ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣ ಯಾರು?

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಹಿಂದಿನ ಶೀರ್ಷಿಕೆ

ಪರಾಶರ ಮತ್ತು ವ್ಯಾಸನನ್ನು ಆಂಡಾಳ್ ಅಜ್ಜಿ ಶ್ರೀರಂಗಂ ದೇವಾಲಯಕ್ಕೆ ಕರೆದುಕೊಂಡು ಹೋಗುತ್ತಾರೆ .

ಶ್ರೀರಂಗಂ ದೇವಾಲಯ

ವ್ಯಾಸ :  ವಾಹ್, ಅಜ್ಜಿ , ಎಷ್ಟು ದೊಡ್ಡ ಗುಡಿ ಇದು . ಇಷ್ಟು ದೊಡ್ಡದಾದ ಗುಡಿ ಯಾವುದು ಇಲ್ಲಿಯವರೆಗೂ ನೋಡಿಲ್ಲ. ಇಂತಹ ದೊಡ್ಡ ಅರಮನೆಯಲ್ಲಿ ರಾಜರು ವಾಸಿಸುತ್ತಾರೆ ಎಂದು ಕೇಳಿದ್ದೇವೆ. ನಾವೀಗ ರಾಜರನ್ನೂ ನೋಡಲು ಹೋಗುತ್ತೇವೆಯೇ?

ಆಂಡಾಳಜ್ಜಿ : ಹೌದು, ನಾವೀಗ ರಾಜದಿರಾಜ ರಂಗರಾಜರನ್ನು ಕಾಣಲು ಹೋಗುತ್ತೇವೆ. ರಂಗರಾಜನ್  ( ಶ್ರೀರಂಗದ ರಾಜ್ಯ ), ನಾವು ಅವರನ್ನು ಪ್ರೀತಿಯಿಂದ ಪೆರಿಯ ಪೆರುಮಾಳ್ ಮತ್ತು ನಂಪೆರುಮಾಳ್ ಎಂದು ಶ್ರೀರಂಗದಲ್ಲಿ ಕರೆಯುತ್ತೇವೆ. ಪೆರಿಯ ಪೆರುಮಾಳ್ ಆದಿ ಶೇಷನ  ಮೇಲೆ ಮಲಗಿರುವಂತೆ ಅವರ ಪ್ರಬಲತೆಯನ್ನು ಮತ್ತು ಸ್ವಾಮಿತ್ವವನ್ನು ತೋರಿಸುತ್ತಾರೆ . ಭಕ್ತರು ಅವರನ್ನು ಕಾಣಲು ಬರುವವರೆಗು ಕಾಯುತ್ತಾ ಅವರು ಬಂದಾಗ ಆಶೀರ್ವದಿಸುತ್ತಾರೆ , ಆದರೆ ನಂಪೆರುಮಾಳ್ ಸೌಲಭ್ಯಂ ಪ್ರದರ್ಶಿಸುವರು , ಸಂಪರ್ಕಿಸಲು ಸುಲಭ, ಅವರ ಕೆಲವು ಭಕ್ತರ ಕಷ್ಟಗಳನ್ನು ಅರ್ಥ ಮಾಡಿಕೊಂಡು , ಅವರನ್ನು ಕಾಣಲು ಬಾರಲಾಗದವರಿಗಾಗಿ , ಅವರೇ ಪುರಪ್ಪಾಡು (ಸವಾರಿ / ಮೆರವಣಿಗೆ)  ಬರುತ್ತಾರೆ . ಶ್ರೀರಂಗದಲ್ಲಿ ಬಹುತೇಕ ಇಡೀ ವರ್ಷ, ನಂಪೆರುಮಾಳ್ ಅವರ ಭಕ್ತರನ್ನು  ಆಶೀರ್ವದಿಸಲು ಬರುತ್ತಾರೆ.

ಪರಾಶರ: ಅಜ್ಜಿ, ಆದರೆ ಅವರು ವೈಕುಂಠದಲ್ಲಿದ್ದಾರೆಂದು ತಿಳಿದೆವು, ಹೇಗೆ ಅವರು ಇಲ್ಲಿಯೂ ಇದ್ದಾರೆ?

ಆಂಡಾಳಜ್ಜಿ : ಹೌದು ಪರಾಶರ ನೀನು ಕೇಳಿದ್ದು ಸರಿ. ಪೆರುಮಾಳ್ ವೈಕುಂಠದಲ್ಲಿದ್ದಾರೆ ಹಾಗು ನಮ್ಮೊಂದಿಗಿರಲು ಇಲ್ಲಿ ಬಂದಿದ್ದಾರೆ. ನೀರಿನ ವಿವಿಧ ರೂಪಗಳನ್ನು ನೀನು ಬಲ್ಲೆಯಲ್ಲವ : ದ್ರವ, ಹಬೆ, ಮಂಜುಗಡ್ಡೆ . ಹಾಗೆಯ, ಪೆರುಮಾಳಿಗೆ ಐದು ರೂಪಗಳು ಇವೆ – ಅವು ಪರ, ವ್ಯೂಹ,ವಿಭವ,ಅಂತರ್ಯಾಮಿ, ಅರ್ಚೈ. ಶ್ರೀರಂಗದಲ್ಲಿ ಪೆರುಮಾಳ್ ಇರುವ ಅವತಾರಾವು ಅರ್ಚಾವತಾರ ಎಂದು ಕರೆಯುತ್ತಾರೆ. ಅವತಾರ ಎಂದರೆ ಕೆಳಗೆ ಬರುವುದು ಅಥವಾ ಅವರೋಹಣ. ನಾನು ಈಗಾಗಲೇ ಹೇಳಿದಂತೆ, ಈ ಲೋಕದಲ್ಲಿರುವ ಎಲ್ಲರ ಒಳ್ಳೆಯದಕ್ಕೆ ನಾವು ಪ್ರಾರ್ಥಿಸುತ್ತೇವೆ. ನಮ್ಮಾ ಪ್ರಾರ್ಥನೆಗಳ ಜವಾಬಾಗಿ ಶ್ರೀಮನ್ನಾರಾಯಣ ಇಲ್ಲಿಗೆ ಬಂದಿದ್ದಾರೆ. ನಮ್ಮಲ್ಲಿ ಅವರಿಗೆ ಅತ್ಯಂತ ವಾತ್ಸಲ್ಯವು ಇದ್ದು, ನಮ್ಮೊಂದಿಗೆ ಇರಲು ಬಯಸಿದರಿಂದ ಅವರು ಇಲ್ಲಿ ಶ್ರೀರಂಗನಾಥನಂತೆ ಇರುವರು.

ಭಗವಾನ್ ಪರತ್ವಾದಿ ಪಂಚಕಂ

ಅಜ್ಜಿ, ವ್ಯಾಸ ಮತ್ತು ಪರಾಶರರು ಪೆರಿಯ ಪೆರುಮಾಳನ್ನು ಪ್ರಾರ್ಥಿಸಿ ಸನ್ನಿಧಿಯಿಂದ ಹೊರಬರುವರು.

ವ್ಯಾಸ : ಅಜ್ಜಿ, ನಿಮ್ಮಿಂದ ಇವೆಲ್ಲ ಕೇಳಿದಮೇಲೆ ಈಗ ನಾವು ಅವರನ್ನು ಇಷ್ಟಪಡುತ್ತೇವೆ. ಅದಲ್ಲದೆ ಅಜ್ಜಿ, ಅವರು ನಮ್ಮಂತೆಯೇ ಇದ್ದಾರೆ.

ಆಂಡಾಳಜ್ಜಿ : ನಮ್ಮಂತೆಯೇ ಇರುವುದಲ್ಲದೆ, ಅವರು ನಮ್ಮಂತೆಯೇ ಬಾಳಿದವರು .ವಿಭವ ಅವತಾರದಲ್ಲಿ , ನಮ್ಮೊಂದಿಗೆ ಇರಲು ಅವರು ಸರ್ವೋಚ್ಚವಾದ ವೈಕುಂಠವನ್ನು ತ್ಯಜಿಸಿ  ಶ್ರೀರಾಮ ಮತ್ತು ಶ್ರೀಕೃಷ್ಣ ನಂತೆ ಇಲ್ಲಿಯೇ ಹುಟ್ಟಿ ಬಾಳಿದವರು.  ನಮ್ಮಲ್ಲಿ ಬಹಳರಿಗೆ ಶ್ರೀ ರಾಮ ಶ್ರೀಕೃಷ್ಣರ ಮೇಲೆ ವಿಶೇಷ ಅಕ್ಕರೆಯಿರುವುದರಿಂದ , ಅವರು ಕೃಷ್ಣನಂತೆ ಪೆರಿಯ ಪೆರುಮಾಳ್ ರೂಪದಲ್ಲಿ ಮತ್ತು ಶ್ರೀ ರಾಮನಂತೆ ನಂಪೆರುಮಾಳ್ ರೂಪದಿಲ್ಲಿರವಂತೆ ನಿರ್ಧರಿಸಿದರು. ಪೆರಿಯ ಪೆರುಮಾಳ್ ಆಳವಾದ ಯೋಚನೆಯಲ್ಲಿ ಮಲಗಿರುವಂತೆ ಮತ್ತು ನಂಪೆರುಮಾಳ್ ಸದಾ ಭಕ್ತರನ್ನು ನೆನೆಯುತ್ತಾ ಸದಾ  ನಮ್ಮೊಂದಿಗೆ ಇದ್ದು ಭಕ್ತರ ಅಭಿಮಾನವನ್ನು ಅನುಭವಿಸುತ್ತಿರುವರು.

ಮೂವರು ಮನೆಗೆ ತಲುಪುವರು.

ವ್ಯಾಸ ಮತ್ತು ಪರಾಶರ : ಸರಿ ಅಜ್ಜಿ, ನಾವು ಈಗ ಆಟ ಆಡೋಕ್ಕೆ ಮೈದಾನಕ್ಕೆ ಹೋಗುತ್ತೇವೆ.

ಆಂಡಾಳಜ್ಜಿ : ಮಕ್ಕಳೆ  ಎಚ್ಚರಿಕೆಯಿಂದ ಆಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಸಾಧ್ಯವಾದಷ್ಟು ಶ್ರೀಮನ್ನಾರಾಯಣನ   ಬಗ್ಗೆ ಮಾತನಾಡಲು ಮರೆಯದಿರಿ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/07/beginners-guide-who-is-sriman-narayana/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment