ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀವೈಷ್ಣವಂ ಮುನ್ನುಡಿ

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಆಂಡಾಳಜ್ಜಿ ತಿರುಪ್ಪಾವೈ ಪಠಿಸುತ್ತಿದ್ದಾಗ, ಪರಾಶರ ಮತ್ತು ವ್ಯಾಸ ಅವರ ಬಳಿ ಓಡಿ  ಬರುತ್ತಾರೆ .

ಪರಾಶರ : ಅಜ್ಜಿ ನಮಗೊಂದು ಸಂದೇಹ . ನಾವು ಶ್ರೀವೈಷ್ಣವಂ ಬಗ್ಗೆ ಕೇಳುತ್ತಲೇ ಇದ್ದೀವಿ, ದಯವಿಟ್ಟು ಅದಕ್ಕೆ ಅರ್ಥವೇನು ಎಂದು ಹೇಳಿ.

ಆಂಡಾಳಜ್ಜಿ : ಓಹ್,ಅದು ಒಳ್ಳೆಯ ಪ್ರಶ್ನೆ ಪರಾಶರ. ಶ್ರೀವೈಷ್ಣವಂ ಎಂಬುದು ಶ್ರೀಮನ್ನಾರಾಯಣನೇ  ಪರಮ ದೈವ ಎಂದು ಅವರ ಭಕ್ತರು ಅತ್ಯಂತ ನಂಬಿಕೆಯಿಂದ ಪೂಜಿಸುವ ಶಾಶ್ವತ ಮಾರ್ಗವಾಗಿರುವುದು.

ವ್ಯಾಸ :  ಆದರೆ ಅಜ್ಜಿ ಏಕೆ ಶ್ರೀಮನ್ನಾರಾಯಣ? ಏಕೆ ಬೇರೆ ಯಾರು ಇರಬಾರದೆ ?

ಆಂಡಾಳಜ್ಜಿ : ವ್ಯಾಸ, ತುಂಬಾ ಒಳ್ಳೆಯ ಪ್ರಶ್ನೆ . ನಾನು ವಿವರಿಸುತ್ತೇನೆ.

ಶ್ರೀವೈಷ್ಣವಂ ವೇದ,ವೇದಾಂತ,ಮತ್ತು ಆೞ್ವಾರ್ಗಳ ದಿವ್ಯ ಪ್ರಬಂಧಗಳನ್ನು ಆಧರಿಸಿರುವುದು. ಇವೆಲ್ಲವನ್ನು ‘ಪ್ರಮಾಣಂ’ ಎನ್ನುವರು – ಪ್ರಮಾಣಂ ಎಂದರೆ ಅಧಿಕೃತ ಮಾಹಿತಿಯ ಮೂಲ. ಇವೆಲ್ಲ ಪ್ರಮಾಣಗಳು ಶ್ರೀಮನ್ನಾರಾಯಣ ಎಲ್ಲಾ ಕಾರಣಗಳಿಗೆ ಕಾರಣ ಎಂದು ಸರ್ವಾನುಮತದಿಂದ ವಿವರಿಸುವುದು. ನಾವು ಸರ್ವೋಚ್ಚ ಕಾರಣವನ್ನು ಪೂಜಿಸಬೇಕು. ಆ ಸರ್ವೋಚ್ಚ ಕಾರಣವನ್ನು ಶ್ರೀಮನ್ನಾರಾಯಣ ಎಂದು ವಿವರಿಸಲಾಗಿದೆ. ಅದರಿಂದಲೇ ಶ್ರೀವೈಷ್ಣವಂ ಪೂರ್ತಿಯಾಗಿ ಶ್ರೀಮನ್ನಾರಾಯಣನನ್ನು ಕೇಂದ್ರೀಕರಿಸಲಾಗಿದೆ.

ವ್ಯಾಸ : ಇದು ತಿಳಿಯಲು ಚೆನ್ನಾಗಿದೆ ಅಜ್ಜಿ. ನಾವು ಶ್ರೀವೈಷ್ಣವಂ ಅನುಯಾಯಿಗಳು ಎಂದು ಅರ್ಥವಾಗುತ್ತದೆ . ಸಾಮಾನ್ಯವಾಗಿ ನಾವು ಇನ್ನೂ ಏನು ಮಾಡಬೇಕು ಅಜ್ಜಿ?

ಆಂಡಾಳಜ್ಜಿ : ನಾವು ನಿತ್ಯ ನಿಯಮಿತವಾಗಿ ಪೆರುಮಾಳ್,ತಾಯಾರ್, ಆೞ್ವಾರ್, ಆಚಾರ್ಯರು ಇತ್ಯಾದಿಯವರನ್ನು ಪೂಜಿಸುತ್ತೇವೆ.

ಪರಾಶರ : ಅಜ್ಜಿ , ನೀವು ಹೇಳಿದ್ದಿರಿ, ಪೂರ್ತಿಯಾಗಿ ಶ್ರೀಮನ್ನಾರಾಯಣನನ್ನು ಕೇಂದ್ರೀಕರಿಸುತ್ತೇವೆ ಎಂದು . ಮತ್ತೆ ಏಕೆ ತಾಯಾರ್, ಆೞ್ವಾರ್, ಆಚಾರ್ಯರು ಇತ್ಯಾದಿ ?

ಆಂಡಾಳಜ್ಜಿ : ಬಹಳ ಒಳ್ಳೆಯ ಪ್ರಶ್ನೆ ಪರಾಶರ . ತಾಯಾರ್ ಪೆರುಮಾಳಿನ ದಿವ್ಯ ಪತ್ನಿ . ನೋಡು , ಪೆರುಮಾಳ್ ನಮ್ಮ ತಂದೆ ಮತ್ತು ತಾಯಾರ್ ನಮ್ಮ ತಾಯಿ. ಅವರನ್ನು ನಾವು ಒಟ್ಟಾಗಿ ಪೂಜಿಸಬೇಕು. ಆಗಾಗ್ಗೆ, ನಿಮ್ಮ ತಾಯಿ ಮತ್ತು ತಂದೆಗೆ ನಮಸ್ಕರಿಸುತ್ತೀರಿ ಅಲ್ಲವೇ – ಹಾಗೆಯೇ , ನಾವು ಪೆರುಮಾಳನ್ನು ಮತ್ತು ತಾಯಾರನ್ನು ಒಟ್ಟಿಗೆ ಪೂಜಿಸಬೇಕು. ಆೞ್ವಾರ್ಗಳು ಮತ್ತು ಆಚಾರ್ಯರು ಶ್ರೀಮನ್ನಾರಾಯಣನ ಪರಮ ಭಕ್ತರು. ಅವರಿಗೆ ಶ್ರೀಮನ್ನಾರಾಯಣನ ಬಳಿ ಅತ್ಯಂತ ಭಕ್ತಿ. ಅವರೇ ಪೆರುಮಾಳ್ ಮತ್ತು ತಾಯಾರ್ ನ  ವೈಭವವನ್ನು ಸ್ಪಷ್ಟವಾಗಿ ತಿಳಿಸಿದವರು- ಅದರಿಂದ ಅವರನ್ನು ಪೂಜಿಸುತ್ತೇವೆ.

ವ್ಯಾಸ : ಇನ್ನೇನು ಮಾಡುತ್ತೇವೆ ಅಜ್ಜಿ ?

ಆಂಡಾಳಜ್ಜಿ :  ನಾವು ಶ್ರೀವೈಷ್ಣವರು , ಎಲ್ಲರನ್ನೂ ಪೆರುಮಾಳ್ ಮತ್ತು ತಾಯಾರ್ನ ಮಕ್ಕಳೆಂದು ಭಾವಿಸುತ್ತೇವೆ. ಅದರಿಂದ ಎಲ್ಲರ ಕ್ಷೇಮಕಾಗಿ ಪ್ರಾರ್ಥಿಸುತ್ತೇವೆ . ಶ್ರೀಮನ್ನಾರಾಯಣನ ಸೇವೆಗಾಗಿ ಇತರರಿಗೆ ಸಹಾಯ ಮಾಡುತ್ತೇವೆ.

ಪರಾಶರ :  ಅದು ಹೇಗೆ ಮಾಡುತ್ತೇವೆ ಅಜ್ಜಿ ?

ಆಂಡಾಳಜ್ಜಿ : ಓಹ್ , ಅದು ಬಹಳ ಸುಲಭ.ನಾವು ಯಾರನ್ನಾದರೂ ಯಾವಾಗಲಾದರೂ  ಭೇಟಿಯಾದಾಗ ಪೆರುಮಾಳ್, ತಾಯಾರ್, ಆೞ್ವಾರ್, ಆಚಾರ್ಯರ ಬಗ್ಗೆ ಮಾತ್ರ ಚರ್ಚಿಸುತ್ತೇವೆ. ಪೆರುಮಾಳ್, ತಾಯಾರ್, ಆೞ್ವಾರ್, ಆಚಾರ್ಯರ ಶ್ರೇಷ್ಟತೆಯನ್ನು ತಿಳಿದು ಅವರಿಗೂ ಭಕ್ತಿ ಅಭವೃದ್ಧಿಯಾಗುತ್ತದೆ . ಅದು ಎಲ್ಲರಿಗೂ ಉಪಯೋಗಕಾರಿಯಾಗಿರುತ್ತದೆ.

ವ್ಯಾಸ : ಇದು ಚೆನ್ನಾಗಿದೆ ಅಜ್ಜಿ. ನಮ್ಮ ಸಮಯವನ್ನು ಕಳಿಯಲು ಎಂತಹ ಅದ್ಭುತವಾದ ಮಾರ್ಗ ? ಧನ್ಯವಾದಗಳು ಅಜ್ಜಿ . ಇಂದು ನಾವು ಶ್ರೀವೈಷ್ಣವಂ ನ ಕೆಲವು ಮೂಲ ಮಾಹಿತಿ ಕಲಿತೆವು.

ಆಂಡಾಳಜ್ಜಿ : ನೀವಿಬ್ಬರೂ ಇಂತಹ ಚತುರವಾದ ಪ್ರಶ್ನೆ ಕೇಳುವುದು ಒಳ್ಳೆಯದು. ನಿಮಗಾಗಿ ಪೆರುಮಾಳ್ ಮತ್ತು ತಾಯಾರ್ ಬಹಳ ಸಂತೋಷಗೊಳ್ಳುವರು. ಬನ್ನಿ ಈಗ ಸ್ವಲ್ಪ ಪ್ರಸಾಧ ಸ್ವೀಕರಿಸೋಣ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/07/beginners-guide-introduction-to-srivaishnavam/

ಆರ್ಕೈವ್ ಮಾಡಲಾಗಿದೆ :  http://pillai.koyil.org

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment