾಡಿ ಪರಮಪದಂನಿಂದ ಜಿಗಿದು ಮತ್ತೆ ಶ್ರೀರಂಗಕ್ಕೆ ಬರುತ್ತಾರೆ ಎಂದು  ನಂಪೆರುಮಾಳಿಗೆ  ಹೇಳುತ್ತಾರೆ. ಒಮ್ಮೆ, ಪರಮಪಧನಾಥನ್ಗೆ   2 ಕೈಗಳು ಅಥವಾ 4 ಕೈಗಳನ್ನು ಹೊಂದಿದ್ದೀರಾ ಎಂದು ಅನಂತಾಳ್ವಾನ್  ಭಟ್ಟರ್ ಅವರನ್ನು ಕೇಳಿದಾಗ, ಭಟ್ಟರ್ ಅವರಿಗೆ 2 ಕೈಗಳಿದ್ದರೆ  ಅವನು ಪೆರಿಯ ಪೆರುಮಾಳ್ನಂತೆ  ಕಾಣುತ್ತಾನೆ ಮತ್ತು ಅವನಿಗೆ 4 ಕೈಗಳಿದ್ದರೆ, ಅವನು ನಂಪೆರುಮಾಳ್ನಂತೆ ಕಾಣುತ್ತಾನೆ ಎಂದು ಉತ್ತರಿಸಿದರು. ನಂಪೆರುಮಾಳ್  ಹೊರತುಪಡಿಸಿ ಬೇರೆ ಯಾರನ್ನೂ ನೋಡುವ ಬಗ್ಗೆ ಭಟ್ಟರ್‌ಗೆ ಯೋಚಿಸಲಾಗಲಿಲ್ಲ. ಅವರು ಪೆರುಮಾಳ್ನ  ಎಲ್ಲಾ ದಿವ್ಯ ತಿರುಮೇನಿಗಳನ್ನು ನಂಪೆರುಮಾಳ್ ಗೆ  ಸಂಬಂಧಿಸಿದ್ದಾರೆ. ನಂಪೆರುಮಾಳ್  ಅವರಿಗೆ ಮೋಕ್ಷಮ್ ಅನ್ನು ನೀಡುತ್ತಿದ್ದಂತೆ, ಭಟ್ಟರ್, ತನ್ನ ತಾಯಿ ಆಂಡಾಲ್ ಅವರ ಆಶೀರ್ವಾದದೊಂದಿಗೆ, ಈ ಜಗತ್ತನ್ನು ತೊರೆದು ಪರಮಪದದಲ್ಲಿ ಎಂಪೆರುಮಾನ್ ಗೆ ನಿತ್ಯ ಕೈಂಕರ್ಯ ಮಾಡಲು ಇತರ ಆಚಾರ್ಯರೊಂದಿಗೆ ಸೇರಿದರು. ಅವರು ಮುಂದಿನ  ಆಚಾರ್ಯನ್ ಆಗುವ ನಂಜೀಯರ್‌ಗೆ ನಮ್ಮ ಶ್ರೀವೈಷ್ಣವ ಸಂಪ್ರದಾಯದ ಮಾರ್ಗವನ್ನು  ಹಾದುಹೋಗುತ್ತಾರೆ.

ಅತ್ತುೞಾಯ್: ಅಜ್ಜಿ , ಭಟ್ಟರ್ ಅವರ ಜೀವನವು ಕೇಳಲು ತುಂಬಾ ಆಸಕ್ತಿದಾಯಕವಾಗಿದೆ. ಅವರು ನಂಪೆರುಮಾಳ್  ಬಗ್ಗೆ ತೋರುತ್ತಿರುವ ಭಕ್ತಿ ಮತ್ತು ಅವರ ಬಂಧ ಮನಸ್ಸಿಗೆ ತೃಪ್ತಿ ಕೊಡುತ್ತದೆ. ಅಂತಹ ಶ್ರೇಷ್ಠ ಗಂಡ ಮತ್ತು ಗಂಡು ಮಕ್ಕಳನ್ನು ಹೊಂದಲು ಆಂಡಾಲ್  ಧನ್ಯಳು ಅಲ್ಲವೇ  .

ಅಜ್ಜಿ : ಹೌದು ಅತ್ತುೞಾಯ್. ಆಂಡಾಲ್ ನಿಜವಾಗಿಯೂ ಧನ್ಯಳು. ನಾಳೆ , ನಿಮಗೆ ನಮ್ಮ ಮುಂದಿನ ಆಚಾರ್ಯರಾದ ನಂಜೀಯರ್‌ ಬಗ್ಗೆ ಹೆಚ್ಚಿಗೆ ಹೇಳುವೆನು. ಈಗ ಈ  ಹಣ್ಣುಗಳನ್ನು ತಗದುಕೊಂಡು ಮನೆಗೆ ಹೋಗಿ. ಮಕ್ಕಳು ಭಟ್ಟರ ದಿವ್ಯ ಚರಿತ್ರೆಯನ್ನು ನೆನೆಯುತ್ತ ಮನೆಗೆ ಹಿಂತಿರುಗಿದರು

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://pillai.koyil.org/index.php/2016/08/beginners-guide-bhattar/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment