ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ನಮ್ಮಾೞ್ವಾರ್ ಮತ್ತು ಮಧುರಕವಿ ಆೞ್ವಾರ್
ವ್ಯಾಸ ಮತ್ತು ಪರಾಶರ ಆಂಡಾಳಜ್ಜಿ ಬಳಿಗೆ ಆಳ್ವಾರುಗಳ ಕಥೆ ಕೇಳಲು ಹೋಗುತ್ತಾರೆ.
ಆಂಡಾಳಜ್ಜಿ : ವ್ಯಾಸ ಮತ್ತು ಪರಾಶರ! ಇಂದು ನಾನು ಒಬ್ಬ ರಾಜನಾದ ಆಳ್ವಾರ್ ಬಗ್ಗೆ ಹೇಳುತ್ತೇನೆ.
ವ್ಯಾಸ : ಯಾರದು ಅಜ್ಜಿ ? ಅವರ ಹೆಸರೇನು ? ಅವರು ಎಲ್ಲಿ ಯಾವಾಗ ಜನಿಸಿದರು ? ಅವರ ವೈಶಿಷ್ಟ್ಯವೇನು ?
ಆಂಡಾಳಜ್ಜಿ : ಅವರ ಹೆಸರು ಕುಲಶೇಖರ ಆಳ್ವಾರ್. ಅವರು ಮಾಘ ಮಾಸದ ಪುನರ್ವಸು ನಕ್ಷತ್ರದಂದು ಕೇರಳ ದೇಶದ ತಿರುವಂಜಿಕ್ಕಲಂ ನಲ್ಲಿ ಜನಿಸಿದರು. ಅವರು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದರು .
ಪರಾಶರ : ಕ್ಷತ್ರಿಯ ಎಂದರೇನು ಅಜ್ಜಿ ?
ಆಂಡಾಳಜ್ಜಿ : ಕ್ಷತ್ರಿಯ ಎಂದರೆ ಸಹಜವಾಗಿ ನಿರ್ವಾಹಕರು , ರಾಜ, ದೊರೆ ಇತ್ಯಾದಿ. ಅವರು ದೇಶವನ್ನು ಆಳುವರು, ಪ್ರಜೆಗಳನ್ನು ರಕ್ಷಿಸುವರು ಇತ್ಯಾದಿ.
ವ್ಯಾಸ : ಓಹ್, ನಮ್ಮ ಶ್ರೀರಂಗದಲ್ಲಿ ರಂಗರಾಜನಂತೆ , ನಮನ್ನು ಆಳುತ್ತಾ ರಕ್ಷಿಸುವರು .
ಆಂಡಾಳಜ್ಜಿ : ಹೌದು, ನಮ್ಮ ಪೆರುಮಾಳ್ ಎಲ್ಲರಿಗೂ ರಾಜ. ಆದರೆ ಪ್ರತಿಯೊಂದು ರಾಜ್ಯವು ಒಬ್ಬ ರಾಜನಿಂದ ಆಳಲ್ಪಡುತ್ತದೆ ಮತ್ತು ಆ ರಾಜರನ್ನು ಪ್ರಜೆಗಳು ಆದರಿಸುತ್ತಾರೆ. ಕಥೆಗೆ ಹಿಂತಿರುಗೊಣ , ಅವರು ಕ್ಷತ್ರಿಯ ಕುಟುಂಬದಲ್ಲಿ ಜನಿಸಿದರಿಂದ, ಅವರು ಸ್ವತಂತ್ರ ಮತ್ತು ಸ್ವನಿಯಂತ್ರಿತರೆಂದು ಭಾವಿಸಿದರು. ಆದರೆ ಶ್ರೀಮನ್ನಾರಾಯಣನ ಕೃಪೆಯಿಂದ, ಅವರು ಸಂಪೂರ್ಣವಾಗಿ ಪೆರುಮಾಳಿನ ಅಧೀನವಾಗಿದ್ದಾರೆ ಎಂದು ಅವರಿಗೆ ತಿಳಿದು , ಪೆರುಮಾಳಿನ ದಿವ್ಯ ವೈಭವಗಳನ್ನು ಕೇಳುವ ಆಸಕ್ತಿ ಬೆಳಸಿಕೊಂಡರು ಮತ್ತು ಪೆರುಮಾಳಿನ ಭಕ್ತರಿಗೆ ಸೇವೆ ಮಾಡುವಲ್ಲಿ ತೊಡಗಿದರು.
ಪರಾಶರ : ಅಜ್ಜಿ ,ಪೆರುಮಾಳಿನ ಭಕ್ತರಿಗೆ ಸೇವೆ ಮಾಡುವುದರಲ್ಲಿ ಮಧುರಕವಿ ಆಳ್ವಾರರಂತೆ ಇರಬೇಕು ಎಂದು ನೀವು ಹೇಳಿದ್ದು ನೆನಪಿದೆ ಅಜ್ಜಿ . ಅವರು ಹಾಗಿದ್ದರೆ ಅಜ್ಜಿ ?
ಆಂಡಾಳಜ್ಜಿ : ತುಂಬಾ ಒಳ್ಳೆಯದು ಪರಾಶರ. ಹೌದು, ಕುಲಶೇಖರ ಆಳ್ವಾರ್ ಗೆ ಶ್ರೀ ರಾಮಯಣಂ ಬಗ್ಗೆ ಅಪಾರ ಆಸಕ್ತಿ ಇತ್ತು. ನೋಡಿ, ನಮ್ಮ ಸಂಪ್ರದಾಯದಲ್ಲಿ “ಶ್ರೀ ರಾಮ“ ರನ್ನು ಪ್ರೀತಿಯಿಂದ “ಪೆರುಮಾಳ್” ಎಂದು ಕರೆಯುತ್ತಾರೆ. ಕುಲಶೇಖರ ಆಳ್ವಾರ್ಗೆ ಶ್ರೀರಾಮ ಮತ್ತು ರಾಮಾಯಣಂ ಬಗ್ಗೆ ಇರುವ ಅಪಾರ ಆಸಕ್ತಿಯಿಂದ ಅವರನ್ನು “ಕುಲಶೇಖರ ಪೆರುಮಾಳ್ “ ಎಂದು ಕರೆಯುತ್ತಾರೆ . ಅವರು ಪ್ರತಿದಿನ ಮಹಾನ್ ವಿದ್ವಾಂಸರಿಂದ ರಾಮಾಯಣ ಕೇಳುತ್ತಿದ್ದರು ಮತ್ತು ಆ ಘಟನೆಗಳಲ್ಲಿ ಮುಳುಗಿದ್ದರು. ಒಮ್ಮೆ, ಶ್ರೀರಾಮನನ್ನು 14000 ರಾಕ್ಷಸರು ದಾಳಿ ಮಾಡಿದರು ಎಂದು ಕೇಳಿದಾಗ , ಅವರು ಬಹಳ ದುಃಖಿತರಾಗಿ , ಅವರ ಸೈನ್ಯವನ್ನು ಶ್ರೀ ರಾಮನ ಸಹಾಯಕ್ಕಾಗಿ ಕಳುಹಿಸಿದರು . ನಂತರ ಪೆರುಮಾಳಿನ ಭಕ್ತರು ಅವರನ್ನು ಸಮಾಧಾನಗೊಳಿಸಿ, ಶ್ರೀ ರಾಮನು ಒಬ್ಬನೇ ಈಗಾಗಲೇ ರಾಕ್ಷಸರನ್ನು ಪರಾಜಯಗೊಳಿಸಿದ್ದಾರೆ ಎಂದು ವಿವರಿಸುವರು.
ವ್ಯಾಸ : ಅವರು ಸದಾ ಪೆರುಮಾಳ್ ಬಗ್ಗೆ ಕೇಳುತ್ತಾ ಇದ್ದಾಗ ಹೇಗೆ ರಾಜ್ಯ ಆಳಿದರು ಅಜ್ಜಿ ?
ಆಂಡಾಳಜ್ಜಿ : ಹೌದು,ಇದು ಒಳ್ಳೆಯ ಪ್ರಶ್ನೆ. ಅವರಿಗೆ ರಾಜ್ಯ ವ್ಯವಹಾರದಲ್ಲಿ ಗಮನ ಕಷ್ಟವಾಗಿತ್ತು. ಅವರ ಮಂತ್ರಿಗಳು ಪೆರುಮಾಳಿನ ಭಕ್ತರಾದ ಭಾಗವತರ ಬಗ್ಗೆ ಇದ್ದ ಅಭಿಮಾನವನ್ನು ನಿವಾರಿಸಲು ಯೋಜನೆ ಮಾಡಿದರು. ಅವರು ಅರಮನೆಯಲ್ಲಿರುವ ಅವರ ದೇವಾಲಯದಿಂದ ಪೆರುಮಾಳ್ ಹಾರವನ್ನು ಕದ್ದು, ಭಾಗವತರು ಕದ್ದಿದ್ದಾರೆಂದು ತಿಳಿಸಿದರು. ಅವರು ಮಂತ್ರಿಗಳ ಮಾತುಗಳನ್ನು ನಂಬಲಿಲ್ಲ. ಅಂದು, ಹಾವನ್ನು ಹೊಂದಿರುವ ಪಾತ್ರೆಯಲ್ಲಿ ಕೈ ಹಾಕುವ ಮೂಲಕ ಪದಗಳನ್ನು ಸಾಬೀತುಪಡಿಸುವ ಪ್ರಾಚೀನ ಅಭ್ಯಾಸವಾಗಿತ್ತು. ಒಬ್ಬರು ಸತ್ಯದ ಬಗ್ಗೆ ಬಹಳ ವಿಶ್ವಾಸ ಹೊಂದಿರಬೇಕು ಮತ್ತು ಇದನ್ನು ಮಾಡಲು ಧೈರ್ಯವಾಗಿರಬೇಕು. ಆಳ್ವಾರರು ಹಾವು ಇರುವ ಮಡಿಕೆಯನ್ನು ತರಲು ಕೇಳಿದರು. ಅವರು ಧೈರ್ಯದಿಂದ ಮಡಿಕೆಯೊಳಗೆ ಕೈ ಇಟ್ಟು ಭಾಗವತರು ನಿರಪರಾಧಿಗಳು ಎಂದು ಘೋಷಿಸಿದರು.
ಪರಾಶರ : ಹೌದಾ ಅಜ್ಜಿ .
ಆಂಡಾಳಜ್ಜಿ : ಹೌದು, ಮತ್ತೆ , ಹೇಗೆ ಶ್ರೀರಾಮ ಪೆರಿಯ ಪೆರುಮಾಳ್( ಶ್ರೀ ರಂಗನಾಥ ) ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದರು ಹಾಗೆ ಕುಲಶೇಖರ ಆಳ್ವಾರ್ ಪೆರಿಯ ಪೆರುಮಾಳ್ ಮತ್ತು ಶ್ರೀ ರಂಗದ ಬಗ್ಗೆ ಅತ್ಯಂತ ಅಭಿಮಾನ ಹೊಂದಿದ್ದರು.
ವ್ಯಾಸ : ಶ್ರೀ ರಾಮ ಮತ್ತು ಪೆರಿಯಾ ಪೆರುಮಾಳ್ ಅವರೊಂದಿಗಿನ ಸಂಬಂಧವೇನು ಅಜ್ಜಿ ?
ಆಂಡಾಳಜ್ಜಿ : ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಪೆರಿಯ ಪೆರುಮಾಳ್ ತಿರುವಾರಾಧನ ಪೆರುಮಾಳ್ ಆಗಿದ್ದರು. ತಿರುವಾರಾಧನ ಪೆರುಮಾಳ್ ಎಂದರೆ ಮನೆಯಲ್ಲಿ ಪೂಜಿಸಲ್ಪಡುವ ಪೆರುಮಾಳ್. ಶ್ರೀರಾಮನು ಅವರ ಅರಮನೆಯಲ್ಲಿ ಪೆರಿಯ ಪೆರುಮಾಳನ್ನು ಪೊಜಿಸುತ್ತಿದ್ದರು . ಆದರೆ ಅವರು ಅವರ ಭಕ್ತರಾದ ವಿಭೀಷಣರಿಗೆ ಆ ಪೆರುಮಾಳನ್ನು ಉಡುಗೊರೆಯಾಗಿ ಕೊಟ್ಟರು . ವಿಭೀಷಣನು ಪೆರಿಯ ಪೆರುಮಾಳನ್ನು ಲಂಕೆಗೆ ಕೊಂಡೊಯ್ಯುತ್ತಿದ್ದರು , ಆಗ ಸಂಧ್ಯಾವಂದನೆಗಾಗಿ ಶ್ರೀರಂಗದಲ್ಲಿ ನಿಲ್ಲಿಸಿದರು. ಅವರು ಸಂಧ್ಯಾವಂದನೆಯ ನಂತರ ಲಂಕೆಗೆ ಅವರ ಪ್ರಯಾಣ ತೊಡಗಲು ಇಚ್ಚಿಸಿದಾಗ , ಪೆರಿಯ ಪೆರುಮಾಳ್ ಆ ಸ್ಥಳವನ್ನು ಬಹಳ ಇಷ್ಟವಾಗಿ ದಕ್ಷಿಣ ದಿಕ್ಕಿಗೆ ಲಂಕೆಯನ್ನು ನೋಡುತ್ತಾ ಅಲ್ಲಿಯೇ ಉಳಿಯಬೇಕು ಎಂದು ವಿಭೀಷಣನಿಗೆ ಹೇಳಿದರು. ವಿಭೀಷಣನು ಪೆರಿಯ ಪೆರುಮಾಳಿಗೆ ಒಪ್ಪಿಕೊಂಡು ಲಂಕೆಗೆ ಹೊರಟನು . ಹೀಗಾಗಿ, ಪೆರಿಯ ಪೆರುಮಾಳ್ ಶ್ರೀರಂಗಕ್ಕೆ ಆಗಮಿಸಿ ಇಲ್ಲಿಯವರೆಗೂ ಇಲ್ಲಿಯೇ ಇದ್ದಾರೆ.
ಪರಾಶರ : ಓಹ್! ಇದು ಚೆನ್ನಾಗಿದೆ ಅಜ್ಜಿ. ನಮಗೆ ಪೆರುಮಾಳ್ ಮತ್ತು ಪೆರಿಯ ಪೆರುಮಾಳ್ ಗೆ ಇರುವ ಸಂಬಂಧ ಗೊತ್ತಿರಲಿಲ್ಲ .
ಆಂಡಾಳಜ್ಜಿ : ಕುಲಶೇಖರ ಆಳ್ವಾರ್ ಅವರು ಶ್ರೀರಂಗಂ ಮತ್ತು ಪೆರಿಯ ಪೆರುಮಾಳ್ ಬಗ್ಗೆ ಹೆಚ್ಚಿನ ಭಾಂಧವ್ಯ ಹೊಂದಿದ್ದರು. ಅವರು ತಮ್ಮ ರಾಜ್ಯದಿಂದ ಪ್ರತಿದಿನ ಶ್ರೀರಂಗಕ್ಕೆ ಭೇಟಿ ನೀಡಲು ಬಯಸಿದರು ಮತ್ತು ಅಲ್ಲಿಂದ ಹೊರಡುತ್ತಿದ್ದರು. ಆದರೆ ಅವರ ಮಂತ್ರಿಗಳು ಅಲ್ಲಿಂದ ರಾಜ್ಯವನ್ನು ಆಳಲು ಮುಂದುವರಿಯಲು ಕೆಲವು ಕಾರಣಗಳನ್ನು ಅಥವಾ ಇನ್ನೊಂದನ್ನು ನೀಡುವ ಮೂಲಕ ಅವರನ್ನು ತಡೆಯುತ್ತಿದ್ದರು. ಅಂತಿಮವಾಗಿ, ಅವರು ತನ್ನ ರಾಜ್ಯವನ್ನು ತ್ಯಜಿಸಿ ಶ್ರೀರಂಗವನ್ನು ತಲುಪುತ್ತಾರೆ .ಅವರು ಎಂಪೆರುಮಾನ್ ವೈಭವದಲ್ಲಿ ಪೆರುಮಾಳ್ ತಿರುಮೊಳಿ ಹಾಡಿದರು ಮತ್ತು ಶ್ರೀರಂಗಂ ನಲ್ಲಿ ಕೆಲಸಮಯ ಇದ್ದರು. ಅಂತಿಮವಾಗಿ ಈ ಜಗತನ್ನು ಬಿಟ್ಟು ಪೆರುಮಾಳಿಗೆ ನಿರಂತರವಾಗಿ ಸೇವೆ ಮಾಡಲು ಪರಮಪದ ಸೇರಿದರು.
ವ್ಯಾಸ : ಅಜ್ಜಿ, ಆಳ್ವಾರುಗಳ ಬಗ್ಗೆ ನಾವು ಕೇಳಿದಷ್ಟು ,ಪೆರುಮಾಳ್ ಬಗ್ಗೆ ಹೆಚ್ಚು ತಿಳಿಯಬಹುದು ಏಕೆಂದರೆ ಅವರ ಜೀವನ ಸಂಪೂರ್ಣವಾಗಿ ಪೆರುಮಾಳ್ ಬಗ್ಗೆ ಕೇಂದ್ರೀಕೃತವಾಗಿದೆ.
ಆಂಡಾಳಜ್ಜಿ : ಹೌದು, ನಾವು ನಮ್ಮ ಜೀವನವನ್ನು ಪೆರುಮಾಳ್ ಮತ್ತು ಅವರ ಭಕ್ತರ ಬಗ್ಗೆ ಕೇಂದ್ರೀಕರಿಸಬೇಕು. ಈಗ ಕುಲಶೇಖರ ಆಳ್ವಾರ್ ಸನ್ನಿಧಿಗೆ ಹೋಗಿ ದರ್ಶನ ಮಾಡೋಣ.
ವ್ಯಾಸ ಮತ್ತು ಪರಾಶರ : ಸರಿ ಅಜ್ಜಿ, ಹೋಗೋಣ.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : http://pillai.koyil.org/index.php/2014/11/beginners-guide-kulasekarazhwar/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org