ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತೊಂಡರಡಿಪ್ಪೊಡಿ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಆಂಡಾಳ್

ಆಂಡಾಳಜ್ಜಿ ಅವರ ಮನೆಯ ಹೊರಗಿನ ಮಾರಾಟಗಾರನಿಂದ ಹೂವುಗಳನ್ನು ಖರೀದಿಸುತ್ತಾರೆ. ವ್ಯಾಸ ಮತ್ತು ಪರಾಶರ ಮುಂಜಾನೆ ಎದ್ದು ಆಂಡಾಳಜ್ಜಿಯ ಬಳಿ ಬರುತ್ತಾರೆ. 

ವ್ಯಾಸ : ಅಜ್ಜಿ, ಪೆರುಮಾಳಿಗೆ  ಪುಷ್ಪ ಕೈಂಕರ್ಯವನ್ನು ಇಬ್ಬರು ಆಳ್ವಾರುಗಳು ಮಾಡಿದರೆಂದು ನೀವು ಹೇಳಿದ್ದಿರಿ . ಈಗ ಅವರಲ್ಲಿ ಒಬ್ಬರು ಪೆರಿಯಾಳ್ವಾರ್ ಎಂದು ನಮಗೆ ತಿಳಿದಿದೆ, ಈಗ ಎರಡನೆಯ ಆಳ್ವಾರ್ ಬಗ್ಗೆ ನಮಗೆ ಹೇಳಬಹುದೇ ? 

ಆಂಡಾಳಜ್ಜಿ : ನಿನಗೆ ನಿಜವಾಗಿಯೂ ಉತ್ತಮ ನೆನೆಪಿನ ಶಕ್ತಿ ಇದೆ ವ್ಯಾಸ. ನೀನು ಕೇಳಿದಂತೆ ಪುಷ್ಪ ಕೈಂಕರ್ಯವನ್ನು ಪೆರುಮಾಳಿಗೆ ಮಾಡಿದ ಎರಡನೆಯ ಆಳ್ವಾರ್ ಬಗ್ಗೆ ಹೇಳುತ್ತೇನೆ. 

ವ್ಯಾಸ ಮತ್ತು ಪರಾಶರ ಮುಂದಿನ ಆಳ್ವಾರ್ ಬಗ್ಗೆ ಕೇಳಲು ಅಜ್ಜಿಯ ಸುತ್ತ ಕುಳಿತುಕೊಳ್ಳುತ್ತಾರೆ .  

ಆಂಡಾಳಜ್ಜಿ : ಅವರನ್ನು ತೊಂಡರಡಿಪ್ಪೊಡಿ  ಆಳ್ವಾರ್ ಎಂದು ಕರೆಯುತ್ತಾರೆ. ಅವರ ಹೆತ್ತವರು ಅವರಿಗೆ ವಿಪ್ರ ನಾರಾಯಣ ಎಂದು ಹೆಸರಿಟ್ಟರು . ಅವರು ಕುಂಭಕೋಣಂ ಬಳಿಯ ತಿರುಮಂಡನ್ಗುಡಿಯಲ್ಲಿ  ಮಾರ್ಗಳಿ (ಧನುರ್ ಮಾಸ ) ಮಾಸದ ಜ್ಯೇಷ್ಟಾ ನಕ್ಷತ್ರದಂದು ಜನಿಸಿದರು. ಅವರಿಗೆ ಶ್ರೀರಂಗನಾಥನ ಬಗ್ಗೆ ಬಹಳ ಆಸಕ್ತಿ ಇದ್ದಿತು. ಎಷ್ಟರಮಟ್ಟಿಗೆಂದರೆ, ಅವರು ರಚಿಸಿದ ಎರಡು ದಿವ್ಯ ಪ್ರಬಂಧಗಳಲ್ಲಿ ಅವರು ಬೇರೆ ಯಾವುದೇ ಪೆರುಮಾಳನ್ನು ಉಲ್ಲೇಖಿಸಿಲ್ಲ, ಒಂದು ತಿರುಮಾಲೈ ಮತ್ತು ಇನ್ನೊಂದು ತಿರುಪ್ಪಲ್ಲಿಯೆಳುಚಿ. ತಿರುಮಾಲೈ ಅರಿಯದವರು ಪೆರುಮಾಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತದೆ.

ಪರಾಶರ : ಓಹ್ ಹೌದಾ ಅಜ್ಜಿ ? ಸರಿ ಹಾಗಾದರೆ ನಾವಿಬ್ಬರು  ತಿರುಮಾಲೈ ಕಲಿಯುತ್ತೇವೆ. 

ಆಂಡಾಳಜ್ಜಿ : ಖಂಡಿತವಾಗಿ ನೀವು ಕಲಿಯುತ್ತೀರೆಂದು ನಾನು ನಂಬುವೆನು. ತಿರುಮಾಲೈ ಸಂಪೂರ್ಣವಾಗಿ ಪೆರುಮಾಳಿನ ವೈಭವವನ್ನು ವಿವರಿಸುತ್ತದೆ. ಈ ಆಳ್ವಾರ್ ಬಗ್ಗೆ ಒಂದು ವಿಶೇಷತೆ ಗೊತ್ತೇ?

ವ್ಯಾಸ : ಏನದು ಅಜ್ಜಿ ? 

ಆಂಡಾಳಜ್ಜಿ : ಶ್ರೀ ವೆಂಕಟೇಶ ಸುಪ್ರಭಾತಂ ನ ಮೊದಲನೆಯ ಶ್ಲೋಕ ಕೇಳಿದ್ದೀರಾ ? 

ಪರಾಶರ : ಹೌದು ಅಜ್ಜಿ. (ಹಾಡುವನು ) “ಕೌಸಲ್ಯ ಸುಪ್ರಜಾ ..” 

ಆಂಡಾಳಜ್ಜಿ : ಹೌದು. ಅದು ಶ್ರೀ ರಾಮಾಯಣದಿಂದ ಅಂತ ನಿಮಗೆ ಗೊತ್ತೇ?ಶ್ರೀ ರಾಮನನ್ನು ಎಬ್ಬಿಸಲು ವಿಶ್ವಾಮಿತ್ರ ಮುನಿ ಹಾಡಿದರು. ಹಾಗೆ , ಪೆರಿಯಾಳ್ವಾರ್ ಕಣ್ಣನ್ ಎಂಪೆರುಮಾನನನ್ನು ಎಬ್ಬಿಸಲು ಅವರ ಪಾಸುರಗಳಲ್ಲಿ ಹಾಡಿದ್ದಾರೆ . ತೊಂಡರಡಿಪ್ಪೊಡಿ  ಆಳ್ವಾರ್ ತಿರುಪ್ಪಲ್ಲಿಯೆಳುಚಿ ಪ್ರಬಂಧದಲ್ಲಿ ಶ್ರೀರಂಗನಾಥನಿಗೆ  ಸುಪ್ರಭಾತ ಹಾಡಿದ್ದಾರೆ . 

ವ್ಯಾಸ : ಓಹ್, ಧನುರ್ ಮಾಸದಲ್ಲಿ ಪೆರಿಯ ಪೆರುಮಾಳ್ ಮುಂದೆ ದಿನವೂ ಅರೈಯರ್ ಸ್ವಾಮಿ ತಿರುಪ್ಪಾವೈ ಜೊತೆಗೆ ಹಾಡುವುದು ನಾವು ಕೇಳಿದ್ದೇವೆ. 

ಆಂಡಾಳಜ್ಜಿ : ಹೌದು,ನೀನು ಹೇಳುವುದು ಸರಿ. ನಾವೀಗ ಪೆರಿಯ ಪೆರುಮಾಳಿಗೆ ಒಂದು ಹಾರವನ್ನು ತಯಾರಿಸಿ ಸನ್ನಿಧಿಗೆ ಹೋಗೋಣ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ :  http://pillai.koyil.org/index.php/2014/12/beginners-guide-thondaradippodi-azhwar/ 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment