ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಆಳವಂದಾರ್

ಶ್ರೀಃ‌ ‌ಶ್ರೀಮತೇ‌ ‌ಶಠಕೋಪಾಯ‌ ‌ನಮಃ‌ ‌ಶ್ರೀಮತೇ‌ ‌ರಾಮಾನುಜಾಯ‌ ‌ನಮಃ‌ ‌ಶ್ರೀಮತ್‌ ‌ವರವರಮುನಯೇ‌ ‌ನಮಃ‌

ಪೂರ್ಣ‌ ‌ಸರಣಿ‌

ಉಯ್ಯಕೊಂಡಾರ್ ಮತ್ತು ಮಣಕ್ಕಾಲ್ ನಂಬಿ

ವ್ಯಾಸ ಮತ್ತು ಪರಾಶರ ತಮ್ಮ ಸ್ನೇಹಿತೆ  ಅತ್ತುೞಾಯ್ ಅವರೊಂದಿಗೆ ಆಂಡಾಳಜ್ಜಿ  ಅವರ ಮನೆಗೆ ಪ್ರವೇಶಿಸುತ್ತಾರೆ. ಆಂಡಾಳಜ್ಜಿ  ಅವರ ಕೈಯಲ್ಲಿ ಪ್ರಸಾದದೊಡನೆ  ಅವರನ್ನು ಸ್ವಾಗತಿಸುತ್ತಾರೆ .

ಆಂಡಾಳಜ್ಜಿ : ಬಾ ಅತ್ತುೞಾಯ್! ನಿನ್ನ ಕೈಕಾಲು ತೊಳದುಕೊಂಡು ಪ್ರಸಾದ್ ತೆಗೆದುಕೊ . ಇಂದು ಉತ್ತರಾಡಂ (ಉತ್ತರಾಷಾಡ ), ಆಳವಂದಾರ್ ರ್ ತಿರುನಕ್ಷತ್ರ . 

ಪರಾಶರ : ಅಜ್ಜಿ, ಹಿಂದಿನ ಬಾರಿ ಯಮುನೈತುರೈವರ್ ಬಗ್ಗೆ ಹೇಳುತ್ತೇನೆ ಎಂದಿರಿ ? 

ಅಜ್ಜಿ : ಹೌದು, ನನಗೆ ನೆನಪಿದೆ, ಮತ್ತೆ ಆಚಾರ್ಯರ ಬಗ್ಗೆ ತಿಳಿಯಲು ನಿಮಗೂ ನೆನಪಿದೆ ಎಂದು ಸಂತೋಷವಾಗಿದೆ . ಇಂದು ಅವರ ತಿರುನಕ್ಷತ್ರ . ಅವರ ವೈಭವಗಳನ್ನು ಹೇಳುವುದಕ್ಕೆ ತಕ್ಕ ದಿನ . 

ವ್ಯಾಸ ; ಅಜ್ಜಿ, ಆದರೆ ನೀವು ಆಳವಂದಾರ್ ತಿರುನಕ್ಷತ್ರ  ಎಂದು ಹೇಳಿದ್ದೀರ ?

ಆಳವಂದಾರ್ – ಕಾಟ್ಟು  ಮನ್ನಾರ್ ಕೋಯಿಲ್ 

ಅಜ್ಜಿ : ಹೌದು, ಯಮುನೈತುರೈವರ್ ಅವರು ಕಾಟ್ಟು  ಮನ್ನಾರ್ ಕೋಯಿಲ್ ನಲ್ಲಿ ಜನಿಸಿದರು, ನಂತರ ಆಳವಂದಾರ್ ಎಂದು ಜನಪ್ರಿಯರಾದರು. ಅವರು ಈಶ್ವರ ಮುನಿಯ ಮಗನಾಗಿ ಮತ್ತು ನಾಥಮುನಿಗಳ ಮೊಮ್ಮಗನಾಗಿ ಜನಿಸಿದರು. ಅವರು ಮಹಾಭಾಶ್ಯ ಭಟ್ಟರ ಅಡಿಯಲ್ಲಿ ಅಧ್ಯಯನ ಮಾಡಿದರು. ಅವರು ಆಳವಂದಾರ್ ಎಂದು ಹೇಗೆ ಪ್ರಶಂಸಿಸಲ್ಪಟ್ಟರು ಎಂಬ ಬಗ್ಗೆ ಒಂದು ಕುತೂಹಲಕಾರಿ ಕಥೆ ಇದೆ. ಆ ದಿನಗಳಲ್ಲಿ ಪಂಡಿತರು ಮುಖ್ಯ ಪಂಡಿತರಿಗೆ ತೆರಿಗೆ ಪಾವತಿಸಬೇಕಾಗಿತ್ತು. ಆಕ್ಕಿಯಾಳ್ವಾನ್ ಎಂಬ ರಾಜಪುರೋಹಿತರು ತನ್ನ ಪ್ರತಿನಿಧಿಗಳನ್ನು ಎಲ್ಲಾ ಪಂಡಿತರಿಗೆ ಕಳುಹಿಸುತ್ತಾನೆ ಮತ್ತು ಅವನಿಗೆ ತೆರಿಗೆ ಪಾವತಿಸಲು ಹೇಳುತ್ತಾನೆ. ಮಹಾಭಶ್ಯ ಭಟ್ಟರ್ ಆತಂಕಕ್ಕೊಳಗಾಗುತ್ತರೆ  ಮತ್ತು ಯಮುನೈತ್ತುರೈವರ್ ಅವರು ಕಾಳಜಿ ವಹಿಸಿ ಅವರು ಆ ಸ್ಥಿತಿಯನ್ನು ನಿಭಾಯಿಸುವುದಾಗಿ ಹೇಳುತ್ತಾರೆ. ಅವರು “ಅಗ್ಗದ ಪ್ರಚಾರಕ್ಕಾಗಿ ಬಯಸುವ ಕವಿಗಳನ್ನು ನಾಶಪಡಿಸುತ್ತೇನೆ ” ಎಂದು ಒಂದು ಶ್ಲೋಕವನ್ನು ಕಳುಹಿಸುತ್ತಾರೆ . ಇದನ್ನು ನೋಡಿದ ಆಕ್ಕಿಆಳ್ವಾನ್ ಕೋಪಗೊಂಡು ತನ್ನ ಸೈನಿಕರನ್ನು ಯಮುನೈತುರೈವರ್‌ನನ್ನು ರಾಜನ ಆಸ್ಥಾನಕ್ಕೆ ಕರೆತರಲು ಕಳುಹಿಸುತ್ತಾನೆ. ಯಮುನೈತ್ತುರೈವರ್ ಅವರಿಗೆ ಸರಿಯಾದ ಗೌರವವನ್ನು ನೀಡಿದರೆ ಮಾತ್ರ ಅವರು ಬರುತ್ತಾರೆ ಎಂದು ಹೇಳುತ್ತಾರೆ. ಆದ್ದರಿಂದ, ರಾಜನು ಅವನಿಗೆ ಒಂದು ಪಲ್ಲಕ್ಕಿಯನ್ನು ಕಳುಹಿಸುತ್ತಾನೆ ಮತ್ತು ಯಮುನೈತುರೈವರ್ ಸಭೆಗೆ ಭೇಟಿ ನೀಡುತ್ತಾನೆ. ಚರ್ಚೆ ಪ್ರಾರಂಭವಾಗಲಿರುವಾಗ, ರಾಣಿ ರಾಜನಿಗೆ ಯಮುನೈತುರೈವರ್ ಗೆಲ್ಲುತ್ತಾನೆ ಮತ್ತು ಅವನು ಸೋತರೆ ಅವಳು ರಾಜನ ಸೇವಕನಾಗುವುದು ಖಚಿತ ಎಂದು ಹೇಳುತ್ತಾಳೆ. ಆಕ್ಕಿಯಾಳ್ವಾನ್ ಗೆಲ್ಲುತ್ತಾನೆ ಎಂಬ ರಾಜನಿಗೆ ವಿಶ್ವಾಸವಿತ್ತು ಮತ್ತು ಯಮುನೈತುರೈರ್ವರ್ ಗೆದ್ದರೆ, ಅವನು ಅರ್ಧ ರಾಜ್ಯವನ್ನು ಅವನಿಗೆ ಕೊಡುವುದಾಗಿ  ಹೇಳುತ್ತಾನೆ. ಅಂತಿಮವಾಗಿ, ಬಹಳ ಶೌರ್ಯ ಮತ್ತು ಜ್ಞಾನದಿಂದ, ಯಮುನೈತ್ತುರೈವರ್ ಆಕ್ಕಿಯಾಳ್ವಾನ್ ವಿರುದ್ಧದ ಚರ್ಚೆಯನ್ನು ಗೆದ್ದರು. ಆಕ್ಕಿಯಾಳ್ವಾನ್ ತುಂಬಾ ಪ್ರಭಾವಿತನಾಗಿ, ಅವನು ಕೂಡ ಯಮುನೈತುರೈವರ್ ಶಿಷ್ಯನಾಗುತ್ತಾನೆ. ರಾಣಿ ಅವನಿಗೆ “ಆಳವಂದಾರ್” ಎಂಬ ಹೆಸರನ್ನು ನೀಡುತ್ತಾಳೆ – ಅವಳನ್ನು ರಕ್ಷಿಸಲು ಬಂದವನು – ಅವನು ಗೆಲ್ಲದಿದ್ದರೆ, ಅವಳು ಸೇವಕನಾಗುತ್ತಿದ್ದಳು ಮತ್ತು ಆದ್ದರಿಂದ ಅವಳು ಕೂಡ ಅವನ ಶಿಷ್ಯನಾಗುತ್ತಾಳೆ. ರಾಜನು ವಾಗ್ದಾನ ಮಾಡಿದಂತೆ ಅರ್ಧದಷ್ಟು ರಾಜ್ಯವನ್ನು ಪಡೆಯುತ್ತಾನೆ.

ವ್ಯಾಸ : ಅಜ್ಜಿ , ಯಮುನೈತ್ತುರೈವರ್ ಅರ್ಧದಷ್ಟು ರಾಜ್ಯವನ್ನು ಪಡೆದಿದ್ದರೆ, ಅವರು  ರಾಜ್ಯವನ್ನು ಆಳುತ್ತಿದ್ದಿರಬೇಕು. ಅವರು ನಮ್ಮ ಸಂಪ್ರದಾಯಂಗೆ ಹೇಗೆ ಬಂದರು ?

ಅತ್ತುೞಾಯ್: ಉಯ್ಯಕ್ಕೊನ್ಡಾರ್ ಅವರ ಶಿಷ್ಯರಾಗಿದ್ದ ಮಣಕ್ಕಾಲ್ ನಂಬಿ ಅವರನ್ನು ನಮ್ಮ ಸಂಪ್ರದಾಯಂಗೆ ಮಾರ್ಗ ತೋರಿದರು . ಉಯ್ಯಕ್ಕೊನ್ಡಾರ್ ಅವರ ಸೂಚನೆಗಳ ಪ್ರಕಾರ, ಮಣಕ್ಕಾಲ್ ನಂಬಿ ಅವರು ಆಳವಂದಾರ್ ಅವರನ್ನು ಸಂಪ್ರದಾಯಂ ತರಲು ಮುಂದಾದರು. 

ಅಜ್ಜಿ : ಅದು ಸರಿ ,ಶಭಾಷ್  ಅತ್ತುೞಾಯ್! ನಿನಗೆ ಹೇಗೆ ಇದು ಗೊತ್ತು ? 

ಅತ್ತುೞಾಯ್ : ಆಚಾರ್ಯರು ಮತ್ತು ಪೆರುಮಾಳ್ ಬಗ್ಗೆ ಅಮ್ಮ ನನಗೆ ಕಥೆ ಹೇಳುತ್ತಾರೆ . 

ಅಜ್ಜಿ :  ದೇವಪ್ಪೆರುಮಾಳ್ ಅವರ ಆಶೀರ್ವಾದದೊಂದಿಗೆ ಶ್ರೀ ರಾಮಾನುಜರನ್ನು ಸಂಪ್ರದಾಯಕ್ಕೆ ಕರೆತಂದ ಶ್ರೇಷ್ಠ ಅಚಾರ್ಯರು ಆಳವಂದಾರ್ . 

ಪರಾಶರ : ಆದರೆ ಅಜ್ಜಿ , ಹೇಗೆ ದೇವಪ್ಪೆರುಮಾಳ್ ಆಳವಂದಾರ್ ಗೆ ಸಹಾಯ ಮಾಡಿದರು . 

ಅಜ್ಜಿ : ಕಾಂಚೀಪುರಂನಲ್ಲಿ, ವರದರಾಜ ಪೆರುಮಾಳ್ ದೇವಸ್ಥಾನದಲ್ಲಿ, ಆಳವಂದಾರ್ ಅವರು ಇನ್ನೂ ರಾಮಾನುಜ ಆಗಬೇಕಿದ್ದ ಇಳೈಯಾಳ್ವಾರ್  ಅವರನ್ನು ನೋಡಿದರು. ಇಳೈಯಾಳ್ವಾರ್  ತನ್ನ ಗುರು ಯಾದವ ಪ್ರಕಾಶ ನಿಂದ ಕಲಿಯುತ್ತಿದ್ದ. ಇಳೈಯಾಳ್ವಾರ್  ಅವರನ್ನು ಸಂಪ್ರದಾಯದ ಮುಂದಿನ ನಾಯಕನನ್ನಾಗಿ ಮಾಡಲು ಆಳವಂದಾರ್ ದೇವಪ್ಪೆರುಮಾಳ್ ಅವರನ್ನು ಪ್ರಾರ್ಥಿಸುತ್ತಾರೆ . ಹೀಗಾಗಿ ತಾಯಿಯಂತೆ ಇಳೈಯಾಳ್ವಾರ್  ಅವರನ್ನು ಪೋಷಿಸಿ ಬೆಳೆಸಿದವರು ದೇವಪ್ಪೆರುಮಾಳ್ ಅವರು ತಮ್ಮ ಮಗುವಿಗೆ ಏನು ಮಾಡುತ್ತಾರೆ ಮತ್ತು ಈ ಮಹಾನ್ ಆಳವಂದಾರ್ ಅವರು ಇಳೈಯಾಳ್ವಾರ್  ಅವರ ಆಶೀರ್ವಾದವನ್ನು ತೋರಿಸಿದರು, ನಂತರ ಅವರು ಸಂಪ್ರದಾಯಂಗೆ  ಶ್ರೇಷ್ಠ ಕೈಂಕರ್ಯಂಗಳನ್ನು ಮಾಡುತ್ತಾರೆ. ಅಗತ್ಯವಿರುವಂತೆ ಇಳೈಯಾಳ್ವಾರ್  ಗೆ ಮಾರ್ಗದರ್ಶನ ನೀಡಲು ಆಳವಂದಾರ್ ತಿರುಕ್ಕಚ್ಚಿ ನಂಬಿಯನ್ನು ಸಹ ವಹಿಸುತ್ತಾರೆ . ತಿರುಕ್ಕಚ್ಚಿ ನಂಬಿ ನೆನಪಿದೆಯೇ?

ವ್ಯಾಸ: ಹೌದು ಅಜ್ಜಿ ,ಅವರು ತಿರುವಾಲವಟ್ಟ  (ಬೀಸಣಿಗೆ ) ಕೈಂಕರ್ಯಂ ಅನ್ನು ದೇವಪ್ಪೆರುಮಾಳ್ ಗೆ ಮಾಡುತ್ತಾರೆ ಮತ್ತು ದೇವಪ್ಪೆರುಮಾಳ್ ಮತ್ತು ತಾಯಾರ್ ಅವರೊಂದಿಗೆ ಮಾತನಾಡುತ್ತಾರೆ. ನಾವು ತಿರುಕ್ಕಚ್ಚಿ ನಂಬಿ ಯಂತೆ ಪೆರುಮಾಳ್  ಜೊತೆ ಮಾತನಾಡಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತದೆ? ಹಾಗಾದರೆ ಆಳವಂದಾರ್ ಮತ್ತು ಇಳೈಯಾಳ್ವಾರ್  ಹೇಗೆ ಭೇಟಿಯಾದರು? ಆಳವಂದಾರ್ ಇಳೈಯಾಳ್ವಾರ್  ಅವರನ್ನು ತಮ್ಮ ಶಿಷ್ಯ ಎಂದು ಸ್ವೀಕರಿಸಿದ್ದಾರೆಯೇ?

ಅಜ್ಜಿ : ದುರದೃಷ್ಟವಶಾತ್ ಇಲ್ಲ! ಆಳವಂದಾರ್ ಅವರ ಶಿಷ್ಯರಾಗಲು ಇಳೈಯಾಳ್ವಾರ್  ಶ್ರೀರಂಗಕ್ಕೆ ಬರುವ ಮೊದಲು, ಆಳವಂದಾರ್ ಈ ಜಗತ್ತನ್ನು ತೊರೆದು ಪರಮಪದಂ ತಲುಪಿದರು. ಅವರು ಒಬ್ಬರನ್ನೊಬ್ಬರು ಭೇಟಿಯಾಗಲು ಸಾಧ್ಯವಾಗಲಿಲ್ಲ ಆದರೆ ಆಳವಂದಾರ್ ಅವರ ಆಸೆಗಳನ್ನು ಈಡೇರಿಸುವುದಾಗಿ ಇಳೈಯಾಳ್ವಾರ್  ಭರವಸೆ ನೀಡಿದ್ದಾರೆ. ಮುಂದಿನ ಬಾರಿ, ನಾನು ನಿಮ್ಮನ್ನು ಭೇಟಿಯಾದಾಗ, ಆಳವಂದಾರ್ ಅವರ ಅನೇಕ ಶಿಷ್ಯರಲ್ಲಿ ಒಬ್ಬನಾದ ಪೆರಿಯ ನಂಬಿ, ಇಳೈಯಾಳ್ವಾರ್  ಅವರ ಆಚಾರ್ಯರಾದವರು  ಮತ್ತು ಅವನಿಗೆ  ಮಾರ್ಗದರ್ಶನ ಮಾಡಿದ ಬಗ್ಗೆ ನಾನು ನಿಮಗೆ ಹೇಳುತ್ತೇನೆ. ಆಳವಂದಾರ್ ಹಲವಾರು ಶಿಷ್ಯರನ್ನು ಹೊಂದಿದ್ದರು ಮತ್ತು ಎಲ್ಲರೂ ಒಟ್ಟಾಗಿ ಇಳೈಯಾಳ್ವಾರ್  ಅವರನ್ನು ಸಂಪ್ರದಾಯಂ ಗೆ ಕರೆತರಲು ಕೆಲಸ ಮಾಡಿದರು. ಪೆರಿಯ ನಂಬಿಯಲ್ಲದೆ, ಪೆರಿಯ ತಿರುಮಲೈ ನಂಬಿ, ತಿರುಕ್ಕೋಷ್ಟಿಯೂರ್ ನಂಬಿ, ತಿರುಮಲೈ ಆಂಡನ್, ಮಾರನೇರಿ ನಂಬಿ, ತಿರುಕ್ಕಚಿ ನಂಬಿ, ತಿರುವರಂಗ ಪೆರುಮಾಳ್ ಅರಯರ್ ಮತ್ತು ಇನ್ನೂ ಅನೇಕರು ಆಳವಂದಾರ್ ಶಿಷ್ಯರು.

ವ್ಯಾಸ , ಪರಾಶರ ಮತ್ತು ಅತ್ತುೞಾಯ್: ಅಜ್ಜಿ, ಇದು ತುಂಬಾ ಆಸಕ್ತಿದಾಯಕ ಆಗಿತ್ತು. ಮುಂದಿನ ಬಾರಿ, ದಯವಿಟ್ಟು ಪೆರಿಯ ನಂಬಿ ಮತ್ತು ಇಳೈಯಾಳ್ವಾರ್  ಬಗ್ಗೆ ಹೇಳಿ.

ಅಜ್ಜಿ : ನಾನು ಅದನ್ನು ಹೇಳಲು ತುಂಬಾ ಸಂತೋಷಪಡುತ್ತೇನೆ ಆದರೆ ಈಗ ಹೊರಗೆ ತುಂಬಾ ಕತ್ತಲೆಯಾಗುತ್ತಿದೆ. ನಿಮ್ಮ ಮನೆಗೆ ಹೋಗಿ.

ಮಕ್ಕಳು ಆಳವಂದಾರ್ ಬಗ್ಗೆ ಯೋಚಿಸುತ್ತಾ ಸಂತೋಷದಿಂದ ತಮ್ಮ ಮನೆಗಳಿಗೆ ತೆರಳುತ್ತಾರೆ.

ಅಡಿಯೇನ್ ರಂಗನಾಯಕಿ ರಾಮಾನುಜ ದಾಸಿ 

ಮೂಲ : http://pillai.koyil.org/index.php/2016/07/beginners-guide-alavandhar/ 

ಆರ್ಕೈವ್ ಮಾಡಲಾಗಿದೆ :  http://pillai.koyil.org 

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಶಾಸ್ತ್ರ ) – http://granthams.koyil.org
ಪ್ರಮಾತಾ (ಪೂರ್ವಾಚಾರ್ಯರು ) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

Leave a Comment