ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ವ್ಯಾಸ ಮತ್ತು ಪರಾಶರ ಗಳೆಯರೊಂದಿಗೆ ಆಟವಾಡಿದಮೇಲೆ ಆಂಡಾಳಜ್ಜಿ ಮನೆಗೆ ಹಿಂತಿರುಗುವರು. ಅವರು ಆಂಡಾಳಜ್ಜಿ ಹೂವು, ಹಣ್ಣು, ಕಾಯಿಗಳನ್ನು ಜೋಡಿಸುವುದನ್ನು ಕಾಣುತ್ತಾರೆ.
ವ್ಯಾಸ : ಅಜ್ಜಿ, ಯಾರಿಗಾಗಿ ಈ ಹೂವು ಹಣ್ಣು ಜೋಡಿಸಿಟ್ಟಿರುವೆ?
ಆಂಡಾಲಜ್ಜಿ : ಶ್ರೀರಂಗನಾಥನ ಮೆರವಣಿಗೆಯ ಹೊತ್ತಾಗಿದೆ, ದಾರಿಯಲ್ಲಿ ಅವರು ನಮ್ಮನ್ನು ಕಾಣ ಬರುವರು . ನಮ್ಮನ್ನು ಯಾರಾದರು ಅತಿಥಿಯಾಗಿ ಕಾಣಲು ಬಂದಾಗ, ವಿಶೇಷವಾಗಿ ಹಿರಿಯರು ,ಅವರು ನಮ್ಮೊಂದಿಗೆ ಇರುವಾಗ ಅವರ ಸೇವೆ ಮಾಡುವುದು ನಮ್ಮ ಕರ್ತವ್ಯ. ಅದು ರಾಜಾದಿರಾಜರು ಬಂದಾಗ , ಅವರಿಗೆ ನಿಶ್ಚಯವಾಗಿ ತಕ್ಕ ಸೇವೆ ಮಾಡಬೇಕು.
ಪರಾಶರ : ಓಹ್ ಹೌದು ಅಜ್ಜಿ , ಹಾಗಾದರೆ ನಾನು ಶ್ರೀರಂಗನಾಥನು ಬಂದಾಗ ನಾನು ಹಣ್ಣುಗಳನ್ನು ಕೊಡುವೆನು.
ಆಂಡಾಲಜ್ಜಿ: ಒಳ್ಳೆಯದು ,ಪರಾಶರ. ಬಾ ನಾವು ಬಾಗಿಲಲ್ಲಿ ಅವರು ಬರುವುದಕ್ಕೆ ಕಾಯೋಣ.
ನಂಪೆರುಮಾಳರು (ಶ್ರೀರಂಗನಾಥ) ಅಂಡಾಲಜ್ಜಿಯ ಮನೆಯ ಮುಂದೆ ಆಗಮಿಸುತ್ತಾರೆ. ಶ್ರೀರಂಗನಾಥನಿಗೆ ಹೂವು ಹಣ್ಣು ಕೊಡಲು ಪರಾಶರನು ಉತ್ಸಾಹದ ಕಾಂತಿಯಿಂದ ಹೊಳೆಯುತ್ತಾನೆ.
ಪರಾಶರ : ಅಜ್ಜಿ, ಅವರು ಎಡಗೈಯಲ್ಲಿ ಏನು ಹಿಡಿದುಕೊಂಡಿದ್ದಾರೆ.
ಅವರ ಭುಜಗಳ ಮೇಲೆ ಬಲಗೈಯಲ್ಲಿ ಚಕ್ರಂ ( ಚಕ್ರ), ಎಡಗೈಯಲ್ಲಿ ಶಂಖು (ಶಂಖ), ಬಲಗೈಯಲ್ಲಿ ಅಭಯ ಹಸ್ತಮ್ ( ರಕ್ಷಣೆಯ ಭಂಗಿ ), ಅವರ ಭುಜಗಳ ಕೆಳಗೆ ಎಡಗೈಯಲ್ಲಿ ಗಧೆ
ಆಂಡಾಳಜ್ಜಿ : ಪರಾಶರ , ಅವರು ಎಡಗೈಯಲ್ಲಿ ಗಧೆ ಹಿಡಿದಿದ್ದಾರೆ. ಅರ್ಚಾವತಾರದಲ್ಲಿ ಶ್ರೀರಂಗನಾಥನಿಗೆ ನಾಲ್ಕು ಕೈಗಳಿರುತ್ತವೆ. ಅವರ ಭುಜಗಳ ಮೇಲೆ ಇನ್ನೊಂದು ಎಡಗೈಯಲ್ಲಿ ಅವರು ಶಂಖ ಹಿಡಿದು , ಭುಜಗಳ ಮೇಲೆ ಇನ್ನೊಂದು ಬಲಗೈಯಲ್ಲಿ ಸುದರ್ಶನ ಚಕ್ರಂ ಹಿಡಿದಿದ್ದಾರೆ. ನಮ್ಮನ್ನು ಸದಾ ಕಾಪಾಡುವೆನೆಂದು, ನಮ್ಮ ಕಷ್ಟಗಳನ್ನು ತೊಲಗಿಸಲು, ನಮಗೆ ತೋರಲು ಅವರು ತಮ್ಮ ಆಯುಧಗಳನ್ನು ಪ್ರದರ್ಶಿಸುತ್ತಾರೆ.
ವ್ಯಾಸ : ಅಜ್ಜಿ, ಅವರ ಬಲಗೈಯ ವಿಶೇಷವೇನು?
ಆಂಡಾಳಜ್ಜಿ :ಅದು ಒಳ್ಳೆಯ ಪ್ರಶ್ನೆ . “ ನಾನು ಇಲ್ಲಿ ನಿನ್ನನ್ನು ಕಾಪಾಡಲು ಇರುವೆ, ಭಯ ಪಡಬೇಡ” ಎಂದು ವಾತ್ಸಲ್ಯದಿಂದ ಹೇಳಲು ಅವರ ಬಲಗೈ ನಮ್ಮೆಲ್ಲರಿಗೆ ಹಾಗೆ ತೋರಿಸುತ್ತಾರೆ. ಹೇಗೆ, ಒಂದು ಹಸು ,ಕರು ಅದಕ್ಕೆ ಮುಂದೆ ಹೇಗಾದರೂ ಪ್ರವರ್ತಿಸಲಿ, ಕರುಗೆ ಬೇಕಾದಾಗ ಬರುವುದೋ ಹಾಗೆ.
ವ್ಯಾಸ : ಅಜ್ಜಿ, ಮತ್ತೆ ಅವರ ತಲೆಯ ಮೇಲೆ ಏನಿದೆ ?
ಆಂಡಾಳಜ್ಜಿ : ಅದು ಕಿರೀಟ , ವ್ಯಾಸ . ಅದು ಅವರು ಈ ಜಗತ್ತಿಗೆಲ್ಲ ನಾಯಕ ಎಂದು ತೋರಿಸುವುದು.
ಪರಾಶರ:ಆ ಕಿರೀಟವೂ ಬಹಳ ಚೆನ್ನಾಗಿದೆ ಅಜ್ಜಿ. ಅವರ ಚೆಲುವಾದ ಮುಖಕ್ಕೆ ಹೊಂದುತ್ತದೆ.
ಆಂಡಾಳಜ್ಜಿ: ಹೌದು, ಅವರಿಗೆ ಅತ್ಯಂತ ಚೆಲುವಾದ ಮುಖವಿದೆ. ಅವರಿಗೆ ನಮ್ಮೊಂದಿಗೆ ಇರುವುದು ಸಂತೋಷ , ಅದರಲ್ಲೂ ನಿನ್ನಂತ ಮಕ್ಕಳೊಂದಿಗೆ ಇರುವುದು ಬಹಳ ಸಂತೋಷ.
ಪರಾಶರ: ಹೌದು ಅಜ್ಜಿ, ನನ್ನು ಹತ್ತಿರದಿಂದ ನೋಡಿದೆ . ಅವರ ಪಾದಗಳನ್ನು ಮತ್ತು ಅವರು ನಗುವುದು ನೋಡಿದೆ.
ಆಂಡಾಳಜ್ಜಿ: ಓಹ್ ,ಒಳ್ಳೆಯದು , ಪರಾಶರ. ಮೃದುವಾಗಿ ಚೆಲುವಾಗಿರುವುದರಿಂದ ನಾವು ಸಹಜವಾಗಿ “ ಪಾದಕಮಲ” ಎಂದು ಹೇಳುತ್ತೇವೆ. ಅವರ ನಗುಮುಖ ಅವರು ಸರಳವಾಗಿ ಹಿಗ್ಗಿನಿಂದ ನಮ್ಮೊಂದಿಗೆ ಇರಲು ಇಳಿದು ಬಂದಿದ್ದಾರೆ ಎಂದು ತೋರಿಸುತ್ತದೆ. ಅವರ ಪಾದಕಮಲಗಳು ಪೀಠದ ಮೇಲೆ ಧೃಡವಾಗಿ ಇರುವುದು , ಹಾಗೆಂದರೆ ಅವರು ನಮಗಾಗಿ ಬಂದಿದ್ದಾರೆ ಮತ್ತು ನಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಅರ್ಥ . ಹಾಗಾಗಿ, ಇಂದು ನಾವು ಅವರ ಅರ್ಚಾವತಾರದಲ್ಲಿ ಪ್ರಮುಖ ಕಲ್ಯಾಣ ಗುಣಗಳನ್ನು ತಿಳಿದಿದ್ದೇವೆ , ಅವು – ವಾತ್ಸಲ್ಯಂ ( ತಾಯ್ಮೈ -ನಮ್ಮನ್ನು ರಕ್ಷಿಸಲು ಅವರು ತಮ್ಮ ಕೈ ತೋರಿಸುವುದು ), ಸ್ವಾಮಿತ್ವಂ ( ಪ್ರಬಲತೆ -ಎತ್ತರವಾದ ಕಿರೀಟ ), ಸೌಶೀಲ್ಯಂ ( ಅವರು ನಗು ಮುಖದೊಂದಿಗೆ ನಮ್ಮಲ್ಲಿ ಸರಳವಾಗಿ ಇರುವುದು ) ಮತ್ತು ಸೌಲಭ್ಯಂ ( ಸುಲಭವಾಗಿ ಅವರನ್ನು ಅನುಸರಿಸಬಹುದು – ಅವರ ಪಾದಕಮಲಗಳನ್ನು ಸಹಜವಾಗಿ ಹಿಡಿಯಬಹುದು)
ವ್ಯಾಸ ಮತ್ತು ಪರಾಶರ ಆಶ್ಚರ್ಯದಿಂದ ಮೆರವಣಿಗೆ ಅವರ ಮುಂದೆ ಹೋಗುವುದನ್ನು ನೋಡುತ್ತಾರೆ.
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org