ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಮುದಲಾಳ್ವಾರುಗಳು ಭಾಗ – 1

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಆಳ್ವಾರುಗಳ ಪರಿಚಯ

ಆಂಡಾಳಜ್ಜಿ ವ್ಯಾಸ ಮತ್ತು ಪರಾಶರನನ್ನು ಶ್ರೀರಂಗದಲ್ಲಿರುವ ಮುದಲಾಳ್ವಾರುಗಳ ಸನ್ನಿಧಿಗೆ  ಕರೆದು ಕೊಂಡು ಹೋಗಿ ಅವರ ವೈಭವವನ್ನು ವಿವರಿಸುವ ಯೋಜನೆ ಮಾಡುತ್ತಾರೆ.

ಪೊಯ್ಗೈ ಆಳ್ವಾರ್
ಭೂದತ್ ಆಳ್ವಾರ್
ಪೇಯ್ ಆಳ್ವಾರ್

ಆಂಡಾಳಜ್ಜಿ : ವ್ಯಾಸ ಮತ್ತು ಪರಾಶರ ! ಇಂದು ನಾವು ದೇವಾಲಯದಲ್ಲಿರುವ ಮುದಲಾಳ್ವಾರುಗಳ ಸನ್ನಿಧಿಗೆ  ಹೋಗೋಣ.

ವ್ಯಾಸ ಮತ್ತು ಪರಾಶರ :ಅದ್ಭುತ ಅಜ್ಜಿ, ಹೋಗೋಣ .

ಆಂಡಾಳಜ್ಜಿ : ನಾವು  ಸನ್ನಿಧಿಗೆ ನಡೆದು ಹೋಗುವಾಗ ನಿಮಗೆ ಅವರ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತೇನೆ. ಮುದಲ್ ಎಂದರೆ ಮೊದಲ. ಆಳ್ವಾರ್ ಎಂದರೆ ನಮಗೆ ಗೊತ್ತು – ಭಕ್ತಿಯಲ್ಲಿ ಮುಳುಗಿದವರು ಎಂದು. ಹಾಗಾಗಿ ಮುದಲಾಳ್ವಾರ್ಗಳು 12 ಆಳ್ವಾರ್ಗಳಲ್ಲಿ ಮೊದಲು ಬಂದವರು.

ವ್ಯಾಸ :  ಮುದಲಾಳ್ವಾರ್ಗಳ್  ಬಹುವಚನ ಏಕೆ ಇದೆ ಅಜ್ಜಿ? ಒಬ್ಬರಿಗಿಂತ ಹೆಚ್ಚಾಗಿ “ಮುದಲ್” ಆಳ್ವಾರ್ ಇದ್ದಾರೆಯೇ ?

ಆಂಡಾಳಜ್ಜಿ : ಹ! ಹ ! ತುಂಬಾ ಒಳ್ಳೆಯ ಪ್ರಶ್ನೆ. ಹೌದು, ಆಳ್ವಾರುಗಳಲ್ಲಿ , ಮೊದಲ 3 ಆಳ್ವಾರುಗಳನ್ನು ಸದಾ ಒಟ್ಟಿಗೆ ಉಲ್ಲೇಖಿಸಲಾಗಿದೆ.

ಪರಾಶರ : ಏಕೆ ಅಜ್ಜಿ ? ಅವರೇನು ಪಂಚ ಪಾಂಡವರಂತೆ ಯಾವಾಗಲೂ ಒಟ್ಟಿಗೆ ಇದ್ದರೆ? 

ಆಂಡಾಳಜ್ಜಿ : ಒಳ್ಳೆಯ ಉದಾಹರಣೆ ಪರಾಶರ. ಹೌದು – ಮೊದಲ 3 ಆಳ್ವಾರುಗಳು 3 ಬೇರೆ ಬೇರೆ ಸ್ತಳಗಳಲ್ಲಿ ಜನಿಸಿದರೂ, ಒಂದು ದಿವ್ಯ ಘಟನೆಯಿಂದಾಗಿ , ತಿರುಕ್ಕೋವಲೂರ್ ದಿವ್ಯ ದೇಶದಲ್ಲಿ ಕೂಡಿಬಂದು ಶ್ರೀಮನ್ನಾರಾಯಣನನ್ನು ಒಟ್ಟಿಗೆ ಪೂಜಿಸಿದರು. ಅಂದಿನಿಂದ, ಅವರನ್ನು ಒಟ್ಟಗೆ ಉಲ್ಲೇಖಿಸಲಾಗಿದೆ.

ವ್ಯಾಸ : ಅದೇನಂತಹ ಘಟನೆ ಅಜ್ಜಿ ? ಅದು ತಿಳಿಯಲು ಬಹಳ ಕುತೂಹಲವಾಗಿದೆ.

ಆಂಡಾಳಜ್ಜಿ : ಖಂಡಿತ ಹೇಳುತ್ತೇನೆ. ಆದರೆ ಅದಕ್ಕಿಂತ ಮೊದಲು ಆ 3 ಆಳ್ವಾರುಗಳ ಬಗ್ಗೆ ನಾವು ಕೆಲವು ವಿಷಯಗಳನ್ನು ತಿಳಿಯಬೇಕು, ಮೊದಲ ಆಳ್ವಾರ್ ಹೆಸರು ಪೊಯ್ಗೈ ಆಳ್ವಾರ್ – ಸರೋ ಯೋಗಿ , ಎರಡನೆಯ ಆಳ್ವಾರ್ ಹೆಸರು ಭೂದತ್ ಆಳ್ವಾರ್ – ಭೂತ ಯೋಗಿ , ಮೂರನೆಯ ಆಳ್ವಾರ್ ಹೆಸರು ಪೇಯ್ ಆಳ್ವಾರ್ – ಮಹದಾಹ್ವಯ.

ಪರಾಶರ : ಅವರು ಎಂದು ಎಲ್ಲಿ ಹುಟ್ಟಿದರು  ಅಜ್ಜಿ ?

ಆಂಡಾಳಜ್ಜಿ :  ಮೂವರೂ ಹಿಂದಿನ ಯುಗದಲ್ಲಿ ಜನಿಸಿದರು – ದ್ವಾಪರ ಯುಗ ( ಕೃಷ್ಣಾವತಾರ ನಡೆದ ಯುಗ). ಮೂವರೂ ಹೂವುಗಳಿಂದ ಅವತರಿಸಿದರು . ಪೊಯ್ಗೈ ಆಳ್ವಾರ್ ಅಶ್ವಯುಜ ಮಾಸದ ಶ್ರವಣ ನಕ್ಷತ್ರದಂದು ಕಾಂಚೀಪುರದ ತಿರುವೆಕ್ಕಾದಲ್ಲಿ ಒಂದು ಕೊಳದಲ್ಲಿ ಅವತರಿಸಿದರು. ಭೂದತ್ತಾಳ್ವಾರ್ -ಈಗ ಮಹಾಬಲಿಪುರಂ ಎಂದು ಪ್ರಸಿದ್ಧವಾದ ತಿರುಕ್ಕಡಲ್ಮಲ್ಲೆಯ ಕೊಳದಲ್ಲಿ ಆಶ್ವಯುಜ ಮಾಸದ ಜ್ಯೇಷ್ಟಾ ನಕ್ಷತ್ರದಂದು ಅವತರಿಸಿದರು. ಪೇಯ್ ಆಳ್ವಾರ್ ಈಗ ಮಯಿಲಾಪುರ ಎಂದು ಪ್ರಸಿದ್ಧವಾದ ತಿರುಮಯಿಲೈಯಲ್ಲಿ  ಆಶ್ವಯುಜ ಮಾಸದ ಶತಭಿಷ ನಕ್ಷತ್ರದಂದು ಅವತರಿಸಿದರು.

ವ್ಯಾಸ : ವಾಹ್ ! ಅವರು ಹೂವುಗಳಿಂದ ಅವತರಿಸಿದರೆ, ಮತ್ತೆ ಅವರಿಗೆ ಅಪ್ಪ ಅಮ್ಮ ಇಲ್ಲವೇ?

ಆಂಡಾಳಜ್ಜಿ : ಹೌದು, ಅವರು ಜನಿಸಿದಾಗಲೇ  ಭಗವಂತನಿಂದ ಕೃಪೆ ಪಡೆದವರು  ಮತ್ತೆ ಅವರು ತಾಯಾರ್ ಮತ್ತು ಪೆರುಮಾಳನ್ನು  ಅವರ ತಂದೆ ತಾಯಿಯೆಂದು ಭಾವಿಸಿದರು.

ಪರಾಶರ : ಅದೆಂತಹ ಅದ್ಭುತವಾದ ವಿಷಯ. ಆದರೆ ಅವರು ಹೇಗೆ ಭೇಟಿಯಾದರು, ಅದೇನು ದಿವ್ಯ ಘಟನೆ ?

ಆಂಡಾಳಜ್ಜಿ : ಅವರು ಪ್ರತ್ಯೇಕವಾಗಿ ಕ್ಷೇತ್ರಗಳಿಗೆ ಪ್ರಯಾಣಿಸಿ ಭಗವಾನನ್ನು ಪೂಜಿಸುತಿದ್ದರು . ಅದು ಅವರ ಜೀವನವಾಗಿತ್ತು – ದೇವಾಲಯಕ್ಕೆ   ಹೋಗಿ ಪೆರುಮಾಳನ್ನು ಪೂಜಿಸಿ ಅಲ್ಲಿಯೇ ಸ್ವಲ್ಪ ದಿನ ಇದ್ದು ನಂತರ ಮತ್ತೊಂದು ಜಾಗಕ್ಕೆ ಹೋಗುವುದು.

ವ್ಯಾಸ :ಕೇಳಲು ಎಷ್ಟು ಚೆನ್ನಾಗಿದೆ. ಬೇರೆ ಯಾವ ಚಿಂತೆ ಇಲ್ಲ. ನಾವು ಹಾಗೆ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಅಜ್ಜಿ.

ಆಂಡಾಳಜ್ಜಿ : ಹೌದು, ನೋಡಿ ನಾವು ಮುದಲಾಳವಾರುಗಳ  ಸನ್ನಿಧಿಗೆ ಬಂದೆವು. ಒಳಗೆ ಹೋಗಿ ದರ್ಶನ ಮಾಡೋಣ. ಅವರ ಉಳಿದ ಜೀವನದ ಬಗ್ಗೆ ಹಿಂತಿರುಗುವಾಗ ತಿಳಿಯೋಣ .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/11/beginners-guide-mudhalazhwargal-part-1/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment