ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಶ್ರೀಮನ್ನಾರಾಯಣ ಯಾರು?

ವ್ಯಾಸ ಮತ್ತು ಪರಾಶರ ಗಳೆಯರೊಂದಿಗೆ ಆಟವಾಡಿದಮೇಲೆ ಆಂಡಾಳಜ್ಜಿ ಮನೆಗೆ ಹಿಂತಿರುಗುವರು. ಅವರು ಆಂಡಾಳಜ್ಜಿ ಹೂವು, ಹಣ್ಣು, ಕಾಯಿಗಳನ್ನು ಜೋಡಿಸುವುದನ್ನು ಕಾಣುತ್ತಾರೆ.

ವ್ಯಾಸ : ಅಜ್ಜಿ, ಯಾರಿಗಾಗಿ ಈ ಹೂವು ಹಣ್ಣು ಜೋಡಿಸಿಟ್ಟಿರುವೆ?

ಆಂಡಾಲಜ್ಜಿ : ಶ್ರೀರಂಗನಾಥನ ಮೆರವಣಿಗೆಯ ಹೊತ್ತಾಗಿದೆ, ದಾರಿಯಲ್ಲಿ ಅವರು ನಮ್ಮನ್ನು ಕಾಣ ಬರುವರು . ನಮ್ಮನ್ನು ಯಾರಾದರು ಅತಿಥಿಯಾಗಿ ಕಾಣಲು ಬಂದಾಗ, ವಿಶೇಷವಾಗಿ ಹಿರಿಯರು ,ಅವರು ನಮ್ಮೊಂದಿಗೆ ಇರುವಾಗ ಅವರ ಸೇವೆ ಮಾಡುವುದು ನಮ್ಮ ಕರ್ತವ್ಯ. ಅದು ರಾಜಾದಿರಾಜರು ಬಂದಾಗ , ಅವರಿಗೆ ನಿಶ್ಚಯವಾಗಿ ತಕ್ಕ ಸೇವೆ ಮಾಡಬೇಕು.

ಪರಾಶರ : ಓಹ್ ಹೌದು ಅಜ್ಜಿ , ಹಾಗಾದರೆ ನಾನು ಶ್ರೀರಂಗನಾಥನು ಬಂದಾಗ ನಾನು ಹಣ್ಣುಗಳನ್ನು ಕೊಡುವೆನು.

ಆಂಡಾಲಜ್ಜಿ: ಒಳ್ಳೆಯದು ,ಪರಾಶರ. ಬಾ ನಾವು ಬಾಗಿಲಲ್ಲಿ ಅವರು ಬರುವುದಕ್ಕೆ ಕಾಯೋಣ.

ನಂಪೆರುಮಾಳರು (ಶ್ರೀರಂಗನಾಥ) ಅಂಡಾಲಜ್ಜಿಯ ಮನೆಯ ಮುಂದೆ ಆಗಮಿಸುತ್ತಾರೆ. ಶ್ರೀರಂಗನಾಥನಿಗೆ ಹೂವು ಹಣ್ಣು ಕೊಡಲು ಪರಾಶರನು ಉತ್ಸಾಹದ ಕಾಂತಿಯಿಂದ ಹೊಳೆಯುತ್ತಾನೆ.

ಪರಾಶರ : ಅಜ್ಜಿ, ಅವರು ಎಡಗೈಯಲ್ಲಿ ಏನು ಹಿಡಿದುಕೊಂಡಿದ್ದಾರೆ.

ಅವರ ಭುಜಗಳ ಮೇಲೆ ಬಲಗೈಯಲ್ಲಿ ಚಕ್ರಂ ( ಚಕ್ರ), ಎಡಗೈಯಲ್ಲಿ ಶಂಖು (ಶಂಖ), ಬಲಗೈಯಲ್ಲಿ ಅಭಯ ಹಸ್ತಮ್  ( ರಕ್ಷಣೆಯ ಭಂಗಿ ), ಅವರ ಭುಜಗಳ ಕೆಳಗೆ ಎಡಗೈಯಲ್ಲಿ ಗಧೆ

ಆಂಡಾಳಜ್ಜಿ : ಪರಾಶರ , ಅವರು ಎಡಗೈಯಲ್ಲಿ ಗಧೆ ಹಿಡಿದಿದ್ದಾರೆ. ಅರ್ಚಾವತಾರದಲ್ಲಿ ಶ್ರೀರಂಗನಾಥನಿಗೆ ನಾಲ್ಕು ಕೈಗಳಿರುತ್ತವೆ. ಅವರ ಭುಜಗಳ ಮೇಲೆ ಇನ್ನೊಂದು ಎಡಗೈಯಲ್ಲಿ ಅವರು ಶಂಖ ಹಿಡಿದು , ಭುಜಗಳ ಮೇಲೆ ಇನ್ನೊಂದು ಬಲಗೈಯಲ್ಲಿ ಸುದರ್ಶನ ಚಕ್ರಂ ಹಿಡಿದಿದ್ದಾರೆ. ನಮ್ಮನ್ನು ಸದಾ ಕಾಪಾಡುವೆನೆಂದು, ನಮ್ಮ ಕಷ್ಟಗಳನ್ನು ತೊಲಗಿಸಲು,  ನಮಗೆ ತೋರಲು ಅವರು ತಮ್ಮ ಆಯುಧಗಳನ್ನು ಪ್ರದರ್ಶಿಸುತ್ತಾರೆ.

ವ್ಯಾಸ : ಅಜ್ಜಿ, ಅವರ ಬಲಗೈಯ ವಿಶೇಷವೇನು?

ಅಭಯ ಹಸ್ತ

ಆಂಡಾಳಜ್ಜಿ :ಅದು ಒಳ್ಳೆಯ ಪ್ರಶ್ನೆ . “ ನಾನು ಇಲ್ಲಿ ನಿನ್ನನ್ನು ಕಾಪಾಡಲು ಇರುವೆ, ಭಯ ಪಡಬೇಡ” ಎಂದು ವಾತ್ಸಲ್ಯದಿಂದ ಹೇಳಲು ಅವರ ಬಲಗೈ ನಮ್ಮೆಲ್ಲರಿಗೆ ಹಾಗೆ ತೋರಿಸುತ್ತಾರೆ. ಹೇಗೆ, ಒಂದು ಹಸು ,ಕರು ಅದಕ್ಕೆ ಮುಂದೆ ಹೇಗಾದರೂ ಪ್ರವರ್ತಿಸಲಿ, ಕರುಗೆ ಬೇಕಾದಾಗ ಬರುವುದೋ ಹಾಗೆ.

ಎತ್ತರವಾದ ಕಿರೀಠ (ಪ್ರಾಬಲ್ಯತೆ ) ಮತ್ತು ನಗು ಮುಖ (ಸರಳತೆ)

ವ್ಯಾಸ : ಅಜ್ಜಿ, ಮತ್ತೆ ಅವರ ತಲೆಯ ಮೇಲೆ ಏನಿದೆ ?

ಆಂಡಾಳಜ್ಜಿ : ಅದು ಕಿರೀಟ , ವ್ಯಾಸ . ಅದು ಅವರು ಈ ಜಗತ್ತಿಗೆಲ್ಲ ನಾಯಕ ಎಂದು ತೋರಿಸುವುದು.

ಪರಾಶರ:ಆ ಕಿರೀಟವೂ ಬಹಳ ಚೆನ್ನಾಗಿದೆ ಅಜ್ಜಿ. ಅವರ ಚೆಲುವಾದ ಮುಖಕ್ಕೆ ಹೊಂದುತ್ತದೆ.

ಆಂಡಾಳಜ್ಜಿ: ಹೌದು, ಅವರಿಗೆ ಅತ್ಯಂತ ಚೆಲುವಾದ ಮುಖವಿದೆ. ಅವರಿಗೆ ನಮ್ಮೊಂದಿಗೆ ಇರುವುದು ಸಂತೋಷ , ಅದರಲ್ಲೂ ನಿನ್ನಂತ ಮಕ್ಕಳೊಂದಿಗೆ ಇರುವುದು ಬಹಳ ಸಂತೋಷ.

ಪರಾಶರ: ಹೌದು ಅಜ್ಜಿ, ನನ್ನು ಹತ್ತಿರದಿಂದ ನೋಡಿದೆ . ಅವರ ಪಾದಗಳನ್ನು ಮತ್ತು ಅವರು ನಗುವುದು ನೋಡಿದೆ.

ಆಂಡಾಳಜ್ಜಿ: ಓಹ್ ,ಒಳ್ಳೆಯದು , ಪರಾಶರ. ಮೃದುವಾಗಿ ಚೆಲುವಾಗಿರುವುದರಿಂದ ನಾವು ಸಹಜವಾಗಿ “ ಪಾದಕಮಲ” ಎಂದು ಹೇಳುತ್ತೇವೆ.  ಅವರ ನಗುಮುಖ ಅವರು ಸರಳವಾಗಿ ಹಿಗ್ಗಿನಿಂದ ನಮ್ಮೊಂದಿಗೆ ಇರಲು ಇಳಿದು ಬಂದಿದ್ದಾರೆ ಎಂದು ತೋರಿಸುತ್ತದೆ. ಅವರ ಪಾದಕಮಲಗಳು ಪೀಠದ ಮೇಲೆ ಧೃಡವಾಗಿ ಇರುವುದು , ಹಾಗೆಂದರೆ ಅವರು ನಮಗಾಗಿ ಬಂದಿದ್ದಾರೆ ಮತ್ತು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಅರ್ಥ . ಹಾಗಾಗಿ, ಇಂದು ನಾವು ಅವರ ಅರ್ಚಾವತಾರದಲ್ಲಿ ಪ್ರಮುಖ ಕಲ್ಯಾಣ ಗುಣಗಳನ್ನು ತಿಳಿದಿದ್ದೇವೆ , ಅವು – ವಾತ್ಸಲ್ಯಂ ( ತಾಯ್ಮೈ -ನಮ್ಮನ್ನು ರಕ್ಷಿಸಲು ಅವರು ತಮ್ಮ  ಕೈ ತೋರಿಸುವುದು ), ಸ್ವಾಮಿತ್ವಂ ( ಪ್ರಬಲತೆ -ಎತ್ತರವಾದ ಕಿರೀಟ ), ಸೌಶೀಲ್ಯಂ ( ಅವರು ನಗು ಮುಖದೊಂದಿಗೆ ನಮ್ಮಲ್ಲಿ ಸರಳವಾಗಿ ಇರುವುದು ) ಮತ್ತು ಸೌಲಭ್ಯಂ ( ಸುಲಭವಾಗಿ  ಅವರನ್ನು ಅನುಸರಿಸಬಹುದು – ಅವರ ಪಾದಕಮಲಗಳನ್ನು ಸಹಜವಾಗಿ ಹಿಡಿಯಬಹುದು)

ವ್ಯಾಸ ಮತ್ತು ಪರಾಶರ ಆಶ್ಚರ್ಯದಿಂದ ಮೆರವಣಿಗೆ ಅವರ ಮುಂದೆ ಹೋಗುವುದನ್ನು ನೋಡುತ್ತಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/08/beginners-guide-sriman-narayanas-divine-archa-form-and-qualities/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment