ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಾಥಮುನಿಗಳ್

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ

ಪೂರ್ಣ ಸರಣಿ

ಆಚಾರ್ಯರ ಪರಿಚಯ

ವ್ಯಾಸ ಮತ್ತು ಪರಾಶರ ಶಾಲೆಯ ನಂತರ ಮನೆಗೆ ಬರುತ್ತಾರೆ. ಅವರು ತಮ್ಮ ಸ್ನೇಹಿತೆ  ಅತ್ತುೞಾಯ್ ಅವರನ್ನು ತಮ್ಮೊಂದಿಗೆ ಕರೆತರುತ್ತಾರೆ.

ಅಜ್ಜಿ : ನೀವು ಯಾರನ್ನು ಕರೆತಂದಿದ್ದೀರಿ?

ವ್ಯಾಸ : ಅಜ್ಜಿ , ಇದು ಅತ್ತುೞಾಯ್, ನಮ್ಮ ಸ್ನೇಹಿತೆ . ನೀವು ನಮಗೆ ಹೇಳಿದ ಕೆಲವು ವೈಭವಗಳನ್ನು ನಾವು ಅವಳೊಂದಿಗೆ ಹಂಚಿಕೊಂಡಿದ್ದೇವೆ ಮತ್ತು ಅವಳು  ನಿಮ್ಮಿಂದ ಅವುಗಳನ್ನು ಕೇಳಲು ಆಸಕ್ತಿ ಹೊಂದಿದ್ದಳು . ಆದ್ದರಿಂದ, ನಾವು ಅವಳನ್ನು ಕರೆತಂದೆವು.

ಅಜ್ಜಿ : ಸ್ವಾಗತ ಅತ್ತುೞಾಯ್. ನೀವಿಬ್ಬರೂ ನಾನು ಹೇಳುವುದನ್ನು ಕೇಳುವುದು ಮಾತ್ರವಲ್ಲ, ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ಕೇಳಲು ಸಂತೋಷವಾಗಿದೆ.

ಪರಾಶರ : ಅಜ್ಜಿ, ನಾವು ನಮ್ಮ ಆಚಾರ್ಯರ ಬಗ್ಗೆ ಕೇಳಲು ಬಂದಿದ್ದೇವೆ.

ಆಂಡಾಳಜ್ಜಿ : ಒಳ್ಳೆಯದು. ನಮ್ಮಾಳ್ವಾರ್ ಅವರ ದೈವಿಕ ಹಸ್ತಕ್ಷೇಪದ ಮೂಲಕ ನಮ್ಮ ಸಂಪ್ರದಾಯಂನ ವೈಭವವನ್ನು ಮರಳಿ ತಂದ ನಮ್ಮ ಅಚಾರ್ಯರ ಬಗ್ಗೆ ಇಂದು ನಾನು ನಿಮಗೆ ಹೇಳುತ್ತೇನೆ.

ಅತ್ತುೞಾಯ್: ಯಾರದು ಅಜ್ಜಿ ? 

ಆಂಡಾಳಜ್ಜಿ ಹಣ್ಣು ತಿಂಡಿಗಳನ್ನು ಅತ್ತುೞಾಯ್, ವ್ಯಾಸ ಮತ್ತು ಪರಾಶರರಿಗೆ ಕೊಡಲು ತರುತ್ತಾರೆ. 

ಅಜ್ಜಿ : ಅವರು ನಮ್ಮದೇ ಆದ ನಾಥಮುನಿಗಳ್ . ಶ್ರೀಮನ್ ನಾಥಮುನಿಗಳ್ ಅವರು ವೀರ ನಾರಾಯಣ ಪುರಂ (ಕಾಟ್ಟು ಮನ್ನಾರ್ ಕೋಯಿಲ್ ) ನಲ್ಲಿ ಈಶ್ವರ ಭಟ್ಟಾಳ್ವಾರ್ ಅವರಿಗೆ ಜನಿಸಿದರು. ಅವರನ್ನು ಶ್ರೀ ರಂಗನಾಥ ಮುನಿ ಮತ್ತು  ನಾಥಬ್ರಹ್ಮರ್  ಎಂದೂ ಕರೆಯುತ್ತಾರೆ. ಅವರು ಅಷ್ಟಾಂಗ ಯೋಗಂ ಮತ್ತು ದೈವಿಕ ಸಂಗೀತದಲ್ಲಿ ಪರಿಣತರಾಗಿದ್ದರು. ಅಲ್ಲದೆ, ಶ್ರೀರಂಗಂ, ಆಳ್ವಾರ್ ತಿರುನಗರಿ, ಶ್ರೀವಿಲ್ಲಿಪುತ್ತೂರ್, ಇತ್ಯಾದಿಗಳಲ್ಲಿ ಇಂದಿಗೂ ಕಂಡುಬರುವ ಅರಯರ್ ಸೇವೈ ಅನ್ನು ಸ್ಥಾಪಿಸಿದವರು .

ಪರಾಶರ : ನಮ್ಮ ಪೆರುಮಾಳ್  ಮುಂದೆ ಅರಯರ್ ಸೇವೈ ಅನ್ನು ನಾವು ಅನೇಕ ಬಾರಿ ನೋಡಿದ್ದೇವೆ. ಅರಯರ್ ಸ್ವಾಮಿ ತನ್ನ ಕೈಯಲ್ಲಿ ತಾಳಂನೊಂದಿಗೆ ಪಾಸುರಂಗಳನ್ನು ಹಾಡುವ ರೀತಿ ತುಂಬಾ ಸುಂದರವಾಗಿದೆ.

ಆಂಡಾಳಜ್ಜಿ : ಹೌದು, ಒಂದು ದಿನ , ಮೇಲ್ನಾಡು (ತಿರುನಾರಾಯಣಪುರಂ ) ನಿಂದ ಬಂದ ಶ್ರೀ ವೈಷ್ಣವರು ಕಾಟ್ಟು ಮನ್ನಾರ್ ಕೋಯಿಲ್ ಗೆ ಭೇಟಿ ನೀಡಿ ಮನ್ನನಾರ್  ( ಕಾಟ್ಟು ಮನ್ನಾರ್ ಕೋಯಿಲ್ ಎಂಪೆರುಮಾನ್ ) ಮುಂದೆ “ಆರಾವಮುದೆ ..”  ತಿರುವಾಯ್ಮೊಳಿ ಯ ಪದಿಗಂ ಹಾಡಿದರು . ನಾಥಮುನಿಗಳ್ ಆ ಪಾಸುರಗಳ ಅರ್ಥಗಳಿಂದ ವಿಸ್ಮಯರಾಗಿ , ಆ ಶ್ರೀ ವೈಷ್ಣವರನ್ನು ಅದರ ಬಗ್ಗೆ ಕೇಳಿದಾಗ ಅವರಿಗೆ ಆ ಹತ್ತು ಪಾಸುರಮ್ ಬಿಟ್ಟು ಮತ್ತೇನು ಅದರ ಬಗ್ಗೆ ತಿಳಿಯದು ಎಂದರು. ತಿರುಕ್ಕುರುಗೂರ್‌ಗೆ ಹೋದರೆ ನಾಥಮುನಿಗಳ್ ಅದರ ಬಗ್ಗೆ ಹೆಚ್ಚಾಗಿ ತಿಳಿಯಲು ಸಾಧ್ಯವಿದೆ ಎಂದರು. ನಾಥಮುನಿಗಳ್ ಮನ್ನನಾರಿಂದ ಹೊರಟು ಆಳ್ವಾರ್ ತಿರುನಗರಿಗೆ ಸೇರಿದರು. 

ಅತ್ತುೞಾಯ್, ವ್ಯಾಸ ಮತ್ತು ಪರಾಶರ ತಿಂಡಿಗಳನ್ನು ಮುಗಿಸಿ ಕಾತುರದಿಂದ ನಾಥಮುನಿಗಳ್ ಬಗ್ಗೆ ಕೇಳಿದರು . 

ಆಂಡಾಳಜ್ಜಿ : ಅವರು ಮಧುರಕವಿ ಆಳ್ವಾರ್ ಅವರ ಶಿಷ್ಯರಾದ ಪರಾಂಗುಶ ದಾಸರ್ ಅವರನ್ನು ಭೇಟಿಯಾದರು, ಅವರು ನಾಥಮುನಿಗಳ್ಗೆ  “ಕಣ್ಣಿನುನ್ ಚಿರುತ್ತಾಂಬು” ಕಲಿಸಿ  ಅದನ್ನು ತಿರುಪ್ಪುಳಿ ಆಳ್ವಾರ್ (ನಮ್ಮಾಳ್ವಾರ್ ಇದ್ದ ಹುಣಸೆ ಮರ)ಮುಂದೆ  12000 ಬಾರಿ ಜಪಿಸುವಂತೆ ಕೇಳಿಕೊಳ್ಳುತ್ತಾರೆ. ನಾಥಮುನಿಗಳ್ ಈಗಾಗಲೇ ಅಷ್ಟಾಂಗ ಯೋಗಮ ಕಲಿತಿದ್ದರಿಂದ , ಅವರು ನಮ್ಮಾಳ್ವಾರ್ ಬಗ್ಗೆ ಧ್ಯಾನ ಮಾಡುತ್ತಾರೆ ಮತ್ತು ಕಣ್ಣಿನುನ್ ಚಿರುತ್ತಾಂಬು 12000 ಬಾರಿ ಜಪಿಸಿ ಯಶಸ್ವಿಯಾಗಿ ಪೂರೈಸುತ್ತಾರೆ . ನಮ್ಮಾಳ್ವಾರ್ ನಾಥಮುನಿಗಳಿಂದ ಸಂತೋಷಗೊಂಡು, ಅವರ ಮುಂದೆ ಪ್ರತ್ಯಕ್ಷವಾಗಿ  ಅವರಿಗೆ ಅಷ್ಟಾಂಗ ಯೋಗಮ್, 4000 ದಿವ್ಯ ಪ್ರಭಂಧಮ್ ಮತ್ತು ಅರುಳಿಚೆಯಲ್ (ದಿವ್ಯ ಪ್ರಬಂಧಂ) ನ ಎಲ್ಲಾ ಅರ್ಥಗಳಲ್ಲಿ ಪೂರ್ಣ ಜ್ಞಾನವನ್ನು ಆಶೀರ್ವದಿಸುತ್ತಾರೆ .

ವ್ಯಾಸ : ಹಾಗಾದರೆ , “ಆರಾವಮುದೆ “ ಪಡಿಗವು 4000 ದಿವ್ಯ ಪ್ರಬಂದದ ಭಾಗವೇ ? 

ಆಂಡಾಳಜ್ಜಿ : ಹೌದು. ಆರಾವಮುದೆ ಪಧಿಗಂ ತಿರುಕ್ಕುಡಂದೈ  ಆರಾವಮುದನ್ ಎಂಪೆರುಮಾನ್ ಬಗ್ಗೆ. ಅದರ ನಂತರ, ನಾಥಮುನಿಗಳ್ ಕಾಟ್ಟು ಮನ್ನಾರ್ ಕೋಯಿಲ್‍ಗೆ ಹಿಂದಿರುಗಿ 4000 ಧಿವ್ಯ ಪ್ರಭಂಧವನ್ನು ಮನ್ನನಾರ್ ಮುಂದೆ ಪ್ರಸ್ತುತಪಡಿಸುತ್ತಾರೆ . ಮನ್ನನಾರ್ ಅವರು ನಾಥಮುನಿಗಳ್ ಬಗ್ಗೆ ತುಂಬಾ ಸಂತೋಷಪಟ್ಟರು  ಮತ್ತು ದಿವ್ಯ ಪ್ರಭಂಧಮ್ ಅನ್ನು ವರ್ಗೀಕರಿಸಲು ಮತ್ತು ಅದನ್ನು ಎಲ್ಲೆಡೆ ಪ್ರಚಾರ ಮಾಡಲು ಕೇಳಿಕೊಳ್ಳುತ್ತಾರೆ. ಅವರು ಅರುಳಿಚೆಯಲ್ ಸಂಗೀತವನ್ನು ಸೇರಿಸುತ್ತಾರೆ ಮತ್ತು ಅವರ ಸೋದರಳಿಯರಾದ ಕೀಳೈ ಅಗತ್ತಾಳ್ವಾನ್ ಮತ್ತು ಮೇಲೈ ಅಗತ್ತಾಳ್ವಾನ್ ಅವರಿಗೆ ಕಲಿಸುತ್ತಾರೆ ಮತ್ತು ಅವರ ಮೂಲಕ ಅದೇ ಪ್ರಚಾರ ಮಾಡುತ್ತಾರೆ.  ಅಷ್ಟೇ ಅಲ್ಲ, ಅವರು ತಮ್ಮ ಅಷ್ಟಾಂಗ ಯೋಗ ಸಿದ್ಧಿ ಮೂಲಕ, ನಮ್ಮ ಸಂಪ್ರದಾಯಂನ ಇನ್ನೊಬ್ಬ ಶ್ರೇಷ್ಠ ಆಚಾರ್ಯರನ್ನು ಮುನ್ಸೂಚಿಸಿದರು. ಮುಂದಿನ ಬಾರಿ, ನಾನು ಅವನ ಬಗ್ಗೆ ಇನ್ನಷ್ಟು ಹೇಳುತ್ತೇನೆ.

ಮಕ್ಕಳು : ಖಂಡಿತ ಅಜ್ಜಿ . ನಾವು ಅದರ ಬಗ್ಗೆ ಕೇಳಲು ಉತ್ಸುಕರಾಗಿದ್ದೇವೆ.

ಅತ್ತುೞಾಯ್ ಆಂಡಾಳಜ್ಜಿಯಿಂದ ಆಶೀರ್ವಾದ ತೆಗೆದುಕೊಂಡು ತನ್ನ ಮನೆಗೆ ಹೊರಟಳು , ವ್ಯಾಸ ಮತ್ತು ಪರಾಶರ ತಮ್ಮ ಶಾಲಾ ಪಾಠಗಳನ್ನು ಅಧ್ಯಯನ ಮಾಡಲು ಹೋಗುತ್ತಾರೆ. 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ : http://pillai.koyil.org/index.php/2015/06/beginners-guide-nathamunigal/ 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Reply

Your email address will not be published. Required fields are marked *