ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳ್ವಾರುಗಳ ಪರಿಚಯ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಶ್ರೀಮನ್ನಾರಾಯಣನ ಅಪಾರ ಕರುಣೆ

ಆಂಡಾಳಜ್ಜಿ : ವ್ಯಾಸ, ಪರಾಶರ! ನಾನು ಕಾಟ್ಟಳಗಿಯಸಿಂಗ ಪೆರುಮಾಳ್ ಸನ್ನಿಧಿಗೆ  ( ನರಸಿಂಹ ಪೆರುಮಾಳ್ ಗೆ  ವಿಶೇಷ ಸನ್ನಿಧಿ  )ಹೋಗುತ್ತೇನೆ . ನನ್ನ ಜೊತೆ ಬರುತ್ತಿರಾ?

ವ್ಯಾಸ :  ಖಂಡಿತ ಅಜ್ಜಿ . ನಾವು ಬರುತ್ತೇವೆ. ಹಿಂದಿನ ಬಾರಿ ನೀವು ಆಳ್ವಾರ್ಗಳ ಬಗ್ಗೆ ಹೇಳುತ್ತಿದ್ದಿರಿ .ನಮಗೆ ಅವರ ಬಗ್ಗೆ ಹೆಚ್ಚಿಗೆ ಹೇಳುತ್ತೀರ?

ಆಂಡಾಳಜ್ಜಿ: ನೀವು ಕೇಳಿದ್ದು ಒಳ್ಳೆಯದು . ನಾನು ಈಗ  ನಿಮ್ಮಿಬ್ಬರಿಗೆ ಅವರ ಬಗ್ಗೆ ಹೇಳುತ್ತೇನೆ.

ಮೂವರು ಕಾಟ್ಟಳಗಿಯಸಿಂಗ ಪೆರುಮಾಳ್ ಸನ್ನಿಧಿಗೆ ನಡೆಯುತ್ತಾರೆ.

ಆಂಡಾಳಜ್ಜಿ : ಒಟ್ಟು 12 ಆಳ್ವಾರ್‌ಗಳಿದ್ದಾರೆ . ಅವರ ಎಲ್ಲಾ ಹಾಡುಗಳ ಸಂಗ್ರಹವನ್ನು ಈಗ ‘ನಾಲಾಯಿರ (4000) ದಿವ್ಯ ಪ್ರಭಂಧಮ್’ ಎಂದು ಕರೆಯಲಾಗುತ್ತದೆ. ನಾನು ನಿನ್ನೆ ಪಠಿಸಿದ್ದ , ಅಮಲನಾಧಿಪಿರಾನ್, ಈ ದಿವ್ಯ ಪ್ರಬಂಧಮ್ ಸಂಗ್ರಹದ ಭಾಗವಾಗಿದೆ.

ಪರಾಶರ : ಓಹ್ ! ಆ  12 ಆಳ್ವಾರ್ಗಳು ಯಾರು ಅಜ್ಜಿ ?

12 ಆಳ್ವಾರುಗಳು
12 ಆಳ್ವಾರುಗಳು

ಆಂಡಾಳಜ್ಜಿ : 12 ಆಳ್ವಾರ್ಗಳು- ಪೊಯ್ಗೈ ಆಳ್ವಾರ್ , ಭೂದತ್ತಾಳ್ವಾರ್ , ಪೇಯ್ ಆಳ್ವಾರ್ , ತಿರುಮಳಿಶೈ ಆಳ್ವಾರ್ , ಮಧುರಕವಿ ಆಳ್ವಾರ್ , ನಮ್ಮಾಳ್ವಾರ್ , ಕುಲಶೇಖರ ಆಳ್ವಾರ್ , ಪೆರಿಯಾಳ್ವಾರ್ , ಆಂಡಾಳ್ , ತೊಂಡರಡಿಪ್ಪೊಡಿ ಆಳ್ವಾರ್ , ತಿರುಪ್ಪಾನ್ ಆಳ್ವಾರ್ , ತಿರುಮಂಗೈ ಆಳ್ವಾರ್.

ವ್ಯಾಸ :  ಒಳ್ಳೆಯದು ಅಜ್ಜಿ , ಹಾಗಾದರೆ ಅವರು ಪೆರುಮಾಳ್ ನ  ಅಪಾರ ಕರುಣೆಯನ್ನು ಹೊಂದಿದ್ದರು ?

ಆಂಡಾಳಜ್ಜಿ : ಹೌದು ವ್ಯಾಸ . ಭಗವಾನ್ ಅವರನ್ನು ಸಂಪೂರ್ಣವಾಗಿ ಆಶೀರ್ವದಿಸಿದರು. ಆಶೀರ್ವಾದ ಪಡೆದ ನಂತರ, ಈ ಜಗತ್ತಿನ ಇತರ ಜನರ ಬಗ್ಗೆ ಹೆಚ್ಚಿನ ಕಾಳಜಿಯಿಂದ, ಅವರು ಸಾವಿರಾರು ವರ್ಷಗಳ ಹಿಂದೆ ತಮ್ಮ ಪಾಸುರಂ (ಹಾಡುಗಳು) ಮೂಲಕ ಪೆರುಮಾಳ್  ಕರುಣೆಯನ್ನು ಹಂಚಿಕೊಂಡರು. ಆ ಪಾಸುರಮ್‌ಗಳ ಮೂಲಕವೇ ನಾವು ಭಗವಾನ್ ಬಗ್ಗೆ ಅರ್ಥಮಾಡಿಕೊಳ್ಳುತ್ತಿದ್ದೇವೆ ಮತ್ತು ನಾವು ಪೆರುಮಾಳ್ ನ ವೈಭವವನ್ನು ಆನಂದಿಸುತ್ತಿದ್ದೇವೆ.

ಪರಾಶರ : ಓಹ್ ಅಜ್ಜಿ, ವೇದಗಳಿಂದ ನಾವು ಭಗವಾನನ್ನು ಅರ್ಥ ಮಾಡಿಕೊಳ್ಳುತ್ತೇವೆ ಎಂದು ಭಾವಿಸಿದೆ .

ಆಂಡಾಳಜ್ಜಿ: ಹೌದು. ಖಂಡಿತವಾಗಿ. ಆದರೆ ವೇದಂ ತುಂಬಾ ದೊಡ್ಡದಾಗಿದೆ. ಆಳವಾದ ಅಧ್ಯಯನವಿಲ್ಲದೆ ಅರ್ಥಮಾಡಿಕೊಳ್ಳುವುದು ಕಷ್ಟಕರವಾದ ಅನೇಕ ಸಂಕೀರ್ಣ ಸಂಗತಿಗಳು  ವೇದಂ ಸಂಸ್ಕೃತದಲ್ಲಿ ವಿವರಿಸಲಾಗಿದೆ. ಆದರೆ, ಆಳ್ವಾರ್ಗಳು ಈ 4000 ಪಾಸುರಂಗಳಲ್ಲಿ ಸರಳ ತಮಿಳು  ಭಾಷೆಯಲ್ಲಿ ವೇದಗಳ ಸಾರವನ್ನು ತಂದರು. ಮತ್ತು ನಿಮಗೆ ಚೆನ್ನಾಗಿ ತಿಳಿದಿರುವಂತೆ, ಪೆರುಮಾಳನ್ನು ವೈಭವೀಕರಿಸುವುದು ವೇದಗಳ ಸಾರವಾಗಿದೆ. ಹೆಚ್ಚಾಗಿ , ಆಳ್ವಾರ್ಗಳು ತಮ್ಮ ಸ್ವ-ಪ್ರಯತ್ನದ ಬದಲು ಭಗವಾನ್ ಅವರ ನೇರ ಅನುಗ್ರಹದಿಂದ ತಮ್ಮ ಜ್ಞಾನವನ್ನು ಪಡೆದುಕೊಂಡರು – ಆದ್ದರಿಂದ ಇದು ಹೆಚ್ಚು ವಿಶೇಷವಾಗಿದೆ.

ವ್ಯಾಸ : ಹೌದು, ನಾವು ಇದನ್ನು ಈಗ ಅರ್ಥಮಾಡಿಕೊಂಡಿದ್ದೇವೆ. ಆಳ್ವಾರ್ಗಳು ಪೆರುಮಾಳ್  ಬಗ್ಗೆ ದಯೆಯಿಂದ ಹೆಚ್ಚು ಸರಳ ಮತ್ತು ಕೇಂದ್ರೀಕೃತ ರೀತಿಯಲ್ಲಿ ವಿವರಿಸುತ್ತಿದ್ದರು. ನೀವು ಈಗ ಈ ವಿಷಯಗಳನ್ನು ನಮಗೆ ವಿವರಿಸುತ್ತಿರುವಂತೆಯೇ.

ಆಂಡಾಳಜ್ಜಿ  : ತುಂಬಾ ಒಳ್ಳೆಯದು ವ್ಯಾಸ – ಅದು ತುಂಬಾ ಉತ್ತಮ ಉದಾಹರಣೆ. ಈಗ, ನಿಮಗೆ ನೆನಪಿರಲಿ, ಪೆರುಮಾಳ್  5 ವಿಭಿನ್ನ ರೂಪಗಳಲ್ಲಿ ಅಸ್ತಿತ್ವದಲ್ಲಿದ್ದಾರೆ ಎಂದು ನಾವು ಚರ್ಚಿಸಿದ್ದೇವೆ – ಪರಮಪಧಂನಲ್ಲಿ, ವ್ಯೂಹಮ್,ವಿಭವ  ಅವತಾರಮ್, ಅಂತರ್ಯಾಮಿ  ಮತ್ತು ಅರ್ಚೈ  ರೂಪದಲ್ಲಿ. ವಿಭಿನ್ನ ಆಳ್ವಾರ್ಗಳು ವಿವಿಧ ರೀತಿಯ ಪೆರುಮಾಳ್  ಕಡೆಗೆ ಮೋಹವನ್ನು ಹೊಂದಿದ್ದರು

ಪರಾಶರ : ಓಹ್ – ನಾವು ಶ್ರೀ ರಂಗನಾಥನ್ ಅನ್ನು ತುಂಬಾ ಇಷ್ಟಪಡುವಂತೆಯೇ, ಪ್ರತಿಯೊಬ್ಬ ಆಳ್ವಾರ್ ತಮ್ಮದೇ ಆದ ನೆಚ್ಚಿನ ಪೆರುಮಾಳ್  ಅನ್ನು ಇಷ್ಟಪಟ್ಟರಾ ?

ಆಂಡಾಳಜ್ಜಿ : ಹೌದು. ಮುದಲಾಳ್ವಾರಗಳು ( ಮೊದಲ 3 ಆಳ್ವಾರುಗಳು – ಪೊಯ್ಗೈ ಆಳ್ವಾರ್ , ಭೂದತ್ತಾಳ್ವಾರ್ , ಪೇಯ್ ಆಳ್ವಾರ್) -ಪರಮಪದದಲ್ಲಿ ಇರುವಂತೆ ಪೆರುಮಾಳಿನ ಸ್ವಾಮಿತ್ವವನ್ನು ವೈಭವೀಕರಿಸಿದರು. ತಿರುಮಳಿಶೈ ಆಳ್ವಾರ್,ಅಂತರ್ಯಾಮಿ- ನಮ್ಮೆಲ್ಲರ ಮನಸ್ಸಿನಲ್ಲಿರುವ ಪೆರುಮಾಳ್ ಬಳಿ ಅತ್ಯಂತ ಆಸಕ್ತಿ ಇದ್ದವರು . ನಮ್ಮಾಳ್ವಾರ್, ಪೆರಿಯಾಳ್ವಾರ್ ಮತ್ತು  ಆಂಡಾಳ್ ಶ್ರೀಕೃಷ್ಣನನ್ನು ನೆಚ್ಚಿದ್ದರು . ಕುಲಶೇಖರ ಆಳ್ವಾರ್ಗೆ  ಶ್ರೀ ರಾಮರಿಗೆ ಅತ್ಯಂತ ಲಗತ್ತು ಇದ್ದಿತು. ತೊಂಡರಡಿಪ್ಪೊಡಿ ಆಳ್ವಾರ್ ಮತ್ತು  ತಿರುಪ್ಪಾನ್ ಆಳ್ವಾರ್ ಶ್ರೀ ರಂಗನಾಥನ ಬಳಿ ಅತ್ಯಂತ ಭಕ್ತಿ ಇತ್ತು . ತಿರುಮಂಗೈ ಆಳ್ವಾರ್ ಎಲ್ಲ ಅರ್ಚಾವತಾರ ಪೆರುಮಾಳಿನ ಬಳಿ ಭಕ್ತಿಯಿಂದ ಇದ್ದವರು .

ವ್ಯಾಸ ಮತ್ತು ಪರಾಶರ : ಅಜ್ಜಿ ,ನೀವು ಮಧುರಕವಿ ಆಳ್ವಾರನ್ನು ಬಿಟ್ಟು ಬಿಟ್ಟಿರಿ.

ಆಂಡಾಳಜ್ಜಿ : ಹೌದು, ಒಳ್ಳೆಯ ಗಮನ . ಮಧುರಕವಿ ಆಳ್ವಾರ್ರ  ಭಕ್ತಿಯು ಪೂರ್ಣವಾಗಿ ನಮ್ಮಾಳ್ವಾರರಿಗೆ ಮೀಸಲಾಗಿದೆ.

ಆಂಡಾಳಜ್ಜಿ ಪೆರುಮಾಳಿಗೆ ಹೂವುಗಳನ್ನು ಕೊಳ್ಳಲು ಹೂವು ಮಾರುವ ಅಂಗಡಿಯ ಬಳಿ ನಿಲ್ಲುತ್ತಾರೆ.

ಪರಾಶರ : ಅಜ್ಜಿ, ಪ್ರತಿಯೊಂದು ಆಳ್ವಾರಗಳ ಬಗ್ಗೆ ನಮಗೆ ಹೇಳುತ್ತೀರಾ ?

ಆಂಡಾಳಜ್ಜಿ : ಖಂಡಿತವಾಗಿ. ಆದರೆ ಈಗ ನಾವು ದೇವಾಲಯಕ್ಕೆ ಬಂದಿದ್ದೇವೆ . ಒಳಗೆ ಹೋಗಿ ದರ್ಶನ ಮಾಡಿಕೊಂಡು ಅವರನ್ನು ಆದರಿಸೋಣ. ಮುಂದಿನ ಬಾರಿ , ನಾನು ಪ್ರತಿ ಆಳ್ವಾರ್ ಬಗ್ಗೆ ವಿವರಿಸುತ್ತೇನೆ

ವ್ಯಾಸ ಮತ್ತು ಪರಾಶರ  : ಸರಿ ಅಜ್ಜಿ, ಒಳಗೆ ಹೋಗೋಣ – ನರಸಿಂಹರನ್ನು ಕಾಣಲು  ನಮಗೆ ಉತ್ಸಾಹ ತಡೆಯಲಾಗುತ್ತಿಲ್ಲ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/10/beginners-guide-introduction-to-azhwars/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment