ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ನಂಪಿಳ್ಳೈ

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ‌ ‌ಸರಣಿ‌

ನಂಜೀಯರ್

ಪರಾಶರ ಮತ್ತು  ವ್ಯಾಸ ವೇದವಲ್ಲಿ  ಮತ್ತು ಅತ್ತುಳಾಯ್  ಜೊತೆ ಆಂಡಾಳಜ್ಜಿ ಮನೆಗೆ ಬರುತ್ತಾರೆ.

ಅಜ್ಜಿ: ಬನ್ನಿ ಮಕ್ಕಳೇ. ಇವತ್ತು ನಂಜೀಯರ್ ಅವರ ಶಿಷ್ಯರಾದ ನಮ್ಮ ಮುಂದಿನ ಆಚಾರ್ಯನ್ ನಂಪಿಳ್ಳೈ ಬಗ್ಗೆ ಮತನಾಡೋಣ . ನಾನು ಈ ಮುಂದೆ ಹೇಳಿದಂತೆ , ನಂಬೂರಿನಲ್ಲಿ ವರದರಾಜನಂತೆ ಜನಿಸಿದ ನಂಪಿಳ್ಳೈ ತಮಿಳು ಮತ್ತು ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಪಂಡಿತರಾಗಿದ್ದರು. ನಂಜೀಯರ್ ಅವರು 9000 ಪಡಿ ವ್ಯಾಖ್ಯಾನಂ ಪ್ರತಿ ಮಾಡಬೇಕೆಂದು ತೊಡಗಿದಾಗ ಎರಡು ಭಾಷೆಗಳ ಪ್ರಾವೀಣ್ಯತೆಯ ಕಾರಣ ವರದರಾಜರ್ ಅವರ ಹೆಸರನ್ನು  ಪ್ರಸ್ತಾಪಿಸಲಾಯಿತು ಎಂದು ನಾವು ತಿಳಿದಿದ್ದೇವೆ.  ಅವರ ನಿಜವಾದ ವೈಭವಗಳನ್ನು ಅರಿತ ನಂಪಿಳ್ಳೈ ವರದರಾಜರಿಗೆ  ನಂಪಿಳ್ಳೈ ಎಂದು ಹೆಸರಿಟ್ಟರು. ನಂಪಿಳ್ಳೈ ಅವರನ್ನು ತಿರುಕ್ಕಲಿಕನ್ಱಿ ದಾಸರ್ , ಕಲಿವೈರಿ ದಾಸರ್ , ಲೋಕಾಚಾರಿಯರ್ , ಸೂಕ್ತಿ ಮಹಾರ್ಣವರ್ , ಜಗದಾಚಾರ್ಯರ್ ಮತ್ತು ಉಲಗಾಸಿರಿಯರ್  ಎಂದು ಕರೆಯುವರು.

ನಂಪಿಳ್ಳೈ – ತಿರುವಳ್ಳಿಕ್ಕೇಣಿ

ವ್ಯಾಸ : ಅಜ್ಜಿ, ಅವರ ಆಚಾರ್ಯನ ಮೂಲ ಪ್ರತಿ ಕಾವೇರಿಯ ಪ್ರವಾಹದಲ್ಲಿ ಕಳೆದುಹೋದ ನಂತರ ಹೇಗೆ ನಂಪಿಳ್ಳೈ ೯೦೦೦ಪಡಿ ವ್ಯಾಖ್ಯಾನವನ್ನು ತಮ್ಮ ಜ್ಞಾಪಕದಿಂದ ಪುನಃ ಬರೆದರು ಎಂದು ನಮಗೆ ನೆನೆಪಿದೆ.

ಅಜ್ಜಿ : ಹೌದು, ಅಂತಹ ಘನತೆ ಜ್ಞಾನವಿದ್ದರು ನಂಪಿಳ್ಳೈ ಬಹಳ ವಿನಯ ಸಂಪನ್ನಾದವರು ಮತ್ತು ಎಲ್ಲರಿಂದ ವಾತ್ಸಲ್ಯ ಗೌರವ ಪಡೆದವರು.  

ವೇದವಲ್ಲಿ : ಅಜ್ಜಿ , ನಂಪಿಳ್ಳೈ ಅವರ ವೈಭವಗಳನ್ನು ಕೇಂದ್ರೀಕರಿಸಿದ ಕೆಲವು ಘಟನೆಗಳನ್ನು ನಮಗೆ ಹೇಳುವಿರಾ?

ಅಜ್ಜಿ : ನಂಜೀಯರ್ ಅವರಿಂದ ಆಳ್ವಾರುಗಳ ಪಾಸುರಗಳು ಮತ್ತು ಅದರ ಅರ್ಥಗಳನ್ನು ಕಲಿತ ನಂತರ ನಂಪಿಳ್ಳೈ ಶ್ರೀರಂಗಂ ದೇವಾಲಯದ ಪೆರುಮಾಳ್ ಸನ್ನಿಧಿಯ ಪೂರ್ವ ಭಾಗದಲ್ಲಿ ಕರಬದ್ಧವಾಗಿ ಕಾಲಕ್ಷೇಪ ನಡೆಸುತ್ತಿದ್ದರು. ಅವರಿಗಿದ್ದ ಸಂಸ್ಕೃತ ಮತ್ತು ತಮಿಳು ಭಾಷೆಗಳ ಪಾಂಡಿತ್ಯದಿಂದಾಗಿ ಬಹಳಷ್ಟು ಗುಂಪು ಸೇರುತ್ತಿತ್ತು. ಎಂದಾದರೂ ಜನಗಳ ಮನದಲ್ಲಿ ಸಂದೇಹ/ಪ್ರಶ್ನೆ ಇದ್ದಾಗ ಅವರು ವಾಲ್ಮೀಕಿ ರಾಮಾಯಣದಿಂದ ತಕ್ಕ ತರ್ಕಸರಣಿ ಕೊಡುವಂತಹ ಪ್ರವೀಣರಾಗಿದ್ದರು. ಒಮ್ಮೆ, ನಂಪಿಳ್ಳೈ ಉಪನ್ಯಾಸ ಮಾಡುವಾಗ, ಪೆರಿಯ ಪೆರುಮಾಳ್ (ಶ್ರೀರಂಗದಲ್ಲಿನ ಮೂಲವರ್ ) ಶಯನದಲ್ಲಿರುವವರು ನಿಂತು ನಂಪಿಳ್ಳೈ ಉಪನ್ಯಾಸ ನೋಡಲು ಪ್ರಯತ್ನಿಸಿದರು. ತಿರುವಿಳಕ್ಕು ಪಿಚ್ಚನ್ (ಸನ್ನಿಧಿಯಲ್ಲಿ ದೀಪಗಳ ಕೈಂಕರ್ಯ ಮಾಡಿದ ಒಬ್ಬ ಶ್ರೀವೈಷ್ಣವರು ) ಪೆರಿಯ ಪೆರುಮಾಳ್ ನಿಲ್ಲುವುದನ್ನು ನೋಡಿ ಅರ್ಚಾವತಾರದಲ್ಲಿ ಜರುಗಬಾರದು ಎಂದು ಪೆರಿಯ ಪೆರುಮಾಳನ್ನು  ಪುನಃ ಶಯನಾಂಗ ವಿನ್ಯಾಸಕ್ಕೆ ಹಿಂತಿರುಗಳು ಹೇಳಿದರು. ಎಂಪೆರುಮಾನ್ ನಂಪಿಳ್ಳೈ ಯನ್ನು ನೋಡಿ ಅವರ ಉಪನ್ಯಾಸ ಕೇಳಲು ಅವರ ಅರ್ಚಾ ಸಮಾಧಿಯಿಂದ ಕೂಡ ಹೊರಬಂದರು  ( ಅರ್ಚಾವತಾರದಲ್ಲಿ ಮಾತನಾಡುವುದಿಲ್ಲ ಮತ್ತು ಜರುಗುವುದಿಲ್ಲ ಎಂಬ ಸತ್ಯ ಪ್ರಮಾಣ ).  ನಂಪಿಳ್ಳೈ ಉಪನ್ಯಾಸ ಅಂತಹ ಮಟ್ಟಿಗೆ ಆಕರ್ಷಣೀಯವಾಗಿತ್ತು. ಅವರಿಗಿದ್ದ ಸಂಸ್ಕೃತ ಮತ್ತು ತಮಿಳು ಭಾಷೆಗಳ ಪಾಂಡಿತ್ಯದಿಂದಾಗಿ ಗಮನಸೆಳೆದು ಸಭ್ಯರನ್ನು ಮೋಹಗೊಳಿಸುವಂತಹ ಉಪನ್ಯಾಸವಗಿತ್ತು. ಹೇಗೆ ನಂಪೆರುಮಾಳ್ ಮರವಣಿಗೆಯ ಸಮಯದಲ್ಲಿ  ತಮ್ಮ ನಡೆಯ ಸೊಬಗಿನಿಂದ ಮತ್ತು ಅವರ ತಿರುಮೇನಿಯ ಸೌಂದರ್ಯದಿಂದ ಜಗತ್ತಿನ ಎಲ್ಲೆಡೆಯಿಂದ ಭಕ್ತರನ್ನು ಆಕರ್ಷಿಸುತ್ತಾರೋ ಹಾಗೆ ನಂಪಿಳ್ಳೈ ಅವರ ಉಪನ್ಯಾಸಗಳಿಂದ ಜನರನ್ನು ಆಕರ್ಷಿಸುತ್ತಿದ್ದರು . ನೀವು ಯಾರದರೂ ಶ್ರೀರಂಗದಲ್ಲಿ ನಂಪೆರುಮಾಳ್ ಮೆರವಣಿಗೆ ನೋಡಿದ್ದೀರಾ ?

ಪೆರುಮಾಳ್ ಸನ್ನಿಧಿಯಲ್ಲಿ ನಂಪಿಳ್ಳೈ ಉಪನ್ಯಾಸ , ಶ್ರೀರಂಗಂ

ಅತ್ತುಳಾಯ್  : ಹೌದು ಅಜ್ಜಿ , ನಾನು ನೋಡಿದ್ದೇನೆ .  ನಾನು ಬ್ರಮಹೋತ್ಸವಕ್ಕೆ ಶ್ರೀರಂಗಂಗೆ ಹೋಗಿದ್ದೆ ಆಗ ಪೆರುಮಾಳ್ ವೀಧಿ ಪುರಪ್ಪಾಡು( ಬೀದಿಯಲ್ಲಿ ಮೆರವಣಿಗೆ )  ನೋಡಿದೆ ಮತ್ತೆ ಅವರ ನಡೆ ಅದ್ಭುತವಾಗಿತ್ತು.

ಪರಾಶರ : ಹೂ ಅಜ್ಜಿ , ನಾವು ನಂಪೆರುಮಾಳ್ ಪುರಪ್ಪಾಡು ಬಹಳ ಬಾರಿ ನೋಡಿದ್ದೇವೆ .

ಅಜ್ಜಿ : ಯಾರು ತಾನೇ ನೋಡಿರಲ್ಲ. ? ಸೊಬಗಾದ ದೃಶ್ಯವಲ್ಲವೇ?  ನಂಪೆರುಮಾಳ್ ಅವರ ಮೆರವಾಣಿಗೆಯಿಂದ ಎಲ್ಲ ಭಕ್ತರನ್ನು ಸೆಳೆಯುವಂತೆ ನಂಪಿಳ್ಳೈ ಅವರ ಉಪನ್ಯಾಸಗಳಿಂದ ಜನಸಮೂಹ ಸೆಳೆಯುತ್ತಿದ್ದರು. ಇವೆಲ್ಲಕ್ಕಿಂತಲೂ ಅವರ ವಿನಯ ಸ್ವಭಾವ ಸಾಟಿಯಿಲ್ಲದ್ದು. ಒಮ್ಮೆ ನಂಪೆರುಮಾಳ್ ಮುಂದೆ ಕಂದಾಡೈ ತೊಳಪ್ಪರು ( ಮೊದಲಿಯಾಂಡಾನ್ ವಂಶಾವಳಿಯಲ್ಲಿ ಬಂದವರು )  ನಂಪಿಳ್ಳೈ ಅವರಿಗೆ ಒರಟು ಮಾತುಗಳನ್ನು ಆಡುತ್ತಾರೆ. ಅವರು  ನಮ್ಪಿಳ್ಳೈಯವರ ಶ್ರೇಷ್ಟತೆಯನ್ನು ಪ್ರಶಂಸಿಸಲಾರದೇ ಕಠಿಣ ವಾಕ್ಯಗಳನ್ನು ಹೊರಪಡಿಸಿದರು. ನಮ್ಪಿಳ್ಳೈ ಏನೂ ಹೇಳದೆ,ಅವಮಾನವನ್ನು ಸಹಿಸಿಕೊಂಡು ದೇವಸ್ಥಾನದಿಂದ ತಮ್ಮ ತಿರುಮಾಳಿಗೈಗೆ ಹಿಂದಿರುಗಿದರು. ಈ ವಿಷಯವನ್ನು ಆಗಲೇ ಜನರಿಂದ ಕೇಳಿದ ತೋಳಪ್ಪರ ಪತ್ನಿ ಅವರ ನಡವಳಿಕೆಯ ಬಗ್ಗೆ ಬಲವಾದ ಸಲಹೆಯನ್ನು ಕೊಟ್ಟು ನಮ್ಪಿಳ್ಳೈ ಅವರ ವೈಭವವನ್ನು ಹೇಳಿದರು. ನಮ್ಪಿಳ್ಳೈಯವರ ದಿವ್ಯ ಪಾದಗಳಿಗೆ ಬಿದ್ದು ಕ್ಷಮಾಪಣೆ ಕೇಳಿಕೊಳ್ಳಲು ಪತಿಯನ್ನು ನಿರ್ಬಂಧಿಸಿತು.ಕೊನೆಯಲ್ಲಿ, ತೋಳಪ್ಪರ್ ತನ್ನ ತಪ್ಪನ್ನು ತಿದ್ದಿಕೊಂಡು ಮಧ್ಯ ರಾತ್ರಿ ನಮ್ಪಿಳ್ಳೈಯವರ ತಿರುಮಾಳಿಗೈಗೆ ಹೋಗಲು ನಿರ್ಧರಿಸಿದರು. ಹೊರಡಲು ಬಾಗಿಲನ್ನು ತೆಗೆದಾಗ, ಮನೆಯ ಮುಂದೆ ಒಬ್ಬ ವ್ಯಕ್ತಿ ನಿಂತಿದ್ದರು.ಅದು ಬೇರಾರೂ ಅಲ್ಲ. ನಮ್ಪಿಳ್ಳೈ ತಾನೇ ತೋಳಪ್ಪರ ಮನೆಯ ಮುಂದೆ ನಿಂತಿದ್ದರು. ತೋಳಪ್ಪರನ್ನು ನೋಡಿದ ತಕ್ಷಣವೇ ನಮ್ಪಿಳ್ಳೈ ತೋಳಪ್ಪರ ಚರಣಗಳಿಗೆ ಬಿದ್ದು ತಾನು ಏನೋ ತಪ್ಪು ಮಾಡಿರುವ ಕಾರಣವೇ ,ತೋಳಪ್ಪರ ಮನಸ್ಸನ್ನು ನೊಂದಿಸಿದೆ ಎಂದು ಹೇಳಿದರು! , ನಮ್ಪಿಳ್ಳೈಯವರ ಶ್ರೇಷ್ಟತೆಯನ್ನು ನೋಡಿ ತೋಳಪ್ಪರ್ ಆಶ್ಚರ್ಯಗೊಂಡರು. ತಪ್ಪು ತೋಳಪ್ಪರದಾಗಿದ್ದರು ಕೂಡ, ನಮ್ಪಿಳ್ಳೈ ದೊಡ್ಡಸ್ತಿಕೆಯಿಂದ ಅಪವಾದವನ್ನು ತನ್ನ ಮೇಲೆ ಹೊರಿಸಿಕೊಂಡು ತೋಳಪ್ಪರನ್ನು ಕ್ಷಮೆ ಕೇಳಿಕೊಂಡರು.ತಕ್ಷಣವೇ ತೋಳಪ್ಪರು ನಮ್ಪಿಳ್ಳೈಯವರನ್ನು ನಮಸ್ಕರಿಸಿ, ಅವರಿಗೆ ‘ಲೋಕಾಚಾರ್ಯ’ ಎಂದು ಹೆಸರು ಮುಡಿಸಿದರು. ಒಬ್ಬ ಮಹಾನುಭಾವರು ಇಂತಹ ನಮ್ರತೆಯಿಂದ ಇರುವ ಕಾರಣ,ಲೋಕಾಚಾರ್ಯ ಎನ್ನುವ ಹೆಸರಿಗೆ ತಕ್ಕವರು ಎಂದು ಹೇಳಿದರು. ತೋಳಪ್ಪರ್ ನಮ್ಪಿಳ್ಳೈಯ ಬಳಿ ಇದ್ದ ದ್ವೇಷವನ್ನು ಬಿಟ್ಟು, ತನ್ನ ಪತ್ನಿಯೊಂದಿಗೆ ನಮ್ಪಿಳ್ಳೈಯವರ ಸೇವೆಯನ್ನು ಮಾಡಿಕೊಂಡು ಅವರಿಂದ ಶಾಸ್ತ್ರಗಳನ್ನು ಕಲಿತರು.

ಪರಾಶರ : ಎಂತಹ ಅದ್ಭುತವಾದ ವಿಷಯ .ಇದು ಪರಾಶರ ಭಟ್ಟರ್ ಅವರನ್ನು ನಿಂದಿಸಿದ ಒಬ್ಬರಿಗೆ ಭಾರಿ ದರದ ಶಾಲನ್ನು ಕೊಟ್ಟ ವೃತ್ತಾಂತದಂತೆ ಇದೆ ಅಲ್ಲವೇ .

ಅಜ್ಜಿ : ಒಳ್ಳೆಯ  ಗಮನ ಪರಾಶರ . ನಮ್ಮ ಪೂರ್ವಾಚಾರ್ಯರು ಎಲ್ಲರೂ ಒಂದೇ ರೀತಿಯ ಗುಣವುಳ್ಳವರು – ನಿಜವಾದ ಶ್ರೀವೈಷ್ಣವರಂತೆ . ಒಬ್ಬ ಉತ್ತಮ  ಶ್ರೀವೈಷ್ಣವನಾಗಿ ಹೇಗೆ ಬಾಳಬೇಕೆಂದು ಮತ್ತು ಹೇಗೆ ಎಲ್ಲರನ್ನೂ ಪ್ರತಿಪಾಡಿಸಬೇಕು ಎಂದು ಪದೇ ಪದೇ  ನಮ್ಮ ಆಚಾರ್ಯರು ತೋರಿಸಿದ್ದಾರೆ. ಅವರು ಉತ್ತಮ ಉದಾಹರಣೆಗಳಾಗಿ ನಮಗೆ ತಿಳಿಸಿದ್ದಾರೆ . ಅದು ಸೈದ್ಧಾಂತಿಕವಲ್ಲದೆ ಪ್ರಾಯೋಗಿಕವಾಗಿ ಪಾಠಿಸಬಹುದು ಎಂದು ತೋರಿಸಿದ್ದಾರೆ. ನಮ್ಮ ಪೂರ್ವಾಚಾರ್ಯರಂತೆ ಬಾಳುವುದಕ್ಕೆ ಒಬ್ಬರ ಆಚಾರ್ಯನ್ ಕೃಪೆ ಮತ್ತು ನಮ್ಮಿಂದ ಸ್ವಲ್ಪ ಪ್ರಯತ್ನ ಬೇಕಾಗುವುದು ಎಂದು ತೋರಿದ್ದಾರೆ. ಚಿಕ್ಕ ಚಿಕ್ಕ ಹೆಜ್ಜೆಗಳಿಂದ ನಿರ್ಧಿಷ್ಟ ಹಾದಿ ತಲುಪಬಹುದು .

ಭಟ್ಟರ ತಿರುವಂಶದಿಂದ ಬಂದ ನಡುವಿಲ್ ತಿರುವೀದಿ ಪಿಳ್ಳೈ ಭಟ್ಟರ್ ನಮ್ಪಿಳ್ಳೈಯ ವೈಭವವನ್ನು ಕಂಡು ಅಸೂಯೆ ಪಟ್ಟರು.ಒಂದು ದಿನ ಭಟ್ಟರು ರಾಜನ ಆಸ್ಥಾನಕ್ಕೆ ಪಿನ್ಬಳಗಿಯ ಜೀಯರನ್ನು ಆಹ್ವಾನಿಸಿ ಕರೆದುಕೊಂಡು ಹೋದರು.ರಾಜ ಇಬ್ಬರನ್ನೂ ಆಹ್ವಾನಿಸಿ,ಅವರಿಗೆ ಸಂಭಾವನೆಯನ್ನು ಕೊಟ್ಟು, ಅವರಿಗೆ ಒಳ್ಳೆಯ ಆಸನಗಳನ್ನು ಕೊಟ್ಟರು. ಭಟ್ಟರನ್ನು ರಾಜ ಶ್ರೀ ರಾಮಾಯಣದಿಂದ ಪ್ರಶ್ನೆ ಕೇಳಿದರು. ಪೆರುಮಾಳ್ ತನ್ನ ಪರಥ್ವವನ್ನು ಹೊರಪಡಿಸುವುದಿಲ್ಲ ಎಂದು ರಾಮಾಯಣದಲ್ಲಿ ಘೋಷಿಸಿದಾಗ, ಜಟಾಯುಗೆ ಹೇಗೆ ಹೇಳಿದರು

ಭಟ್ಟರ್, ಪಿನ್ಬಳಗಿಯ ಜೀಯರನ್ನು ಈ ಪ್ರಶ್ನೆಗೆ ನಮ್ಪಿಳ್ಳೈ ಏನು ಉತ್ತರ ಕೊಡುತ್ತಿದ್ದರು ಎಂದು ಕೇಳಿದಾಗ ಜೀಯರ್ ತಕ್ಷಣವೇ “ರಾಮನಂತಹ ಒಬ್ಬ ಪ್ರಾಮಾಣಿಕನು ತನ್ನ ಪ್ರಾಮಾಣಿಕತೆಯಿಂದ  ಎಲ್ಲಾ ಜಗತ್ತುಗಳನ್ನು ಜಯಿಸುತ್ತಾನೆ”  ಎಂದು ನಮ್ಪಿಳ್ಳೈ ಉತ್ತರಿಸುತ್ತಿದ್ದರು ಎಂದು ಹೇಳಿದರು. ಭಟ್ಟರ್ ಈ ಶ್ಲೋಕವನ್ನು ಧ್ಯಾನಿಸಿ ಅದನ್ನು ಅರ್ಥ ಮಾಡಿಕೊಂಡು ರಾಜನಿಗೆ ವಿವರಿಸುತ್ತಾರೆ. ರಾಜನು ಅತಿ ತೃಪ್ತಿ ಪಟ್ಟು ,ಭಟ್ಟರ ಜ್ಞಾನವನ್ನು ಪ್ರಶಂಸಿಸಿ,ಅವರಿಗೆ ಬೃಹತ್ತಾದ ಐಶ್ವರ್ಯವನ್ನು ಕೊಟ್ಟರು.ಭಟ್ಟರ್ ತಕ್ಷಣವೇ ನಮ್ಪಿಳ್ಳೈಯವರ ಈ ಒಂದು ವಾಕ್ಯದ ಬಲವನ್ನು ಅರಿತು, ಕೂಡಲೇ ತನಗೆ ದೊರಕಿದ ಐಶ್ವರ್ಯವನ್ನು ತೆಗೆದುಕೊಂಡು ಹೋಗಿ ನಮ್ಪಿಳ್ಳೈಯವರ ದೈವಿಕ ಪಾದಗಳಲ್ಲಿ ಸಮರ್ಪಿಸಿ, ಶರಣಾಗತಿ ಮಾಡಿ,ಅವರಿಗೆ ಸದಾ ಕಾಲ ಸೇವೆ ಮಾಡಿ,ಹೀಗೆ ನಂಪಿಳ್ಳೈಯ ಹಲವಾರು ಶಿಷ್ಯರಲ್ಲಿ ಒಬ್ಬರಾದರು.   

ವೇದವಲ್ಲಿ : ಅಜ್ಜಿ, ಹಿಂದಿನ ಬಾರಿ ನೀವು ಹೇಳಿದಿರ ನಂಜೀಯರ್ ಮತ್ತು ಭಟ್ಟರ್ ನಡುವೆ ಆಸಕ್ತಿದಾಯಕ ಸಂಭಾಷಣೆಗಳು ನಡೆದವು ಎಂದು. ಅದೇ ರೀತಿ ನಂಜೀಯರ್ ಮತ್ತು ನಂಪಿಳ್ಳೈ ನಡುವೆಯೂ ಅಂತಹ ಸಂಭಾಷಣೆಗಳು ಇದ್ದವೆ ?

ಅಜ್ಜಿ : ಹೌದು ವೇದವಲ್ಲಿ , ನಂಜೀಯರ್ ಮತ್ತು ನಂಪಿಳ್ಳೈ ನಡುವೆಯೂ ಅಂತಹ ಸಂಭಾಷಣೆಗಳು ಇದ್ದವು. ಒಮ್ಮೆ ನಂಜೀಯರ್ ನಂಪಿಳ್ಳೈಯನ್ನು ಕೇಳಿದರು, “ ಎಂಪೆರುಮಾನಿನ ಅವತಾರಗಳ ಉದ್ದೇಶವೇನು ?“ ಅದಕ್ಕೆ ನಂಜೀಯರ್ “ಭಾಗವತ ಅಪಚಾರಾಂ ಮಾಡಿದವಣಿಗೆ ಸೂಕ್ತ ಶಿಕ್ಷೆಯಾಗುವುದನ್ನು ಖಚಿತಪಡಿಸುವ ಮುಖ್ಯ ಉದ್ದೇಶದಿಂದ ಎಂಪೆರುಮಾನ್ ಅವತರಿಸಿದರು   “  ಎಂದು ಉತ್ತರಿಸದರು . ಉದಾಹರಣೆಗೆ ತನ್ನ ಭಕ್ತರ ಬಳಿ ಅಪಚಾರಕ್ಕೊಳಗೊಂಡ ದುರ್ಯೋಧನನ  ಅಂತಕ್ಕಾಗಿ ಕೃಷ್ಣಾವತಾರ ಎತ್ತಿದರು. ಅವನ ಭಕ್ತ ಪ್ರಹ್ಲಾದ ಹಿರಣ್ಯಕಶಿಪುವಿನಿಂದ ಕಷ್ಟಗಳನ್ನು ಅನುಭವಿಸಿದಾಗ ನರಸಿಂಹನಾಗಿ ಬಂದು  ಹಿರಣ್ಯಕಶಿಪುವನ್ನು ಕೊಂದರು . ಆದ್ದರಿಂದ ಎಲ್ಲ ಅವತಾರಾಗಳ ಪ್ರಮುಖ ಉದ್ದೇಶ ಭಾಗವತ ಸಂರಕ್ಷಣಂ.

ವ್ಯಾಸ : ಅಜ್ಜಿ ,  ಭಾಗವತ ಅಪಚಾರಂ ಎಂದರೇನು ?

ಅಜ್ಜಿ : ನಮ್ಮನ್ನು ಇತರ ಶ್ರೀವೈಷ್ಣವರಿಗೆ ಸಾಟಿಯಾಗಿ ಭಾವಿಸುವುದು ಭಾಗವತ ಅಪಚಾರಂ ಎಂದು ನಂಜೀಯರ್ ಹೇಳುತ್ತಾರೆ . ನಾವು ಎಂದಿಗೂ ಇತರ ಶ್ರೀವೈಷ್ಣವರನ್ನು ಅವರ ಜನ್ಮ ಅಥವಾ ಜ್ಞಾನದ ಸಲುವಾಗಿ ನಮಗಿಂತ ಹೆಚ್ಚಾಗಿ ಭಾವಿಸಬೇಕು ಎಂದು ನಂಜೀಯರ್ ವಿವರಿಸುತ್ತಾರೆ .  ಆಳ್ವಾರುಗಳು ಮತ್ತು ಪೂರ್ವಾಚಾರ್ಯರಂತೆ ಸದಾ ಭಾಗವತರನ್ನು ವೈಭವೀಕರಿಸಲ್ಉ ಪ್ರಯತ್ನ ಮಾಡಬೇಕು ಎಂದು ಅವರು ಹೇಳುತ್ತಾರೆ.

ದೇವತಾಂತರ ಭಜನಂ ಎನ್ನುವ ಇತರ ದೇವತೆಗಳ ಪೂಜೆ ಸಂಪೂರ್ಣವಾಗಿ ಅರ್ಥಹೀನ ಎಂದು ನಂಪಿಳ್ಳೈ ಸ್ಪಷ್ಟಪಡಿಸಿದ್ದಾರೆ.    

ಅತ್ತುಳಾಯ್ : ಅಜ್ಜಿ,  ನಂಪಿಳ್ಳೈ ಅದನ್ನು ಹೇಗೆ ವಿವರಿಸಿದರು ?

ಅಜ್ಜಿ : ಒಂದು ಶ್ರೀವೈಷ್ಣವರು “ನೀವು ಏಕೆ ವರುಣ,ಅಗ್ನಿ, ಸೂರ್ಯ ಮುಂತಾದ ದೇವತಾಂತರರನ್ನು ಗೃಹದಲ್ಲಿ ಪೂಜಿಸುತ್ತೀರಿ ಆದರೆ ಆ ದೇವತಾಂತರ ಗುಡಿಗಳಿಗೆ ಹೋಗಿ ಪೂಜಿಸುವುದಿಲ್ಲ?” ಎಂದು ನಮ್ಪಿಳ್ಳೈಯನ್ನು ಕೇಳಿದಾಗ, ನಮ್ಪಿಳ್ಳೈ , “ಅಗ್ನಿಯನ್ನು ಯಜ್ಞದಲ್ಲಿ ಪೂಜಿಸುತ್ತೀರಿ,ಆದರೆ ಸ್ಮಶಾನದಲ್ಲಿ ಇರುವ ಅಗ್ನಿಯಿಂದ ಏಕೆ ದೂರ ಇರುತ್ತೀರಿ?! ಹಾಗೆಯೇ, ಶಾಸ್ತ್ರಗಳು ವಿಧಿಸುವಂತೆ ಎಂಪೆರುಮಾನ್ ಅಂತರ್ಯಾಮಿಯಾಗಿ ಎಲ್ಲಾ ದೇವತಾಂತರಗಳಲ್ಲಿ ಇದ್ದಾನೆ.ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು , ನಿತ್ಯ ಕರ್ಮಗಳನ್ನು ಭಗವದ್ ಆರಾಧನೆಯಾಗಿ ನಿರ್ವಹಿಸಬೇಕು.ಅದೇ ಶಾಸ್ತ್ರವು ಎಂಪೆರುಮಾನನ್ನು ಬಿಟ್ಟು ಬೇರೆ ಯಾರನ್ನೂ ಪೂಜಿಸಬಾರದು ಎಂದು ಕೂಡ ಹೇಳುತ್ತದೆ.ಆದುದರಿಂದ ಬೇರೆ ದೇವಾಲಯಗಳಿಗೆ ನಾವು ಹೋಗುವುದಿಲ್ಲ.

ವೇದವಲ್ಲಿ : ಅಜ್ಜಿ, ಇದು ಬಹಳ ಸೂಕ್ಷ್ಮ ವಿಷಯ ಮತ್ತು ಬಹಳಷ್ಟು ಜನರು ಇದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ನನ್ನ ತಾಯಿ ಹೇಳುತ್ತಾರೆ .

ಅಜ್ಜಿ:  ಕೆಲವು ಸತ್ಯ ಹೇಳಿದಾಗ , ಬಹಳ ಕಹಿಯಾದ ಔಷದಿಯಂತೆ ಇರುವುದು, ತಿಳಿಯಲು ಮತ್ತು ಒಪ್ಪಿಕೊಳ್ಳಲು ಕಷ್ಟ. ಆದರೆ ಕಹಿ ಔಷದಿ ನಮ್ಮ ದೇಹಕ್ಕೆ ಒಳ್ಳೆಯದನ್ನು ಮಾಡುವಂತೆ , ಸತ್ಯ ನಮ್ಮ ದೇಹ ಮತ್ತು ಆತ್ಮಕ್ಕೆ ಒಳ್ಳೆಯದನ್ನು ಮಾಡುವುದು . ವೈದಿಕ ಸತ್ಯ ಅಸತ್ಯಗಳನ್ನು ಸಾಬೀತುಪಡಿಸಲು ಅಥವ ನಿರಾಕರಿಸಲು ಸಾದ್ಯವಿಲ್ಲ ಏಕೆಂದರೆ  ಜನರು ಅದನ್ನು ಸ್ವೀಕರಿಸಲು ಬಯಸುವುದಿಲ್ಲ . ಆಚಾರ್ಯ ಕೃಪೆ ಮತ್ತು ಎಂಪೆರುಮಾನಿನ ಕಾರವಿಲ್ಲದ ಅಪಾರ ಕರುಣೆಯಿಂದ ಸತ್ಯವನ್ನು ಎಲ್ಲರೂ ಎಂದಾದರೂ ಅರಿತುಕೊಳ್ಳುವರು. ಆಳ್ವಾರ್ ಅವರ ಒಂದು ಪಾಸುರದಲ್ಲಿ ಹೇಳುವಂತೆ “ ಶ್ರೀಮನ್  ನಾರಾಯಣನ ಸ್ವಾಮಿತ್ವದ ಶಾಶ್ವತ ಸತ್ಯವನ್ನು ಎಲ್ಲರೂ ಅರಿತು ಮೋಕ್ಷ ಪಡೆದರೆ, ಎಂಪೆರುಮಾನ್ ಜಗತಿನಲ್ಲಿ ಲೀಲೆಗಳನ್ನು ನಡೆಸಲು ಯಾರು ಇರುವುದಿಲ್ಲ , ಆದ್ದರಿಂದ ಈ ತಡ : ಆಳ್ವಾರ್ ಹೇಳುತ್ತಾರೆ ” ಈ ಉಪಾಯವನ್ನು ಅರಿತು ತಕ್ಷಣ ತಿರುಕ್ಕುರುಗೂರ್ಗೆ ಓಡಿ ಆದಿಪ್ಪಿರಾನ್ ಪೇರುಮಾಳಿನ ಪಾದ ಕಮಲಗಳಲ್ಲಿ ಶರಣಾಗಿ “   

ವ್ಯಾಸ : ಅಜ್ಜಿ , ನಂಪಿಳ್ಳೈ ಮದುವೆಯಾದರೆ ?

ಅಜ್ಜಿ : ಹೌದು, ನಮ್ಪಿಳ್ಳೈ ಗೆ ಎರಡು ಪತ್ನಿಯರು. ತನ್ನ ಬಗ್ಗೆ ಅವರಿಬ್ಬರಿಗೂ ಏನು ಅಭಿಪ್ರಾಯ ಎಂದು ನಮ್ಪಿಳ್ಳೈ ಕೇಳಿದಾಗ, ಮೊದಲನೇ ಪತ್ನಿ ಅವರನ್ನು ಎಂಪೆರುಮಾನಿನ ಅವತಾರ ಎಂದು ಭಾವಿಸಿ ಅವರನ್ನು ತನ್ನ್ ಆಚಾರ್ಯನಾಗಿ ಭವಿಸುವುದಾಗಿ ಹೇಳಿದರು.ನಮ್ಪಿಳ್ಳೈ ಬಹಳ ತೃಪ್ತಿ ಪಟ್ಟು,ತಮ್ಮ  ಪತ್ನಿಯನ್ನು ಕ್ರಮಬದ್ದವಾಗಿ ಅವರನ್ನು ಭೇಟಿಯಾಗುವ ಶ್ರೀವೈಷ್ಣವರಿಗೆ ತದಿಯಾರಾಧನೆ ತಯಾರಿಸಲು ಹೇಳಿದರು.ಈ ವೃತ್ತಾಂತದಿಂದ ಆಚಾರ್ಯ ಅಭಿಮಾನವೇ ಉದ್ಧಾರಕ ಎಂದು ನಂಪಿಳ್ಳೈ ನಮಗೆ ತೋರಿಸಿದರು.

ಪರಾಶರ : ಅಜ್ಜಿ, ನಂಪಿಳ್ಳೈ ಅವರ ಜೀವನ ಚರಿತ್ರ ಬಹಳ  ಆಸಕ್ತಿದಾಯಕವಾಗಿದೆ . ಅವರಿಗೆ ಸಾಕಷ್ಟು ಉತ್ಕೃಷ್ಟ ಶಿಷ್ಯರು ಇದ್ದರೆ ?

ಅಜ್ಜಿ, ಹೌದು ಪರಾಶರ! ಆಚಾರ್ಯ ಪುರುಷ ಕುಟುಂಬಗಳಿಗೆ ಸೇರಿದ ಅನೇಕರಿಂದ ಅವರು ಶಿಷ್ಯರನ್ನು ಹೊಂದಿದ್ದರು ಮತ್ತು ಶ್ರೀರಂಗಂನಲ್ಲಿ ಅವರ ಸಮಯವನ್ನು ಎಲ್ಲರೂ ನಲ್ಲಡಿಕ್ಕಾಲಂ( ಉತ್ತಮ ದಿನಗಳು)  ಎಂದು ವೈಭವೀಕರಿಸಿದ್ದಾರೆ. ನಮ್ಮ ಸಂಪ್ರದಾಯದ 2 ಅದ್ಭುತ ಸ್ತಂಭಗಳಿಗೆ ನಂಪಿಳ್ಳೈ ಅಡಿಪಾಯ ಹಾಕಿದರು –ವಡಕ್ಕು ತಿರುವೀಧಿ ಪಿಳ್ಳೈ ಯವರ ಪುತ್ರರು –  ಪಿಳ್ಳೈ ಲೋಕಾಚ್ಚಾರಿಯರ್ ಮತ್ತು ಅಳಗಿಯ ಮನವಾಳ ಪೆರುಮಾಳ್ ನಾಯನಾರ್ . ಅವರ ಪ್ರಮುಖ ಶಿಷ್ಯರಲ್ಲಿ ವಡಕ್ಕು ತಿರುವೀಧಿ ಪಿಳ್ಳೈ, ಪೆರಿಯ ವಾಚ್ಚಾನ್ ಪಿಳ್ಳೈ , ಪಿನ್ಬಳಗಿಯ ಪೆರುಮಾಳ್ ಜೀಯರ್ , ಕಂದಾಡೈ ತೋಳಪ್ಪರ್, ಈಯುಣ್ಣಿ ಮಾಧವ ಪೆರುಮಾಳ್, ನಡುವಿಲ್  ತಿರುವೀಧಿ ಪಿಳ್ಳೈ ಭಟ್ಟರ್ ಇತ್ಯಾದಿ .

ನಂಪಿಳ್ಳೈ ಜೊತೆ ಪಿನ್ಬಳಗರಾಂ ಪೆರುಮಾಳ್ ಜೀಯರ್ , ಶ್ರೀರಂಗಂ

ಮುಂದಿನ ಬಾರಿ ನಾವು ಭೇಟಿಯಾದಾಗ, ನಮ್ಮ ಸಂಪ್ರದಾಯಕ್ಕೆ ಕೈಂಕರ್ಯಗಳನ್ನು ಮಾಡಿ, ಅವರ ಅಪಾರ ಕರುಣೆಯಿಂದ ಮಹಾ ಗ್ರಂಥಗಳನ್ನು ನಮಗೆ ನೀಡಿರುವ , ನಂಪಿಳ್ಳೈ ಶಿಷ್ಯರ ಬಗ್ಗೆ ಹೇಳುತ್ತೇನೆ.

ನಂಪಿಳ್ಳೆಯವರ ವೈಭವಾನ್ವಿತ ಚರಿತ್ರೆ ಮತ್ತು ಭೋಧನೆಗಳನ್ನು ನೆನೆಯುತ್ತಾ ಮಕ್ಕಳು ಅವರವರ ಮನೆಗೆ ಹಿಂತಿರುಗುತ್ತಾರೆ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://pillai.koyil.org/index.php/2016/08/beginners-guide-nampillai

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment