ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಂಡಾಳ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಪೆರಿಯಾಳ್ವಾರ್

ಆಂಡಾಳಜ್ಜಿ ಬೆಳಿಗ್ಗೆ ಹಾಲು ಮಾರುವವನ ಹತ್ತಿರ ಹಾಲು ಖರೀದಿಸಿ ಮನೆಯೊಳಗೆ ತರುತ್ತಾರೆ. ಹಾಲು ಬಿಸಿ ಮಾಡಿ ವ್ಯಾಸ ಮತ್ತು ಪರಾಶರರಿಗೆ ಕೊಡುತ್ತಾರೆ. ವ್ಯಾಸ ಮತ್ತು ಪರಾಶರ ಹಾಲು ಕುಡಿಯುತ್ತಾರೆ . 

ಪರಾಶರ : ಅಜ್ಜಿ, ಆವತ್ತು ಆಂಡಾಳ ಬಗ್ಗೆ ನಂತರ ಹೇಳುತ್ತೇನೆ ಅಂದಿರಿ . ಈವಾಗ ಹೇಳುತ್ತೀರಾ ? 

ಆಂಡಾಳಜ್ಜಿ : ಓಹ್ ಹೌದು , ನೆನಪಿದೆ. ಸರಿ ಈಗ ಆಂಡಾಳ ಬಗ್ಗೆ ಹೇಳುತ್ತೇನೆ. 

ಆಂಡಾಳಜ್ಜಿ ವ್ಯಾಸ ಮತ್ತು ಪರಾಶರ ಮೂವರು ದಿಣ್ಣೆಯ ಮೇಲೆ ಕುಳಿತಿಕೊಳ್ಳುತ್ತಾರೆ . 

ಆಂಡಾಳಜ್ಜಿ : ಆಂಡಾಲ್ ಪೆರಿಯಾಳ್ವಾರ್ ಅವರ ಮಗಳು, ಅವಳು ಶ್ರೀವಿಲ್ಲಿಪುತ್ತೂರ್ನಲ್ಲಿ ಜನಿಸಿದಳು, ಪೆರಿಯಾಳ್ವಾರ್ ಅವರು ತುಳಸಿ ಸಸ್ಯದ ಬಳಿ ದೇವಾಲಯದ ಪಕ್ಕದ ತೋಟದಲ್ಲಿ ಆಂಡಾಲ್ ಅನ್ನು ಕಂಡುಕೊಂಡರು. ಅವಳು (ಆಡಿ)  ಆಷಾಡ ಮಾಸದ (ಪೂರಂ)ಪುಬ್ಬಾ ನಕ್ಷತ್ರದಂದು  ಅವತರಿಸಿದಳು . ಈ ದಿನವನ್ನು ತಿರುವಾಡಿಪ್ಪೂರಂ ಎಂದು ವಿಶೇಷವಾಗಿ ಆಚಾರಿಸಲಾಗುತ್ತದೆ . ಪೆರಿಯಾಳ್ವಾರ್ ಸಹಜ ಪೋಷಕತತ್ವದೊಂದಿಗೆ ಆಂಡಾಳಿಗೆ ಪೆರುಮಾಳ್ ಕಡೆಗೆ ಭಕ್ತಿಯನ್ನು ಕಲಿಸಿ ಬೆಳೆಸಿದರು . 

ವ್ಯಾಸ : ಓಹ್,ಹೌದಾ ಅಜ್ಜಿ, ಈಗ ನೀವು ನಮಗೆ ಕಲಿಸುವ ಹಾಗೆ ?

ಆಂಡಾಳಜ್ಜಿ : ಹೌದು, ಇದಕ್ಕಿಂತಲೂ ಹೆಚ್ಚಾಗಿ. ಏಕೆಂದರೆ ಪೆರಿಯಾಳ್ವಾರರು ಸಂಪೂರ್ಣವಾಗಿ ಕೈಂಕರ್ಯದಲ್ಲಿ ತೊಡಗಿದರು, ಅವರು ಅವಳಿಗೆ ಪೆರುಮಾಳಿನ ಕೈಂಕರ್ಯದ ವಿಶೇಷತೆಗಳನ್ನು ಅದ್ಭುತವಾಗಿ ಹೇಳುತ್ತಿದ್ದರು. ಆದ್ದರಿಂದಲೇ ಮುಗ್ಧ ಐದು ವಯಸ್ಸಿನಲ್ಲೇ ಆಕೆ ಪೆರುಮಾಳನ್ನು ಮದುವೆಯಾಗಿ ಸೇವೆ ಮಾಡುವ ಕನಸನ್ನು ಕಂಡಳು. 

ಪರಾಶರ : ಓಹ್ ಅವರ ಪ್ರಮುಖ ಕೈಂಕರ್ಯವು  ಏನು  ಅಜ್ಜಿ  ?

ಆಂಡಾಳಜ್ಜಿ : ದೇವಾಲಯದ ಸುಂದರ ತೋಟವನ್ನು ನಿರ್ವಹಿಸಿ ಪೆರುಮಾಳಿಗೆ ನಿತ್ಯವೂ ಸುಂದರ ಹಾರಗಳನ್ನು ಮಾಡುವುದು. ಅವರು ಸುಂದರ ಹಾರಗಳನ್ನು ಮಾಡಿ ಮನೆಯಲ್ಲಿ ಇಟ್ಟು , ಅವರ ಇತರ ಕಾರ್ಯಗಳನ್ನು ಮುಗಿಸಿ, ನಂತರ ದೇವಾಲಯಕ್ಕೆ ಹೋಗುವಾಗ ಆ ಹಾರಗಳನ್ನು ಪೆರುಮಾಳಿಗೆ ಅರ್ಪಿಸಲು ಕೊಂಡೊಯ್ಯುತ್ತಿದ್ದರು . ಅವರು ಹಾರಗಳನ್ನು ಮನೆಯಲ್ಲಿ ಇಟ್ಟಾಗ , ಆಂಡಾಳ್ ಅವುಗಳನ್ನು ಧರಿಸಿ ತನಗೆ ಚೆನ್ನಾಗಿದೆಯೇ ಎಂದು ನೋಡಿ , ಪೆರುಮಾಳ್ ಪ್ರೀತಿಯಿಂದ ತನ್ನನ್ನು ಆ ಹಾರದೊಂದಿಗೆ ನೋಡುವಂತೆ ಕನಸು ಕಾಣುತ್ತಿದ್ದಳು. 

ವ್ಯಾಸ : ಆದರೆ , ಪೆರಿಯಾಳ್ವಾರಿಗೆ ಇದೆಲ್ಲ ಗೊತ್ತಿರಲಿಲ್ಲವೇ ? 

ಆಂಡಾಳಜ್ಜಿ : ಹೌದು, ಬಹಳ ದಿನ ಅವರಿಗೆ ಇದು ಗೊತ್ತಿರಲಿಲ್ಲ . ಅವರಿಗೆ ಪ್ರಿಯವಾದ ಆಂಡಾಳ್ ಧರಿಸಿದ ಹಾರಗಳನ್ನು ಪೆರುಮಾಳ್ ಸಂತೋಷದಿಂದ ಸ್ವೀಕರಿಸುತ್ತಿದ್ದರು . ಆದರೆ ಒಂದು ದಿನ , ಎಂದಿನಂತೆ ಪೆರಿಯಾಳ್ವಾರರು  ಮನೆಯಲ್ಲಿ ಇಟ್ಟ ಹಾರವನ್ನು ಆಂಡಾಳ್ ಧರಿಸಿದಳು.  ನಂತರ , ಪೆರಿಯಾಳ್ವಾರ್ ಅದನ್ನು ದೇವಾಲಯಕ್ಕೆ ಕೊಂಡೊಯ್ಯುವಾಗ ಒಂದು ಕೂದಲನ್ನು ಆ ಹಾರದಲ್ಲಿ ನೋಡಿ ಅದನ್ನು ಮನೆಗೆ  ತರುತ್ತಾರೆ.  ಅವರ ಮಗಳು ಅದನ್ನು ಧರಿಸಿದಳೆಂದು ಭಾವಿಸಿ, ಮತ್ತೊಂದು ಹಾರವನ್ನು ತಯಾರಿಸಿ ದೇವಾಲಯಕ್ಕೆ ಕೊಂಡೊಯ್ಯುತ್ತಾರೆ. ಆಗ ಪೆರುಮಾಳ್ ಅದನ್ನು ಸ್ವೀಕರಿಸಲು ಒಪ್ಪುವುದಿಲ್ಲ, ಮತ್ತು ಆಂಡಾಳ ಧರಿಸಿದ ಮಾಲೆಯನ್ನು ಕೇಳುತ್ತಾರೆ. ಆಗ ಅವರ ಮಗಳಿನ ಅತ್ಯಂತ ಭಕ್ತಿ ಮತ್ತು ಪೆರುಮಾಳಿಗೆ ಅವಳಿಗಿದ್ದ ಪ್ರೀತಿಯನ್ನು ಪೆರಿಯಾಳ್ವಾರ್ ಅರಿತು ಆಂಡಾಳ್  ಧರಿಸಿದ ಮಾಲೆಯನ್ನು ತರುತ್ತಾರೆ.  ಆಗ ಪೆರುಮಾಳ್ ಅತ್ಯಂತ ಸಂತೋಷದಿಂದ ಸ್ವೀಕರಿಸುತ್ತಾರೆ. 

ವ್ಯಾಸ ಮತ್ತು ಪರಾಶರ ಆಂಡಾಳ್  ಮತ್ತು ಪೆರುಮಾಳ್ ಬಳಿ ಅವಳಿಗಿದ್ದ ಭಕ್ತಿ ಕೇಳಿ ವಿಸ್ಮಯರಾಗುತ್ತಾರೆ.

ವ್ಯಾಸ : ಆಮೇಲೆ ಏನು ಆಯಿತು ಅಜ್ಜಿ ?

ಆಂಡಾಳಜ್ಜಿ :ಪೆರುಮಾಳಿನ ಕಡೆಗೆ  ಆಂಡಾಳ ಭಕ್ತಿ ದಿನೇ ದಿನೇ ಹೆಚ್ಚಾಯಿತು . ಮುಗ್ಧ ವಯಸಿನಲ್ಲಿ , ಆಕೆ ತಿರುಪ್ಪಾವೈ  ಮತ್ತು ನಾಚ್ಚಿಯಾರ್  ತಿರುಮೊಳಿ ಹಾಡಿ ಅರ್ಪಿಸಿದಳು. ಮಾರ್ಗಳಿ (ಧನುರ್ ಮಾಸ )  ಮಾಸದಲ್ಲಿ , ಮನೆಗಳಲ್ಲಿ, ದೇವಾಲಯಗಳಲ್ಲಿ ತಿರುಪ್ಪಾವೈ ಹಾಡುತ್ತಾರೆ. ನಂತರ, ಪೆರಿಯ ಪೆರುಮಾಳ್ ಅವಳನ್ನು ಮದುವೆಯಾಗಲು ಪೆರಿಯಾಳ್ವಾರರ ಬಳಿ ಅವಳನ್ನು ಕರೆದು ತರಲು ಕೇಳುತ್ತಾರೆ. ಪೆರಿಯಾಳ್ವಾರ್ ಅತ್ಯಂತ ಸಂತೋಷದಿಂದ ಮೆರವಾಣಿಗೆಯೊಂದಿಗೆ ಶ್ರೀರಂಗಂ ಗೆ ಆಂಡಾಳೊಂದಿಗೆ  ಬರುತ್ತಾರೆ. ಆಂಡಾಳ್ ಪೆರಿಯ ಪೆರುಮಾಳ್ ಸನ್ನಿಧಿ ಒಳಗೆ ಪ್ರವೇಶಿಸಿ ಪೆರುಮಾಳ್ ಅವಳನ್ನು ಮದುವೆಯಾಗಿ ಸ್ವೀಕರಿಸಿದ ನಂತರ ಆಕೆ ಪರಮಪದಕ್ಕೆ ಹಿಂತಿರುಗಿದಳು . 

ಪರಾಶರ : ಹಿಂತಿರುಗಿದಳು ಅಂದರೆ ? ಆಕೆ ಪರಮಪದದಿಂದ ಬಂದಿದ್ದಳೆ ? 

ಆಂಡಾಳಜ್ಜಿ : ಹೌದು, ಆಕೆ ಸ್ವತಃ ಭೂಮಿ ದೇವಿ .ಇತರ ಆಳ್ವಾರುಗಳು  ಪೆರುಮಾಳಿನ ಕೃಪೆಯಿಂದ  ಈ ಜಗತ್ತಿನಲ್ಲಿ ಅವತರಿಸಿದಂತೆ ಅಲ್ಲದೆ , ಆಂಡಾಳ್ ನಮಗೆ ಭಕ್ತಿ ಮಾರ್ಗವನ್ನು ಕಲಿಸಲು ಪರಮಪದದಿಂದ ಇಳಿದು ಬಂದಿದ್ದಳು . ಅವಳ ಕೆಲಸ ಮುಗಿದ ನಂತರ ಪರಮಪದಕ್ಕೆ ಹಿಂತಿರುಗಿದಳು . 

ಪರಾಶರ : ಹೌದಾ ಅಜ್ಜಿ, ಆಕೆಗೆ ಎಷ್ಟು ಕರುಣೆ . 

ಆಂಡಾಳಜ್ಜಿ : ಈಗೆ ನೀವಿಬ್ಬರೂ ತಿರುಪ್ಪಾವೈ ಚೆನ್ನಾಗಿ ಕಲಿತು ಅಭ್ಯಾಸ ಮಾಡಿ,ಇನ್ನು  ಬರುವ  ಧನುರ್ ಮಾಸದಲ್ಲಿ ಪಠಿಸಬೇಕು . 

ವ್ಯಾಸ ಮತ್ತು ಪರಾಶರ : ಸರಿ ಅಜ್ಜಿ, ಈಗಲೇ ಪ್ರಾರಂಭಿಸೋಣ . 

ಆಂಡಾಳಜ್ಜಿ ಕಲಿಸಲು ಹುಡುಗರು ಬಹಳ ನಿಷ್ಠೆಯಿಂದ ಕಲಿಯುತ್ತಾರೆ . 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ : http://pillai.koyil.org/index.php/2014/12/beginners-guide-andal/ 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Reply

Your email address will not be published. Required fields are marked *