ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಮುದಲಾಳ್ವಾರುಗಳು ಭಾಗ – 2

ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ

ಪೂರ್ಣ ಸರಣಿ

ಮುದಲಾಳ್ವಾರುಗಳು ಭಾಗ -1

ಆಂಡಾಳಜ್ಜಿ , ವ್ಯಾಸ ಮತ್ತು ಪರಾಶರ ಮುದಲಾಳ್ವಾರುಗಳ  ಸನ್ನಿಧಿಯಿಂದ ಹೊರಗೆ ಬರುತ್ತಾರೆ

ಪರಾಶರ :  ಅಜ್ಜಿ, ಮುದಲಾಳ್ವಾರುಗಳ  ದರ್ಶನ ಮಾಡಲು ಚೆನ್ನಾಗಿತ್ತು .  3 ಆಳ್ವಾರ್ಗಳು  ಎಂದಿಗು ಒಟ್ಟಾಗಿರುತ್ತಾರೆಯೇ ?

ತಿರುಕ್ಕೋವಲೂರ್ ಪೆರುಮಾಳ್ ಜೊತೆ ಮುದಲಾಳ್ವಾರುಗಳು – ತಿರುಕ್ಕೋವಲೂರ್

ಆಂಡಾಳಜ್ಜಿ : ಒಳ್ಳೆ ಪ್ರಶ್ನೆ . ಅವರು ಒಟ್ಟಿಗೆ ಇರುವುದಕ್ಕೆ ಕಾರಣ ಇದೆ . ನಾನು ಹೇಳುತ್ತೇನೆ. ಒಂದು ದಿನ , ಪೆರುಮಾಳಿನ ದಿವ್ಯ ಲೀಲೆಯಂತೆ , ಅವರು ಒಬ್ಬೊಬ್ಬರಾಗಿ ತಿರುಕ್ಕೊವಲುೂರಿಗೆ ತಲುಪಿದರು. ಅಂದು ಚಂಡಮಾರುತ, ಮಳೆ ಬಿರುಗಾಳಿ. ತಿರುಕ್ಕೋವಲೂರಿನಲ್ಲಿ ಮೃಕಂಡು ಮುನಿಯ ಆಶ್ರಮವಿತ್ತು. ಆ ಆಶ್ರಮದ ಮುಂದೆ ಒಂದು ಸಣ್ಣ ಗುಡಿಸಲು ಇತ್ತು . ಮೊದಲು ಪೊಯ್ಗೈ ಆಳ್ವಾರ್ ಆ ಗುಡಿಸಲಿಗೆ ತಲುಪಿ ಮಳೆಯಿಂದ ರಕ್ಷಣೆಗಾಗೆ  ಆಶ್ರಯಿಸಿದರು. ಅಲ್ಲಿ ಮಲಗಿ ಸ್ವಲ್ಪ ವಿಶ್ರಾಂತಿಸಿದರು.

ಪರಾಶರ : ಒಬ್ಬರೇ? ಭಯವಾಗಲಿಲ್ಲವೇ ?

ಆಂಡಾಳಜ್ಜಿ : ಇಲ್ಲ ಪರಾಶರ !. ಅವರು ಸದಾ ಪೆರುಮಾಳನ್ನು ಧ್ಯಾನಿಸುವುದರಿಂದ ಭಯವಾಗಲಿಲ್ಲ. ಆಗ ಭೂದತ್ತಾಳ್ವಾರ್ ಅಲ್ಲಿಗೆ ಬಂದು, ಮಳೆಯಿಂದ ರಕ್ಷಣೆಗಾಗಿ ಆ ಗುಡಿಸಲ ಒಳಗೆ ಬರಲು ಅನುಮತಿ ಕೇಳಿದರು. ಆಗ ಪೊಯ್ಗೈ ಆಳ್ವಾರ್ “ ಇಲ್ಲಿ  ಸ್ವಲ್ಪವೇ ಸ್ಥಳವಿದೆ. ಒಬ್ಬರು ಮಲಗಬಹುದು, ಇಬ್ಬರು ಕೂರಬಹುದು. ಹಾಗಾಗಿ ದಯಮಾಡಿ ಬನ್ನಿ “ ಎಂದರು.  ಭೂದತ್ತಾಳ್ವಾರ್ ಸಂತೋಷದಿಂದ ಒಳಗೆ ಬಂದು ಇಬ್ಬರು ಕುಳಿತುಕೊಂಡರು. ಶೀಘ್ರದಲ್ಲೇ , ಪೇಯ್ ಆಳ್ವಾರ್ ಮಳೆಯಲ್ಲಿ ಓಡುತ್ತಾ ಆಶ್ರಯಕ್ಕಾಗಿ ಬಂದು ಗುಡಿಸಲ ಒಳಗೆ ಬರಲು ಅನುಮತಿ ಕೇಳಿದರು . ಪೊಯ್ಗೈ ಆಳ್ವಾರ್ “ ಸರಿ, ಸ್ವಲ್ಪ ಜಾಗ ಇದೆ .  ಒಬ್ಬರು ಮಲಗಬಹುದು, ಇಬ್ಬರು ಕೂರಬಹುದು, ಮತ್ತು ಮೂವರು ನಿಲ್ಲಬಹುದು . ದಯವಿಟ್ಟು ಒಳಗೆ ಬನ್ನಿ , ನಾವೆಲ್ಲರು  ನಿಲ್ಲಬಹುದು” ಎಂದರು. ಅದನ್ನು ಕೇಳಿ , ಪೇಯ್ ಆಳ್ವಾರ್ ಒಳಗೆ ಬಂದು ನಿಂತು ಚಳಿಯಿಂದ ನಡುಗುತ್ತಿದ್ದರು. ಅವರೆಲ್ಲರು ಹಾಗೆಯೇ ಮಾತನಾಡುತ್ತಾ ಒಂದೇ ರೀತಿಯ ಆಸಕ್ತಿ ಇರುವವರು ಎಂದು ತಿಳಿದು , ಪೆರುಮಾಳಿನ ಸುಂದರ ನಾಮಗಳನ್ನು,ರೂಪಗಳನ್ನು , ಗುಣಗಳನ್ನು ಚರ್ಚಿಸತೊಡಗಿದರು. 

ವ್ಯಾಸ : ವಾಹ್ ! ಅದ್ಭುತ. ಖಂಡಿತವಾಗಿ ದಿವ್ಯವಾಗಿದೆ . ಆದರೆ ಅಜ್ಜಿ, ಅಲ್ಲಿ ಪೆರುಮಾಳ್ ಕೂಡ ಇದ್ದರೆ ಚೆನ್ನಾಗಿರುವುದು, ಇಲ್ಲಿ ನಮಗಾಗಿ ಪೆರಿಯ ಪೆರುಮಾಳ್ ಇರುವಂತೆ. 

ಆಂಡಾಳಜ್ಜಿ : ಇರು, ಇನ್ನೂ ಘಟನೆ ಮುಗಿದಿಲ್ಲ. ನೀನು ಚೆನ್ನಾಗಿ ಮುಂದಿನ ವಿಷಯ ಊಹಿಸಿದ್ದಿಯ. ಇನ್ನೂ ದಿವ್ಯ ಲೀಲೆ ಬಾಕಿ ಇದೆ. ಈ  ಮೂವರು ಭಕ್ತರ ಸಮನ್ವಯ ನೋಡಿ ಈಗ ಪೆರುಮಾಳಿಗೂ ಅವರೊಡನೆ ಇರಬೇಕೆಂದು ಆಸೆ. ಅದರಿಂದ , ಅವರು ಆ ಗುಡಿಸಲ ಒಳಗೆ  ನುಗ್ಗಿ ಜಾಗ ಮಾಡಿಕೊಂಡರು. ಕತ್ತಲಲ್ಲಿ, ಧಿಡೀರನೆ ಇಕ್ಕಟ್ಟು  ಆದಾಗ , ಈ ಸ್ಥಳಕ್ಕೆ ಎನಾಯಿತೋ , ಅಲ್ಲಿಗೆ ಯಾರು ಬಂದರೋ ಎಂದು ಮೂವರು ಆಳ್ವಾರುಗಳು ಆಶ್ಚರ್ಯಗೊಂಡರು . ಆಗ ಪೊಯ್ಗೈ ಆಳ್ವಾರ್ “ ವೈಯಮ್ ತಗಳಿಯಾ …. “ – ಈ ಜಗತನ್ನು ಒಂದು ದೀಪದಂತೆ ಭಾವಿಸಿ ಹಾಡಿದರು. ನಂತರ,  ಭೂದತಾಳ್ವಾರ್ “ ಅನ್ಬೇ ತಗಳಿಯಾ….. “ ಎಂದು ಅವರ ಅಭಿಮಾನವನ್ನೇ ದೀಪದಂತೆ ಭಾವಿಸುತ್ತಾ ಹಾಡಿದರು. ಅವರ ಈ ದೀಪಗಳಿಂದ ಆ ಸ್ಥಳವು ಪ್ರಕಾಶಗೊಂಡಿತು, ಪೇಯ್ ಆಳ್ವಾರ್ ಶ್ರೀ ಮಹಾಲಕ್ಷ್ಮಿ ಒಂದಿಗೆ ಶ್ರೀಮನ್ನಾರಾಯಣನ ದಿವ್ಯ ಸ್ವರೂಪವನ್ನು ಆ ಗುಡಿಸಲಲ್ಲಿ  ಕಂಡರು. ಆಗ ಆವರು  “ ತಿರುಕ್ಕಂಡೇನ್ ….” (ಶ್ರೀಮನ್ನಾರಾಯಣನ ದಿವ್ಯ ರೂಪವನ್ನು ಶ್ರೀ ಮಹಾಲಕ್ಷ್ಮಿ ಒಂದಿಗೆ , ದಿವ್ಯ ಶಂಕು ಚಕ್ರಗಳನ್ನು ಕಂಡೆನು  ). ಅಂದು ಎಲ್ಲ 3 ಆಳ್ವಾರುಗಳು ಪೆರುಮಾಳ್ ತಾಯಾರ್ ದಿವ್ಯ ಸ್ವರೂಪವನ್ನು ಒಟ್ಟಾಗಿ ಕಂಡರು.

ಪರಾಶರ :  ಅದ್ಭುತ, ಅವರು ಬಹಳ ಸಂತೋಷ ಪಟ್ಟರೆ.

ಆಂಡಾಳಜ್ಜಿ :ಹೌದು ಅವರು ಬಹಳ ಸಂತೋಷ ಪಟ್ಟರು. ಪೆರುಮಾಳ್ ಮತ್ತು ತಾಯಾರ್ ಸಂತೋಷಪಟ್ಟರು. ಈ ಅದ್ಭುತ ಘಟನೆಯ ನಂತರ ಅವರು ಒಟ್ಟಗೆ ಅರ್ಚಾವತಾರ ಎಂಪೆರುಮಾನರ ದೇವಾಲಯಗಳಿಗೆ ಭೇಟಿ ಮಾಡಿದರು. ಅವರು ಉಳಿದ ಜೀವನಕಾಲ ಜೊತೆಯಾಗಿ ಇದ್ದು ಪೆರುಮಾಳಿನ ಕೈಂಕರ್ಯಕ್ಕಾಗಿ  ಪರಮಪದಕ್ಕೆ ಸೇರಿದರು.

ವ್ಯಾಸ ಮತ್ತು ಪರಾಶರ  : ಈ ಘಟನೆ ಕೇಳಲು ಅದ್ಭುತವಾಗಿದೆ. ಈಗ ಮತ್ತೊಂದು ಆಳ್ವಾರ್ ಕತೆ ಕೇಳೋಣವೆ ?

ಆಂಡಾಳಜ್ಜಿ : ಅದಕ್ಕೆ ಮುಂದಿನ ಬಾರಿಗೆ ಕಾಯಬೇಕು. ಈಗ ನೀವು ಸ್ವಲ್ಪ ಹೊತ್ತು ಹೊರಗೆ ಹೋಗಿ ಆಟವಾಡಿರಿ. ನಾನು ಈಗ ಪೇರುಮಾಳಿಗೆ ಸ್ವಲ್ಪ ನೈವೇದ್ಯ ತಯಾರಿಸುತ್ತೇನೆ.

ವ್ಯಾಸ ಮತ್ತು ಪರಾಶರ : ಸರಿ ಅಜ್ಜಿ . ನಾಳೆ ಬಂದು ಇನ್ನೂ ಹೆಚ್ಚಿಗೆ ಕೇಳುತ್ತೇವೆ .

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ : http://pillai.koyil.org/index.php/2014/11/beginners-guide-mudhalazhwargal-part-2/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment