ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಅಷ್ಟ ದಿಗ್ಗಜರು ಮತ್ತು ಇತರರು

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ಅಳಗಿಯ ಮಣವಾಳ ಮಾಮುನಿಗಳ್

ಅಜ್ಜಿ : ಸ್ವಾಗತ ಮಕ್ಕಳೆ, ನಮ್ಮ ಹಿಂದಿನ ಸಂಭಾಷಣೆ ನಿಮಗೆಲ್ಲ ನೆನೆಪಿದೆ ಎಂದು ಭಾವಿಸುತ್ತೇನೆ

ಮಕ್ಕಳು : ಹೌದು ಅಜ್ಜಿ, ಇಂದು ನಾವು ಆಷ್ಟ ದಿಗ್ಗಜರ ಬಗ್ಗೆ ಕೇಳಲು ಬಂದಿದ್ದೇವೆ.

ಅಜ್ಜಿ : ಸರಿ.

ಪರಾಶರ: ಅಜ್ಜಿ, ಅಷ್ಟ ದಿಗ್ಗಜರು ಅಂದರೆ 8 ಶಿಷ್ಯರು ಅಲ್ಲವೇ?

ಅಜ್ಜಿ : ಪರಾಶರ, ನೀನು ಹೇಳಿದ್ದು ಸರಿ. ಅಷ್ಟ ದಿಗ್ಗಜರು ಮನವಾಳ ಮಾಮುನಿಗಳ 8 ಪ್ರಮುಖ ಶಿಷ್ಯರು. ಪೊನ್ನಡಿಕ್ಕಾಳ್ ಜೀಯರ್ , ಕೋಯಿಲ್ ಅಣ್ಣನ್ , ಪತಂಗಿ ಪರವಸ್ತು ಪಟ್ಟರಪಿರಾನ್ ಜೀಯರ್,ತಿರುವೆಂಕಟ ಜೀಯರ್,ಎರುಂಬಿಯಪ್ಪ ,ಪ್ರತಿವಾಧಿ ಭಯಂಕರಂ ಅಣ್ಣನ್ , ಅಪ್ಪಿಳ್ಳೈ , ಅಪ್ಪಿಳ್ಳಾರ್. ಮಾಮುನಿಗಳ  ಈ ಮಹಾನ್ ಶಿಷ್ಯರು ಮಾಮುನಿಗಳ ಸಮಯದ ನಂತರ ನಮ್ಮ ಸಂಪ್ರದಾಯದ   ಬೆಳವಣಿಗೆಯಲ್ಲಿ ಹೆಚ್ಚು ಪ್ರಭಾವ ಬೀರಿದರು.

ತನ್ನ ಆಚಾರ್ಯನ್ ಮನವಾಳ ಮಾಮುನಿಗಳಿಗೆ ಪ್ರಾಣ ಸುಕ್ರುತ್ (ಜೀವನದಂತೆಯೇ ಪ್ರಿಯ) ಆಗಿದ್ದ ಪೊನ್ನಡಿಕ್ಕಾಲ್ ಜೀಯರ್ ಅವರೊಂದಿಗೆ ಪ್ರಾರಂಭಿಸೋಣ.

ಅಜ್ಜಿ: ಅಳಗಿಯ ವರದರ್ ಎಂದು ಹುಟ್ಟಿದವರು ಪೊನ್ನಡಿಕ್ಕಾಲ್ ಜೀಯರ್ ಎಂದು ಪ್ರಸಿದ್ದರಾದರು.

ಪರಾಶರ: ಅಜ್ಜಿ ಅವರನ್ನು ಏಕೆ  ಪೊನ್ನಡಿಕ್ಕಾಲ್ ಜೀಯರ್ ಎಂದು ಕರೆಯುತ್ತಾರೆ?

ಅಜ್ಜಿ :  ಪೊನ್ನಡಿಕ್ಕಾಲ್ ಎಂದರೆ ಮಾಮುನಿಗಳ ಶಿಷ್ಯ ಸಂಪತ್ತಿಗೆ ಅಡಿಪಾಯ ಹಾಕಿದವನು ಎಂದು ಅರ್ಥ. ಪೊನ್ನಡಿಕ್ಕಾಲ್ ಜೀಯರ್  ಹಲವು ಆಚಾರ್ಯರಿಗೆ ಮಾಮುನಿಗಳನ್ನು ಸಂಪರ್ಕಿಸಲು  ಪುರುಷಕಾರಂ ಆಗಿದ್ದರು.

ಮಾಮುನಿಗಳ್  ಅವರು ಅಷ್ಟ ದಿಗ್ಗಜಂಗಳ್   ಅವರನ್ನು ಪೊನ್ನಡಿಕ್ಕಾಲ್ ಜೀಯರ್‌ಗೆ ನೇಮಿಸಿದರು.ದೈವನಾಯಕನ್  ಎಂಪೆರುಮಾನ್  (ವಾನಮಾಮಲೈ )ಸೇನೈ  ಮುದಲಿಯಾರ್  ಮೂಲಕ ಶ್ರೀಮುಕಮ್ (ಒಂದು ಸೂಚನೆಯನ್ನು)  ಮಾಮುನಿಗಳ್  ಗೆ ಕಳುಹಿಸಿ ಅದರಂತೆ  ಮಾಮುನಿಗಳ್ ಪೊನ್ನಡಿಕ್ಕಾಲ್ ಜೀಯರ್‌ಗೆ ವಾನಮಾಮಲೈ  ದಿವ್ಯ ದೇಶಂ ಗೆ ಹೋಗಿ ಅಲ್ಲಿ ಕೈಂಕರ್ಯ ನಡೆಸಲು  ಸೂಚಿಸಿದರು 

ವ್ಯಾಸ: ಅಜ್ಜಿ,  ಪೊನ್ನಡಿಕ್ಕಾಲ್ ಜೀಯರ್‌  ದೈವನಾಯಕನ್  ಎಂಪೆರುಮಾನ್ಗೆ ಮಾವನವರು ಅಲ್ಲವೇ?

ಅಜ್ಜಿ : ಹೌದು ವ್ಯಾಸ ,ಅದು  ಸರಿ. ತಿರುಮಲೈಯಿಂದ ನಾಚ್ಚಿಯಾರ್ ವಿಗ್ರಹ (ತಾಯಾರಿನ  ದೈವಿಕ ರೂಪ ) ವನ್ನು ಕರೆತಂದವರು  ಮತ್ತು ದೈವನಾಯಕನ್  ಎಂಪೆರುಮಾನೊಂದಿಗೆ  ಭವ್ಯವಾದ ವಿವಾಹವನ್ನು ಏರ್ಪಡಿಸಿದರು  ಮತ್ತು ಅವರು  ಸ್ವತಃ ಕನ್ನಿಕಾ ದಾನಂ ನಿರ್ವಹಿಸುತ್ತಾರೆ .  “ದೈವನಾಯಕನ್  ಎಂಪೆರುಮಾನ್‍ಗೆ  ಪೆರಿಯಾಳ್ವಾರ್  ನಂತೆ, ಪೊನ್ನಡಿಕ್ಕಾಲ್ ಜೀಯರ್‌ ಸಹ ಅವರ ಮಾವ” ಎಂದು ಘೋಷಿಸಿದರು.

ಅವರು ಭಾರತ ದೇಶದ ವಿವಿಧ ಭಾಗಗಳಿಗೆ ತೆರಳಿ ಮಾಮುನಿಗಳ  ಅವರ ಆದೇಶದ ಆಧಾರದ ಮೇಲೆ ನಮ್ಮ ಸಂಪ್ರದಾಯಂ  ಅನ್ನು ಹರಡಿದರು. ಕೊನೆಯಲ್ಲಿ, ತನ್ನ ಆಚಾರ್ಯನ್ ಅಳಗಿಯ  ಮಣವಾಳ  ಮಾಮುನಿಗಳ ದೈವಿಕ ಪಾದಗಳನ್ನು ಧ್ಯಾನಿಸುತ್ತಾ, ಪೊನ್ನಡಿಕ್ಕಾಲ್ ಜೀಯರ್‌  ತನ್ನ ಚರಮ ತಿರುಮೇನಿಯನ್ನು ತ್ಯಜಿಸಿ ಪರಮಪದವನ್ನು ಪಡೆಯುತ್ತಾರೆ .

ನಾವು ಪೊನ್ನಡಿಕ್ಕಾಲ್ ಜೀಯರ್‌  ಅವರ ಕಮಲದ ಪಾದದಲ್ಲಿ  ನಾವು ಎಂಪೆರುಮಾನಾರ್ ಮತ್ತು ನಮ್ಮ ಆಚಾರ್ಯನ್ ಕಡೆಗೆ ಅಂತಹ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಪ್ರಾರ್ಥಿಸೋಣ

ಅಜ್ಜಿ: ನಮ್ಮ ಮುಂದಿನ ಸಂಭಾಷಣೆ ಕೋಯಿಲ್ ಅಣ್ಣನ್ ಬಗ್ಗೆ. ಅವರು ಪ್ರಮುಖ  ಶಿಷ್ಯರಲ್ಲಿ ಒಬ್ಬರಾಗುತ್ತಾರೆ ಮತ್ತು ಅಷ್ಟ ದಿಗ್ಗಜರಲ್ಲಿ ಒಬ್ಬರಾದರು . ಕೋಯಿಲ್  ಅಣ್ಣನ್  ಅವರ ಜೀವನದಲ್ಲಿ ಒಂದು ಕುತೂಹಲಕಾರಿ ಘಟನೆ ಸಂಭವಿಸಿದೆ, ಇದು ಅವರನ್ನು ಮಾಮುನಿಗಳ್  ಅವರ ಆಶ್ರಯಕ್ಕೆ ಕರೆದೊಯ್ಯಿತು.

ಪರಾಶರ : ಅಜ್ಜೀ ಅದು ಯಾವ ಘಟನೆ ?

ಅಜ್ಜಿ : ನಿನ್ನ ಕುತೂಹಲವನ್ನು  ಶ್ಲಾಘಿಸುತ್ತೇನೆ ಪರಾಶರ , ಮುಧಲಿಯಾಂಡಾನ್ ಅವರ ಪ್ರಸಿದ್ಧ  ವಂಶದಲ್ಲಿ ಜನಿಸಿದ ಅವರಿಗೆ  ಮಾಮುನಿಗಳ  ಆಶ್ರಯ ಪಡೆಯಲು ಇಷ್ಟವಿರಲಿಲ್ಲ. ಈ ಘಟನೆಯು ಅವರನ್ನು ಮಾಮುನಿಗಳ ಕಮಲದ ಪಾದಗಳನ್ನು ತೆಗೆದುಕೊಳ್ಳಲು ಕರೆದೊಯ್ಯಿತು . ಕೋಯಿಲ್ ಅಣ್ಣನ್ (ಜನಪ್ರಿಯವಾಗಿ ತಿಳಿದಿರುವಂತೆ) ಅನೇಕ ಶಿಷ್ಯರೊಂದಿಗೆ ಶ್ರೀರಂಗದಲ್ಲಿ ವಾಸಿಸುತ್ತಿದ್ದರು.ಮಾಮುನಿಗಳ  ಶಿಷ್ಯರಾಗಲು  ಕೋಯಿಲ್ ಅಣ್ಣನ್ ಅವರನ್ನು ಆದೇಶಿಸಿದವರು ಶ್ರೀ ಭಾಷ್ಯಕಾರಾರ್ (ಶ್ರೀ ರಾಮಾನುಜರ್) ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಶ್ರೀ ರಾಮಾನುಜರ್ ಅವರು  ಕೋಯಿಲ್ ಅಣ್ಣನ್ ಅವರಿಗೆ ಮಾರ್ಗದರ್ಶನ ನೀಡಿದರು ಮತ್ತು ಮುಧಲಿಯಾಂಡಾನ್ ಅವರೊಂದಿಗಿನ ಸಂಬಂಧವನ್ನು ಸರಿಯಾಗಿ ಬಳಸಿಕೊಳ್ಳಲು ಹೇಳಿದರು.

ಎಂಪೆರುಮಾನಾರ್  ಹೇಳಿದರು “ನಾನು ಆದಿ  ಶೇಷನ್  ಮತ್ತು ಪುನಃ  ಮನವಾಳ  ಮಾಮುನಿಗಳಾಗಿ  ಬಂದಿದ್ದೇನೆ. ನೀವು ಮತ್ತು ನಿಮ್ಮ ಸಂಬಂಧಿಕರು ಮಾಮುನಿಗಳ ಶಿಷ್ಯರಾಗಿ  ಉನ್ನತಿ ಹೊಂದಿರಿ ”. ಮಕ್ಕಳೇ, ಇಡೀ ಘಟನೆ ಅವರ  ಕನಸಿನಲ್ಲಿ ಸಂಭವಿಸಿತು . ಕನಸು ನಿಂತ ಬಳಿಕ ಅಣ್ಣನ್  ಸಂಪೂರ್ಣವಾಗಿ ಆಘಾತಕ್ಕೊಳಗಾಗುತ್ತಾರೆ . ಅವರು ಘಟನೆಗಳನ್ನು ತಮ್ಮ ಸಹೋದರರಿಗೆ ಬಹಳ ಭಾವನೆಗಳೊಂದಿಗೆ ವಿವರಿಸುತ್ತಾರೆ.

ಅಣ್ಣನ್  ಮತ್ತು ಇತರ ಅನೇಕ ಕಂಧಾಡೈ ಕುಟುಂಬದ  ಆಚಾರ್ಯ ಪುರುಷರು ಮಾಮುನಿಗಳ  ಆಶ್ರಯ ಪಡೆಯಲು ಜೀಯರ್  ಮಠಕ್ಕೆ ಹೋಗುತ್ತಾರೆ. ಮಾಮುನಿಗಳ್  ಅವರೆಲ್ಲರಿಗೂ ಪಂಚ ಸಂಸ್ಕಾರವನ್ನು ಮಾಡಲು ವಾನಮಾಮಲೇ  (ಪೊನ್ನಡಿಕ್ಕಾಲ್  ) ಜೀಯರ್‌ ಗೆ ಅಗತ್ಯ ಅಂಶಗಳನ್ನು ಸಿದ್ಧಪಡಿಸುವಂತೆ ಸೂಚಿಸುತ್ತಾರೆ. 

ಆದ್ದರಿಂದ ಮಕ್ಕಳೇ, ಕೊಯಿಲ್ ಕಂಧಾಡೈ  ಅಣ್ಣನ್  ಅವರ ಅದ್ಭುತ ಜೀವನದ ಕೆಲವು ನೋಟಗಳನ್ನು ನಾವು ನೋಡಿದ್ದೇವೆ. ಅವರು ಮಾಮುನಿಗಳಿಗೆ  ತುಂಬಾ ಪ್ರಿಯರಾಗಿದ್ದರು. ನಾವೂ ಸಹ ಆಚಾರ್ಯರ ಅಂತಹ ಅಭಮಾನವನ್ನು  ಸ್ವಲ್ಪಮಟ್ಟಿಗೆ ಪಡೆಯಾಳು ನಾವು ಅವರ ಕಮಲದ ಪಾದದಲ್ಲಿ ಪ್ರಾರ್ಥಿಸೋಣ.

ಮುಂದೆ ನಾನು ಮೋರ್  ಮುನ್ನಾರ್  ಅಯ್ಯರ್  (ಪರವಸ್ತು  ಪಟ್ಟರ್ ಪಿರಾನ್  ಜೀಯರ್ ) ಬಗ್ಗೆ ಹೇಳುತ್ತೇನೆ. ಅವರು ಮಾಮುನಿಗಳ  ಅಷ್ಟ ದಿಗ್ಗಜಂಗಲ್  ಅಲ್ಲಿ ಒಬ್ಬರು. ಅವರು ಯಾವಾಗಲೂ ಎಂಪೆರುಮಾನಾರ್ ಜೊತೆ  ಉಳಿದುಕೊಂಡಿರುವ ಎಂಬಾರ್ ಅಂತೆಯೇ   ಅವರಿಂದ ಬೇರ್ಪಡಿಸದೆ ಮಾಮುನಿಗಳ್  ನೊಂದಿಗೆ ಇದ್ದರು.

ವೇದವಲ್ಲಿ : ಅಜ್ಜಿ, ಅವರನ್ನು ಏಕೆ ಮೋರ್  ಮುನ್ನಾರ್  ಅಯ್ಯರ್  ಎಂದು ಕರೆಯುತ್ತಾರೆ?

ಅಜ್ಜಿ: ಆಸಕ್ತಿದಾಯಕವಾಗಿದೆ ಅಲ್ಲವೇ. ಪ್ರತಿದಿನ, ಅವರು ಮಾಮುನಿಗಳ  ಶೇಷ ಪ್ರಸಾದಂ ತಿನ್ನುತ್ತಿದ್ದರು. ಮಾಮುನಿಗಳ್  ತಿನ್ನುತ್ತಿದ್ದ ಅದೇ ಬಾಳೆ ಎಲೆಯ ಮೇಲೆ ಅವರು  ತನ್ನ ಪ್ರಸಾದವನ್ನು ಸೇವಿಸುತ್ತಿದ್ದರು . ಮಾಮುನಿಗಳ್  ಮೊಸರು ಅನ್ನದೊಂದಿಗೆ ಮುಗಿದಂತೆ, ಪರವಸ್ತು ಪಟ್ಟರ್ ಪಿರಾನ್  ಜೀಯರ್  ರುಚಿಯನ್ನು ಬದಲಾಯಿಸದೆ (ಮೊಸರಿನಿಂದ ಧಾಲ್ ವರೆಗೆ) ಪ್ರಸಾದಮ್ ಅನ್ನು ಸೇವಿಸಲು ಬಯಸುತ್ತಿದ್ದರು . ಆದ್ದರಿಂದ, ಅವರು “ಮೋರ್  ಮುನ್ನಾರ್  ಅಯ್ಯರ್  ” ಎಂದು ಜನಪ್ರಿಯರಾದರು.

ಅವರು ಮಾಮುನಿಗಳಿಂದ  ನೇರವಾಗಿ ಶಾಸ್ತ್ರದ ಎಲ್ಲಾ ಸಾರವನ್ನು ಕಲಿತರು ಮತ್ತು ನಿರಂತರವಾಗಿ ಅವರಿಗೆ ಸೇವೆ ಸಲ್ಲಿಸಿದರು. ಮಾಮುನಿಗಳು  ಪರಮಪದಂಗೆ ಏರಿದ ನಂತರ, ಪಟ್ಟರ್ ಪಿರಾನ್  ಜೀಯರ್  ತಿರುಮಲೈನಲ್ಲಿ ನೆಲೆಸುತ್ತಾರೆ ಮತ್ತು ಅಲ್ಲಿ ಅನೇಕ ಜಿವಾತ್ಮಾಗಳನ್ನು ಶುದ್ಧೀಕರಿಸುತ್ತಾರೆ. ಅಧಿಕ  ಆಚಾರ್ಯ ನಿಷ್ಟೈ ಹೊಂದಿರುವ ಅವರು ಅಂತಿಮೋಪಾಯ ನಿಷ್ಟೈ ಎಂಬ ಗ್ರಂಥವನ್ನು ಬರೆಯುತ್ತಾರೆ, ಇದು ನಮ್ಮ ಆಚಾರ್ಯ ಪರಂಪರೈನ ವೈಭವವನ್ನು ಸಂಪೂರ್ಣವಾಗಿ ಹೊರತರುತ್ತದೆ ಮತ್ತು ನಮ್ಮ ಪೂರ್ವಾಚಾರ್ಯರು ತಮ್ಮ ಆಚಾರ್ಯರ  ಮೇಲೆ ಹೇಗೆ ಸಂಪೂರ್ಣವಾಗಿ ಅವಲಂಬಿತರಾಗಿದ್ದಾರೆ ಎಂದು ತೋರಿಸುತ್ತದೆ . ಅವರು ಮಹಾನ್ ವಿದ್ವಾಂಸರಾಗಿದ್ದರು ಮತ್ತು ಮಾಮುನಿಗಳಿಗೆ  ತುಂಬಾ ಪ್ರಿಯರಾಗಿದ್ದರು.

ಅಜ್ಜಿ: ಮಕ್ಕಳೆ ಮುಂದೆ  ನಾನು ಎರುಂಬಿಯಪ್ಪರ  ಬಗ್ಗೆ ಹೇಳುತ್ತೇನೆ. ಅವರ  ಮೂಲ ಹೆಸರು ದೇವರಾಜನ್ . ತನ್ನ ಗ್ರಾಮದಲ್ಲಿ ವಾಸಿಸುತ್ತಿದ್ದಾಗ ಮತ್ತು ತನ್ನ ಧರ್ಮವನ್ನು ನಿರ್ವಹಿಸುತ್ತಿದ್ದಾಗ, ಎರುಂಬಿಯಪ್ಪ ಮನವಾಳ  ಮಾಮುನಿಗಳ್  ಬಗ್ಗೆ ಕೇಳಿದರು  ಮತ್ತು ಅವರನ್ನು ಭೇಟಿಯಾಗಲು ಬಯಸಿದರು . ಎರುಂಬಿಯಪ್ಪ ಸ್ವಲ್ಪ ಸಮಯದವರೆಗೆ ಮಾಮುನಿಗಳ್  ಅವರೊಂದಿಗೆ ಉಳಿದು, ಎಲ್ಲಾ ರಹಸ್ಯ ಗ್ರಂಥಗಳನ್ನು ಕಲಿತರು ಮತ್ತು ಅಂತಿಮವಾಗಿ ತಮ್ಮ ಗ್ರಾಮಕ್ಕೆ ಮರಳಿದರು ಮತ್ತು ಅಲ್ಲಿ ತಮ್ಮ ಕೈಂಕರ್ಯಂ ಅನ್ನು ಮುಂದುವರೆಸಿದರು.

ಅವರು  ತನ್ನ ಆಚಾರ್ಯನ ಬಗ್ಗೆ ನಿರಂತರವಾಗಿ ಯೋಚಿಸುತ್ತಿದ್ದರು  ಮತ್ತು ಪೂರ್ವ ಮತ್ತು ಉತ್ತರ ಧಿನಚರ್ಯೈ (ಇದು ಮಾಮುನಿಗಳ   ದೈನಂದಿನ ಚಟುವಟಿಕೆಗಳನ್ನು ಸಾರಾಂಶಿಸುತ್ತದೆ) ರಚಿಸಿ ಒಬ್ಬ  ಶ್ರೀವೈಷ್ಣವರ  ಮೂಲಕ ಮಾಮುನಿಗಳಿಗೆ  ಕಳುಹಿಸಿದರು. ಎರುಂಬಿಯಪ್ಪ  ಅವರ  ನಿಷ್ಠೆ  ನೋಡಿ ಮಾಮುನಿಗಳ್  ತುಂಬಾ ಸಂತೋಷಪಟ್ಟರು ಮತ್ತು ಅವರನ್ನು ವೈಭವೀಕರಿಸಿದರು. ತನ್ನನ್ನು ಭೇಟಿ ಮಾಡಲು ಎರುಂಬಿಯಪ್ಪರಿಗೆ ಆಹ್ವಾನವನ್ನು ಸಹ ಕಳುಹಿಸಿದರು.

ವ್ಯಾಸ: ಅಜ್ಜಿ, ಪಟ್ಟರ್ ಪಿರಾನ್  ಜೀಯರ್, ಪೊನ್ನಡಿಕ್ಕಾಲ್ ಜೀಯರ್‌  ಅವರಂತೆ ಎರುಂಬಿಯಪ್ಪ ಅವರು ಸಹ ಅವರ ಆಚಾರ್ಯರಿಗೆ ಹೆಚ್ಚು ಪ್ರಿಯರಾದವರೇ?

ಅಜ್ಜಿ : ಹೌದು ವ್ಯಾಸ, ಎರುಂಬಿಯಪ್ಪ ಅವರ  ಪ್ರಮುಖ ಕೊಡುಗೆಗಳಲ್ಲಿ ಒಂದು “ವಿಲಕ್ಷಣ  ಮೋಕ್ಷ ಅಧಿಕಾರ  ನಿರ್ಣಯಂ”. ಇದು ಎರುಂಬಿಯಪ್ಪ ಮತ್ತು ಅವರ ಶಿಷ್ಯ ಸೇನಾಪತಿ ಆಳ್ವಾನ್ ಮತ್ತು ಇತರ ಶಿಷ್ಯರ  ನಡುವಿನ ಸಂಭಾಷಣೆಗಳ ಸಂಕಲನವಾಗಿದೆ.

ವೇದವಲ್ಲಿ : ಅಜ್ಜಿ,  ವಿಲಕ್ಷಣ  ಮೋಕ್ಷ ಅಧಿಕಾರ  ನಿರ್ಣಯಂ ಅಂದರೆ ಏನು ?

ಅಜ್ಜಿ : ಆಳ್ವಾರ್  / ಆಚಾರ್ಯ ಶ್ರೀ ಸೂಕ್ತಿಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದರಿಂದ ಉಂಟಾಗುವ ಅನೇಕ ಅನುಮಾನಗಳನ್ನು ಈ ಅನುದಾನವು ಸ್ಪಷ್ಟಪಡಿಸುತ್ತದೆ. ಸಂಸಾರ  ವೈರಾಗ್ಯ  ಅನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಮತ್ತು ನಮ್ಮ ಪುರ್ವಾಚಾರ್ಯರ ಜ್ಞಾನ  ಮತ್ತು ಅನುಷ್ಟಾನಮ್  ಬಗೆಗಿನ ಬಾಂಧವ್ಯವನ್ನು ಎರುಂಬಿಯಪ್ಪ  ನಮಗೆ ಕಲಿಸಿ ಮತ್ತು ಅವುಗಳನ್ನು ಕಾರ್ಯರೂಪಕ್ಕೆ ತರಲು ನಮಗೆ ಮಾರ್ಗದರ್ಶನ ನೀಡಿದರು .

ಮನವಾಳ  ಮಾಮುನಿಗಳನ್ನು  ಯಾವಾಗಲೂ ನೆನಪಿಸಿಕೊಳ್ಳುವ ಎರುಂಬಿಯಪ್ಪ  ಅವರನ್ನು ನಾವು ನೆನಪಿಸಿಕೊಳ್ಳೋಣ.

ಅಜ್ಜಿ: ಮಕ್ಕಳೆ , ಈಗ ಪ್ರತಿವಾಧಿ ಭಯಂಕರಂ ಅಣ್ಣನ್  ಬಗ್ಗೆ ಚರ್ಚಿಸಲಾಗುವುದು. ತಮ್ಮ ಜೀವನದ ಆರಂಭದಲ್ಲಿ, ಹಸ್ತಿಗಿರಿನಾಥರ್ ಆಗಿ ಜನಿಸಿದ ಅವರು, ಕಾಂಚಿಪುರಂನಲ್ಲಿ ವಾಸಿಸುತ್ತಿದ್ದರು ಮತ್ತು ವೇದಾಂತಾಚಾರ್ಯರ   ಆಶೀರ್ವಾದ ಪಡೆದಿದ್ದದರು. ಅವರು ಮಹಾನ್ ವಿದ್ವಾಂಸರಾದರು ಮತ್ತು ಇತರ ಸಂಪ್ರದಾಯಂಗಳ ಅನೇಕ ವಿದ್ವಾಂಸರನ್ನು ಗೆದ್ದರು.

ನಂತರ ಅವರು ತಿರುಮಲದಲ್ಲಿ ವಾಸಿಸುತ್ತಿದ್ದರು ಮತ್ತು ತಿರುವೆಂಗಡಮುಡೈಯಾನ್ ಸೇವೆ ಮಾಡುತ್ತಿದ್ದರು. ಮನವಾಳ  ಮಾಮುನಿಗಳ್  ಅವರ ವೈಭವಗಳ ಬಗ್ಗೆ ಕೇಳಿದ ಅವರು,  ಮನವಾಳ  ಮಾಮುನಿಗಳ ಶಿಷ್ಯರಾಗಿ  ಸೇರಲು ನಿರ್ಧರಿಸಿದರು. ಅವರು ಶ್ರೀರಂಗಂ ತಲುಪಿದರು ಮತ್ತು ಮಾಮುನಿಗಳ  ಮಠಕ್ಕೆ ಭೇಟಿ ನೀಡಿದರು. ಮಾಮುನಿಗಳ್  ಕಾಲಕ್ಷೇಪ ನಡೆಸುತ್ತಿದ್ದರು   ಮತ್ತು ಅಣ್ಣನ್  ಕಾಲಕ್ಷೇಪಂ  ಅನ್ನು ಕೇಳುತ್ತಿದ್ದಂತೆ ಅವರು ಶಾಸ್ತ್ರದ ವಿವಿಧ ಕ್ಷೇತ್ರಗಳಲ್ಲಿ ಮಾಮುನಿಗಳ  ಅಪಾರ  ಜ್ಞಾನವನ್ನು ಅರ್ಥಮಾಡಿಕೊಂಡರು. ಅವರು ಮಾಮುನಿಗಳಿಗೆ  ಶರಣಾದರು ಮತ್ತು ಶಿಷ್ಯರಾದರು.

ಅವರು ಎಂಪೆರುಮಾನ್  ಮತ್ತು ಮಾಮುನಿಗಳ್  ಅವರ ಹೊಗಳಿಕೆಯ ಮೇಲೆ ಅನೇಕ ಅನುದಾನಗಳನ್ನು ಬರೆದಿದ್ದಾರೆ. ಅತ್ಯಂತ ಜನಪ್ರಿಯವಾದ ವೆಂಕಟೇಶ  ಸುಪ್ರಭಾತಮ್ , ವೆಂಕಟೇಶ  ಪ್ರಪತ್ತಿ  ಇತ್ಯಾದಿಗಳನ್ನು ಅವರ ಆಚಾರ್ಯ, ಮಾಮುನಿಗಳ  ಸಂತೋಷಕ್ಕಾಗಿ ಅಣ್ಣನ್  ಮೂಲಕ ತಿರುವೆಂಗಡಮುಡೈಯಾನ್‌ಗೆ ಸಲ್ಲಿಸಲಾಯಿತು.

ಅಜ್ಜಿ : ಮಕ್ಕಳೆ , ನಮ್ಮ ಕೊನೆಯ ಚರ್ಚೆಯು ಅಪ್ಪಿಳ್ಳೈ , ಅಪ್ಪಿಳ್ಳಾರ್ ಬಗ್ಗೆ ಇರುತ್ತದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅವರು ಮನವಾಳ  ಮಾಮುನಿಗಳ  ಆತ್ಮೀಯ ಶಿಷ್ಯರಾಗುತ್ತಾರೆ ಮತ್ತು ಅಷ್ಟ ಧಿಗ್ಗಜರು ಸಹ  . ಅವರಿಬ್ಬರೂ ಭಾರತ ದೇಶದ  ಉತ್ತರ ಭಾಗದಲ್ಲಿ ಅನೇಕ ವಿದ್ವಾಂಸರನ್ನು ಗೆದ್ದ ಮಹಾನ್ ವಿದ್ವಾನ್.

ಅವರು ಮಾಮುನಿಗಳ ಬಗ್ಗೆ ಕೇಳಿದ್ದರೂ, ಅವರ ಬಗ್ಗೆ ಅವರಿಗೆ ಹೆಚ್ಚಿನ ಬಾಂಧವ್ಯವಿರಲಿಲ್ಲ. ಆದರೆ ನಿಧಾನವಾಗಿ ಅವರು ಮಾಮುನಿಗಳ  ವೈಭವಗಳ ಬಗ್ಗೆ ತಿಳಿದುಕೊಂಡರು ಮತ್ತು ಕಂದಾಡೈ ಅಣ್ಣನ್ , ಎರುಂಬಿಯಪ್ಪ   ನಂತಹ ಅನೇಕ ಶ್ರೇಷ್ಠ ವ್ಯಕ್ತಿಗಳು ಮಾಮುನಿಗಳ  ಆಶ್ರಯ ಪಡೆದಿದ್ದಾರೆ ಎಂದು ಕೇಳಿದರು.

ವೇದವಲ್ಲಿ : ಅಜ್ಜಿ, ಅವರು ಹೇಗೆ ಮಾಮುನಿಗಳ ಶಿಷ್ಯರಾದರು ?

ಅಜ್ಜಿ: ಹೌದು ವೇದವಲ್ಲಿ, ಆಚಾರ್ಯ ಸಂಬಂಧಂಗೆ ಅವರು ಸಿದ್ಧರಾಗಿದ್ದಾರೆ ಎಂದು ಮಾಮುನಿಗಳಿಗೆ   ಎರುಂಬಿಯಪ್ಪ    ತಿಳಿಸಿದರು. ಪೊನ್ನಡಿಕ್ಕಾಲ್ ಜೀಯರ್‌   ಮಾಮುನಿಗಳಿಗೆ   “ಅವರು ಎರುಂಬಿಯಪ್ಪ  ಜೊತೆ ಚರ್ಚೆಗಳಿಂದ ಆಶೀರ್ವದಿಸಲ್ಪಟ್ಟಿದ್ದಾರೆ ಮತ್ತು ನಿಮ್ಮ ಶಿಷ್ಯರಾಗಲು ಅವರಿಗೆ ಎಲ್ಲ ಅರ್ಹತೆ ಇದೆ” ಎಂದು ಹೇಳುತ್ತಾರೆ.   ಅವರನ್ನು ಸ್ವೀಕರಿಸಿ ಆಶೀರ್ವದಿಸುವಂತೆ ಮಾಮುನಿಗಳಿಗೆ  ಕೇಳಿದರು. ಅದರಂತೆ , ಮಾಮುನಿಗಳು  ಅಪ್ಪಿಳ್ಳೈ , ಅಪ್ಪಿಳ್ಳಾರ್ ಇಬ್ಬರಿಗೂ  ಪಂಚ ಸಮಸ್ಕಾರಂ ಮಾಡಿದರು.

ಜೀಯರ್  ಮಠದ ಎಲ್ಲಾ ದೈನಂದಿನ ಚಟುವಟಿಕೆಗಳಾದ ತದಿಯಾರಾಧನಂ  ಅನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಅಪ್ಪಿಳ್ಳಾರ್‌ಗೆ ನೀಡಲಾಯಿತು . ಮಠದ  ಜವಾಬ್ದಾರಿಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳುವ ಜವಾಬ್ದಾರಿ , ಕಿಡಂಬಿ  ಆಚ್ಛಾನ್  ಎಂಪೆರುಮಾನಾರ್ಗೆ ಸೇವೆ ಸಲ್ಲಿಸಿದಂತೆಯೇ,  ಅಪ್ಪಿಳ್ಳಾರ್ ಮಾಮುನಿಗಳಿಗೆ ಪೂರೈಸಿದರು

ಅಪ್ಪಿಳ್ಳೈ    ಮಾಮುನಿಗಳ  ದೈವಿಕ ಸೂಚನೆಯಂತೆ  ತಿರುವಂದಾದಿಗಳಿಗೆ ವ್ಯಾಖ್ಯಾನವನ್ನು  ಬರೆಯುತ್ತಾರೆ ಮತ್ತು ಮಾಮುನಿಗಳ್  ಅವರ ಅನೇಕ ಧಿವ್ಯ ಪ್ರಭಂಧಂ ಸಂಬಂಧಿತ ಕೈಂಕರ್ಯಂಗಳಲ್ಲಿ ಸಹಾಯ ಮಾಡುತ್ತಾರೆ.

ಮಾಮುನಿಗಳ  ಅಂತಿಮ ದಿನಗಳಲ್ಲಿ, ಅಪ್ಪಿಳ್ಳಾರ್  ಅವರನ್ನು ಪ್ರಾರ್ಥಿಸುತ್ತಾರೆ  ಮತ್ತು ಅವರ ದೈನಂದಿನ ಪೂಜೆಗೆ ಮಾಮುನಿಗಳ  ಅರ್ಚಾ ವಿಗ್ರಹಂ (ದೇವತೆ) ಅನ್ನು ಆಶೀರ್ವದಿಸುವಂತೆ ಅವರನ್ನು ವಿನಂತಿಸುತ್ತಾರೆ . ಮಾಮುನಿಗಳು   ಪ್ರತಿದಿನ ಬಳಸುವ ಸೊಂಬು (ಪಾತ್ರೆ ) ಯನ್ನು ನೀಡುತ್ತಾರೆ ಮತ್ತು ಅವರು ಅದನ್ನು ಎರಡು ವಿಗ್ರಹಗಳಾಗಿ  (ದೇವತೆಗಳನ್ನು) ತಯಾರಿಸಿ  ಪ್ರತಿಯೊಬ್ಬರೂ ತಮ್ಮ ದೈನಂದಿನ ಪೂಜೆಗೆ ಮಾಮುನಿಗಳ  ಒಂದು ವಿಗ್ರಹ (ದೇವತೆ) ವನ್ನು ಇಟ್ಟುಕೊಳ್ಳುತ್ತಾರೆ.

ಆದುದರಿಂದ ಮಕ್ಕಳೆ   ನಾವು ಕೂಡ ಆಚಾರ್ಯರನ ಅಂತಹ ಅಭಿಮಾನವನ್ನು  ಪಡೆಯಲು  ಅವರ  ಪಾದ ಕಮಲದಲ್ಲಿ ಪ್ರಾರ್ಥಿಸೋಣ.

ಮಕ್ಕಳೇ ಇಲ್ಲಿಯವರೆಗೆ ನಾವು ಮಾಮುನಿಗಳ್  ಮತ್ತು ಅವರ ಅಷ್ಟ ಧಿಗ್ಗಜಂಗಲ್ ಅವರ ವೈಭವಗಳ ಬಗ್ಗೆ ಚರ್ಚಿಸಿದ್ದೇವೆ.

ಪರಾಶರ : ನಾವು ಇಂದು ಸಾಕಷ್ಟು ತಿಳಿದುಕೊಂಡೆವು ಅಜ್ಜಿ

ಅಜ್ಜಿ : ಹೌದು ಮಗು. ನಾನು ಈಗ ಒಂದು ಮುಖ್ಯ ವಿಷಯ ಹೇಳುತ್ತೇನೆ ಕೇಳು.

ಮಾಮುನಿಗಳ್  ಕಾಲದ ನಂತರ, ಅನೇಕ ಮಹಾನ್ ಆಚಾರ್ಯರು ಪ್ರತಿ ಪಟ್ಟಣ ಮತ್ತು ಹಳ್ಳಿಯ ಭಕ್ತರನ್ನು ಆಶೀರ್ವದಿಸುತ್ತಾ ಬಂದರು. ಆಚಾರ್ಯರು ಧಿವ್ಯ ಧೇಶಂಗಳು, ಅಭಿಮಾನ ಸ್ಥಳಗಳು, ಆಳ್ವಾರ್ / ಆಚಾರ್ಯ ಅವತಾರ ಸ್ಥಳಗಳು ಮತ್ತು ಇತರ ಕ್ಷೇತ್ರಂಗಳಲ್ಲಿ ಉಳಿದು ಜ್ಞಾನವನ್ನು ಹಂಚಿಕೊಂಡರು ಮತ್ತು ಪ್ರತಿಯೊಬ್ಬರಲ್ಲಿಯೂ ಭಕ್ತಿ ಬೆಳೆಸಿದರು.

ತಿರುಮೞಿಶೆ   ಅಣ್ಣವಪ್ಪಂಗಾರ್   ಮತ್ತು ಮೊದಲ ಶ್ರೀಪೆರುಂಬುದೂರ್ ಎಂಬಾರ್ ಜೀಯರ್ ಇತ್ತೀಚಿನವರು  (200 ವರ್ಷಗಳಿಂದ ) ಮತ್ತು ನಮ್ಮ ಸಂಪ್ರದಾಯಂ ಗೆ ಅವರ ಆಳವಾದ ಅನುದಾನ ಮತ್ತು ಕೈಂಕರ್ಯಂಗಳ ಮೂಲಕ ಗಮನಾರ್ಹವಾಗಿ ಕೊಡುಗೆ ನೀಡಿದ್ದಾರೆ.

ನಾನು ನಿಮ್ಮೊಂದಿಗೆ ಹಂಚಿಕೊಂಡ ಯಾವುದೇ ಜ್ಞಾನವು ಆಚಾರ್ಯರ ಈ ಪರಂಪರೆ  ಮೂಲಕ ಬಂದಿದೆ. ನಾವು ಅವರಿಗೆ ಯಾವಾಗಲೂ ಕೃತಜ್ಞರಾಗಿರಬೇಕು. ನೀವೆಲ್ಲರೂ ಒಳ್ಳೆಯ ಸಮಯವನ್ನು ಹೊಂದಿದ್ದೀರಿ ಎಂದು ಭಾವಿಸುತ್ತೇವೆ. ನಮ್ಮ ಮನಸ್ಸು, ಇಂದ್ರಿಯಗಳು ಮತ್ತು ದೇಹ ಮತ್ತು ಅಂತಹ ಆಚಾರ್ಯರು, ಆಳ್ವಾರುಗಳು  ಮತ್ತು ಎಂಪೆರುಮಾನ್  ಕೈಂಕರ್ಯಂನಲ್ಲಿ ತೊಡಗಿಸಿಕೊಳ್ಳಬೇಕು.

ಸರಿ,  ಕತ್ತಲೆಯಾಗುತ್ತಿ ದೆ. ಆಚಾರ್ಯರ ಬಗ್ಗೆ ಯೋಚಿಸೋಣ ಮತ್ತು ಇಂದು ನಮ್ಮ  ಇಂದಿನ ಅಧಿವೇಶನವನ್ನು ಪೂರ್ಣಗೊಳಿಸೋಣ.

ಮಕ್ಕಳು : ಧನ್ಯವಾದ ಅಜ್ಜಿ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://pillai.koyil.org/index.php/2018/07/beginners-guide-ashta-dhik-gajas-and-others/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment