ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ
ಆಂಡಾಳಜ್ಜಿ ವ್ಯಾಸ ಮತ್ತು ಪರಾಶರನನ್ನು ಶ್ರೀರಂಗದಲ್ಲಿರುವ ಮುದಲಾಳ್ವಾರುಗಳ ಸನ್ನಿಧಿಗೆ ಕರೆದು ಕೊಂಡು ಹೋಗಿ ಅವರ ವೈಭವವನ್ನು ವಿವರಿಸುವ ಯೋಜನೆ ಮಾಡುತ್ತಾರೆ.
ಆಂಡಾಳಜ್ಜಿ : ವ್ಯಾಸ ಮತ್ತು ಪರಾಶರ ! ಇಂದು ನಾವು ದೇವಾಲಯದಲ್ಲಿರುವ ಮುದಲಾಳ್ವಾರುಗಳ ಸನ್ನಿಧಿಗೆ ಹೋಗೋಣ.
ವ್ಯಾಸ ಮತ್ತು ಪರಾಶರ :ಅದ್ಭುತ ಅಜ್ಜಿ, ಹೋಗೋಣ .
ಆಂಡಾಳಜ್ಜಿ : ನಾವು ಸನ್ನಿಧಿಗೆ ನಡೆದು ಹೋಗುವಾಗ ನಿಮಗೆ ಅವರ ಬಗ್ಗೆ ಕೆಲವು ವಿಷಯಗಳನ್ನು ಹೇಳುತ್ತೇನೆ. ಮುದಲ್ ಎಂದರೆ ಮೊದಲ. ಆಳ್ವಾರ್ ಎಂದರೆ ನಮಗೆ ಗೊತ್ತು – ಭಕ್ತಿಯಲ್ಲಿ ಮುಳುಗಿದವರು ಎಂದು. ಹಾಗಾಗಿ ಮುದಲಾಳ್ವಾರ್ಗಳು 12 ಆಳ್ವಾರ್ಗಳಲ್ಲಿ ಮೊದಲು ಬಂದವರು.
ವ್ಯಾಸ : ಮುದಲಾಳ್ವಾರ್ಗಳ್ ಬಹುವಚನ ಏಕೆ ಇದೆ ಅಜ್ಜಿ? ಒಬ್ಬರಿಗಿಂತ ಹೆಚ್ಚಾಗಿ “ಮುದಲ್” ಆಳ್ವಾರ್ ಇದ್ದಾರೆಯೇ ?
ಆಂಡಾಳಜ್ಜಿ : ಹ! ಹ ! ತುಂಬಾ ಒಳ್ಳೆಯ ಪ್ರಶ್ನೆ. ಹೌದು, ಆಳ್ವಾರುಗಳಲ್ಲಿ , ಮೊದಲ 3 ಆಳ್ವಾರುಗಳನ್ನು ಸದಾ ಒಟ್ಟಿಗೆ ಉಲ್ಲೇಖಿಸಲಾಗಿದೆ.
ಪರಾಶರ : ಏಕೆ ಅಜ್ಜಿ ? ಅವರೇನು ಪಂಚ ಪಾಂಡವರಂತೆ ಯಾವಾಗಲೂ ಒಟ್ಟಿಗೆ ಇದ್ದರೆ?
ಆಂಡಾಳಜ್ಜಿ : ಒಳ್ಳೆಯ ಉದಾಹರಣೆ ಪರಾಶರ. ಹೌದು – ಮೊದಲ 3 ಆಳ್ವಾರುಗಳು 3 ಬೇರೆ ಬೇರೆ ಸ್ತಳಗಳಲ್ಲಿ ಜನಿಸಿದರೂ, ಒಂದು ದಿವ್ಯ ಘಟನೆಯಿಂದಾಗಿ , ತಿರುಕ್ಕೋವಲೂರ್ ದಿವ್ಯ ದೇಶದಲ್ಲಿ ಕೂಡಿಬಂದು ಶ್ರೀಮನ್ನಾರಾಯಣನನ್ನು ಒಟ್ಟಿಗೆ ಪೂಜಿಸಿದರು. ಅಂದಿನಿಂದ, ಅವರನ್ನು ಒಟ್ಟಗೆ ಉಲ್ಲೇಖಿಸಲಾಗಿದೆ.
ವ್ಯಾಸ : ಅದೇನಂತಹ ಘಟನೆ ಅಜ್ಜಿ ? ಅದು ತಿಳಿಯಲು ಬಹಳ ಕುತೂಹಲವಾಗಿದೆ.
ಆಂಡಾಳಜ್ಜಿ : ಖಂಡಿತ ಹೇಳುತ್ತೇನೆ. ಆದರೆ ಅದಕ್ಕಿಂತ ಮೊದಲು ಆ 3 ಆಳ್ವಾರುಗಳ ಬಗ್ಗೆ ನಾವು ಕೆಲವು ವಿಷಯಗಳನ್ನು ತಿಳಿಯಬೇಕು, ಮೊದಲ ಆಳ್ವಾರ್ ಹೆಸರು ಪೊಯ್ಗೈ ಆಳ್ವಾರ್ – ಸರೋ ಯೋಗಿ , ಎರಡನೆಯ ಆಳ್ವಾರ್ ಹೆಸರು ಭೂದತ್ ಆಳ್ವಾರ್ – ಭೂತ ಯೋಗಿ , ಮೂರನೆಯ ಆಳ್ವಾರ್ ಹೆಸರು ಪೇಯ್ ಆಳ್ವಾರ್ – ಮಹದಾಹ್ವಯ.
ಪರಾಶರ : ಅವರು ಎಂದು ಎಲ್ಲಿ ಹುಟ್ಟಿದರು ಅಜ್ಜಿ ?
ಆಂಡಾಳಜ್ಜಿ : ಮೂವರೂ ಹಿಂದಿನ ಯುಗದಲ್ಲಿ ಜನಿಸಿದರು – ದ್ವಾಪರ ಯುಗ ( ಕೃಷ್ಣಾವತಾರ ನಡೆದ ಯುಗ). ಮೂವರೂ ಹೂವುಗಳಿಂದ ಅವತರಿಸಿದರು . ಪೊಯ್ಗೈ ಆಳ್ವಾರ್ ಅಶ್ವಯುಜ ಮಾಸದ ಶ್ರವಣ ನಕ್ಷತ್ರದಂದು ಕಾಂಚೀಪುರದ ತಿರುವೆಕ್ಕಾದಲ್ಲಿ ಒಂದು ಕೊಳದಲ್ಲಿ ಅವತರಿಸಿದರು. ಭೂದತ್ತಾಳ್ವಾರ್ -ಈಗ ಮಹಾಬಲಿಪುರಂ ಎಂದು ಪ್ರಸಿದ್ಧವಾದ ತಿರುಕ್ಕಡಲ್ಮಲ್ಲೆಯ ಕೊಳದಲ್ಲಿ ಆಶ್ವಯುಜ ಮಾಸದ ಜ್ಯೇಷ್ಟಾ ನಕ್ಷತ್ರದಂದು ಅವತರಿಸಿದರು. ಪೇಯ್ ಆಳ್ವಾರ್ ಈಗ ಮಯಿಲಾಪುರ ಎಂದು ಪ್ರಸಿದ್ಧವಾದ ತಿರುಮಯಿಲೈಯಲ್ಲಿ ಆಶ್ವಯುಜ ಮಾಸದ ಶತಭಿಷ ನಕ್ಷತ್ರದಂದು ಅವತರಿಸಿದರು.
ವ್ಯಾಸ : ವಾಹ್ ! ಅವರು ಹೂವುಗಳಿಂದ ಅವತರಿಸಿದರೆ, ಮತ್ತೆ ಅವರಿಗೆ ಅಪ್ಪ ಅಮ್ಮ ಇಲ್ಲವೇ?
ಆಂಡಾಳಜ್ಜಿ : ಹೌದು, ಅವರು ಜನಿಸಿದಾಗಲೇ ಭಗವಂತನಿಂದ ಕೃಪೆ ಪಡೆದವರು ಮತ್ತೆ ಅವರು ತಾಯಾರ್ ಮತ್ತು ಪೆರುಮಾಳನ್ನು ಅವರ ತಂದೆ ತಾಯಿಯೆಂದು ಭಾವಿಸಿದರು.
ಪರಾಶರ : ಅದೆಂತಹ ಅದ್ಭುತವಾದ ವಿಷಯ. ಆದರೆ ಅವರು ಹೇಗೆ ಭೇಟಿಯಾದರು, ಅದೇನು ದಿವ್ಯ ಘಟನೆ ?
ಆಂಡಾಳಜ್ಜಿ : ಅವರು ಪ್ರತ್ಯೇಕವಾಗಿ ಕ್ಷೇತ್ರಗಳಿಗೆ ಪ್ರಯಾಣಿಸಿ ಭಗವಾನನ್ನು ಪೂಜಿಸುತಿದ್ದರು . ಅದು ಅವರ ಜೀವನವಾಗಿತ್ತು – ದೇವಾಲಯಕ್ಕೆ ಹೋಗಿ ಪೆರುಮಾಳನ್ನು ಪೂಜಿಸಿ ಅಲ್ಲಿಯೇ ಸ್ವಲ್ಪ ದಿನ ಇದ್ದು ನಂತರ ಮತ್ತೊಂದು ಜಾಗಕ್ಕೆ ಹೋಗುವುದು.
ವ್ಯಾಸ :ಕೇಳಲು ಎಷ್ಟು ಚೆನ್ನಾಗಿದೆ. ಬೇರೆ ಯಾವ ಚಿಂತೆ ಇಲ್ಲ. ನಾವು ಹಾಗೆ ಮಾಡಿದರೆ ಎಷ್ಟು ಚೆನ್ನಾಗಿರುತ್ತೆ ಅಜ್ಜಿ.
ಆಂಡಾಳಜ್ಜಿ : ಹೌದು, ನೋಡಿ ನಾವು ಮುದಲಾಳವಾರುಗಳ ಸನ್ನಿಧಿಗೆ ಬಂದೆವು. ಒಳಗೆ ಹೋಗಿ ದರ್ಶನ ಮಾಡೋಣ. ಅವರ ಉಳಿದ ಜೀವನದ ಬಗ್ಗೆ ಹಿಂತಿರುಗುವಾಗ ತಿಳಿಯೋಣ .
ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ
ಮೂಲ : http://pillai.koyil.org/index.php/2014/11/beginners-guide-mudhalazhwargal-part-1/
ಆರ್ಕೈವ್ ಮಾಡಲಾಗಿದೆ : http://pillai.koyil.org
ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org