ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಅಳಗಿಯ ಮಣವಾಳ ಮಾಮುನಿಗಳ್

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ತಿರುವಾಯ್ಮೊೞಿ ಪಿಳ್ಳೈ

ಮಣವಾಳ ಮಾಮುನಿಗಳ ಬಗ್ಗೆ ಕಲಿಯಲು ಉತ್ಸುಕರಾದ ಮಕ್ಕಳನ್ನು ಆಂಡಾಳಜ್ಜಿ ಸ್ವಾಗತಿಸುತ್ತಾರೆ. 

ಅಜ್ಜಿ : ಬನ್ನಿ ಮಕ್ಕಳೆ, ಬೇಸಿಗೆ ರಜೆಯನ್ನು ಚನ್ನಾಗಿ ಆನಂದಿಸಿದಿರಿ ಎಂದು ಭಾವಿಸುತ್ತೇನೆ. 

ಪರಾಶರ : ಅಜ್ಜಿ, ರಜೆ ಮಜವಾಗಿತ್ತು. ಈಗ ನಾವು ಮಣವಾಳ ಮಾಮುನಿಗಳ ಬಗ್ಗೆ ಕಲಿಯಲು ಕಾತುರದಿಂದ ಇದ್ದೀವಿ . ನಮಗೆ ಅವರ ಬಗ್ಗೆ ಹೇಳುತ್ತೀರಾ ? 

ಅಜ್ಜಿ : ಖಂಡಿತ. ಅವರು ಆದಿಶೇಷನ  ಅವತಾರವಾಗಿ ಮತ್ತು ಯತಿರಾಜರ ಪುನರವತಾರವಾಗಿ ತಿಗೞಕ್ಕಿಡಂದಾನ್ ತಿರುನಾವೀರುಡೈಯ ಪಿರಾನ್ ಮತ್ತು ಶ್ರೀ ರಂಗ ನಾಚ್ಚಿಯಾರ್ ಅವರಿಗೆ ಆಳ್ವಾರ್ ತಿರುನಗರಿಯಲ್ಲಿ ಜನಿಸಿದರು.ಅವರಿಗೆ ಅಳಗಿಯ ಮಣವಾಳನ್ ( ಅದಲ್ಲದೆ  ಅಳಗಿಯ ಮಣವಾಳ ಪೆರುಮಾಳ್ ನಾಯನಾರ್ ಎಂದು ಕರೆಯಲಾಗುತ್ತದೆ) ಎಂದು ಹೆಸರಿಟ್ಟರು. ಅವರು ಎಲ್ಲ ಸಾಮಾನ್ಯ ಶಾಸ್ತ್ರ ಮತ್ತು ವೇದ ಅಧ್ಯಯನವನ್ನು ಅವರ ತಂದೆಯ ಮಾರ್ಗದರ್ಶನದಲ್ಲಿ ಕಲಿತರು. 

ವ್ಯಾಸ : ಅಜ್ಜಿ ತಿರುವಾಯ್ಮೊಳಿ ಪಿಳ್ಳೈ ಅವರ ಆಚಾರ್ಯರು ಅಲ್ಲವೇ? 

ಅಜ್ಜಿ : ಹೌದು ವ್ಯಾಸ, ತಿರುವಾಯ್ಮೊಳಿ ಪಿಳ್ಳೈ ಅವರ ಶ್ರೇಷ್ಟತೆ ತಿಳಿದು ಅವರಿಗೆ ಶರಣಾದರು. ಅವರು ಅರುಳಿಚೆಯಲ್ಗಳಲ್ಲಿ   (ದಿವ್ಯ ಪ್ರಬಂಧಂ ) ನಿಪುಣರಾಗಿ ವಿಶೇಷವಾಗಿ ತಿರುವಾಯ್ಮೊಳಿ ಮತ್ತು ಈಡು 36000 ಪಡಿ ವ್ಯಾಖ್ಯಾನದಲ್ಲಿ ನಿಪುಣರಾಗಿದ್ದರು. ಅವರು ಶ್ರೀ ರಾಮಾನುಜರ ಕಡೆಗೆ ಅತ್ಯಂತ ಭಾಂದವ್ಯ ಹೊಂದಿದ್ದು ಆಳ್ವಾರ್ ತಿರುನಗರಿಯಲ್ಲಿ ಭವಿಷ್ಯದಾಚಾರ್ಯನ್ ಸನ್ನಿಧಿಯಲ್ಲಿ  ಸೇವೆ ಸಲ್ಲಿಸಿದರು. ಅವರು ಯತೀಂದ್ರ (ಶ್ರೀ ರಾಮಾನುಜ ) ಕಡೆಗೆ ಅತೀತ ಪ್ರೀತಿ ಹೊಂದಿದ್ದರಿಂದ, ಅವರನ್ನು “ ಯತೀಂದ್ರ  ಪ್ರವಣ “ ಎಂದು ಕರೆಯುತ್ತಾರೆ ( ಯತೀಂದ್ರರನ್ನು ಅತ್ಯಂತವಾಗಿ ಪ್ರೀತಿಸುವವರು)  .  

ನಂತರ, ಅವರ ಆಚಾರ್ಯನ ನಿಯಮನವನ್ನು ನೆನಪಿಸಿಕೊಳ್ಳುತ್ತಾ ಅವರು ಹೋಗಿ ನಮ್ಮ ಸಂಪ್ರದಾಯದ ಪ್ರಚಾರಕ್ಕಾಗಿ ಶ್ರೀರಂಗದಲ್ಲಿ ವಾಸಿಸುತ್ತಾರೆ. ಶ್ರೀರಂಗಂ ತಲುಪಿದ ನಂತರ, ಅವರು ಸನ್ಯಾಸ ಆಶ್ರಮವನ್ನು ಸಹ ಸ್ವೀಕರಿಸುತ್ತಾರೆ ಮತ್ತು ಅಳಗಿಯ ಮಣವಾಳ  ಮಾಮುನಿಗಳ್  ಮತ್ತು ಪೆರಿಯ ಜೀಯರ್ ಎಂದು ಜನಪ್ರಿಯರಾಗುತ್ತಾರೆ.

ಮುಮುಕ್ಷುಪ್ಪಡಿ, ತತ್ವ ತ್ರಯಂ, ಶ್ರೀವಚನ ಭೂಷಣಂ ಮುಂತಾದ ರಹಸ್ಯ ಗ್ರಂಥಗಳಿಗೆ ವೇದ , ವೇದಾಂತ ,ಇತಿಹಾಸ,ಪುರಾಣಗಳ ಮತ್ತು ಅರುಳಿಚೆಯಲ್ಗಳನ್ನು  ಉಲ್ಲೇಖಿಸುತ್ತ   ಅವರು ಸುಂದರವಾದ ವ್ಯಾಖ್ಯಾನಗಳನ್ನು ಬರೆಯುತ್ತಾರೆ. ಅವರು ರಾಮಾನುಜ  ನೂಱ್ಱಂದಾದಿ, ಜ್ಞಾನ  ಸಾರಮ್ ಮತ್ತು ಪ್ರಮೇಯ ಸಾರಂ ಗೆ ವ್ಯಾಖ್ಯಾನಗಳನ್ನು ಬರೆಯುತ್ತಾರೆ, ಇದು ಚರಮ ಉಪಾಯ ನಿಷ್ಠೆಯನ್ನು ವಿವರಿಸುತ್ತದೆ (ಆಚಾರ್ಯನನ್ನು ಅರ್ಥಮಾಡಿಕೊಳ್ಳುವುದೆ  ಎಲ್ಲವೂ). ಮಾಮುನಿಗಳ್  ಅವರು ತಿರುವಾಯ್ಮೊಳಿ  ನೂಱ್ಱಂದಾದಿ ಅನ್ನು ಬರೆದಿದ್ದಾರೆ, ಇದು ಕೆಲವು ಶ್ರೀವೈಷ್ಣವರ  ಕೋರಿಕೆಯ ಆಧಾರದ ಮೇಲೆ ತಿರುವಾಯ್ಮೊಳಿ ಮತ್ತು ನಮ್ಮಾಳ್ವಾರ್  ಅವರ  ಶ್ರೇಷ್ಠತೆಯನ್ನು ಅರ್ಥೈಸುತ್ತದೆ. ಅವರು ನಮ್ಮ ಪೂರ್ವಾಚಾರ್ಯರ ಅಮೂಲ್ಯವಾದ ಬೋಧನೆಗಳನ್ನು ಸಹ ಉಪದೇಶ  ರತ್ನ ಮಾಲೈ ಬರೆಯುವ ಮೂಲಕ ದಾಖಲಿಸಿದ್ದಾರೆ, ಇದು ಆಳ್ವಾರ್  ಅವರ ಜನ್ಮಸ್ಥಳಗಳು, ತಿರುನಕ್ಷತ್ರಗಳು,  ತಿರುವಾಯ್ಮೊಳಿ ಮತ್ತು ಶ್ರೀವಚನ ಭೂಷಣಮನ್ನು ಎತ್ತಿ ತೋರಿಸುತ್ತದೆ. ಮಾಮುನಿಗಳ್   ದಿವ್ಯ ದೇಶ  ಯಾತ್ರೆಗಳನ್ನು ನಿರ್ವಹಿಸಿ ಮತ್ತು ಎಲ್ಲಾ ಪೆರುಮಾಳ್  ಮತ್ತು ಆಳ್ವಾರರಿಗೆ ಮಂಗಳಾಶಾಸನಮನ್ನು ನಿರ್ವಹಿಸುತ್ತಾರೆ .

ವೇದವಲ್ಲಿ : ಅಜ್ಜಿ , ಮಾಮುನಿಗಳ್ ಮತ್ತು ನಮ್ಮ ಸಂಪ್ರದಾಯಕ್ಕೆ ಸಲ್ಲಿಸಿದ ಸೇವೆಯ ಅವರ  ಬಗ್ಗೆ ತಿಳಿಯಲು ಬಹಳ ಅದ್ಭುತವಾಗಿದೆ .

ಅಜ್ಜಿ : ಹೌದು ವೇದವಲ್ಲಿ, ಮಾಮುನಿಗಳಿಂದ  ನಮ್ಮಾಳ್ವಾರ್  ಅವರ ತಿರುವಾಯ್ಮೊಳಿ ಜೊತೆ ಈಡು  36000 ಪಡಿ ವ್ಯಾಖ್ಯಾನವನ್ನು ಕೇಳಲು ನಂಪೆರುಮಾಳ್  ಸಹ ಬಹಳ ಕುತೂಹಲದಿಂದ ಇದ್ದರು. ಮಾಮುನಿಗಳ್   ತುಂಬಾ ಸಂತೋಷಪಟ್ಟರು ಮತ್ತು 10 ತಿಂಗಳ ಕಾಲ ಅದರ ಕಾಲಕ್ಷೇಪವನ್ನು ನಡೆಸಿ  ಮತ್ತು ಅಂತಿಮವಾಗಿ ಆಣಿ  ತಿರುಮೂಲಂ ಅಂದು  ಸಾಱ್ಱುಮುರೈ ಅನ್ನು ಮಾಡಿದರು .

ಸಾಱ್ಱುಮುರೈ  ಪೂರ್ಣಗೊಂಡ ನಂತರ, ನಂಪೆರುಮಾಳ್   ಅರಂಗನಾಯಕಂ   ಎಂಬ ಸಣ್ಣ ಮಗುವಿನ ರೂಪದಲ್ಲಿ  ಮಾಮುನಿಗಳ ಮುಂದೆ ಬಂದು ಅಂಜಲಿ ಮುದ್ರಾ (ಸೇರಿಕೊಂಡ ಅಂಗೈ) ಯೊಂದಿಗೆ “ಶ್ರೀಶೈಲೇಶ  ದಯಾಪಾತ್ರಂ  ಧೀ ಭಕ್ತ್ಯಾದಿ   ಗುಣಾರ್ಣವಂ ” ಅನ್ನು ಪಠಿಸಲು ಪ್ರಾರಂಭಿಸುತ್ತಾನೆ . ಪ್ರತಿಯೊಬ್ಬರೂ ಆಶ್ಚರ್ಯಚಕಿತರಾಗುತ್ತಾರೆ ಮತ್ತು ಅದು ಬೇರೆ ಯಾರೂ ಅಲ್ಲ ಸ್ವತಃ ನಂಪೆರುಮಾಳ್  ಎಂದು ಅರ್ಥಮಾಡಿಕೊಳ್ಳುತ್ತಾರೆ

ಪರಾಶರ : ವಾಹ್! ನಂಪೆರುಮಾಳ್  ಸ್ವತಃ ಗೌರವಿಸಲು ಇದು ಅದ್ಭುತವಾಗಿದೆ. ಅಜ್ಜಿ , ಅದಕ್ಕಾಗಿಯೇ ನಾವು ನಮ್ಮ ಎಲ್ಲ ಸೇವಾಕಾಲಂ  ಅನ್ನು ಈ ತನಿಯನ್‌ನೊಂದಿಗೆ ಪ್ರಾರಂಭಿಸುತ್ತೇವೆಯೆ ?

ಅಜ್ಜಿ : ಹೌದು ಪರಾಶರ . ಎಂಪೆರುಮಾನ್  ಈ ತನಿಯನನ್ನು ಎಲ್ಲಾ ದಿವ್ಯ ದೇಶಗಳಿಗೂ  ಕಳುಹಿಸುತ್ತಾರೆ  ಮತ್ತು ಪ್ರಾರಂಭದ ಸಮಯದಲ್ಲಿ ಮತ್ತು ಸೇವಾಕಾಲಂ  ನ ಕೊನೆಯಲ್ಲಿ ಇದನ್ನು ಪಠಿಸಬೇಕೆಂದು ಆದೇಶಿಸುತ್ತಾರೆ . ತಿರುವೆಂಕಟಮುಡೆಯಾನ್ ಮತ್ತು ತಿರುಮಾಲಿರುಂಜೋಲೈ ಅಳಗರ್  ಕೂಡ ಈ ತನಿಯನ್ ಅನ್ನು ಪ್ರಾರಂಭದಲ್ಲಿ ಮತ್ತು ಅರುಳಿಚೆಯಲ್  ಅನುಸಂಧಾನಂ  ಕೊನೆಯಲ್ಲಿ ಪಠಿಸಬೇಕೆಂದು ಸೂಚನೆ ನೀಡಿದರು.

ಅವರ ಅಂತಿಮ ದಿನಗಳಲ್ಲಿ, ಮಾಮುನಿಗಳ್  ಆಚಾರ್ಯ ಹೃದಯಂ ಗೆ  ಬಹಳ ಕಷ್ಟದಿಂದ ವ್ಯಾಖ್ಯಾನವನ್ನು ಬರೆಯುತ್ತಿದ್ದರು. ಅಂತಿಮವಾಗಿ ಅವರು  ತಮ್ಮ  ತಿರುಮೇನಿ (ದೈವಿಕ ರೂಪ) ವನ್ನು ಬಿಟ್ಟು ಪರಮಪದಕ್ಕೆ ಹೋಗಲು ನಿರ್ಧರಿಸುತ್ತಾರೆ . ಅವರನ್ನು ಸ್ವೀಕರಿಸಲು ಮತ್ತು ಈ ಭೌತಿಕ ಕ್ಷೇತ್ರದಿಂದ ಅವರನ್ನು ಮುಕ್ತಗೊಳಿಸಲು ಎಂಪೆರುಮಾನಾರಿಗೆ ಕೂಗುತ್ತಿರುವ ಆರ್ಥಿ ಪ್ರಬಂಧವನ್ನು ಅವರು ಪಠಿಸುತ್ತಾರೆ. ತರುವಾತ, ಮಾಮುನಿಗಳ್, ಎಂಪೆರುಮಾನ್  ಅನುಗ್ರಹದಿಂದ ಪರಮಪದಕ್ಕೆ ಏರುತ್ತಾರೆ . ಆ ಸಮಯದಲ್ಲಿ ದೂರವಾಗಿದ್ದ ಪೊನ್ನಡಿಕ್ಕಾಲ್ ಜೀಯರ್, ಸುದ್ದಿ ಕೇಳಿ ಶ್ರೀರಂಗಕ್ಕೆ ಹಿಂದಿರುಗುತ್ತಾರೆ  ಮತ್ತು ಮಾಮುನಿಗಳಿಗಾಗಿ  ಎಲ್ಲಾ ಚರಮ ಕೈಂಕರ್ಯಗಳನ್ನು ಪೂರ್ಣಗೊಳಿಸುತ್ತಾರೆ .

ಅತ್ತುಳಾಯ್ : ಅಜ್ಜಿ, ನಾವೆಲ್ಲರೂ ಅವರ  ಬಗ್ಗೆ ಮಾತನಾಡುವ ಮೂಲಕ ಅಪಾರ ಜ್ಞಾನ  ಪಡೆದಿದ್ದೇವೆ. ಮಾಮುನಿಗಳ್ ಅವರ ದೈವಿಕ ಚರಿತ್ರವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ಅಜ್ಜಿ : ಅದು ನನ್ನ ಭಾಗ್ಯ. ಕಡೆಯದಾಗಿ,ಪೆರಿಯ ಪೆರುಮಾಳ್ ಅವರನ್ನು ಆಚಾರ್ಯನಾಗಿ ಸ್ವೀಕರಿಸಿದರಿಂದ ಅವರು ಆಚಾರ್ಯ ರತ್ನ ಹಾರವನ್ನು ಪೂರೈಸಿ ಪೆರಿಯ ಪೆರುಮಾಳ್ ಸ್ವತಃ ಪ್ರಾರಂಭಿಸಿದ ಓರಾನ್  ವಳಿ ಗುರು ಪರಂಪರೈ ಪೂರ್ಣಗೊಳಿಸಿದರು .

ನಮ್ಮ ಮುಂದಿನ ಚರ್ಚಿಯಲ್ಲಿ ಮಾಮುನಿಗಳ್ ಅವರ ಶಿಷ್ಯರ ( ಆಷ್ಟ ದಿಗ್ಗಜರು ) ಬಗ್ಗೆ ತಿಳಿದುಕೊಳ್ಳೋಣ .  

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://pillai.koyil.org/index.php/2018/06/beginners-guide-mamunigal/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment