ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಪ್ಪಾನಾಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ತೊಂಡರಡಿಪ್ಪೊಡಿ ಆಳ್ವಾರ್

ಆಂಡಾಳಜ್ಜಿ ವೈಕುಂಠ ಏಕಾದಶಿ ಅಂದು ಜಾಗರಣೆ ಮಾಡಲು ಯೋಜಿಸಿದ್ದಾರೆ, ಪರಾಶರ ಮತ್ತು ವ್ಯಾಸ ಕೂಡ ಆ ದಿನ ಜಾಗರಣೆ ಮಾಡಲು ತಮ್ಮ ಆಸಕ್ತಿಯನ್ನು ವ್ಯಕ್ತಪಡಿಸುತ್ತಾರೆ. 

ಆಂಡಾಳಜ್ಜಿ : ಈ ಶುಭ ದಿನದಂದು , ಜಾಗರಣೆ ಮಾಡುವುದು ಅಷ್ಟೇ ಅಲ್ಲ . ನಾವು ಪೆರುಮಾಳ ಬಗ್ಗೆ ಮಾತನಾಡುತ್ತಾ, ಕೈಂಕರ್ಯದಲ್ಲಿ ತೊಡಗಬೇಕು . 

ಪರಾಶರ :  ಅಜ್ಜಿ, ನಾವು ಜಾಗರಣೆ ಮಾಡಲು ಇಚ್ಛಿಸುತ್ತೇವೆ, ನಮಗೆ ಮುಂದಿನ ಆಳ್ವಾರ್ ಬಗ್ಗೆ ಹೇಳುತ್ತೀರಾ?

ಆಂಡಾಳಜ್ಜಿ : ನನ್ನ ಮನಸಿನಲ್ಲಿ ಇದ್ದಿದ್ದನ್ನು ನೀನು ಕೇಳಿದ್ದೀಯ. ಸರಿ, ಈಗ ನಾನು ನಿಮಗೆ ತಿರುಪ್ಪಾನಾಳ್ವಾರ್ ಬಗ್ಗೆ ಹೇಳುತ್ತೇನೆ 

ಪರಾಶರ ಮತ್ತು ವ್ಯಾಸ : ಸರಿ ಅಜ್ಜಿ 

 ಆಂಡಾಳಜ್ಜಿ : ತಿರುಪ್ಪಾನಾಳ್ವಾರ್ ಕಾರ್ತಿಕ ಮಾಸದ ರೋಹಿಣಿ ನಕ್ಷತ್ರದಂದು ಶ್ರೀರಂಗದ ಹತ್ತಿರ ಇರುವ ಉರೈಯೂರ್ ನಲ್ಲಿ ಜನಿಸಿದರು. ಅವರು ಶ್ರೀರಂಗನಾಥನ ಸೌಂದರ್ಯ ವರ್ಣಿಸುವ 10 ಪಾಸುರಗಳಿರುವ ಅಮಲನಾಧಿಪಿರಾನ್ ರಚಿಸಿದರು. 

ವ್ಯಾಸ : ಓಹ್ ! ಹೌದು ಅಜ್ಜಿ , ನಮ್ಮ ಸುಂದರವಾದ ಪೆರುಮಾಳನ್ನು ಯಾರು ನೋಡಿದರೂ ಸಂಪೂರ್ಣವಾಗಿ ಆನಂದ ಪಡುವರು. 

ಆಂಡಾಳಜ್ಜಿ : ಹೌದು , ಅವರು ಪೆರಿಯ ಪೆರುಮಾಳಿನ ಅತ್ಯಂತ ಪ್ರಿಯವಾದ ಭಕ್ತರಾಗಿದ್ದರು  ಮತ್ತೆ ಒಂದು ಆಸಕ್ತಿದಾಯಕ ಘಟನೆಯಿಂದ ಅವರು ಪರಮಪದಕ್ಕೆ ಸೇರಿದರು. 

ಪರಾಶರ : ಅದೇನು ಘಟನೆ ದಯವಿಟ್ಟು  ಹೇಳಿ ಅಜ್ಜಿ. 

ಆಂಡಾಳಜ್ಜಿ : ಒಂದು ದಿನ, ಅವರು ಕಾವೇರಿ ತೀರದಿಂದ ಪೆರುಮಾಳ್ ಅನ್ನು ಹೊಗಳುತ್ತಾ ಹಾಡುಗಳನ್ನು ಹಾಡುತ್ತಿದ್ದರು. ಆ ಸಮಯದವರೆಗೆ ಅವರು ದೈಹಿಕವಾಗಿ ಶ್ರೀರಂಗಂಗೆ ಕಾಲಿಡಲಿಲ್ಲ . ಪೆರಿಯ ಪೆರುಮಾಳಿನ   ಕೈಂಕರ್ಯರ್ಪರರಲ್ಲಿ ಒಬ್ಬರು ಲೋಕ ಸಾರಂಗಮುನಿ ನದಿಯಿಂದ ನೀರು ತರಲು ಹೋದರು. ಆ ಸಮಯದಲ್ಲಿ ಅವರು ಅಳ್ವಾರ್ ತನ್ನ ದಾರಿಯಲ್ಲಿರುವುದನ್ನು ಗಮನಿಸಿದರು. ಅವರು ಅಳ್ವಾರ್ ಅವರನ್ನು ದೂರ ಹೋಗಲು ಕೇಳುತ್ತಾರೆ.  ಆದರೆ ಅಳ್ವಾರ್ ಪೆರಿಯ ಪೆರುಮಾಳ್  ಬಗ್ಗೆ ಆಳವಾದ ಧ್ಯಾನದಲ್ಲಿದ್ದರು . ಆದ್ದರಿಂದ ಅವರು ಪ್ರತಿಕ್ರಿಯಿಸುವುದಿಲ್ಲ.

ವ್ಯಾಸ : ಆಮೇಲೆ ಏನು ಆಯಿತು ಅಜ್ಜಿ ?

ಆಂಡಾಳಜ್ಜಿ : ಲೋಕ ಸಾರಂಗಮುನಿ ಒಂದು ಸಣ್ಣ ಕಲ್ಲನ್ನು ಆಳ್ವಾರ್ ಮೇಲೆ ಎಸೆದರು. ಈ ಪ್ರಕ್ರಿಯೆಯಲ್ಲಿ ಆಳ್ವಾರ್ ಗಾಯಗೊಂಡು ರಕ್ತ ಸುರಿಯಿತು . ಆಗ ಆಳ್ವಾರ್ ಧ್ಯಾನದಿಂದ ಎಚ್ಚರಗೊಂಡು ಅವರ ಹಾದಿಯಲ್ಲಿದ್ದರು ಎಂದು ತಿಳಿದುಕೊಳ್ಳುತ್ತಾರೆ. 

ಪರಾಶರ : ಅವರು ಲೋಕ ಸಾರಂಗಮುನಿ ಮೇಲೆ ಕೋಪಗೊಂಡರೆ? 

ಆಂಡಾಳಜ್ಜಿ : ಇಲ್ಲ! ಇಂತಹ ಚಿಕ್ಕ ವಿಷಯಕ್ಕೆ ಶ್ರೀ ವೈಷ್ಣವರು ಕೋಪಗೊಳ್ಳುವುದಿಲ್ಲ. ಆಳ್ವಾರ್ ಅವರ ಹಾದಿಯಲ್ಲಿದ್ದರಿಂದ ಕ್ಷಮೆ ಬೇಡಿ ಪಕ್ಕಕ್ಕೆ ಜರುಗಿದರು. ಲೋಕ ಸಾರಂಗಮುನಿ ದೇವಾಲಯಕ್ಕೆ ಹೋಗುತ್ತಾರೆ ಆದರೆ ಪೆರಿಯ ಪೆರುಮಾಳ್ ಆಳ್ವಾರ್ ಕಡೆಗೆ ಅವರು ಮಾಡಿದ ಅಗತ್ಯವಿಲ್ಲದ ಅಕ್ರಮ ಕ್ರಿಯೆಗೆ ಬಹಳ ಅಸಾಮಾಧಾನದಿಂದ ಇದ್ದರು. ಅವರು ದ್ವಾರಗಳನ್ನು ತೆರೆಯಲು ನಿರಾಕರಿಸಿ, ಲೋಕ ಸಾರಂಗಮುನಿಯನ್ನು ಒಡನೆ ಹೋಗಿ ಆಳ್ವಾರ್ ಹತ್ತಿರ ಕ್ಷಮೆ ಬೇಡಿ ಅವರನ್ನು ದೇವಾಲಯಕ್ಕೆ ಕರೆತರಲು ಆದೇಶಿಸುತ್ತಾರೆ .  ಲೋಕ ಸಾರಂಗಮುನಿ ಅವರು ಮಾಡಿದ ಮಹಾ ಅಪಚಾರ ಅರಿತು ಆಳ್ವಾರರ ಬಳಿ ಓಡುತ್ತಾರೆ . ಆಳ್ವಾರರ ಹತ್ತಿರ ಕ್ಷಮೆ ಬೇಡುತ್ತಾರೆ . ಆಳ್ವಾರ್ ಅವರ ಬಗ್ಗೆ ಯಾವುದೇ ಕೆಟ್ಟ ಭಾವನೆ ಹೊಂದಿರದೆ  ಮತ್ತು ಅವರ ಮಾತುಗಳನ್ನು  ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತಾರೆ. 

ವ್ಯಾಸ : ನಮಗೆ ಅವರು ಒಳ್ಳೆಯ ಉದಾಹರಣೆ ಅಲ್ಲವೇ ಅಜ್ಜಿ . ನಾವು ಅವರಂತೆ ಉದಾತ್ತ ಮನಸನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತೇವೆ. 

ಆಂಡಾಳಜ್ಜಿ : ನಂತರ ಲೋಕ ಸಾರಂಗಮುನಿಯವರು ಪದೇ ಪದೆ ಒತ್ತಾಯ ಮಾಡಿದರಿಂದ , ಆಳ್ವಾರ್ ಲೋಕ ಸಾರಂಗಮುನಿಯರ ಹೆಗಲಿನ ಮೇಲೆ ಏರಿ ಅಮಲನಾಧಿಪಿರಾನ್  ಹಾಡುತ್ತಾ ಪೆರಿಯ ಪೆರುಮಾಳ್ ಸನ್ನಿಧಿಗೆ ತಲುಪುತ್ತಾರೆ. ಪೆರಿಯ ಪೆರುಮಾಳ್ ಸನ್ನಿಧಿಗೆ ಬಂದಾಗ ಅವರು ಕಡೆಯ ಪಾಸುರವಾದ “ ಪೆರಿಯ ಪೆರುಮಾಳ್  ಅನ್ನು ನೋಡಿದ ಕಣ್ಣುಗಳಿಂದ ನಾನು ಬೇರೆ ಏನನ್ನೂ ನೋಡುವುದಿಲ್ಲ” ಎಂದು ಹಾಡುತ್ತಾ ಒಡನೆ ಕೈಂಕರ್ಯ ಮಾಡಲು ಪೆರಿಯ ಪೆರುಮಾಳಿನ ಪಾದ ಕಮಲಗಳಲ್ಲಿ ಕಣ್ಮರೆಯಾಗಿ ಪರಮಪದಕ್ಕೆ ಸೇರಿದರು . 

ಪರಾಶರ : ವಾಹ್ ! ಇದು ಅದ್ಭುತವಾಗಿದೆ ಅಜ್ಜಿ. ನಾವು ಇದುವರೆಗೂ ಕೇಳಿರುವ ಆಳ್ವಾರ್ ಗಳ ಚರಿತ್ರೆಯಲ್ಲಿ ಇದೆ ಅತ್ಯುತ್ತಮವಾದದ್ದು.

ಆಂಡಾಳಜ್ಜಿ : ಹೌದು, ತಿರುಪ್ಪಾನಾಳ್ವಾರ್ ಪೆರಿಯ ಪೆರುಮಾಳಿನ ವಿಶೇಷ ಭಕ್ತರಾಗಿದ್ದರು ಮತ್ತು ನಾವು ಕೂಡ ಇಂದು ಉರೈಯೂರಿಗೆ ಹೋಗಿ ಅವರನ್ನು ಪ್ರಾರ್ಥಿಸೋಣ. 

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ  :  http://pillai.koyil.org/index.php/2015/01/beginners-guide-thiruppanazhwar/  

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

1 thought on “ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಪ್ಪಾನಾಳ್ವಾರ್”

Leave a Comment