ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ವೇದಾಂತಾಚಾರ್ಯರ್

ಶ್ರೀಃ ಶ್ರೀಮತೆ ಶಠಗೋಪಾಯ ನಮಃ ಶ್ರೀಮತೆ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೆ ನಮಃ

ಪೂರ್ಣ ಸರಣಿ

ಪಿಳ್ಳೈ ಲೋಕಾಚಾರ್ಯರ ಶಿಷ್ಯರು

ಆಂಡಾಳ್ ಅಜ್ಜಿ ಅವರು ಹೂವಿನ ಹಾರವನ್ನು ಮಾಡುತ್ತಾ ಮತ್ತು ಬೀದಿಯಲ್ಲಿ ದೇವಾಲಯಕ್ಕೆ ನಡೆದುಕೊಂಡು ಹೋಗುವವರನ್ನು ನೋಡುತ್ತಿದ್ದರು. ಅವರು ತಮ್ಮ ಮನೆಗೆ ಓಡುತ್ತಿರುವ ಮಕ್ಕಳನ್ನು ತನ್ನ ಕಣ್ಣಿನ ಅಂಚಿನಿಂದ ನೋಡಿ ತನಗೆ ತಾನೇ ಮುಗುಳ್ನಕ್ಕರು . ಅವರು ಪೆರಿಯ ಪೆರುಮಾಳ್ ಮತ್ತು ತಾಯಾರ್ ಚಿತ್ರವನ್ನು ಹಾರದಿಂದ ಅಲಂಕರಿಸಿ ಸ್ವಾಗತಿಸಿದರು.

ಅಜ್ಜಿ : ಬನ್ನಿ ಮಕ್ಕಳೇ. ನಾವು ಇವತ್ತು ಯಾರ ಬಗ್ಗೆ ಮಾತನಾಡುತ್ತೀವಿ ಎಂದು ಊಹಿಸಬಲ್ಲಿರಾ?

ಮಕ್ಕಳು : ವೇದಾಂತಾಚಾರ್ಯರ್

ಅಜ್ಜಿ : ಹೌದು, ಅವರಿಗೆ ಆ ಹೆಸರು ಇಟ್ಟವರು ಯಾರು ಗೊತ್ತೇ ?

ವ್ಯಾಸ : ಪೆರಿಯ ಪೆರುಮಾಳ್ ಅವರಿಗೆ ವೇದಾಂತಾಚಾರ್ಯರ್ ಎಂದು ಹೆಸರಿಟ್ಟರು . ಅಲ್ಲವೇ ಅಜ್ಜಿ ?

ಅಜ್ಜಿ : ಹೌದು ಅದು ಸರಿ ವ್ಯಾಸ. ಅವರ ಜನ್ಮ ನಾಮ ವೆಂಕಟನಾಥನ್ . ಅವರು ಕಾಂಚೀಪುರದಲ್ಲಿ ಅನಂತ ಸೂರಿ ಮತ್ತು ತೋತಾರಂಬೈ ದಿವ್ಯದಂಪತಿಗಳಿಗೆ ಹುಟ್ಟಿದರು.

ಪರಾಶರ: ಅಜ್ಜಿ ನಮ್ಮ ಸಂಪ್ರದಾಯಕ್ಕೆ ಅವರ ದೀಕ್ಷೆಯ ಬಗ್ಗೆ ಇನ್ನಷ್ಟು ಹೇಳಿ.

ಅಜ್ಜಿ : ಖಂಡಿತ , ಪರಾಶರ. ನಡಾದೂರ್ ಅಮ್ಮಾಳ್ ಅವರ ಕಾಲಕ್ಷೇಪ ಗೋಷ್ಟಿಯಲ್ಲಿ ಕಿಡಂಬಿ ಅಪ್ಪುಳ್ಳಾರ್ ಎಂಬ ಒಬ್ಬ ಪ್ರಸಿದ್ಧ ಶ್ರೀವೈಷ್ಣವರಿದ್ದರು . ವೇದಾಂತಾಚಾರ್ಯರ್ ಅವರು ತಮ್ಮ ಬಾಲ್ಯದಲ್ಲಿ ಅವರ ಸೋದರ ಮಾವ ( ಶ್ರೀ ಕಿಡಂಬಿ ಅಪ್ಪುಳ್ಳಾರ್ ) ಜೊತೆ ನಡಾದೂರ್ ಅಮ್ಮಾಳ್ ಅವರ ಕಾಲಕ್ಷೇಪ ಗೋಷ್ಟಿಗೆ ಹೋಗಿದ್ದರು.ಆಗ ಅವರನ್ನು ವಿಶಿಷ್ಟಾದ್ವೈತ ಶ್ರೀವೈಷ್ಣವ ಸಿದ್ಧಾಂತದ ಎಲ್ಲಾ ವಿರೋಧಗಳನ್ನು ತೆರವುಗೊಳಿಸಿ ಚನ್ನಾಗಿ ಸ್ಥಾಪಿಸುತ್ತಾರೆ ಎಂದು ನಡಾದೂರ್ ಅಮ್ಮಾಳ್ ಅವರನ್ನು ಆಶೀರ್ವದಿಸುತ್ತಾರೆ.

ಅತ್ತುಳಾಯ್ : ವಾಹ್! ಅವರ ಮಾತು ನಿಜವಾಯಿತು!

ಅಜ್ಜಿ : ಹೌದು, ಅತ್ತುಳಾಯ್. ಹಿರಿಯರ ಆಶೀರ್ವಾದ ಎಂದಿಗೂ ಪೂರ್ಣಗೊಳ್ಳುವುದು ತಪ್ಪುವುದಿಲ್ಲ.

ವೇದವಲ್ಲಿ : ಅವರು ತಿರುವೆಂಕಟಮುಡೈಯಾನಿನ ದಿವ್ಯ ಘಂಟೆಯ ಅವತಾರ ಎಂದು ನಾನು ಕೇಳಿದ್ದೇನೆ. ಅದು ನಿಜವೇ ಅಜ್ಜಿ?

ಅಜ್ಜಿ : ಹೌದು, ಅದು ನಿಜ ಅತ್ತುಳಾಯ್. ಅವರು ಸಂಸ್ಕೃತ, ತಮಿಳು, ಮತ್ತು ಮಣಿಪ್ರವಾಳ ಭಾಷೆಯಲ್ಲಿ ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.

ವ್ಯಾಸ : ವಾಹ್! ನೂರೆ ?

ಅಜ್ಜಿ : ಹೌದು. ತಾತ್ಪರ್ಯ ಚಂದ್ರಿಕೆ ( ಶ್ರೀ ಭಗವತ್ ಗೀತೆಯ ವ್ಯಾಖ್ಯಾನ ) , ತತ್ವಟೀಕೆ , ನ್ಯಾಯ ಸಿದ್ಧಾಂಜನಂ , ಶತ ದೂಷಾನಿ ಮತ್ತು ಆಹಾರ ನಿಯಮಂ ( ಆಹಾರ ನಿಯಮಗಳ ವ್ಯಾಖ್ಯಾನ ) ಅವರ ಕೆಲವು ರಚನೆಗಳು.

ಪರಾಶರ : ಆಜ್ಜಿ , ಒಬ್ಬ ವ್ಯಕ್ತಿಯು ಆಹಾರ ಪದ್ಧತಿಗಾಗಿ ಮೂಲಭೂತ ಗ್ರಂಥಗಳನ್ನು ಬರೆದು ಮತ್ತು ಅದೇ ಸಮಯದಲ್ಲಿ ಸಂಕೀರ್ಣ ತಾತ್ವಿಕ ವ್ಯಾಖ್ಯಾನಗಳ ಬಗ್ಗೆ ಬರೆಯುವುದು ಹೇಗೆ ಎಂದು ನಾನು ಆಶ್ಚರ್ಯಪಡುತ್ತೇನೆ.

ಅಜ್ಜಿ : ನಮ್ಮ ಪೂರ್ವಾಚಾರ್ಯರ ಜ್ಞಾನ ಸಾಗರದಷ್ಟೂ ಆಳವಾಗಿತ್ತು ಪರಾಶರ. ಆದ್ದರಿಂದಲೇ ನಮ್ಮ ತಾಯಾರ್ (ಶ್ರೀ ರಂಗನಾಚ್ಚಿಯಾರ್ ) ಅವರಿಗೆ ‘ಸರ್ವ – ತಂತ್ರ – ಸ್ವತಂತ್ರ ‘ ಎಂದು ಪಟ್ಟ ಕೊಟ್ಟರು .

ಅತ್ತುಳಾಯ್ : ಇನ್ನೂ ಹೆಚ್ಚಿಗೆ ಹೇಳಿ ಅಜ್ಜಿ. ಅವರ ಬಗ್ಗೆ ಈ ವಿಷಯಗಳನ್ನು ಕೇಳಲು ಬಹಳ ಆಸಕ್ತಿದಾಯಕವಾಗಿವೆ.

ಅಜ್ಜಿ : ವೇದಾಂತಾಚಾರ್ಯರ್ ಅವರು ‘ ಕವಿತಾರ್ಕಿಕ ಕೇಸರಿ ‘ (ಕವಿಗಳಲ್ಲಿ ಸಿಂಹ ) ಎಂದು ಪ್ರಸಿದ್ಧವಾಗಿದ್ದರು. ಒಮ್ಮೆ ಅವರು ಕೃಷ್ಣಮಿಶ್ರ ಎಂಬ ಅದ್ವೈತಿಯೊಂದಿಗೆ 18 ದಿನ ಚರ್ಚೆ ಮಾಡಿ ವಿಜಯ ಸಾಧಿಸಿದರು . ಒಮ್ಮೆ ಒಬ್ಬ ವ್ಯರ್ಥ ಕವಿ ಸವಾಲು ಮಾಡಿದಾಗ ಅವರು ‘ಪಾದುಕ ಸಹಸ್ರಂ ‘ ರಚಸಿದರು . ಇದು ಶ್ರೀ ರಂಗನಾಥನ ಪಾದರಕ್ಷೆಗಳನ್ನು ಹೊಗಳುವ 1008 ಪದ್ಯಗಳಿರುವ ರಚನೆ.

ಕಾಂಚಿ ತೂಪ್ಪುಲ್ ವೇದಾಂತಾಚಾರ್ಯರ್ ಅವತಾರ ಉತ್ಸವ

ವೇದವಲ್ಲಿ : ಅದು ಪ್ರಭಾವಶಾಲಿಯಾಗಿದೆ! ಅಂತಹ ಅದ್ಭುತ ಸಾಧನೆಗಳ ಹೊರತಾಗಿಯೂ ಅಂತಹ ನಮ್ರತೆಯನ್ನು ಹೊಂದಿದ್ದ ಉದಾತ್ತ ಆಚಾರ್ಯರನ್ನು ಹೊಂದಲು ನಾವು ನಿಜವಾಗಿಯೂ ಧನ್ಯರು.

ಅಜ್ಜಿ : ಚೆನ್ನಾಗಿ ಹೇಳಿದೆ ವೇದವಲ್ಲಿ. ವೇದಾಂತ ದೇಶಿಕನ್ ಮತ್ತು ಇತರ ಅನೇಕ ಸಮಕಾಲೀನ ಆಚಾರ್ಯರು ಪರಸ್ಪರ ಪ್ರೀತಿ ಮತ್ತು ಗೌರವವನ್ನು ಹೊಂದಿದ್ದರು. ತನ್ನ ಅಭೀತಿಸ್ತವಂನಲ್ಲಿ, ಅವರು ಭಗವಾನ್ ರಂಗನಾಥನನ್ನು ಕೇಳುತ್ತಾನೆ “ಓ ಸ್ವಾಮಿ! ಪರಸ್ಪರ ಹಿತೈಷಿಗಳಾದ ಮಹಾನ್ ವ್ಯಕ್ತಿಗಳ ಪಾದದಲ್ಲಿ ನಾನು ಶ್ರೀರಂಗಂನಲ್ಲಿ ವಾಸಿಸಲು ಅವಕಾಶ ಕೊಡಿ ’. ಮಣವಾಳ ಮಾಮುನಿಗಳ್ , ಎರುಂಬಿ ಅಪ್ಪ , ವಾಧಿಕೇಸರಿ ಅಳಗಿಯ ಮಣವಾಳ ಜೀಯರ್ , ಚೋಳಸಿಂಹಪುರಂ (ಶೋಲಿಂಗರ್ ) ನ ದೊಡ್ಡಾಚಾರ್ಯಾರ್ ಎಲ್ಲರೂ ತಮ್ಮ ಕೃತಿಗಳಲ್ಲಿ ಅವರ ಅನುದಾನವನ್ನು ಉಲ್ಲೇಖಿಸಿದ್ದಾರೆ. ವೇದಾಂತ ದೇಶಿಕನ್ ಸ್ವತಃ ಪಿಳ್ಳೈ ಲೋಕಾಚಾರ್ಯರ ಬಗ್ಗೆ ಅಪಾರ ಮೆಚ್ಚುಗೆಯನ್ನು ಹೊಂದಿದ್ದರು, ಇದನ್ನು ಅವರು ರಚಿಸಿದ “ಲೋಕಾಚಾರ್ಯ ಪಂಚಾಸತ್ ” ಎಂದು ಕರೆಯಲಾಗುವ ಗ್ರಂಥದಿಂದ ಸುಲಭವಾಗಿ ತಿಳಿಯಬಹುದು. ಈ ಅನುದಾನವನ್ನು ತಿರುನಾರಾಯಣಪುರಂ (ಮೆಲ್ಕೋಟೆ, ಕರ್ನಾಟಕ) ದಲ್ಲಿ ನಿಯಮಿತವಾಗಿ ಪಠಿಸಲಾಗುತ್ತದೆ.

ಪರಾಶರ : ವೇದಾಂತಾಚಾರ್ಯರ್ ಅವರು ಶ್ರೀ ರಾಮಾನುಜರ್ ಅವರನ್ನು ಹೇಗೆ ಪರಿಗಣಿಸಿದರು?

ಅಜ್ಜಿ : ಶ್ರೀ ವೇದಾಂತಾಚಾರ್ಯರ್ ಅವರ ಶ್ರೀ ರಾಮಾನುಜರ್ ಅವರ ಭಕ್ತಿ ಬಹಳ ಪ್ರಸಿದ್ಧವಾಗಿದೆ; ‘ಉಕ್ತ್ಯಾ ಧನಂಜಯ…’ ಎಂದು ಪ್ರಾರಂಭಿಸುವ ಪದ್ಯದಲ್ಲಿ ತನ್ನ ‘ನ್ಯಾಸ ತಿಲಕ’ ದಲ್ಲಿ, ಶ್ರೀ ರಾಮಾನುಜರ್ ಅವರೊಂದಿಗಿನ ಸಂಪರ್ಕದಿಂದ ಅವನಿಗೆ ಈಗಾಗಲೇ ಖಾತರಿ ನೀಡಿದ್ದರಿಂದ, ಮೋಕ್ಷಮ್ ಅವರಿಂದ ಮಂಜೂರು ಮಾಡಬೇಕಾಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಕ್ಕಾಗಿ ಅವರು ಪೆರುಮಾಳ್ ಅನ್ನು ಸಮಾಧಾನಪಡಿಸುತ್ತಾರೆ.

ವ್ಯಾಸ : ಅಜ್ಜಿ ನಮ್ಮ ಆಚಾರ್ಯರ ಬಗ್ಗೆ ತಿಳಿದುಕೊಳ್ಳಲು ಬೇಕಾದಷ್ಟು ಇವೆ.

ಅಜ್ಜಿ : ಹೌದು. ಕ್ರಿ.ಶ 1717 ಯಲ್ಲಿದ್ದ ಮಹಾ ವಿದ್ವಾನ್ ಮತ್ತು ಕವಿ ‘ಕೌಶಿಕ ಕವಿತಾರ್ಕಿಕಸಿಂಹ ವೇದಾಂತಾಚಾರ್ಯರ್’ ಅವರು ರಚಿಸಿದ ‘ವೇದಾಂತಾಚಾರ್ಯ ವಿಜಯ ‘ ಎಂದು ಪ್ರಸಿದ್ಧವಾದ ಗದ್ಯ ಮತ್ತು ಪದ್ಯ ರೂಪದಲ್ಲಿ ರಚಿಸಿದ ಸಂಸ್ಕೃತ ಕೃತಿ ‘ ಆಚಾರ್ಯ ಚಂಪು ‘ ನಮಗೆ ವೇದಾಂತ ದೇಶಿಕನ ಅವರ ಜೀವನ ಚರಿತ್ರೆ ಮತ್ತು ಕೃತಿಗಳ ಬಗ್ಗೆ ಒಳನೋಟ ಕೊಡುತ್ತದೆ.

ಅತ್ತುಳಾಯ್ : ಓಹ್. ಚೆನ್ನಗಿದೆ. ಅಜ್ಜಿ ,ಇಂದು ವೇದಾಂತಾಚಾರ್ಯರ್ ಅವರ ಸಂಸ್ಕೃತ ಮತ್ತು ತಮಿಳು ಪ್ರಾವೀಣ್ಯತೆ , ಅವರ ಭಕ್ತಿ ವಿನಮ್ರತೆ ಬಗ್ಗೆ ತಿಳಿದುಕೊಂಡೆವು. ಅಂತಹ ಉದಾಹರಣೆಯನ್ನು ಪರಿಪಾಲಿಸಲು ನಾವೆಲ್ಲರೂ ಧನ್ಯರು .

ಅಜ್ಜಿ : ಹೌದು ಮಕ್ಕಳೇ. ಅಂತಹ ಮಹನೀಯರನ್ನು ನಾವು ಸದಾ ಸ್ಮರಿಸಬೇಕು. ನಾಳೆ ಮತ್ತೆ ಭೇಟಿಯಾಗೋಣ. ಇನ್ನು ನಿಮ್ಮ ಮನೆಗೆ ಹೋಗುವ ಸಮಯವಾಯಿತು.

ಮಕ್ಕಳು: ಧನ್ಯವಾದಗಳು ಅಜ್ಜಿ.

ಅನುವಾದ : ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ

ಮೂಲ: http://pillai.koyil.org/index.php/2019/02/beginners-guide-vedhanthacharyar/

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment