ಶ್ರೀವೈಷ್ಣವಮ್ – ಆರಂಭಿಗರ ಕೈಪಿಡಿ – ಶ್ರೀಮನ್ನಾರಾಯಣನ ದಿವ್ಯ ಅರ್ಚಾ ವತಾರ ಮತ್ತು ಗುಣಗಳು
ಶ್ರೀಃ ಶ್ರೀಮತೇ ಶಠಕೋಪಾಯ ನಮಃ ಶ್ರೀಮತೇ ರಾಮಾನುಜಾಯ ನಮಃ ಶ್ರೀಮತ್ ವರವರಮುನಯೇ ನಮಃ ಪೂರ್ಣ ಸರಣಿ ಶ್ರೀಮನ್ನಾರಾಯಣ ಯಾರು? ವ್ಯಾಸ ಮತ್ತು ಪರಾಶರ ಗಳೆಯರೊಂದಿಗೆ ಆಟವಾಡಿದಮೇಲೆ ಆಂಡಾಳಜ್ಜಿ ಮನೆಗೆ ಹಿಂತಿರುಗುವರು. ಅವರು ಆಂಡಾಳಜ್ಜಿ ಹೂವು, ಹಣ್ಣು, ಕಾಯಿಗಳನ್ನು ಜೋಡಿಸುವುದನ್ನು ಕಾಣುತ್ತಾರೆ. ವ್ಯಾಸ : ಅಜ್ಜಿ, ಯಾರಿಗಾಗಿ ಈ ಹೂವು ಹಣ್ಣು ಜೋಡಿಸಿಟ್ಟಿರುವೆ? ಆಂಡಾಲಜ್ಜಿ : ಶ್ರೀರಂಗನಾಥನ ಮೆರವಣಿಗೆಯ ಹೊತ್ತಾಗಿದೆ, ದಾರಿಯಲ್ಲಿ ಅವರು ನಮ್ಮನ್ನು ಕಾಣ ಬರುವರು . ನಮ್ಮನ್ನು ಯಾರಾದರು ಅತಿಥಿಯಾಗಿ ಕಾಣಲು ಬಂದಾಗ, ವಿಶೇಷವಾಗಿ ಹಿರಿಯರು … Read more