ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀ ಮಹಾಲಕ್ಷ್ಮಿಯ ಮಾತೃತ್ವ ಗುಣ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು

ಮರುದಿನ ಪರಾಶರ ಮತ್ತು ವ್ಯಾಸರನ್ನು ಅಜ್ಜಿ ಉತ್ತರ ವೀಧಿಯ ಮಾರ್ಗದಿಂದ ಶ್ರೀರಂಗ ದೇವಾಲಯಕ್ಕೆ ಕರೆದು ಕೊಂಡು ಹೋಗುತ್ತಾರೆ. 

ವ್ಯಾಸ: ಅಜ್ಜಿ ಇದು ಯಾರ ಸನ್ನಿಧಿ?

ಆಂಡಾಳಜ್ಜಿ : ವ್ಯಾಸ, ಇದು ಶ್ರೀ ರಂಗನಾಯಕಿ ತಾಯಾರ್ ಸನ್ನಿಧಿ. 

ಪರಾಶರ : ಅಜ್ಜಿ,ಆದರೆ ನಾವು ನಿನ್ನೆ ಶ್ರೀ ರಂಗನಾಥರನ್ನು ಮೆರವಣಿಗೆಯಲ್ಲಿ ನೋಡಿದೆವು . 

ಆಂಡಾಳಜ್ಜಿ :ಹೌದು ಪರಾಶರ, ಅದು ಸರಿ .ಏಕೆಂದರೆ ಶ್ರೀ ರಂಗನಾಯಕಿ ತಾಯಾರ್ ಅವರ ಸನ್ನಿಧಿಯಿಂದ ಹೊರಗೆ ಬರುವುದಿಲ್ಲ . ಶ್ರೀ ರಂಗನಾಥನು ಕೂಡ ಅವರನ್ನು ಕಾಣಬೇಕಾದರೆ, ಸ್ವತಃ ಅವರೇ ಬರಬೇಕು.

ಪರಾಶರ : ಓಹ್! ಸರಿ ಅಜ್ಜಿ . ಅಂದರೆ ಅವರನ್ನು ಕಾಣಬೇಕಾದರೆ ನಾವೇ ಅಲ್ಲಿಗೆ ಹೋಗಬೇಕು.ಶ್ರೀರಂಗಕ್ಕೆ  ಬಂದಾಗ,ದೇವಾಲಯಕ್ಕೆ ಬರಲು ಈಗ ಮತ್ತೊಂದು ಕಾರಣ ಸಿಕ್ಕಿದೆ. 

ತಾಯಾರನ್ನು ದರ್ಶನ ಮಾಡಿದ ನಂತರ ಆವರು ಹೊರಗೆ ಬರುತ್ತಾರೆ.

ಆಂಡಾಳಜ್ಜಿ : ನಾನೀಗ ನಿಮ್ಮಿಬ್ಬರಿಗೆ ಒಂದು ಪ್ರಶ್ನೆ ಕೇಳುತ್ತೇನೆ . ನೀವು ಸಂಜೆ ಆಟವಾಡಿ ತಡವಾಗಿ ಮನೆಗೆ ಬಂದಾಗ, ನಿಮ್ಮ ಅಪ್ಪ ಹೇಗೆ ವರ್ತಿಸುತ್ತಾರೆ?

ವ್ಯಾಸ : ಅಜ್ಜಿ, ಆಗ ಅವರು ಕೋಪಗೊಳ್ಳುತ್ತಾರೆ. 

ಆಂಡಾಳಜ್ಜಿ : ನಿಮ್ಮ ಅಪ್ಪ  ಶಿಕ್ಷಿಸುತ್ತಾರೆಯೇ ?

ಪರಾಶರ : ತುಂಬಾ ಅಪರೂಪವಾಗಿ ನಾವು ಶಿಕ್ಷೆ ಅನುಭವಿಸುತ್ತೇವೆ ಅಜ್ಜಿ. ಅವರು ಕೋಪಗೊಂಡಾಗ , ಅಮ್ಮ ಅವರನ್ನು ತಡೆಯುತ್ತಾರೆ. 

ಆಂಡಾಳಜ್ಜಿ: ಅದೇರೀತಿ ನಾವು ಪೆರುಮಾಳಿಗೆ ಇಷ್ಟವಾಗದಿರುವ ಕೆಲಸಗಳನ್ನು ಮಾಡಿದಾಗ ನಮ್ಮನ್ನು ಶಿಕ್ಷಿಸಬೇಕೆಂದು ಅವರಿಗೆ ಅನಿಸುತ್ತದೆ, ಅಂತಹ ಸಮಯದಲ್ಲಿ, ತಾಯಾರ್ ಪೆರುಮಾಳೊಡನೆ ಮಾತನಾಡಿ ನಮ್ಮನ್ನು ರಕ್ಷಿಸುತ್ತಾಳೆ. 

ಪರಾಶರ : ಅದು ಸರಿ ಅಜ್ಜಿ, ಆಕೆ ನಮ್ಮ ತಾಯಿಯಂತೆ. 

ಆಂಡಾಳಜ್ಜಿ : ನಂಪೆರುಮಾಳರು ನಮ್ಮ ರಕ್ಷಣೆಗಾಗಿ ಆಯುಧಗಳನ್ನು ಹಿಡಿದಿರುತ್ತಾರೆ , ಆದರೆ ಕೋಮಲ ಸ್ವಭಾವವುಳ್ಳ ತಾಯಾರ್ ಕಮಲದ ಹೂವುಗಳನ್ನು ಹಿಡಿದಿರುತ್ತಾರೆ. ಪೆರುಮಾಳ ಸನ್ನಿಧಿಯನ್ನು ತಲುಪಲು ರಂಗರಂಗ ಗೋಪುರವನ್ನು ದಾಟಿ, ನಂತರ ನಾಳಿಕೆಟ್ಟಾಣ್ ವಾಸಲ್ (ಪ್ರವೇಶ ದ್ವಾರ) , ಅದನಂತರ ಗರುಡ ಸನ್ನಿಧಿ , ಧ್ವಜಸ್ಥಂಭ  ಮತ್ತು ಶ್ರೀ ರಂಗನಾಥರ ಸನ್ನಿಧಿ. ಆದರೆ ಉತ್ತರ ವೀಧಿಯಿಂದ ಒಳಗೆ ಬಂದೊಡನೆ ತಾಯಾರ್ ಸನ್ನಿಧಿ ತಲುಪುತ್ತೇವೆ. ಆಕೆ ನಮಗೆ ಅಷ್ಟು ಹತ್ತಿರ. 

ಪರಾಶರ : ಹೌದು ಅಜ್ಜಿ 

ಆಂಡಾಳಜ್ಜಿ : ಸೀತಾಮಾತೆಯಂತೆ ಶ್ರೀ ರಾಮನಿಂದ ಕಾಕಾಸುರನನ್ನು ಕಾಪಾಡಿದಳು. ಇಂದ್ರನ ಮಗ ಕಾಗೆಯ ಸ್ವರೂಪದಲ್ಲಿ ಬಂದು ಆಕೆಗೆ ತೊಂದರೆ ಕೊಟ್ಟ . ಶ್ರೀ ರಾಮನು ಅವನನ್ನು ಶಿಕ್ಷಿಸಲಿದ್ದರು. ಆದರೆ ಆಕೆ ಕರುಣೆಯಿಂದ ಕಾಕಾಸುರನನ್ನು ಕಾಪಾಡಿದಳು. ಅದೇರೀತಿ , ಶ್ರೀ ರಾಮನು ರಾವಣನನ್ನು ಸಂಹಾರಿಸಿದ ಮೇಲೆ, ಅಶೋಕ ವನದಲ್ಲಿದ್ದ ರಾಕ್ಷಸಿಗಳನ್ನ ಕಾಪಾಡಿದಳು. ಆಕೆಗೆ ತೊಂದರೆ ಕೊಡುತ್ತಾರೆಂದು ಹನುಮಂತನು ಅವರನ್ನು ವಧಿಸಲು ಇದ್ದನು. ಆದರೆ ಆಕೆ ಹನುಮಂತನಿಗೆ  ಅವರು ನಿಸ್ಸಹಾಯಕರಾಗಿ ರಾವಣನ ಆಜ್ಞೆಯನ್ನು ಪಾಲಿಸಿದರೆಂದು ವಿವರಿಸಿ, ಕಾಪಾಡಿದಳು.ಹಾಗಾಗಿ , ಮಮತೆ ವಾತ್ಸಲ್ಯದಿಂದ ಆಕೆ ಸದಾ ನಮ್ಮೆಲ್ಲರನ್ನು ರಕ್ಷಿಸುವಳು. 

ಸೀತಾ ಮಾತೆ ಕಾಕಾಸುರನನ್ನು ರಕ್ಷಿಸುವುದು
ರಾಕ್ಷಸಿಯರೊಡನೆ ಸೀತಾ ಮಾತೆ

ಪರಾಶರ ಮತ್ತು ವ್ಯಾಸ: ಆಕೆ ನಮ್ಮನ್ನು ಸದಾ ಕಾಪಾಡಬೇಕೆಂದು ಆಶಿಸುತ್ತೇವೆ. 

ಆಂಡಾಳಜ್ಜಿ : ಖಂಡಿತವಾಗಿ. ನಮ್ಮನ್ನು ರಕ್ಷಿಸಲು ಸದಾ ಆಕೆ ಪೆರುಮಾಳಿಗೆ ಹೇಳುವುದು ಆಕೆಯ ಪ್ರಮುಖ ಕರ್ತವ್ಯ. 

ಪರಾಶರ : ಆಕೆ ಅಷ್ಟೇ ಮಾಡುವುದೇ ಅಜ್ಜಿ ? ಅಂದರೆ “ನಮಗಾಗಿ ಪೆರುಮಾಳ್ ಹತ್ತಿರ ಮಾತನಾಡುವುದು “? 

ಆಂಡಾಳಜ್ಜಿ : ಅದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ನೀವು ನಿಮ್ಮ ಹೆತ್ತವರಿಗೆ ಸೇವೆ ಮಾಡುವಾಗ ನಿಮ್ಮ ತಂದೆಗೆ ಮಾತ್ರ ಸೇವೆ ಮಾಡುವರೆ? 

ಪರಾಶರ :  ಇಲ್ಲ ಅಜ್ಜಿ, ಅಪ್ಪ ಅಮ್ಮ ಇಬ್ಬರು ನಮಗೆ ತುಂಬಾ ಇಷ್ಟ. ಅವರಿಬ್ಬರಿಗೂ ಸೇವೆ ಮಾಡಲು ನಮಗೆ ಇಷ್ಟ. 

ಆಂಡಾಳಜ್ಜಿ : ಅದೇರೀತಿ , ಪೆರುಮಾಳನ್ನು ತಲುಪಲು ತಾಯಾರ್  ಶಿಫಾರಸು ಮಾಡಿ ನಮಗೆ ಸಹಾಯ ಮಾಡುವಳು.ಆದರೆ ನಾವು ಪೆರುಮಾಳನ್ನು ತಲುಪಿದ ನಂತರ , ನಮ್ಮ ಭಕ್ತಿ ಪ್ರೀತಿಗಳನ್ನು ಪೆರುಮಾಳೊಂದಿಗೆ  ಸ್ವೀಕರಿಸುತ್ತಾರೆ. 

ತಾಯಾರ್ ಮತ್ತು ನಂಪೆರುಮಾಳ್ – ಒಟ್ಟಗೆ ಪಂಗುನಿ ಉತ್ತರಂ ದಿನ

ಪರಾಶರ ಮತ್ತು ವ್ಯಾಸ : ವಾಹ್! ಇದು ಸುಲಭವಾಗಿ ಅರ್ಥವಾಗಿದೆ ಅಜ್ಜಿ. ಮುಂದಿನ ಬಾರಿ ಇನ್ನೂ ಹೆಚ್ಚಿಗೆ ಕೇಳಬೇಕೆಂದಿದೆ. ನಾವೀಗ ಸ್ವಲ್ಪ ಹೊತ್ತು ಹೊರಗೆ ಆಟವಾಡುತ್ತೇವೆ. 

ಪರಾಶರ ಮತ್ತು ವ್ಯಾಸ ಆಡಲು ಹೊರಗೆ ಓಡುತ್ತಾರೆ!

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ : http://pillai.koyil.org/index.php/2014/08/beginners-guide-sri-mahalakshmis-motherly-nature/ 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment