ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು
ಮರುದಿನ ಪರಾಶರ ಮತ್ತು ವ್ಯಾಸರನ್ನು ಅಜ್ಜಿ ಉತ್ತರ ವೀಧಿಯ ಮಾರ್ಗದಿಂದ ಶ್ರೀರಂಗ ದೇವಾಲಯಕ್ಕೆ ಕರೆದು ಕೊಂಡು ಹೋಗುತ್ತಾರೆ.
ವ್ಯಾಸ: ಅಜ್ಜಿ ಇದು ಯಾರ ಸನ್ನಿಧಿ?
ಆಂಡಾಳಜ್ಜಿ : ವ್ಯಾಸ, ಇದು ಶ್ರೀ ರಂಗನಾಯಕಿ ತಾಯಾರ್ ಸನ್ನಿಧಿ.
ಪರಾಶರ : ಅಜ್ಜಿ,ಆದರೆ ನಾವು ನಿನ್ನೆ ಶ್ರೀ ರಂಗನಾಥರನ್ನು ಮೆರವಣಿಗೆಯಲ್ಲಿ ನೋಡಿದೆವು .
ಆಂಡಾಳಜ್ಜಿ :ಹೌದು ಪರಾಶರ, ಅದು ಸರಿ .ಏಕೆಂದರೆ ಶ್ರೀ ರಂಗನಾಯಕಿ ತಾಯಾರ್ ಅವರ ಸನ್ನಿಧಿಯಿಂದ ಹೊರಗೆ ಬರುವುದಿಲ್ಲ . ಶ್ರೀ ರಂಗನಾಥನು ಕೂಡ ಅವರನ್ನು ಕಾಣಬೇಕಾದರೆ, ಸ್ವತಃ ಅವರೇ ಬರಬೇಕು.
ಪರಾಶರ : ಓಹ್! ಸರಿ ಅಜ್ಜಿ . ಅಂದರೆ ಅವರನ್ನು ಕಾಣಬೇಕಾದರೆ ನಾವೇ ಅಲ್ಲಿಗೆ ಹೋಗಬೇಕು.ಶ್ರೀರಂಗಕ್ಕೆ ಬಂದಾಗ,ದೇವಾಲಯಕ್ಕೆ ಬರಲು ಈಗ ಮತ್ತೊಂದು ಕಾರಣ ಸಿಕ್ಕಿದೆ.
ತಾಯಾರನ್ನು ದರ್ಶನ ಮಾಡಿದ ನಂತರ ಆವರು ಹೊರಗೆ ಬರುತ್ತಾರೆ.
ಆಂಡಾಳಜ್ಜಿ : ನಾನೀಗ ನಿಮ್ಮಿಬ್ಬರಿಗೆ ಒಂದು ಪ್ರಶ್ನೆ ಕೇಳುತ್ತೇನೆ . ನೀವು ಸಂಜೆ ಆಟವಾಡಿ ತಡವಾಗಿ ಮನೆಗೆ ಬಂದಾಗ, ನಿಮ್ಮ ಅಪ್ಪ ಹೇಗೆ ವರ್ತಿಸುತ್ತಾರೆ?
ವ್ಯಾಸ : ಅಜ್ಜಿ, ಆಗ ಅವರು ಕೋಪಗೊಳ್ಳುತ್ತಾರೆ.
ಆಂಡಾಳಜ್ಜಿ : ನಿಮ್ಮ ಅಪ್ಪ ಶಿಕ್ಷಿಸುತ್ತಾರೆಯೇ ?
ಪರಾಶರ : ತುಂಬಾ ಅಪರೂಪವಾಗಿ ನಾವು ಶಿಕ್ಷೆ ಅನುಭವಿಸುತ್ತೇವೆ ಅಜ್ಜಿ. ಅವರು ಕೋಪಗೊಂಡಾಗ , ಅಮ್ಮ ಅವರನ್ನು ತಡೆಯುತ್ತಾರೆ.
ಆಂಡಾಳಜ್ಜಿ: ಅದೇರೀತಿ ನಾವು ಪೆರುಮಾಳಿಗೆ ಇಷ್ಟವಾಗದಿರುವ ಕೆಲಸಗಳನ್ನು ಮಾಡಿದಾಗ ನಮ್ಮನ್ನು ಶಿಕ್ಷಿಸಬೇಕೆಂದು ಅವರಿಗೆ ಅನಿಸುತ್ತದೆ, ಅಂತಹ ಸಮಯದಲ್ಲಿ, ತಾಯಾರ್ ಪೆರುಮಾಳೊಡನೆ ಮಾತನಾಡಿ ನಮ್ಮನ್ನು ರಕ್ಷಿಸುತ್ತಾಳೆ.
ಪರಾಶರ : ಅದು ಸರಿ ಅಜ್ಜಿ, ಆಕೆ ನಮ್ಮ ತಾಯಿಯಂತೆ.
ಆಂಡಾಳಜ್ಜಿ : ನಂಪೆರುಮಾಳರು ನಮ್ಮ ರಕ್ಷಣೆಗಾಗಿ ಆಯುಧಗಳನ್ನು ಹಿಡಿದಿರುತ್ತಾರೆ , ಆದರೆ ಕೋಮಲ ಸ್ವಭಾವವುಳ್ಳ ತಾಯಾರ್ ಕಮಲದ ಹೂವುಗಳನ್ನು ಹಿಡಿದಿರುತ್ತಾರೆ. ಪೆರುಮಾಳ ಸನ್ನಿಧಿಯನ್ನು ತಲುಪಲು ರಂಗರಂಗ ಗೋಪುರವನ್ನು ದಾಟಿ, ನಂತರ ನಾಳಿಕೆಟ್ಟಾಣ್ ವಾಸಲ್ (ಪ್ರವೇಶ ದ್ವಾರ) , ಅದನಂತರ ಗರುಡ ಸನ್ನಿಧಿ , ಧ್ವಜಸ್ಥಂಭ ಮತ್ತು ಶ್ರೀ ರಂಗನಾಥರ ಸನ್ನಿಧಿ. ಆದರೆ ಉತ್ತರ ವೀಧಿಯಿಂದ ಒಳಗೆ ಬಂದೊಡನೆ ತಾಯಾರ್ ಸನ್ನಿಧಿ ತಲುಪುತ್ತೇವೆ. ಆಕೆ ನಮಗೆ ಅಷ್ಟು ಹತ್ತಿರ.
ಪರಾಶರ : ಹೌದು ಅಜ್ಜಿ
ಆಂಡಾಳಜ್ಜಿ : ಸೀತಾಮಾತೆಯಂತೆ ಶ್ರೀ ರಾಮನಿಂದ ಕಾಕಾಸುರನನ್ನು ಕಾಪಾಡಿದಳು. ಇಂದ್ರನ ಮಗ ಕಾಗೆಯ ಸ್ವರೂಪದಲ್ಲಿ ಬಂದು ಆಕೆಗೆ ತೊಂದರೆ ಕೊಟ್ಟ . ಶ್ರೀ ರಾಮನು ಅವನನ್ನು ಶಿಕ್ಷಿಸಲಿದ್ದರು. ಆದರೆ ಆಕೆ ಕರುಣೆಯಿಂದ ಕಾಕಾಸುರನನ್ನು ಕಾಪಾಡಿದಳು. ಅದೇರೀತಿ , ಶ್ರೀ ರಾಮನು ರಾವಣನನ್ನು ಸಂಹಾರಿಸಿದ ಮೇಲೆ, ಅಶೋಕ ವನದಲ್ಲಿದ್ದ ರಾಕ್ಷಸಿಗಳನ್ನ ಕಾಪಾಡಿದಳು. ಆಕೆಗೆ ತೊಂದರೆ ಕೊಡುತ್ತಾರೆಂದು ಹನುಮಂತನು ಅವರನ್ನು ವಧಿಸಲು ಇದ್ದನು. ಆದರೆ ಆಕೆ ಹನುಮಂತನಿಗೆ ಅವರು ನಿಸ್ಸಹಾಯಕರಾಗಿ ರಾವಣನ ಆಜ್ಞೆಯನ್ನು ಪಾಲಿಸಿದರೆಂದು ವಿವರಿಸಿ, ಕಾಪಾಡಿದಳು.ಹಾಗಾಗಿ , ಮಮತೆ ವಾತ್ಸಲ್ಯದಿಂದ ಆಕೆ ಸದಾ ನಮ್ಮೆಲ್ಲರನ್ನು ರಕ್ಷಿಸುವಳು.
ಪರಾಶರ ಮತ್ತು ವ್ಯಾಸ: ಆಕೆ ನಮ್ಮನ್ನು ಸದಾ ಕಾಪಾಡಬೇಕೆಂದು ಆಶಿಸುತ್ತೇವೆ.
ಆಂಡಾಳಜ್ಜಿ : ಖಂಡಿತವಾಗಿ. ನಮ್ಮನ್ನು ರಕ್ಷಿಸಲು ಸದಾ ಆಕೆ ಪೆರುಮಾಳಿಗೆ ಹೇಳುವುದು ಆಕೆಯ ಪ್ರಮುಖ ಕರ್ತವ್ಯ.
ಪರಾಶರ : ಆಕೆ ಅಷ್ಟೇ ಮಾಡುವುದೇ ಅಜ್ಜಿ ? ಅಂದರೆ “ನಮಗಾಗಿ ಪೆರುಮಾಳ್ ಹತ್ತಿರ ಮಾತನಾಡುವುದು “?
ಆಂಡಾಳಜ್ಜಿ : ಅದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ನೀವು ನಿಮ್ಮ ಹೆತ್ತವರಿಗೆ ಸೇವೆ ಮಾಡುವಾಗ ನಿಮ್ಮ ತಂದೆಗೆ ಮಾತ್ರ ಸೇವೆ ಮಾಡುವರೆ?
ಪರಾಶರ : ಇಲ್ಲ ಅಜ್ಜಿ, ಅಪ್ಪ ಅಮ್ಮ ಇಬ್ಬರು ನಮಗೆ ತುಂಬಾ ಇಷ್ಟ. ಅವರಿಬ್ಬರಿಗೂ ಸೇವೆ ಮಾಡಲು ನಮಗೆ ಇಷ್ಟ.
ಆಂಡಾಳಜ್ಜಿ : ಅದೇರೀತಿ , ಪೆರುಮಾಳನ್ನು ತಲುಪಲು ತಾಯಾರ್ ಶಿಫಾರಸು ಮಾಡಿ ನಮಗೆ ಸಹಾಯ ಮಾಡುವಳು.ಆದರೆ ನಾವು ಪೆರುಮಾಳನ್ನು ತಲುಪಿದ ನಂತರ , ನಮ್ಮ ಭಕ್ತಿ ಪ್ರೀತಿಗಳನ್ನು ಪೆರುಮಾಳೊಂದಿಗೆ ಸ್ವೀಕರಿಸುತ್ತಾರೆ.
ಪರಾಶರ ಮತ್ತು ವ್ಯಾಸ : ವಾಹ್! ಇದು ಸುಲಭವಾಗಿ ಅರ್ಥವಾಗಿದೆ ಅಜ್ಜಿ. ಮುಂದಿನ ಬಾರಿ ಇನ್ನೂ ಹೆಚ್ಚಿಗೆ ಕೇಳಬೇಕೆಂದಿದೆ. ನಾವೀಗ ಸ್ವಲ್ಪ ಹೊತ್ತು ಹೊರಗೆ ಆಟವಾಡುತ್ತೇವೆ.
ಪರಾಶರ ಮತ್ತು ವ್ಯಾಸ ಆಡಲು ಹೊರಗೆ ಓಡುತ್ತಾರೆ!
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : http://pillai.koyil.org/index.php/2014/08/beginners-guide-sri-mahalakshmis-motherly-nature/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org