ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ತಿರುಮಂಗೈ ಆಳ್ವಾರ್

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ತಿರುಪ್ಪಾನಾಳ್ವಾರ್

ತಿರುಮಂಗೈ ಆಳ್ವಾರ್  ಅವರ ಆಡಲ್ಮಾ ಕುದುರೆಯ ಮೇಲೆ

ಆಂಡಾಳಜ್ಜಿ, ವ್ಯಾಸ ಮತ್ತು ಪರಾಶರ ಉರೈಯೂರಿನಿಂದ ಹಿಂದಿರುಗುತ್ತಿದ್ದರು.

ಆಂಡಾಳಜ್ಜಿ : ಪರಾಶರ ಮತ್ತು ವ್ಯಾಸ , ಇಂದು ನಿಮಗೆ ಉರೈಯೂರಿನಲ್ಲಿ ಅದ್ಭುತವಾದ ಸಮಯ ವಾಯಿತಲ್ಲವೇ .

ಪರಾಶರ ಮತ್ತು ವ್ಯಾಸ : ಹೌದು ಅಜ್ಜಿ, ತಿರುಪ್ಪಾನಾಳ್ವಾರನ್ನು ನೋಡಲು ಬಹಳ ಚೆನ್ನಾಗಿತ್ತು . ನಾವು ದಿವ್ಯ ದೇಶಗಳಿಗೆ ಹೋಗಿ ಅಲ್ಲಿ ಅರ್ಚಾವತಾರ ಎಂಪೆರುಮಾನರನ್ನು ನೋಡಲು ಇಷ್ಟಪಡುತ್ತೇವೆ.

ಆಂಡಾಳಜ್ಜಿ : ನಾನು ಈಗ ಹಲವಾರು ದಿವ್ಯ ದೇಶಗಳ ವೈಭವವನ್ನು ಬಹಿರಂಗಪಡಿಸುವುದರಲ್ಲಿ  ಪ್ರಮುಖ ಕಾರಣವಾದವರು ತಿರುಮಂಗೈ ಆಳ್ವಾರ್ ಬಗ್ಗೆ ಹೇಳುತ್ತೇನೆ .ಅವರು ಕಾರ್ತಿಕ ಮಾಸದ ಕೃತ್ತಿಕಾ ನಕ್ಷತ್ರದಂದು ತಿರುನಾಂಗೂರ್ ದಿವ್ಯದೇಶದ ಹತ್ತಿರ ಇರುವ ತಿರುಕ್ಕುರೈಯಲೂರ್ ನಲ್ಲಿ ಜನಿಸಿದರು . ಅವರು ಆರು ದಿವ್ಯ ಪ್ರಬಂಧಗಳನ್ನು ರಚಿಸಿದರು -ಅವು- ಪೆರಿಯ ತಿರುಮೊಳಿ, ತಿರುಕ್ಕುರುತ್ತಾಂಡಗಂ , ತಿರುವೆಳುಕೂಟ್ರಿರುಕ್ಕೆಯಿ , ಸಿರಿಯ ತಿರುಮಡಲ್ , ಪೆರಿಯ ತಿರುಮಡಲ್ ಮತ್ತು ತಿರುನೆಡುಣ್ತಾಂಡಗಂ. ಅವರ ಸ್ವಂತ ಹೆಸರು ನೀಲನ್ (ಅವರು ನೀಲ  ಬಣ್ಣದವರಗಿದ್ದರು)

ಪರಾಶರ : ಅಜ್ಜಿ ಆಗಿನ ಕಾಲದಲ್ಲಿ ಅವರು ದಿವ್ಯದೇಶಗಳಿಗೆ ಹೇಗೆ ಪ್ರಯಾಣಿಸಿದರು?

ಆಂಡಾಳಜ್ಜಿ : ಅವರ ಬಳಿ ಆಡಲ್ಮಾ ಎಂದು ಒಂದು ಶಕ್ತಿಶಾಲಿ ಕುದುರೆ ಇತ್ತು, ಅದರ ಮೇಲೆ ಅವರು  ಎಲ್ಲೆಡೆ ಪ್ರಯಾಣಿಸಿದರು.

ವ್ಯಾಸ : ಅವರ ವಿಶೇಷತೆ ಏನು  ಅಜ್ಜಿ ?

ಆಂಡಾಳಜ್ಜಿ : ತಿರುಮಂಗೈ ಆಳ್ವಾರ್ ಬಗ್ಗೆ ಸಾಕಷ್ಟು ವಿಶೇಷತೆಗಳಿವೆ . ಆರಂಭದಲ್ಲಿ, ಅವರು ಮಹಾವೀರರು ಮತ್ತು ಒಂದು ಸಣ್ಣ ರಾಜ್ಯದ ಅರಸರಾಗಿದ್ದರು . ಆ ಸಮಯದಲ್ಲಿ ಅವರು  ಕುಮುದವಲ್ಲಿ  ನಾಚ್ಚಿಯಾರ್ ಅವರನ್ನು ಭೇಟಿಯಾಗುತ್ತಾರೆ  ಮತ್ತು ಅವರು  ಅವಳನ್ನು ಮದುವೆಯಾಗಲು ಬಯಸುತ್ತಾರೆ . ಕುಮುದವಲ್ಲಿ  ನಾಚ್ಚಿಯಾರ್ ಅವರು ಪೆರುಮಾಳ್  ಭಕ್ತನನ್ನು, ಭಾಗವತರಿಗೆ ಹೆಚ್ಚಿನ ಕಾಳಜಿಯೊಂದಿಗೆ ಸೇವೆ ಸಲ್ಲಿಸುವರನ್ನು ಮಾತ್ರ ಮದುವೆಯಾಗುವುದಾಗಿ ಹೇಳುತ್ತಾರೆ. ಆಳ್ವಾರ್ ಒಪ್ಪಿಕೊಂಡು ಪೆರುಮಾಳ್ ಭಕ್ತರಾಗುತ್ತಾರೆ ಮತ್ತು ಹೀಗೆ ಅವರು ಪರಸ್ಪರ ಮದುವೆಯಾಗುತ್ತಾರೆ. ಆಳ್ವಾರ್ ಅನೇಕ ಶ್ರೀವೈಷ್ಣವರಿಗೆ ಪ್ರಸಾದವನ್ನೂ ನೀಡುವ ಮೂಲಕ ಸೇವೆ ಸಲ್ಲಿಸುತ್ತಾರೆ . ಆದರೆ ಅಂತಿಮವಾಗಿ ಅವರು ಆ ಕೈಂಕರ್ಯವನ್ನು ಬೆಂಬಲಿಸಲು ಸಂಪತ್ತು ಕ್ಷೀಣ ತೊಡಗಿತು. ಆದುದರಿಂದ ಅವರು  ಕಾಡಿನ ಮೂಲಕ ಹಾದುಹೋಗುವ ಶ್ರೀಮಂತ ಜನರನ್ನು ದೋಚಲು ಪ್ರಾರಂಭಿಸುತ್ತಾರೆ  ಮತ್ತು ಆ ಹಣವನ್ನು ಭಾಗವತರಿಗೆ ಸೇವೆ ಮಾಡಲು ಬಳಸಿದರು .

ಪರಾಶರ :  ಓಹ್ ಅಜ್ಜಿ ಕಳ್ಳತನ ಮಾಡಬಹುದೇ?

ಆಂಡಾಳಜ್ಜಿ : ಇಲ್ಲ! ನಾವು ಅದನ್ನು ಎಂದಿಗೂ ಮಾಡಬಾರದು. ಆದರೆ ಅಳ್ವಾರ್ ಭಾಗವತರಿಗೆ ಸೇವೆ ಸಲ್ಲಿಸಲು ತುಂಬಾ ಹತಾಶನಾಗಿದ್ದರಿಂದ, ಅವರು  ಶ್ರೀಮಂತ ಜನರನ್ನು ದೋಚಲು ಪ್ರಾರಂಭಿಸಿದನು. ಹೇಗಾದರೂ, ಪೆರುಮಾಳ್  ಅವರಿಗೆ ಸಂಪೂರ್ಣ ಜ್ಞಾನವನ್ನು ನೀಡಲು ಮತ್ತು ಅವರನ್ನು ಸಂಪೂರ್ಣವಾಗಿ ಸುಧಾರಿಸಲು ಬಯಸಿದ್ದರು. ಆದ್ದರಿಂದ , ಅವರು ಸ್ವತಃ ತಾಯಾರ್ ಜೊತೆಗೆ ನವದಂಪತಿಗಳಾಗಿ ಉಡುಪುಗಳನ್ನು ಧರಿಸಿ ಅದೇ ಕಾಡಿನಲ್ಲಿ ಭವ್ಯವಾಗಿ ಕುಟುಂಬ /ಸಂಬಂಧಿಕರೊಂದಿಗೆ ಪ್ರಯಾಣಿಸುತ್ತಾರೆ. ಹಣ ಸಂಪಾದಿಸಲು ಇದೊಂದು ಉತ್ತಮ ಅವಕಾಶ ಎಂದು ಗ್ರಹಿಸಿ ಆಳ್ವಾರ್ ಅವರನ್ನು ದೋಚಲು ಪ್ರಯತ್ನಿಸುತ್ತಾರೆ . ಆದರೆ ಪೆರುಮಾಳ್  ಅವರ ಅನುಗ್ರಹದಿಂದ, ಪೆರುಮಾಳ್  ಸ್ವತಃ ಬಂದಿರುವುದನ್ನು ಅವನು ಅಂತಿಮವಾಗಿ ಅರಿತುಕೊಳ್ಳುತ್ತಾನೆ. ಪೆರುಮಾಳ್  ಅವನನ್ನು ಸಂಪೂರ್ಣವಾಗಿ ಆಶೀರ್ವದಿಸಿ  ಮತ್ತು ಅವನನ್ನು ತುಂಬಾ ಪರಿಶುದ್ಧನಾಗಿ ಸುಧಾರಿಸುತ್ತಾರೆ . ಅವರು ಪೆರುಮಾಳನ್ನು ಆಶೀರ್ವದಿಸಲು ಒತ್ತಾಯಿಸಲು ಪ್ರಯತ್ನಿಸಿದ ಕಾರಣ , ಪೆರುಮಾಳ್ ಅವರಿಗೆ  “ ಕಲಿಯನ್” ಎಂದು ಪಟ್ಟ ನೀಡಿದ್ದಾರೆ , ಅಂದರೆ ಭವ್ಯ /ಹೆಮ್ಮೆ ಎಂದು ಅರ್ಥ. ಅವರನ್ನು ಪರಕಾಲನ್ ಎಂದೂ ಕರೆಯುತ್ತಾರೆ (ಸ್ವತಃ ಪರಮಾತ್ಮ ಅವನನ್ನು ನೋಡಿ ಭಯಪಡುವುದು)

ವ್ಯಾಸ : ವಾಹ್ ! ಅದ್ಭುತ ಅಜ್ಜಿ . ಅಮೇಲೆ ಏನು ಮಾಡಿದರು.

ಆಂಡಾಳಜ್ಜಿ : ಭಾವನೆಗಳಿಂದ ಪರವಶಗೊಂಡು ಅವರು ಸಂಪೂರ್ಣವಾಗಿ ಪೆರುಮಾಳಿಗೆ ಶರಣಾದರು. ಅದರ ನಂತರ , ಅವರು ಭಾರತ ದೇಶದ ಉದ್ದ ಆಗಲಕ್ಕು ಅನೇಕ ದಿವ್ಯ ದೇಶಗಳಿಗೆ (80 ಕ್ಕು ಹೆಚ್ಚು) ಭೇಟಿ ನೀಡಿ ಅಲ್ಲಿನ ಪೆರುಮಾಳ್ಗಳನ್ನು ವೈಭವಿಕರಿಸಿದರು. ಅದು ಸಹ , ಅವರು ಬೇರೆ ಯಾವ ಆಳ್ವಾರುಗಳು ಹಾಡದ ಸುಮಾರು 40 ಕ್ಕೂ  ಹೆಚ್ಚು ದಿವ್ಯದೇಶದ ಪೆರುಮಾಳ್ ಗಳನ್ನು ಹಾಡಿದ್ದಾರೆ – ಹೀಗೆ ಆ ದಿವ್ಯ ದೇಶಗಳನ್ನು ನಮಗೆ ಬಹಿರಂಗಪಡಿಸಿದ್ದಾರೆ.

ಪರಾಶರ : ಓಹ್! ನಮ್ಮ ಭಾಗ್ಯ – ಅವರಿಂದಲೇ ನಾವು ಈಗ ಈ ದಿವ್ಯ ದೇಶಗಳನ್ನು ಪ್ರಾರ್ಥಿಸಲಾಗಿದೆ . ನಾವು ಆವರಿಗೆ  ಎಂದಿಗೂ  ಕೃತ ಜ್ಞತರು .

ಆಂಡಾಳಜ್ಜಿ : ಅವರು ನಮ್ಮ ಶ್ರೀರಂಗದಲ್ಲಿ ಸಾಕಷ್ಟು ಕೈಂಕರ್ಯಗಳನ್ನು ಮಾಡಿದ್ದಾರೆ , ದೇವಾಲಯದ ಸುತ್ತ ಕೋಟೆ ಕಟ್ಟಿದರು ಇತ್ಯಾದಿ . ಅವರ ಜೀವನಕಾಲದಲ್ಲೇ ಪೆರುಮಾಳ್ ಆಳ್ವಾರರ ವಿಗ್ರಹವನ್ನು ತಯಾರಿಸಿ ಪೂಜಿಸಲು ಆಳ್ವಾರರ ಮೈದುನನಿಗೆ ಆದೇಶಿಸುತ್ತಾರೆ. ಕೆಲ ಸಮಯದ ನಂತರ ತಿರುಮಂಗೈ ಆಳ್ವಾರ್ ತಿರುಕ್ಕುರುಂಗುಡಿ ದಿವ್ಯ ದೇಶಕ್ಕೆ ಹೋಗಿ ನಂಬಿ ಎಂಪೆರುಮಾನ್ ಅನ್ನು ಪೂಜಿಸುತ್ತಾರೆ. ಅಂತಿಮವಾಗಿ, ಎಂಪೆರುಮಾನನ್ನು ಧ್ಯಾನಿಸುತ್ತಾ ಸದಾ ಪೆರುಮಾಳಿಗೆ ಕೈಂಕರ್ಯ ಮಾಡಲು ಪರಮಪದಕ್ಕೆ ಏರಿದರು .

ವ್ಯಾಸ : ಅಜ್ಜಿ ನಾವು ಅರ್ಚಾವತಾರ ಪೆರುಮಾಳ ಕೈಂಕರ್ಯದ ವಿಶೇಷತೆ ಮತ್ತು ಅವರ ಭಕ್ತರಾದ ಆಳ್ವಾರುಗಳ ಜೀವನದ ಬಗ್ಗೆ ತಿಳಿದುಕೊಂಡಿದ್ದೇವೆ.

ಆಂಡಾಳಜ್ಜಿ : ಹೌದು ಅದು ನಮ್ಮ ಸಂಪ್ರದಾಯದ ತತ್ವವಾಗಿದೆ. ಇದರೊಂದಿಗೆ ನೀವು ಎಲ್ಲ ಆಳ್ವಾರುಗಳ ಬಗ್ಗೆ ಕೇಳಿದ್ದೀರಿ . ಮುಂದಿನ ಬಾರಿ ನಾನು ನಿಮಗೆ ಆಚಾರ್ಯರ ಬಗ್ಗೆ ಹೇಳುತ್ತೇನೆ.

ಪರಾಶರ ಮತ್ತು   ವ್ಯಾಸ : ಸರಿ ಅಜ್ಜಿ ! ನಾವು ಕಾತುರದಿಂದ ಇದ್ದೇವೆ .  

 ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ  :  http://pillai.koyil.org/index.php/2015/02/beginners-guide-thirumangai-azhwar 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment